Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಮೋಹದ ಹೆಂಡತಿ ತೀರಿದ ಬಳಿಕ

ಮೋಹದ ಹೆಂಡತಿ ತೀರಿದ ಬಳಿಕ
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರದ ಬೀಗನ
ಮಾತಿನ ಹಂಗೊಂದೆನಗ್ಯಾಕೋ?
ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವುದು ಭಯವ್ಯಾಕೋ?
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವುದ್ಯಾಕೋ?

ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತನ್ಯಾಕೋ ?
ಬಂಧುರ ಶಿಶುನಾಳಾಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನವು ಸಾಕೋ.

                                     -ಸಂತ ಶಿಶುನಾಳ ಶರೀಫ

November 7, 2007 - Posted by | EKAVI Group

1 Comment »

  1. ಇದನ್ನು ನಾನು kannadalyrics ನಲ್ಲಿ ಹಾಕಿದ್ದೆ, ಇದಕ್ಕೆ proof (಼) ಅಂದ್ರೆ ಕಂಡು ಬಂದಿರುವ ಪ್ರಶ್ನೆ ಚಿಹ್ನೆ. ನೀವು ಅಲ್ಲಿಂದ ತೆಗೆದು ಇಲ್ಲಿ ಅಂಟಿಸಿರೋದು ಅಂತ ಚೆನ್ನಾಗಿ ಗೊತ್ತಾಗುತ್ತದೆ. ಕಡೆ ಪಕ್ಷ ಒಂದು ಲಿನ್ಕ್ ಕೂಡಾ ಹಾಕಿಲ್ಲ. ಇದೆಂತ ಕನ್ನಡಾ ಪ್ರೀತಿ ತಮ್ಮದು. ಶುದ್ಧ ಸೋಮಾರಿತನ ಅಷ್ಟೆ ಎನ್ನಬಹುದು.

    Comment by ಶಾಂತಲ | February 1, 2008 | Reply


Leave a comment