americadalli kannada yaake kalisabeku mattu kannada peeta yaake beku-Dr. Harold Schiffman avara uttaragalu
ಕನಸು ಮನಸಿನ ತುಂಬಾ ‘ಕನ್ನಡಪೀಠ’
ಕನ್ನಡ ಪೀಠದ ಕಾಯಕದಲ್ಲಿ ಮುಳುಗಿಹೋಗಿರುವ ಪ್ರೊ.ಷಿಫ್‌ಮನ್ ಅಮೆರಿಕಾದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸುವ ಕನ್ನಡ ಕೊಂಡಿಯಂತಿದ್ದಾರೆ. ಅವರೊಂದಿಗೆ ನೀವೂ ಕೈ ಜೋಡಿಸುವಿರಾ?
*ವರದಿ : ವಿ.ಎಂ. ಕುಮಾರಸ್ವಾಮಿ
ದಕ್ಷಿಣ ಕ್ಯಾಲಿಫೋರ್ನಿಯಾ : ಕನ್ನಡಿಗರೊಂದಿಗೆ ಕೆಲಸ ಮಾಡಲು ನನಗೆ ರೋಮಾಂಚನವಾಗುತ್ತಿದೆ !
ಇಲ್ಲಿನ ಕರ್ನಾಟಕ ಸಾಂಸ್ಕೃತಿಕ ಒಕ್ಕೂಟ(ಕೆಸಿಎ) ಜುಲೈ 25 ರಂದು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಹೆರಾಲ್ಡ್ ಷಿಫ್‌ಮನ್ ಪುಳಕಿತರಾಗಿದ್ದರು. ಅವರೀಗ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಪೀಠ ಸ್ಥಾಪಿಸುವ ಉಮೇದಿನಲ್ಲಿದ್ದಾರೆ. ಆ ಕಾರಣದಿಂದಾಗಿಯೇ ಮಾತಿನ ತುಂಬಾ ಕನ್ನಡ, ಮನಸ್ಸಿನಲ್ಲೂ ಕನ್ನಡ.
ಆದರೆ, ಪ್ರೊ.ಷಿಫ್‌ಮನ್ ಮಾತನಾಡಿದ್ದು ಇಂಗ್ಲಿಷ್‌ನಲ್ಲಿ . ಇತ್ತೀಚೆಗೆ ಕನ್ನಡ ಸಂಪರ್ಕ ಕಡಿಮೆಯಾಗಿದೆ ಎಂದು ಹೇಳಿದ ಅವರು, ಇಂಗ್ಲೀಷ್‌ನಲ್ಲಿ ಮಾತನಾಡಲು ಅನುಮತಿ ಕೋರುವ ಮೂಲಕವೇ ಮಾತು ಆರಂಭಿಸಿದರು. ಅಮೆರಿಕ ಹಾಗೂ ಭಾರತಗಳಲ್ಲಿ ತಾವು ತಮಿಳು ಮತ್ತು ಕನ್ನಡ ಕಲಿತ ಬಗೆಯನ್ನು ವಿವರಿಸಿದರು.
ಕನ್ನಡದ ಮೌಖಿಕ ಹಾಗೂ ಬರವಣಿಗೆ ರೂಪಗಳಲ್ಲಿನ ವ್ಯತ್ಯಾಸಗಳನ್ನು ಕುರಿತು ಮಾತನಾಡಿದ ಷಿಫ್‌ಮನ್, ಸ್ಥಳೀಯ ಅಮೆರಿಕನ್ನರಿಗೆ ಹಾಗೂ ಅಮೆರಿಕನ್ ಕನ್ನಡಿಗರ ಮಕ್ಕಳಿಗೆ ತಾವು ಕನ್ನಡ ಕಲಿಸುವ ಬಗೆಯನ್ನು ವಿವರಿಸಿದರು. ಕನ್ನಡಿಗರು ಹಾಗೂ ಕನ್ನಡ ಸಮುದಾಯದೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿರುವ ಬಗೆಗೆ ಸಂತೋಷ ವ್ಯಕ್ತಪಡಿಸಿದ ಅವರು, UPENN ನಲ್ಲಿ ಕನ್ನಡ ಪೀಠ ಸ್ಥಾಪನೆಯ ಅಗತ್ಯದ ಕುರಿತು ಮಾತನಾಡಿದರು.
ವಿಶ್ವ ವಿದ್ಯಾಲಯಗಳ ನಡುವಿನ ಕನ್ನಡ ಕೊಂಡಿ ..
ಷಿಫ್‌ಮನ್ ಅವರು ಕನ್ನಡವನ್ನು ಬೋಧಿಸುವ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಮೆರಿಕಾದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸುವ ಕೊಂಡಿಯಾಗಿದ್ದಾರೆ ಎಂದು ಷಿಫ್‌ಮನ್ ಅವರನ್ನು ಸಭೆಗೆ ಪರಿಚಯಿಸಿದ ಕೆಸಿಎ ಆಜೀವ ಸದಸ್ಯ ಹಾಗೂ ‘ಅಕ್ಕ’ ಟ್ರಸ್ಟಿ ಮತ್ತು ನಿರ್ದೇಶಕ ವಿ.ಎಂ. ಕುಮಾರಸ್ವಾಮಿ ಹೇಳಿದರು.
‘ಅಕ್ಕ’ ಬಳಗ ಹಾಗೂ ಕನ್ನಡ ಪೀಠವನ್ನು ಸ್ಥಾಪಿಸುವ ಅದರ ಉದ್ದೇಶದ ಬಗೆಗೆ ಅಮೇರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ಷಿಫ್‌ಮನ್ ಇ-ಮೇಲ್ ಮೂಲಕ ಸಂಪರ್ಕಿಸಿದ್ದಾರೆ. ಆದರೆ, UCLA, UCBerkeley ಮತ್ತು UPENN ವಿಶ್ವ ವಿದ್ಯಾಲಯಗಳು ಮಾತ್ರ ಷಿಫ್‌ಮನ್ ಅವರಿಗೆ ಪ್ರತಿಕ್ರಿಯಿಸಿವೆ. ಕನ್ನಡ ಪೀಠ ಸ್ಥಾಪನೆ ಹಾಗೂ ‘ವೆಬ್‌ನಲ್ಲಿ ಕನ್ನಡ’ದ ಬಗೆಗೆ ಷಿಫ್‌ಮನ್ ಧನಾತ್ಮಕ ಪ್ರತಿಕ್ರಿಯೆ ಹೊಂದಿದ್ದಾರೆ. ಷಿಫ್‌ಮನ್ ಹಾಗೂ ಅವರ ಹಿನ್ನೆಲೆಯ ವಿವರಗಳನ್ನು ಯುಎಸ್‌ಎ ಮತ್ತು ಕೆನಡಾದ ಎಲ್ಲ ಕನ್ನಡ ಕೂಟಗಳಿಗೆ ಕಳುಹಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ವೆಬ್ ಮೂಲಕ ಕನ್ನಡ ಬೋಧಿಸುವ ಮತ್ತು ಕಲಿಯುವ WE TALK ಕಾರ್ಯಕ್ರಮದ ಬಗೆಗೆ ಮತ್ತು UPENN ಹಾಗೂ PENN LANGUAGE CENTER ನೆರವಿನಿಂದ ವೆಬ್‌ನಲ್ಲಿ ಕನ್ನಡ ಅಳವಡಿಸುವ ಕುರಿತು ಕುಮಾರಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಷಿಫ್‌ಮನ್ ಅವರ ಫೋಟೋ ಹೊಂದಿದ್ದ ಹಾಗೂ ಕನ್ನಡ ಭಾಷೆಯಲ್ಲಿದ್ದ ಸ್ಮರಣಿಕೆಯನ್ನು ಕೆಸಿಎ ಕೆಸಿಎ ಅಧ್ಯಕ್ಷ ವಿಶ್ವೇಶ್ವರ ದೀಕ್ಷಿತ್ ಅವರು ಪ್ರೊ. ಹೆರಾಲ್ಡ್ ಷಿಫ್‌ಮನ್‌ರಿಗೆ ನೀಡಿ ಗೌರವಿಸಿದರು.
ಅಮೇರಿಕಾದಲ್ಲಿ ಕನ್ನಡ ಏಕೆ ಕಲಿಸಬೇಕು?
*ವರದಿ : ವಿ.ಎಂ. ಕುಮಾರಸ್ವಾಮಿ
ಕಾರ್ಯಕ್ರಮದಲ್ಲಿ ಮೂಡಿದ ಮೂರು ಅರ್ಥಪೂರ್ಣ ಪ್ರಶ್ನೆಗಳಿಗೆ ಷಿಫ್‌ಮನ್ ಉತ್ತರಿಸಿದರು. ಪ್ರಶ್ನೋತ್ತರ ಇಂತಿದೆ-
- ಅಮೆರಿಕಾದಲ್ಲಿ ಕನ್ನಡವನ್ನು ಕಲಿಸುತ್ತಿರುವುದು ಏಕೆ? ಕನ್ನಡ ಸಾಯುತ್ತಿರುವ ಭಾಷೆಯಲ್ಲವಾ?
ಕನ್ನಡ ಸಂಸ್ಕೃತಿಯನ್ನು ಅರಿಯಬೇಕಾದರೆ ಅದು ಕನ್ನಡ ಭಾಷೆಯ ಮೂಲಕವೇ ಸಾಧ್ಯ. 1200 ವರ್ಷಗಳ ಲಿಖಿತ ಇತಿಹಾಸವನ್ನು ಹೊಂದಿರುವ ಕನ್ನಡದಲ್ಲಿ – ಸಾಕಷ್ಟು ಸಂಶೋಧನೆ ಅಧ್ಯಯನಗಳು ಆಗಬೇಕಿದೆ, ಶಾಸನಗಳನ್ನು ಅರ್ಥೈಸಬೇಕಿದೆ, ಧರ್ಮ-ಇತಿಹಾಸ-ಕಲೆ- ವಾಸ್ತುಶಿಲ್ಪ- ಸಂಗೀತಗಳ ಹಿನ್ನೆಲೆಯಲ್ಲಿ ಜ್ಞಾನದ ಪರಿಕಲ್ಪನೆಯನ್ನು ರೂಪಿಸಬೇಕಾಗಿದೆ. ಇವುಗಳನ್ನೆಲ್ಲ ಅರ್ಥ ಮಾಡಿಕೊಂಡಾಗ ಮಾತ್ರ ಕನ್ನಡವನ್ನು ಅರ್ಥೈಸಿಕೊಳ್ಳಬಹುದು. ಇತರ ಸಾಂಪ್ರದಾಯಿಕ ಭಾಷೆಗಳ ವಿಷಯದಲ್ಲಿ ಇಂಥ ಪ್ರಯತ್ನಗಳು ಈಗಾಗಲೇ ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ನಡೆದಿವೆ. ಕನ್ನಡದ ವಿಷಯದಲ್ಲಿ ನಡೆಸುವ ಇಂಥ ಅಧ್ಯಯನ ಭಾರತ ಮಾತ್ರವಲ್ಲದೆ ಪಶ್ಚಿಮದಲ್ಲೂ ಮೆಚ್ಚುಗೆ ಗಳಿಸುತ್ತದೆ. ಸಂಸ್ಕೃತ, ತಮಿಳು ಅಥವಾ ಹಿಂದಿ ತಿಳಿದುಕೊಂಡ ಮಾತ್ರಕ್ಕೆ ಕನ್ನಡದ ಪರಿಸರವನ್ನು ಅರ್ಥ ಮಾಡಿಕೊಂಡಂತಾಗುವುದಿಲ್ಲ .
2. ಲಿಖಿತ ಭಾಷೆಯ ಜೊತೆಗೆ ಆಡುಭಾಷೆಯನ್ನೂ ಯಾಕೆ ಕಲಿಸಬೇಕು ?
ಸಾಮಾನ್ಯವಾಗಿ ಮಾತೃಭಾಷೆಯನ್ನೇ ಮಾತಾಡುವವರು ಬಾಲ್ಯದಲ್ಲಿಯೇ ಆ ಭಾಷೆಯನ್ನು ಕಲಿತಿರುತ್ತಾರೆ. ಭಾರತದಲ್ಲಿ ಅದಕ್ಕೆ ಪೂರಕವಾಗಿ ಪರಿಸರದಲ್ಲಿಯೂ ಅದೇ ಭಾಷೆ ಪ್ರಚಲಿತದಲ್ಲಿರುತ್ತದೆ. ಮಗು ಶಾಲೆಗೆ ಸೇರಿದಾಗ ತನ್ನ ಮಾತೃಭಾಷೆಯ ಲಿಖಿತ ರೂಪವನ್ನು ಕಲಿಯಲಾರಂಭಿಸುತ್ತದೆ. ಸಹಜವಾಗಿಯೇ ಲಿಖಿತ ಭಾಷೆಯೇ ಆ ಭಾಷೆಯ ನಿಜ ಸ್ವರೂಪ ಮತ್ತು ಆಡು ಮಾತು ಸ್ವಚ್ಛವಲ್ಲ ಎಂಬ ಭಾವನೆ ಜನರಲ್ಲಿರುತ್ತದೆ.
ಅಮೆರಿಕಾದಲ್ಲಿ ಯಾವುದೇ ಭಾಷೆಯನ್ನು ಮಾತಾಡುವವನ ಮನಸ್ಸಿನಲ್ಲಿ ಇಂಗ್ಲಿಷ್ ಬೇರೂರಿರುತ್ತದೆ. ಆದ್ದರಿಂದ ಮಾತಾಡುವ ಕನ್ನಡ ಮತ್ತು ಲಿಖಿತ ರೂಪದ ಕನ್ನಡ ಎರಡೂ ಬೇರೆ ಭಾಷೆಯಂತೆಯೇ ತೋರುತ್ತದೆ. ಉದಾಹರಣೆಗೆ ಮಾಡುವುದಕ್ಕೆ ಎಂಬ ಪದ ಆಡುಭಾಷೆಯ ಪ್ರಕಾರ ಮಾಡೋಕೆ ಎಂದಾಗುತ್ತದೆ. ಹೀಗೆ, ಮೌಖಿಕ ಮತ್ತು ಲಿಖಿತ ಭಾಷೆಯ ನಡುವಿನ ವ್ಯತ್ಯಾಸಗಳನ್ನು ಅರ್ಥ ಮಾಡಿಸಿಕೊಡುವ ಕಾರಣಕ್ಕೆ ಪ್ರತ್ಯೇಕ ಶಿಕ್ಷಣದ ಅಗತ್ಯವಿದೆ. ಆಡು ಭಾಷೆಯ ಪದಗಳನ್ನು ದಿನ ನಿತ್ಯದ ವ್ಯವಹಾರದಲ್ಲಿ ಬಳಸಲು ಅವರಿಗೆ ಸಹಾಯವಾಗುತ್ತದೆ. ಲಿಖಿತ ಭಾಷೆಯನ್ನು ಅಭ್ಯಸಿಸುವುದರಿಂದ ಪುಸ್ತಕಗಳನ್ನು ಓದಲು ಹಾಗೂ ಅಧ್ಯಯನ ಮಾಡಲು ಅನುಕೂಲವಾಗುತ್ತದೆ.
ಆಡು ಭಾಷೆಯ ಬಗೆಗೆ ವಿದ್ಯಾರ್ಥಿಗಳು ಜಾಸ್ತಿ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಕನ್ನಡ ಆಡುಭಾಷೆಯ ವ್ಯಾಕರಣ ಪುಸ್ತಕವನ್ನು ಬರೆದದ್ದೇ ಈ ಕಾರಣಕ್ಕಾಗಿ. ಯಾಕೆಂದರೆ ಲಿಖಿತ ಭಾಷೆಯ ವ್ಯಾಕರಣ ಸ್ವರೂಪಗಳ ಬಗೆಗೆ ಸಾಕಷ್ಟು ಪುಸ್ತಕಗಳು ಲಭ್ಯವಿವೆ. ಆದರೆ ಆಡುಭಾಷೆಯ ಬಗ್ಗೆ ಹೆಚ್ಚು ಮಾಹಿತಿ ಸಿಗದು. ಕನ್ನಡ ಮಾತೃಭಾಷೆಯಲ್ಲದವರಿಗೂ ಪ್ರತ್ಯೇಕ ತರಗತಿಗಳನ್ನು ನಡೆಸುವುದು ಒಳ್ಳೆಯದು. ಅಂತಹವರಿಗೆ ನಾನು ಪ್ರತ್ಯೇಕ ದಿನಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಅಥವಾ ಬೇರೆ ಶಿಕ್ಷಕರನ್ನು ನೇಮಿಸುತ್ತಿದ್ದೆ.
- ಭಾರತ ಹಾಗೂ ಪಶ್ಚಿಮ ದೇಶಗಳಲ್ಲಿ ಭಾಷೆಯನ್ನು ಕಲಿಸುವ ಶೈಕ್ಷಣಿಕ ಕ್ರಮದಲ್ಲಿ ಇರುವ ವ್ಯತ್ಯಾಸಗಳೇನು?
ಭಾಷೆಯನ್ನು ಸಂಪರ್ಕ ಮಾಧ್ಯಮವನ್ನಾಗಿ ಬಳಸುವುದು ಹೇಗೆ ಎನ್ನುವುದನ್ನು ನಾವು ಕಲಿಸಿಕೊಡುತ್ತೇವೆ. ಪ್ರಶ್ನೆಗಳನ್ನು ಕೇಳಲು, ಮಾಹಿತಿಯನ್ನು ಕೇಳಲು, ಮಲಗುವ ಸ್ಥಳ- ಊಟ… ಮುಂತಾಗಿ ಸಂಪರ್ಕ ಮಾಧ್ಯಮವಾಗಿ ಭಾಷೆಗೆ ಹಲವಾರು ಮುಖ. ಆದರೆ, ಭಾರತದಲ್ಲಿ ಭಾಷೆಯನ್ನು ಕ್ರಮಬದ್ಧವಾಗಿ ಕಲಿಸಲಾಗುತ್ತದೆ. ಮೊದಲಿಗೆ ಅಕ್ಷರಗಳ ಕಲಿಕೆ, ನಂತರ ಓದುವುದರ ಅಭ್ಯಾಸ. ನಾವು ‘ಸಿಎ’ ಸಿಲಬಸ್ ಪ್ರಕಾರ ಅಕ್ಷರಗಳನ್ನು ಮೊದಲಿಗೆ ಬೋಧಿಸುತ್ತೇವೆ. ಉದಾಹರಣೆಗೆ ಕಲಾ, ಮಗ, ರಾಜ, ಮರ .. ಒಟ್ಟಿನಲ್ಲಿ ಸರಳ ಪದಗಳು. ಭಾಷೆಯಲ್ಲಿ ಬಳಕೆಯಲ್ಲಿಲ್ಲದ ಯಾವುದೇ ಪದವನ್ನು ನಾವು ಬೋಧಿಸುವುದಿಲ್ಲ .
ಮತ್ತೊಂದು ಉದಾಹರಣೆಯೆಂದರೆ- ಸಹಾಯಕ ಕ್ರಿಯಾಪದಗಳ ಮೂಲಕ ನಾನು ಭಾಷೆಯನ್ನು ಕಲಿಸುತ್ತೇನೆ. ಬೇಕು, ಸಾಕು, ಗೊತ್ತು ಮುಂತಾದ ಸಹಾಯಕ ಕ್ರಿಯಾಪದಗಳನ್ನು – ಇವು ನನಗೆ ಗೊತ್ತು , ನಿಮಗೆ ಏಕೆ ಬೇಕು ಮುಂತಾಗಿ ಬಳಸಿದಾಗ ಅರ್ಥಪೂರ್ಣವೆನಿಸುತ್ತವೆ. ಮಾಡು, ಹೋಗು, ಬಾ ಮುಂತಾದ ಕ್ರಿಯಾಪದಗಳು ಹೆಚ್ಚು ಪರಿಪೂರ್ಣ ಹಾಗೂ ಸಂಕೀರ್ಣವಾಗಿರುವುದನ್ನು ಗಮನಿಸಬಹುದು. ಸಾಕು, ಬೇಕು.. ಪದಗಳು ಮೊದಲಿಗೆ ಗೊತ್ತಿದ್ದಲ್ಲಿ ಭಾಷೆಯಲ್ಲಿ ಅಭಾಸಗಳಾಗುವುದು ತಪ್ಪುತ್ತದೆ. ಸರಳ ಪಾಠಗಳನ್ನು ರೂಪಿಸುವ ಬಗ್ಗೆ ಪ್ರಸ್ತುತ ನಾನು ತೊಡಗಿಕೊಂಡಿದ್ದು , ಅವುಗಳನ್ನು ಸದ್ಯದಲ್ಲಿಯೇ ವೆಬ್‌ನಲ್ಲಿ ಪರಿಚಯಿಸುತ್ತೇನೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪ್ರಶ್ನೆಯಾಂದಕ್ಕೆ ಷಿಫ್‌ಮನ್‌ರ ಉತ್ತರ-
ಪ್ರೀತಿಯ ತೇಜಸ್ವಿ ,
ಕನ್ನಡ ಫಾಂಟ್ಸ್ ಮತ್ತು ವಿವಿಧ ವರ್ಡ್ ಪ್ರೊಸೆಸರ್‌ಗಳ ನಡುವಣ ಹೊಂದಾಣಿಕೆಯ ಕೊರತೆ… ಕುರಿತಂತೆ ಕುಮಾರಸ್ವಾಮಿ ಅವರ ಮೂಲಕ ತಾವು ಕಳುಹಿಸಿದ ಪ್ರಶ್ನೆ ತಲುಪಿದೆ. ಇದೊಂದು ಸಮಸ್ಯೆಯೆಂದು ನಾನು ಒಪ್ಪುತ್ತೇನೆ. ನನಗೆ ಗೊತ್ತಿರುವಂತೆ ಕನ್ನಡ ಮಾತ್ರವಲ್ಲದೆ ತಮಿಳು, ಚೀನೀ ಸೇರಿದಂತೆ ವಿವಿಧ ಭಾಷೆಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಚೀನೀಯರು ಅಭಿವೃದ್ಧಿ ಪಡಿಸಿರುವ ಸಾಫ್ಟ್‌ವೇರ್, ವೆಬ್‌ಸೈಟ್‌ನಲ್ಲಿ ಬಳಸಿರುವ ಫಾಂಟ್‌ಗಳನ್ನು ಗುರುತಿಸಿ ತಂತಾನೆ ಆ ಫಾಂಟ್‌ಗಳನ್ನು ಅಳವಡಿಸಿಕೊಳ್ಳುತ್ತದೆ.
ಕನ್ನಡ ಐಟಿ ಸಮುದಾಯದಲ್ಲಿ ಕೂಡ ಯಾರಾದರೊಬ್ಬರು ಸಮರ್ಥವಾದ ಫಾಂಟ್ ಕನ್ವರ್ಟರ್ ಅಭಿವೃದ್ಧಿ ಪಡಿಸುವ ಬಗೆಗೆ ನಾನು ಆಶಾವಾದಿಯಾಗಿದ್ದೇನೆ. ಕನ್ನಡದಲ್ಲಿ ಯೂನಿಕೋಡ್ ಅಭಿವೃದ್ಧಿಯಲ್ಲಿ ನೀವು ತೊಡಗಿಕೊಂಡಿದ್ದೀರೋ ಇಲ್ಲವೋ ನನಗೆ ತಿಳಿದಿಲ್ಲ . ತಮಿಳು ಯೂನಿಕೋಡ್ ಬಗ್ಗೆ ಹೇಳುವುದಾದರೆ- ಕೆಲವು ಮಂದಿ ತಮ್ಮ ಫಾಂಟ್ ಇತರರ ಫಾಂಟ್‌ಗಿಂತ ಉತ್ತಮವೆಂದು ಭಾವಿಸಿದ್ದಾರೆ. ಅಲ್ಲದೆ, ಯೂನಿಕೋಡ್‌ನಲ್ಲಿ ಹೊರಗಿನಿಂದ ಬಂದ ಕೆಲವು ಪದಗಳನ್ನು ಅಳವಡಿಸಿಕೊಳ್ಳಬೇಕೆ ಎನ್ನುವ ಕುರಿತೂ ಗೊಂದಲಗಳಿವೆ.
ಕನ್ನಡ ಐಟಿ ಸಮುದಾಯ ಈ ಸವಾಲನ್ನು ಸಮರ್ಥವಾಗಿ ಎದುರಿಸಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಬಗೆಗೆ ನನಗೆ ನಂಬುಗೆಯಿದೆ.
ಹೆಚ್. ಷಿಫ್‌ಮನ್
____________________
ಪ್ರೊ.ಷಿಫ್‌ಮನ್‌ಗೆ‘ಕನ್ನಡಾಭಿಮಾನ ಪ್ರಶಸ್ತಿ’
ಪೆನ್ಸಿಲ್ವೇನಿಯಾ ವಿ.ವಿ.ಯಲ್ಲಿ ಕನ್ನಡ ಪೀಠ ಸ್ಥಾಪಿಸುವ ಪ್ರಯತ್ನದಲ್ಲಿರುವ ಪ್ರೊ. ಷಿಫ್‌ಮನ್ ಅವರಿಗೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡಾಭಿಮಾನ ಸನ್ಮಾನ !
* ಜ್ಯೋತಿ ಮಹಾದೇವ, ಕುಪರ್ಟಿನೋ, ಕ್ಯಾಲಿಫೋರ್ನಿಯಾ
ಉತ್ತರ ಅಮೆರಿಕಾದ ಸ್ಯಾನ್ ಫ್ರಾನ್‌ಸಿಸ್ಕೋದ ಸುತ್ತ ಮುತ್ತಣ ಪ್ರದೇಶದ (ಬೇ ಏರಿಯಾ ) ಕನ್ನಡಿಗರು ‘ತೆನೆಯ ಕೆನೆ’(ಕ್ರೀಮ್ ಆಫ್ ದ ಕ್ರಾಪ್) ಎಂದೇ ಪ್ರತಿಭೆಗೆ ಹೆಸರಾದವರು. ಹಲವಾರು ವರ್ಷಗಳ ಹಿಂದೆಯೇ ಆಗಲೀ, ಅಥವಾ ಕೆಲವಾರು ತಿಂಗಳುಗಳ ಈಚೆಗೇ ಆಗಲಿ ಇಲ್ಲಿಗೆ ಬಂದಿದ್ದಿರಬಹುದು ; ಏನೇ ಇರಲಿ, ಇಲ್ಲಿನ ಈ ಕನ್ನಡಿಗರಲ್ಲಿ ತಮ್ಮ ನಾಡು ನುಡಿಗಳ ಬಗ್ಗೆ ತುಂಬು ಅಭಿಮಾನ ಕಳಕಳಿ ಕಾಳಜಿ ಇರುವುದು, ಎದ್ದು ತೋರುವುದೂ ಅಪರೂಪವೇನಲ್ಲ. ಇಂತಹ ಪ್ರೀತಿಯ ಪ್ರತೀಕವೊಂದು ಇತ್ತೀಚೆಗೆ ಸನ್ನಿವೇಲ್ ದೇವಳದ ಒಳಾಂಗಣದಲ್ಲಿ ನಡೆದ ವಿಶೇಷ ಸಭೆಯಾಂದರಲ್ಲಿ ಕಾಣ ದೊರೆಯಿತು. ಇದೇ ಕಳೆದ ಜುಲೈ 28ರಂದು ಸಂಜೆ, ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಹೆರಾಲ್ಡ್ ಷಿಫ್‌ಮನ್ ಅವರನ್ನು ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’ದ ಮತ್ತು ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಬಳಗ’ ದ ವತಿಯಿಂದ, ಕರ್ನಾಟಕದ ಖ್ಯಾತ ಸಾಹಿತಿ ಡಾ. ಸಾ.ಶಿ. ಮರುಳಯ್ಯನವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಕನ್ನಡಕ್ಕೆ ಅಸದೃಶ ಅಕ್ಕರೆ ತೋರುವ ಈ ವಿದೇಶಿ ಪ್ರೊಫೆಸರ್
ಪ್ರೊ. ಹೆರಾಲ್ಡ್ ಎಫ್. ಷಿಫ್‌ಮನ್, ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದ ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕ. ಈ ಪ್ರಾದೇಶಿಕ ಅಧ್ಯಯನ ವಿಭಾಗದಲ್ಲಿ , ದ್ರಾವಿಡ ಭಾಷಾ ಶಾಸ್ತ್ರ ಮತ್ತು ಸಂಸ್ಕೃತಿ ವಿಷಯಗಳ ಪ್ರಾಧ್ಯಾಪಕರು. ಪೆನ್ ಭಾಷಾ ಕೇಂದ್ರದ ನಿರ್ದೇಶಕರೂ ಹೌದು. ಅವರ ಅಧ್ಯಾಪನ ವಿಷಯ… ಕನ್ನಡ ಮತ್ತು ತಮಿಳು ! ಹೌದು, ಒಬ್ಬ ಅಮೆರಿಕನ್, ಭಾರತೀಯ ಭಾಷೆಗಳ ಬಗ್ಗೆ ಆಸಕ್ತಿ ತೋರಿ ಅವುಗಳೆರಡನ್ನೂ ಸ್ವತಃ ಕಲಿತು, ಸಂಶೋಧನೆ ಮಾಡಿ, ಈಗ ಆಸಕ್ತರಿಗೆ ಕಲಿಸುತ್ತಿರುವುದು ವಿಶೇಷ. ಆದರೆ, ಇನ್ನೂ ಮಹತ್ವವಿರುವುದು ಅವರು ತೋರುತ್ತಿರುವ ಆಸಕ್ತಿ ಅಷ್ಟಕ್ಕೇ ಸೀಮಿತವಲ್ಲ ಅನ್ನುವ ನೆಲೆಯಲ್ಲಿ , ಅವರ ಮುಂದಿನ ಯೋಜನೆಯಲ್ಲಿ . ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪೀಠವೊಂದನ್ನು ಹುಟ್ಟುಹಾಕಬೇಕು ಎಂದುಕೊಂಡು, ಕನ್ನಡಕ್ಕೆ ಅಸದೃಶ ಅಕ್ಕರೆ ತೋರುತ್ತಿರುವ ಈ ವಿದೇಶೀಯರ ಹಂಬಲ ಕನ್ನಡಿಗರ ಅಭಿಮಾನಕ್ಕೆ ಒಂದು ಒತ್ತಾಸೆಯಂತಿದೆ, ಒತ್ತಾಯ, ಸವಾಲೂ ಆಗುವಂತಿದೆ.
‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. …’ ಭಾವಗೀತೆಯನ್ನು ಭಾವಪೂರ್ಣವಾಗಿ ಪ್ರಾರ್ಥನೆಯಾಗಿ ಮನೋರಮ ರಾವ್ ಅವರು ಹಾಡುವುದರೊಂದಿಗೆ ಸಂಜೆಯ ಕಾರ್ಯಕ್ರಮ ಸರಿಯಾದ ಸಮಯಕ್ಕೆ ಪ್ರಾರಂಭವಾಯಿತು. ತದನಂತರ ಹರಿಹರೇಶ್ವರ ಅವರು ಮುಖ್ಯ ಅತಿಥಿಗಳಾದ ಪ್ರೊ. ಷಿಫ್‌ಮನ್ ಅವರನ್ನು ಪರಿಚಯಿಸಿದರು. ‘ಪ್ರೊ. ಷಿಫ್‌ಮನ್ ಅವರು ಕನ್ನಡಿಗರು ಹೆಮ್ಮೆ ಪಡಬೇಕಾದ ವ್ಯಕ್ತಿ…’ ‘ಕನ್ನಡ ಆಡು ನುಡಿಯ ಪರಾಮರ್ಶನ ವ್ಯಾಕರಣ’ ಎಂಬ ಮೌಲಿಕ ಗ್ರಂಥವನ್ನು ಬರೆದು ಆದರಕ್ಕೆ ಪಾತ್ರರಾಗಿದ್ದಾರೆ… ಎಂದು ಹೇಳಿದರು. ಕನ್ನಡ ಭಾಷಾ ವಿಜ್ಞಾನದ ವಿಭಾಗದಲ್ಲಿ ನ್ಯೂಯಾರ್ಕ್‌ನ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಎಸ್. ಎನ್. ಶ್ರೀಧರ್ ಅವರ ಸಂಶೋಧನೆಗಳನ್ನು ಹೆಸರಿಸಿದರು. ಅಮೆರಿಕಾದಲ್ಲಿ, ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಕನ್ನಡದ ಅಧ್ಯಯನ ಈ ಮೊದಲು ಎಲ್ಲಿ ನಡೆಯುತ್ತಿತ್ತು ಎನ್ನುವುದನ್ನು ವಿವರವಾಗಿ ಹೇಳಿ, ಈಗ ಫಿಲಿಡಲ್ಫಿಯಾ ಬಳಿ ಇರುವ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ವಿಮಲಾ ರಾಜಗೋಪಾಲ್ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಮನ್ನಣೆ ಗಳಿಸಿರುವ ಪಠ್ಯ ವಿಷಯವಾಗಿ ಕನ್ನಡ ಕಲಿಸಲಾಗುತ್ತಿದೆ’ ಎಂದರು.
ನಾನು ಇಂಗ್ಲಿಷ್‌ನಲ್ಲೇ ಮಾತಾಡ್‌ತೀನಿ.. .
ಪ್ರೊ.ಷಿಫ್‌ಮನ್ ಅವರು ತಮ್ಮ ಭಾಷಣವನ್ನು ಕನ್ನಡದಲ್ಲೇ ಪ್ರಾರಂಭಿಸಿ, ‘ನನಗೆ ಮಾತ್ನಾಡಿ ಅಭ್ಯಾಸ ತಪ್ಪಿ ಹೋಗಿದೆ. ತಮಿಳ್ ಟೇಕ್ಸ್ ಓವರ್ ಮೈ ಹೆಡ್; … ಆದ್ದರಿಂದ ನಾನು ಇಂಗ್ಲಿಷ್‌ನಲ್ಲೇ ಮಾತಾಡ್‌ತೀನಿ,’ ಎಂದು ಸಭೆಯ ಅನುಮತಿ ಕೋರಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಭಾಷಣದುದ್ದಕ್ಕೂ ಉದಾಹರಣೆಗಳನ್ನು ಕನ್ನಡದಲ್ಲೇ ಕೊಡುತ್ತಾ ಸಭಿಕರ ಮನರಂಜಿಸಿದರು.
‘ಆಡು-ನುಡಿಯ ಮತ್ತು ಬರವಣಿಗೆಯ ಕನ್ನಡಗಳಲ್ಲಿ ಎಷ್ಟೊಂದು ವ್ಯತ್ಯಾಸ ಇದೆಯೆಂದರೆ, ಹೊರಗಿನವರಾದ ನಮಗೆ ಅವೆರಡೂ ಬೇರೆ ಬೇರೆ ಭಾಷೆಗಳಂತೆಯೇ ತೋರುತ್ತವೆ ! ಆ ಕ್ಲಿಷ್ಟತೆಯನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ‘ಕನ್ನಡ ಆಡುನುಡಿಯ ವ್ಯಾಕರಣ’ವನ್ನು ಬರೆದೆ’, ಎಂದು ಆರಂಭಿಸಿದ ಪ್ರೊ.ಷಿಫ್‌ಮನ್ ಅವರು, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಒಂದು ಕನ್ನಡ ಪೀಠ ಸ್ಥಾಪಿಸುವ ಯೋಜನೆಯ ಪ್ರಸ್ತಾಪ ಮಾಡಿ, ‘ಅದಕ್ಕಾಗಿ ಅಮೆರಿಕೆಯಲ್ಲಿರುವ ಕನ್ನಡಿಗರೆಲ್ಲರೂ ಸಹಾಯ ನೀಡಬೇಕು, ಆಗ ಮಾತ್ರ ಈ ಕೆಲಸ ಸಾಧ್ಯ’ವೆಂದರು.
ತಾನೆಂದಿಗೂ ಹಿಂದೆ ‘ಫಂಡ್ ರೈಸಿಂಗ್’ ಮಾಡಿಲ್ಲ. ಅಭ್ಯಾಸವಿಲ್ಲ, ಈಗ ಕನ್ನಡಕ್ಕಾಗಿ ಕನ್ನಡಿಗರಲ್ಲಿ ನಿಧಿ ಶೇಖರಣೆಗಾಗಿ ಕೇಳಿಕೊಳ್ಳುತ್ತಿದ್ದೇನೆ, ಎಂದ ಅವರು, ‘…ನೀವೆಲ್ಲರೂ ಸೇರಿ ಈ ಪೀಠವನ್ನು ಸ್ಥಾಪಿಸಬಲ್ಲಿರಿ. ಪ್ರತಿ ಕನ್ನಡಿಗ ಕುಟುಂಬವೂ ದಿನಕ್ಕೊಂದು ಡಾಲರಿನಂತೆ ಇದಕ್ಕಾಗಿ ಸೇರಿಸಿದರೆ, ಮೂರು ವರ್ಷಗಳಲ್ಲಿ ಆ ಕುಟುಂಬದ ಉಳಿತಾಯ ಸಾವಿರ ಡಾಲರ್‌ಗಳಾಗುತ್ತದೆ. ಅಮೆರಿಕಾದಲ್ಲಿರುವ ಎಲ್ಲ ಕನ್ನಡಿಗರೂ ಈ ರೀತಿ ಮಾಡಿದರೆ ಆ ಅವಧಿಯಲ್ಲಿ ಸುಮಾರು ಐದು ಮಿಲಿಯನ್ ಡಾಲರ್‌ಗಳಷ್ಟು ಉಳಿಸಬಹುದು. ಇದರಿಂದ ನಾವು ಮಾಡಬೇಕು ಅಂದುಕೊಂಡಿರುವ ಕೆಲಸ ಸುಲಭವಾಗುತ್ತದೆ…’, ಎಂದು ಸೂಚಿಸಿದರು.
ಕನ್ನಡ ಪೀಠ : ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲೇ ಯಾಕೆ ?
ಬೇರೆ ವಿಶ್ವವಿದ್ಯಾಲಯಗಳಲ್ಲಲ್ಲದೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲೇ ಯಾಕೆ ಸಮಂಜಸವೆಂದು ಸಮಜಾಯಿಷಿ ಹೇಳುತ್ತಾ, ‘ನಮ್ಮ ವಿಶ್ವವಿದ್ಯಾಲಯದಲ್ಲಿ ಕಳೆದ ಐದು ದಶಕಗಳಿಂದಲೂ ದಕ್ಷಿಣ ಭಾಷೆಗಳ ಅಧ್ಯಯನ ಕೇಂದ್ರವೊಂದು ಇದ್ದು ಸಮರ್ಥವಾಗಿ ಕೆಲಸ ಮಾಡುತ್ತಿದೆ; ಹೀಗಿರುವುದರಿಂದ ನಿಮ್ಮ ಪ್ರಯತ್ನ, ಆಸೆ, ಔದಾರ್ಯಗಳು ನಿರರ್ಥಕವಾಗುವುದಿಲ್ಲ ; ಆ ‘ಪೀಠ’ ಅರ್ಧದಲ್ಲಿ ಮುಳುಗುವುದಿಲ್ಲ. ಹಣ ಸಂಗ್ರಹಣೆ ಆದ ಆದಂತೆಲ್ಲಾ ಅದಕ್ಕೆ ತಕ್ಕಂತೆ ಸಣ್ಣ, ಸ್ವಲ್ಪ ದೊಡ್ಡ, ಹೆಚ್ಚಿನ ಪ್ರಮಾಣದ ಅಧ್ಯಯನ ಪ್ರವಚನ ಸಂಶೋಧನ ಯೋಜನೆಗಳನ್ನು ಹಾಕಿಕೊಳ್ಳಬಹುದು; ಆದ್ದರಿಂದ ಬನ್ನಿ ನಾವೆಲ್ಲರೂ ಈ ದಿಕ್ಕಿನಲ್ಲಿ ಪ್ರಯತ್ನಿಸೋಣ; ಉಳಿದ ಭಾಷೆಯವರಿಗೆ- ಗುಜರಾತಿ, ತಮಿಳು, ಹಿಂದಿ- ಮುಂತಾದವರಿಗೆ ನಾವು ಒಂದು ಮಾದರಿಯಾಗಬಲ್ಲೆವು….’ ಎಂದು ಹುರಿದುಂಬಿಸಿದರು. ಸಭಿಕರ ಕೆಲವು ಪ್ರಶ್ನೆಗಳಿಗೆ ಪ್ರೊ.ಷಿಫ್‌ಮನ್ ಸೂಕ್ತವಾಗಿ ಉತ್ತರಿಸಿದರು.
Hide from old browsers |
ಇಂಥ ಒಂದು ಸಮಾರಂಭವನ್ನು ನಡೆಸುತ್ತಿರುವುದಕ್ಕಾಗಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮತ್ತು ಕನ್ನಡ ಬಳಗ ಸಂಸ್ಥೆಗಳನ್ನು ಅಭಿನಂದಿಸುತ್ತಾ, ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದವರೂ, ಖ್ಯಾತ ಸಾಹಿತಿಗಳೂ ಆದ ಸಾ.ಶಿ.ಮರುಳಯ್ಯನವರು, ಇಲ್ಲಿಗೆ ಬಂದುದಕ್ಕಾಗಿ ಪ್ರೊ.ಷಿಫ್‌ಮನ್ ಅವರನ್ನು ಅಭಿನಂದಿಸಿದರು.
ಕಿಟೆಲ್ ನಿಘಂಟು ಮತ್ತೆ ಪರಿಷ್ಕೃತವಾಗಬೇಕಿತ್ತು ..
ಡಾ.ಸಾ.ಶಿ.ಮರುಳಯ್ಯನವರು ಹೇಳಿದರು : ‘ಕಿಟೆಲ್ ನಿಘಂಟು ಬಹಳ ವೈಜ್ಞಾನಿಕವಾಗಿ ರಚಿತವಾದ ಒಂದು ಮಾದರಿ ಕನ್ನಡ ನಿಘಂಟು. ಆದರೆ, ಅಲ್ಲಿ ಒಂದು ಕೊರತೆಯೆಂದರೆ, ಇಂಗ್ಲೀಷಿನಲ್ಲಿ ಕನ್ನಡ ಪದಗಳ ಲಿಪ್ಯಂತರ. ಅದಿದ್ದಿದ್ದರೆ, ಬೇರೆ ಭಾಷಿಕರಿಗೆ ಕನ್ನಡದ ಭಾಷಾ ಸ್ವರೂಪ ಗೊತ್ತಾಗುತ್ತಿತ್ತು ; ಕಿಟೆಲ್ ನಿಘಂಟಿನ ಬಳಿಕ ಕನ್ನಡದಲ್ಲಿ ಅದಕ್ಕೆ ಸಮನಾದ ಅರ್ಥಕೋಶ ಬರಲಿಲ್ಲ ; ಇತ್ತೀಚೆಗೆ ಸೇರಿರುವ ಸಾವಿರಾರು ಕನ್ನಡ ಪದಗಳನ್ನು ಅಂಥಹುದಕ್ಕೆ ಸೇರಿಸಬೇಕಿತ್ತು ; ಉಪಯುಕ್ತವಾದ ಕೆಲವು ಶಬ್ದಗಳ ನಿಷ್ಪತ್ತಿ ಪ್ರಯೋಗಗಳನ್ನು ಸರಿಪಡಿಸುವ ಅವಶ್ಯಕತೆಯಿತ್ತು; ಈ ಮೂರೂ ಉದ್ದೇಶಗಳಿಟ್ಟುಕೊಂಡು ನಿಘಂಟುವನ್ನು ಪರಿಷ್ಕರಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಯೋಜನೆಯಾಂದು ಕರ್ನಾಟಕ ಸರಕಾರದ ನೆರವಿಲ್ಲದೆ ನಿಂತು ಹೋಯಿತು !’
‘ಕನ್ನಡ ಆಡು- ನುಡಿಯ ವ್ಯಾಕರಣವನ್ನು ಬರೆದ ಪ್ರೊ.ಷಿಫ್‌ಮನ್ ಅವರ ಕಾರ್ಯ ಪ್ರಶಂಸನೀಯ. ಈಗ ಅವರು ಸ್ಥಾಪಿಸಬೇಕು ಅಂದುಕೊಂಡಿರುವ ‘ಪೀಠ’ ಕನ್ನಡಕ್ಕೆ ಹೊಸತೊಂದು ಹೆಮ್ಮೆಯ ಗರಿ…’ ಎಂದು, ಸುಮಾರು 1500 ವರ್ಷಗಳ ಲಿಖಿತ ಇತಿಹಾಸವಿರುವ ಕನ್ನಡ ಭಾಷೆ ಪ್ರಾಂತೀಯವಾಗಿ ಎಷ್ಟೊಂದು ಭೇದಗಳನ್ನೊಳಗೊಂಡಿದೆಯೆಂದು ಕೆಲವಾರು ಉದಾಹರಣೆಗಳೊಂದಿಗೆ ನುಡಿದ ಡಾ.ಸಾ.ಶಿ.ಮರುಳಯ್ಯನವರು, ‘ಭಾಷೆ ಜಡತ್ವದಿಂದ ಕೂಡಿರಬಾರದು. ಬೇರೆ ಬೇರೆ ಪ್ರಾಂತಗಳ ವ್ಯತ್ಯಾಸಗಳನ್ನು, ಪ್ರಾದೇಶಿಕ ವೈವಿಧ್ಯಗಳನ್ನು ಜೀರ್ಣಿಸಿಕೊಳ್ಳಬೇಕು. ಜೊತೆಗೆ ಬೇರೆ ಭಾಷೆಗಳ ಪ್ರಭಾವವನ್ನು ಸ್ವೀಕರಿಸಬೇಕು. ಆಗಲೇ ಒಂದು ಭಾಷೆಯ ಬೆಳವಣಿಗೆ ಸಾಧ್ಯ. ಆದರೆ ಒಂದು ದಿಕ್ಕಿನ ಬೆಳವಣಿಗೆ ಇನ್ನೊಂದು ದಿಕ್ಕಿನ ವಿನಾಶವೂ ಆಗಬಲ್ಲುದು, ಆದರದು ಅನಿವಾರ್ಯ…’ ಅನ್ನುತ್ತಾ, ಹಲ್ಮಿಡಿ, ಬಾದಾಮಿ ಮೊದಲಾದ ಶಾಸನಗಳನ್ನು ಪುಂಖಾನುಪುಂಖವಾಗಿ ಉದ್ಧರಿಸುತ್ತಾ, ಶಾಸನಗಳಲ್ಲಿ ಹಲವಾರು ಗಣಿತ, ತಂತ್ರಜ್ಞಾನಕ್ಕೆ ಸಂಬಂಧ ಪಡುವಂತಹ ಪದಗಳಿದ್ದವು ಎಂದರು. ಹಲವು ಶಾಸನಗಳ ಲಿಪಿ ಈಗ ಓದಲೂ ಅಸಾಧ್ಯವಾಗಿರುವುದನ್ನು ನೆನಪಿಸಿದರು. ಜೊತೆಗೆ ಡಾ.ಮರುಳಯ್ಯನವರ ಮಾತು ಸಾಹಿತ್ಯ ಸಂಸ್ಕೃತಿಗಳನ್ನು ಹದವಾಗಿ ಬೆರೆಸಿದ ಸುಮಧುರ ಪಂಚಾಮೃತದಂತಿತ್ತು.
ಕನ್ನಡಾಭಿಮಾನ ಗೌರವ ಪ್ರಶಸ್ತಿ
ಬಳಿಕ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಪರವಾಗಿ ಸಭೆಯ ಅಧ್ಯಕ್ಷ ಡಾ.ಮರುಳಯ್ಯನವರು ಪ್ರೊ.ಷಿಫ್‌ಮನ್ ಅವರಿಗೆ ‘ಕನ್ನಡಾಭಿಮಾನ ಗೌರವ ಪ್ರಶಸ್ತಿ’ ಫಲಕ ನೀಡಿ ಸನ್ಮಾನಿಸಿದರು. ಕನ್ನಡ ಕೂಟದ ಕನ್ನಡಿಗರ ಸ್ನೇಹದ ಕೊಡುಗೆಯಾಗಿ, ಕನ್ನಡ ಕೂಟದ ಅಧ್ಯಕ್ಷ ರಾಮ್‌ಪ್ರಸಾದ್ ಅವರು, ಕನ್ನಡ ಕೂಟ ಪ್ರಕಟಿಸಿದ ಸಾಹಿತ್ಯ ಸಂಚಿಕೆಗಳನ್ನೂ ಕೆಲವು ಪುಸ್ತಕಗಳನ್ನೂ ಕಿರುಕಾಣಿಕೆಯನ್ನೂ ಪ್ರೊ.ಷಿಫ್‌ಮನ್ ಅವರಿಗೆ ನೀಡಿದರು. ಕನ್ನಡ ಬಳಗದ ಪರವಾಗಿ ಡಾ.ಮರುಳಯ್ಯನವರಿಗೆ ಫಲ- ಪುಷ್ಪ ಕಾಣಿಕೆಯನ್ನು ಶ್ರೀಮತಿ ಮನೋರಮ ಅವರು ಸಲ್ಲಿಸಿದರು. ಜೊತೆಗೆ ಕನ್ನಡ ಬಳಗ ಅಧ್ಯಕ್ಷ ಶ್ರೀ ಗಜಾನನ ಜೋಷಿಯವರು ಪ್ರೊ.ಷಿಫ್‌ಮನ್ ಅವರಿಗೆ ಶಾಲು ಹೊದಿಸಿ, ಶ್ರೀ ದೇವರ ಪ್ರಸಾದವನ್ನು ನೀಡಿ, ‘ಅವರು ಹಮ್ಮಿಕೊಂಡಿರುವ ಈ ‘ಕನ್ನಡ ಪೀಠ’ದ ಕಾರ್ಯವು ಸುಗಮವಾಗಿ ನೆರವೇರ’ಲೆಂದು ಹರಸಿದರು. ಕಾರ್ಯಕ್ರಮದ ಪೂರ್ಣ ನಿರ್ವಹಣೆಯನ್ನು ಶ್ರೀ ಹರಿಹರೇಶ್ವರ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಪ್ರೊ.ಹೆರಾಲ್ಡ್ ಷಿಫ್‌ಮನ್ ಅವರು ಬರೆದ ಪುಸ್ತಕಗಳು :
1. Schiffman, Harold F. ::
“A Reference Grammer of Spoken Kannada”, University of Washington Press, Seattle; 1984
2. Schiffman, Harold F. and Carol M. Eastman (Eds.) ::
“The Ternary Contrast in Dravidian Coronal Stops in Dravidian Phonological Systems”,
Institute for Comparative and Foreign Area Studies and University of Washington Press, Seattle; 1975
3. Schiffman, Harold F. and Carol M. Eastman (Eds.) ::
“Dravidian Phonological Systems”,
Institute for Comparative and Foreign Area Studies and University of Washington Press, Seattle; 1975
4. Schiffman, Harold F. and Carol M. Eastman (Eds.) ::
“The Revival of Spoken Sanskrit in Modern India; An ethnographic and Linguistic Study”; Schiffman, 1996
_________________________________
—————–
Forwarded Message:
Subj: Chair for Kannada Studies in the US
Date: 7/10/02 7:05:31 AM Pacific Daylight Time
From: haroldfs@ccat.sas.upenn.edu (Harold F. Schiffman)
To: NovaMed@aol.com (V. M. Kumaraswamy)
Dear Kannadigas and friends of the Kannada language:
My response regarding a Chair for
Kannada Studies in the US is known to some, but I would like to reiterate
it at this time. The University of Pennsylvania now teaches Kannada on a
regular basis, and intends to do so for the foreseeable future. It is the
only institution in the US committed to do so, and the Kannada language
program is located in the Department of South Asia Regional Studies, the
oldest department of its kind in the US.
This Department would be happy to host an endowed Chair for Kannada
Studies if the Kannadiga community in the US would raise the endowment.
Now more than ever, we are able to help this project along, for a number
of reasons. After a period of reorganization and reassessment, the SARS
Department has recently been refocussed to become more of a language and
literature department at Penn, and new positions for various languages
have been created. New faculty have been hired and will be joining SARS
in the fall semester. Furthermore, the US Department of Education,
responding to the crisis of September 11, and realizing that we lack
expertise in the languages of South Asia, Central Asia, and the Near East,
has requested proposals for new “Language Resource Centers” “LRC” for these
areas. A Consortium of South Asian language centers in the US has
responded, and proposed a LRC for South Asia. If the funding for this is
granted (and we see no reason why it should not be) the U. of Pennsylvania
will host the ‘pedagogical materials’ development program for this LRC.
We expect to be convening the teachers of various South Asian language
groups at Penn during the coming academic year to assess the needs for
language learning materials, and to commission new ones to fill the gaps
over the next four years of the grant. Kannada will be one of those
languages that will be included; all our new materials will be web-based,
and therefore available on-line for anyone to use, whether at a university
in the US, in ones own home, or anywhere in the world.
We will also be initiating a program to help teachers in “heritage”
language programs to become better teachers, and Kannada teachers in
“community” language programs around the country will be invited to
participate in workshops set up for them. I will be the director of the
pedagogical materials program here at Penn, and will be in touch with
Kannada language teachers to let them know of these opportunities, and
help them to use the new web-based materials.
Just for information, I have not devoted my energies to Kannada language
projects much in the last few years, but I have taught Kannada (at U. of
Texas and U. of Washington) in the past, and wrote a grammar of Kannada
and other materials for learning Kannada. The grammar is now out of print
but we have digitized it and placed it on our website at
http://ccat.sas.upenn.edu/plc/kannada/ We hope to get this book reprinted
in India if possible.
I have hopes of attending the next AKKA meetings in Detroit at the end of
summer, and will be glad to talk to Kannadigas about the possibility of
hosting an endowed Kannada Chair at the University of Pennsylvania.
Harold Schiffman
_____________________________________________________
EKAVI GADAG District and four Taluqs Communities
ABOUT EKAVI – A TOTAL KANNADA ORGANIZATION
Ella Kannadaabhimaanigala Antararshtriya Vedike In “EKAVI”
EKAVI KUVEMPU program photos
https://ellakavi.wordpress.com/2007/01/12/ekavi-kuvempu-program-photos/
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
https://ellakavi.wordpress.com/2007/07/20/ekavi-nadedubanda-daari/
V. M. Kumaraswamy, MBA , BMSCE 1971 Batch
http://www.orkut.com/Album.aspx?uid=4319771866401229384
JOIN: EKAVI COMMUNITY on ORKUT
http://www.orkut.com/Community.aspx?cmm=23145031
JOIN your EKAVI DISTRICT and TALUQ. Please tell your friends and send it to them also.
EKAVI GADAG DISTRICT — TALUKS of GADAG District
EKAVI ಈ-ಕವಿ GADAG
http://www.orkut.com/Community.aspx?cmm=27352199
EKAVI ಈಕವಿ NARGUND, GADAG
http://www.orkut.com/Community.aspx?cmm=32273124
EKAVI ಈಕವಿ MUNDARGI, GADAG
http://www.orkut.com/Community.aspx?cmm=32282411
EKAVI ಈಕವಿ RON, GADAG
http://www.orkut.com/Community.aspx?cmm=32256838
EKAVI ಈಕವಿ SHIRHATTI, GADAG
http://www.orkut.com/Community.aspx?cmm=32265163
________________________________________
Join EKAVI COMMUNITY on YAHOO – 3500 members
http://groups.yahoo.com/group/ellaKAVI
ekavi and ellakavi
http://picasaweb.google.com/vmkumaraswamy/EKAVIAndEllaKAVI?authkey=OfRkRh_5210
EKAVI GoK CIRCULAR on School Adoption Program
https://ellakavi.wordpress.com/2007/03/25/ekavi-gok-circular-on-school-adoption-program/
TALUKS of GADAG District-EKAVI GADAG DISTRICT
TALUKS of GADAG District – EKAVI GADAG DISTRICT
EKAVI ಈ-ಕವಿ GADAG
http://www.orkut.com/Community.aspx?cmm=27352199
EKAVI ಈಕವಿ NARGUND, GADAG
http://www.orkut.com/Community.aspx?cmm=32273124
EKAVI ಈಕವಿ MUNDARGI, GADAG
http://www.orkut.com/Community.aspx?cmm=32282411
EKAVI ಈಕವಿ RON, GADAG
http://www.orkut.com/Community.aspx?cmm=32256838
EKAVI ಈಕವಿ SHIRHATTI, GADAG
http://www.orkut.com/Community.aspx?cmm=32265163
Emails of Dr. URA and University of Iowa for Email Letter Campaign
—————–
Forwarded Message:
Subj: Emails of Dr. URA and University of Iowa for Email Letter Campaign
Date: 12/18/01 8:29:46 AM Pacific Standard Time
From: NovaMed
To: NovaMed
______________________________________________________________________
Dear Kannadigas ,
Please write an Email letter requesting Dr. U. R. Ananthamurthy to honor the calls of Kanandigas.
Dr. U.R. Ananthamurthy, should take the responsibility on himself to change the name of the fund instituted in his name.
Dr. URA can write a simple strong letter to University of Iowa people that naming the fund in his name without either his permission or consent from those who contributed is totally wrong, ethically incorrect, morally intolerable.
People in public places and people of stature have to set high moral and ethical standards and not passing the buck to some one.
If Dr. URA is not looking to promote his name this way, what prevents him to initiate action on his part instead of asking someone to do his job.
Dr. URA is required to explain to Kannadigas here more than what he has done now.
One cannot have the cake and eat it too.
Kannadigas, can write an Email letter requesting University of Iowa also (Emails provided) and copy to Dr. U. R. Ananthamurthy’s Email, to change the name of the Kannada Chair Fund. We need to do this for the sake of Kannadigas to get united and work together to acheive bigger things. It all depends on all Kannadigas all over the world.
Kannadigas here in USA have proposed the name of the fund as “PAMPA KANANDA FUND for KARNATAKA and KANNADA CULTURE” .
If Dr. U. R. Ananthamurthy insist on this University of Iowa will listen to you. Dr. U. R. Ananthamurthy should not tell Kannadigas that the University made their own decision to name the fund as U. R. Ananthamurthy Fund. If Dr. U. R. Ananthamurthy objects to this they will change the name.
Email of Dr. U. R. Ananthamurthy
ananthamurthy@vsnl.net,
Emails of University of Iowa
paul-greenough@uiowa.edu,
philip-lutgendorf@uiowa.edu,
jael-silliman@uiowa.edu,
fsmith@blue.weeg.uiowa.edu,
skalaram@blue.weeg.uiowa.edu,
adavison@blue.weeg.uiowa.edu,
jeffrey-cox@uiowa.edu,
prita-kumar@uiowa.edu,
corey-creekmur@uiowa.edu,
latika-bhatnagar@uiowa.edu,
kenneth-macdonald@uiowa.edu,
victoria-rovine@uiowa.edu,
mark-sidel@uiowa.edu,
krishna-das@uiowa.edu,
santhi-hejeebu@uiowa.edu,
gigi-durham@uiowa.edu,
laurie-comstock@uiowa.edu,
michael-new@uiowa.edu,
kathleen-omalley@uiowa.edu,
_____________________________________________________________
I hope we all do this as quickly as possible.
Try to work for unity of kannadigas all over the world.
This is good for all Kannadigas.
Thanks
Sincerely
V. M. Kumaraswamy
Chair for Kannada Studies in the US
—————–
Forwarded Message:
Subj: Chair for Kannada Studies in the US
Date: 7/10/02 7:05:31 AM Pacific Daylight Time
From: haroldfs@ccat.sas.upenn.edu (Harold F. Schiffman)
To: NovaMed@aol.com (V. M. Kumaraswamy)
Dear Kannadigas and friends of the Kannada language:
My response regarding a Chair for
Kannada Studies in the US is known to some, but I would like to reiterate
it at this time. The University of Pennsylvania now teaches Kannada on a
regular basis, and intends to do so for the foreseeable future. It is the
only institution in the US committed to do so, and the Kannada language
program is located in the Department of South Asia Regional Studies, the
oldest department of its kind in the US.
This Department would be happy to host an endowed Chair for Kannada
Studies if the Kannadiga community in the US would raise the endowment.
Now more than ever, we are able to help this project along, for a number
of reasons. After a period of reorganization and reassessment, the SARS
Department has recently been refocussed to become more of a language and
literature department at Penn, and new positions for various languages
have been created. New faculty have been hired and will be joining SARS
in the fall semester. Furthermore, the US Department of Education,
responding to the crisis of September 11, and realizing that we lack
expertise in the languages of South Asia, Central Asia, and the Near East,
has requested proposals for new “Language Resource Centers” “LRC” for these
areas. A Consortium of South Asian language centers in the US has
responded, and proposed a LRC for South Asia. If the funding for this is
granted (and we see no reason why it should not be) the U. of Pennsylvania
will host the ‘pedagogical materials’ development program for this LRC.
We expect to be convening the teachers of various South Asian language
groups at Penn during the coming academic year to assess the needs for
language learning materials, and to commission new ones to fill the gaps
over the next four years of the grant. Kannada will be one of those
languages that will be included; all our new materials will be web-based,
and therefore available on-line for anyone to use, whether at a university
in the US, in ones own home, or anywhere in the world.
We will also be initiating a program to help teachers in “heritage”
language programs to become better teachers, and Kannada teachers in
“community” language programs around the country will be invited to
participate in workshops set up for them. I will be the director of the
pedagogical materials program here at Penn, and will be in touch with
Kannada language teachers to let them know of these opportunities, and
help them to use the new web-based materials.
Just for information, I have not devoted my energies to Kannada language
projects much in the last few years, but I have taught Kannada (at U. of
Texas and U. of Washington) in the past, and wrote a grammar of Kannada
and other materials for learning Kannada. The grammar is now out of print
but we have digitized it and placed it on our website at
http://ccat.sas.upenn.edu/plc/kannada/ We hope to get this book reprinted
in India if possible.
I have hopes of attending the next AKKA meetings in Detroit at the end of
summer, and will be glad to talk to Kannadigas about the possibility of
hosting an endowed Kannada Chair at the University of Pennsylvania.
Harold Schiffman
=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+=+
——————————————————————————
Harold F. Schiffman
Professor of Dravidian Linguistics and Culture Research Director
Dept. of South Asia Regional Studies Penn Language Center
820 Williams Hall, Box 6305 715-16, Williams Hall Box 6305
University of Pennsylvania
Philadelphia, PA 19104-6305
Phone: (215) 898-5825 (215) 898-6039
Fax: (215) 573-2138 Fax (215) 573-2139
Email: haroldfs@ccat.sas.upenn plc@ccat.sas.upenn.edu
WWW: http://ccat.sas.upenn.edu/~haroldfs/ http://ccat.sas.upenn.edu/~plc/
——————————————————————————
TEN-YEAR ENDOWMENT DRIVE FOR KANNADA CHAIR ENDS:
TEN-YEAR ENDOWMENT DRIVE FOR KANNADA CHAIR ENDS:
PARTIAL SUCCESS FOR A NOBLE EFFORT.
Copy of July 1998 News Letter of SASP
(Copied from printed to Email Format for circulation)
South Asian Studies Program (SASP)
International Programs
University of Iowa
July 1998
The University of Iowa’s ten-year campaign to attract funds for an endowed professorship in Kannada language and culture will come to an end on June 30, 1998, according to Paul Greenough, Professor of History and a member of the South Asian Studies Program. While the endowment campaign fell short of its goal of $ 1.25 million, $74,285 was contributed to the endowmwnt fund; an additional $83,120 in pledges is still outstanding. The fund has grown ( after deducting fund-raising expenses ) to $115, 941 by mid-June 1998. The generosity of North American Kannadigas and of friends of Kannada language and Karnataka culture everywhere is responsible for this significant achievement. One portion of the endowment interest income will be administered by the South Asian Studies Program as the U. R. Ananthamurthy Fund for Karnataka Culture ( see next story ), while the principal will be invested by the University of Iowa Foundation to protect it against the effects of inflation. According to Michael New, President of the Foundation, “I have been involved with the Kannada endowment campaign from the begining. No one had ever tried to raise such a large sum from such a small overseas regional Indian community in the US, and we had no idea what would happen. I’m actually very peased at the progress that has been made, but after ten years it is appropriate to terminate the campaign. Those wishing to make gifts to the Fund may still do so, of course, and we will continue to be alert for opportunities to seek major gifts for the project.”
The idea of establishing a Chair in Kannada language and culture originated in the mid- 1980s from a conversation among three distinguished scholars associated in different capacities with the University of Iowa: Sri U. R. Ananthamurthy, who had been a visiting writer in the International Writing Program in 1974 and returned to Iowa in 1986 as a Fullbright scholar; the late Sri A. K. Ramanujam, a distinguished modern Tamil poet and translator of medieval Kannada and Tamil poetry and folklore; and Dr. Sheldon Pollock, an eminent Sanskritist and former chair of the Department of Asian Languages and Literature at Iowa, now at teh University of Chicago. After consultation with Kannadigas in various parts of the country, a representative national fund-raising committee ( see box ) was set up, and Dr. U. R. Ananthamurthy made a speaking tour of US in 1987. This tour led to strong intial contributions and pledges; in subsequent years other activities, culminating in an historical-cultural workshop for Kannadiga youth and a Spring Festival of Kannada Culture, both held in May 1997, were orgaized to keep up the momentum. The distinguished writer-actor-director Sri Girish Karnad visited the University on several occasions and in 1997 made visits to regional Kannada Kootas to appeal for contributions. It is this kind of costly special effort which is coming to an end in June of this year; regular academic activities and study abroad programs that emphasize Karnataka culture will continue.
______________________________________________________________________
Original National Fund-raising Committee
Dr. H. Siddalingaiah, Chair
Mr. V. S. Raghavan, Vice-Chair
Mr. S. K. Harihareshwara, Vice Chair
Mrs. Ragini Sangameswara
Dr. H. K. Chandrashekar
Mrs. Lalitha Kuppaswamy
Mr. Sundaresh Yajaman
Mrs. Alamelu Iyengar
Dr. Chandrakant Bilgi
Prof. K. Ishwaran
Dr. Narayan Hegde
Dr. H. N. Ithal
Dr. K. S. Lavappa
Dr. Y. R. Mohan
Dr. Halesh M. Patel
Dr. J. R. Rangappa
Mr. Shankar Shetty
Dr. K. L. Vasanth
Dr. C. Veerappa
Mr. P. A. Nazareth
Mr. H. S. Yogesh
______________________________________________________________________
U. R. ANANTHAMURTHY FUND
FOR KARNATAKA CULTURE ANNOUNCED
The South Asian Studies Program (SASP) of the University of Iowa announces the establishment on July 1, 1998 of the ” U. R. Ananthamurthy Fund for Karnataka Culture”. Named after the world-famous Kannada writer of fiction and poetry, this fund will support an annual series of activities at the University of Iowa that will highlight Karnataka culture in its various aspects. According to Associate Professor of Sanskrit and Indian Religion, Frederick M. Smith, these activities will vary in any given year but can be expected to include scholarly lectures and seminars, visiting speakers, and occasional workshops, fim-screenings and concerts. By working cooperatively with other academic institutions and Kannada groups in the region, Iowa City should become an ever more central site for Karnataka cultural studies. The Ananthamurthy Fund is an endowment created through contributions from Kannadigas and other friends of Karnataka culture in North America; the fund will be managed by the University of Iowa Foundation and administered by the University’s South Asian Studies Program (SASP). Faculty members of SASP are listed and their special research interests described on pages three and four below.
______________________________________________________________________
HONOR ROLL OF CONTRIBUTORS
TO KANNADA LANGUAGE AND LITERATURE
Outright gifts of $ 1, 000 and up:
Narayana B. Bhat, Nashville, Tenn;
Nirmala Bhopalam, Oak Brook, ILL.
H. K. & Sreedevi, Chandrashekar, New York, N.Y.
Purandara & Kuntala, Das, New York, N. Y.
H. P. Jayanandaiah, Hannibal, MO.
H. S. & Umadevi, Jayaswamy, Lake Forest, ILL.
Cholpady P. Kamath., Rochester, N. Y.
K. T. & Anita, Kishan., Warsaw, Ind.
Harish Kumar, Buena Park, CA.
Sanath Kumar., Tinley Park, ILL.
Srini Malini., Houston., TX.
Chandra S. Mouli., Lake Forest, ILL.
T. A. Nagaraja., Dyer, Ind.
Prabhavathi G. Nama., Hinsdale, ILL.
Prathiba Nanjundiah., Buena Park, CA.
Halesh M & Kathyayini , Patel., Athens, Ohio.
Jwala Prasad, Cincinnati, Ohio.
Shiva H. B. Prasad., Bluffton, Ohio.
B. S. & Rajalakshmi, Priyanath., Gallipolis, Ohio.
Dunthur M. Puttaswamy., Chester, N. Y.
Yedahalli V. Puttaswamy., Chester, N. Y.
V. S. Raghavan., Potomac, MD.
Ranga G. Raj., Olympia Fields, ILL.
Padma A. S. Raju., Topeka, Kan.
Krishnamurthy & Uma, Ramakrishna., St. Charles, ILL.
Jai K. Rangappa., Hampton, VA.
Mrinalini C. Rao., Oak Park, ILL.
K. R. Saroja., Willowbrook, ILL.
Nugggehalli Neil & Revathi, Satyu., Terrell, TX.
Raghu Sawakar., Avon Lake, Ohio.
Kuppe G. Shankar., Sacramento, CA.
V. L. Shashi Kumar., Philadelphia, PA.
Honappa Siddalingaiah., Brookeville, MD.
K. N. Somashekar., Willowbrook, ILL.
Ralph G. Strohl., Oak Park, ILL.
Outright gifts of $ 25 to $ 999:
Sudha Achar., Lake Oswego, Ore.
H. N. & Lakshmi, Aithal., Darien, ILL.
Arizona Kannada Koota, Tempe, AZ.
Gurunanjappa S Bale., Edison, N. J.
Narasimhaiah & Sharada, Byanna., Schaumburg, ILL.
Robert W. Clausen., South Bend, Ind.
Parakash & Umamaheswari, Ettigi., Midlothian, VA.
Atmaram Gawande., Athens, Ohio.
Louise G. Harper., Washington, D.C.
Jayanthi & Kumaraswamy, Hebbale., Troy, Mich.
Karigoudar Ishwaran., Toronto, Canada.
Suresh Iyengar., Sherman Oaks, CA.
Kannada Koota, New York Inc. Manalapan, N.J.
Kannada Vrinda, Houston, TX.
Uma Kasinath., San Antonio, TX.
G. T. Krishnamurthy., Portland, Ore.
Amar Kumar., Palos Heights, ILL.
Nalini S. Maiya., Darien, ILL.
Bettadapura R. Manjunath., Martinez, GA.
Shikaripur Manjunath., Irving, TX.
Mari & Vanaja, Marisiddaiah., Jefferson City, MO.
Chikamagalur N & Nandini, Mohan., North Bay, Canada.
Jayaram Nadig., Houston, TX.
Manojkumar Nagaraj., Coralville, Iowa.
M. Nagaraju., Flint, Mich.
Vani Padamanabha., Rockville, MD.
G. V. Raghu., Warner Robins, GA.
E. B. Raju., Midlothian, VA.
A. K. Ramanujam., Chicago, ILL.
H. V. Rangachar., Englishtown, N.J.
Narendra H Rao., Westmont, ILL.
Rathna & Shankara, Reddy., Cedarburg, Wis.
Michael P Samartha., San Bernardino, CA.
B. N. L. & Menaka L, Setty., Oak Brook, ILL.
Miriam Sharma., Honolulu, Hawaii.
Hiriyur V Shekar., Webster City, Iowa.
R. M. Shetty., Northbrook, ILL.
Mallikarjun B Shintri., Houston, TX.
Venkatachala Sreenivas., New Haven, Conn.
Leela & Srikanta M N, Swamy., St. Lambert, Canada.
Shriram M Udupa., Naperville, ILL.
Chandrashekar & Sushila, Virupannaur, Portage, Mich.
Pledges of $ 25 or more to be received in the future:
B. S. & Bhagya, Ajaikumar., Burlington, Iowa.
Narayana B Bhat., Nashville, Tenn.
Geetha & Ganapathi, Bhat., Oak Park, ILL.
Sampath Bhoopalam., Forest Park, ILL.
Narasimhaiah & Sharada, Byanna., Schaumberg, ILL.
Ramesh & Nalini, Chakravarthy., Mount Prospect, ILL.
Nagamani & Vidyasabar, Dharmapuri., Oak Park, ILL.
Raja P & Chandramani, Gowda., Dyer, Ind.
Kusuma & B , Indusekar., Naperville, ILL.
Nirmaladevi Jayanandaiah., Joplin, MO.
M. Jayaram., Wheaton, ILL.
H. S. & Umadevi, Jayaswamy., Lake Forest, ILL.
Amar Kumar., Palos Heights, ILL.
Harish Kumar., Buena Park, CA.
Malini & Grovind, Lakshman., Oak Brook , ILL.
V. S. & Rajini, Mady., Willowbgrook, ILL.
Lokeshwari & Naga D, Manohar., Okemos, Mich.
Rajashai & Sadaiuand, Manou., Bayside, Wis.
Chandra S & Rajini Chandra, Mouli., Lake Forest, ILL.
B. R. Sachidananda & Uma, Murthy., Palos Park, ILL.
Prathiba Nanjundiah., Buena Park, CA
Laxmi Narayan., Burr Ridge, ILL.
Roopa & Surendra K, Phaonis., Long Grove, ILL.
S. C. & Uma, Prabhakar., Skokie, ILL.
Shivaram C. Prashanti., Glendale, Wis.
Padma A.S. Raju., Topeka, Kansas.
Kajekar Ramachandra., Evanston, ILL.
Joy & Renuka, Ramakrishna., Bourbonnais, ILL.
D. N. & Sudha, Ramrao., Des Plaines, ILL.
Bharathi Rao., St. Charles, ILL.
Lalitha & M.S. Nagahushana, Rao., Fairbanks, Alaska.
Bhaskar N Rao., St. Charles, ILL.
Nanda S Rao., Mundelein, ILL.
Panduranaga Rao., Oak Brook, ILL.
Pusapavalli Rao., Burr Ridge, ILL.
Ramaa Rao., Oak Brook, ILL.
Shashidhar N Rao., Mundelein, ILL.
Sripathy U Rao., Burr Ridge, ILL.
Sudha Rao., Oak Brook, ILL.
Krishna & Shanta , Sastry., Cedar Falls, Iowa.
B.N.L. & Menaka L , Setty., Oak Brook, ILL.
T. A. & Sathya, Sridhara., Orland Park, ILL.
S. Srikantaswamy., Ottawa, ILL.
Sushila & Chandrashekar, Virupannaur., Portage, Mich.
______________________________________________________________________
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS