Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

URA writes about Lankesh’s munnudi

ಯು.ಆರ್. ಅನಂತಮೂರ್ತಿ

‘ಅಕ್ಷರ ಹೊಸ ಕಾವ್ಯ’ದ ಮುನ್ನುಡಿಯಾಗಿ ಲಂಕೇಶರು ಆಡಿರುವ ಮಾತುಗಳಲ್ಲಿ ಅಡಿಗೋತ್ತರ ಕವಿಗಳಲ್ಲಿ
ಕೆಲವರನ್ನು ‘ಹಿಪ್ಪೀ’ಗಳೆಂದು ಕರೆದದ್ದು ನೋಡಿ ನನಗೆ ಆಶ್ಚರ್ಯವಾಗಿದೆ. ಅವರ
ಗಮನದಲ್ಲಿರುವ ‘ಹಿಪ್ಪೀ’
ಕವಿಗಳು ಇವರು: ಲಕ್ಷ್ಮಣರಾವ್, ಸುಮತೀಂದ್ರ, ಕಂಬಾರ, ಚನ್ನಯ್ಯ ಮತ್ತು ತಿರುಮಲೇಶ್.
ತಿರುಮಲೇಶರ ಐರನಿ, ಕಂಬಾರರ ರಭಸ, ಚನ್ನಯ್ಯನವರು ತಮ್ಮ ಕವನಗಳಲ್ಲಿ ಮನಸ್ಸಿನ ಕೆಲವು
ಗೂಢ ಅವಸ್ಥೆಗಳನ್ನು ನಿರ್ಲಪ್ತವಾಗಿ ಅರಿಯಲು ಮೂಡುತ್ತಿರುವ ಪ್ರಯತ್ನ- ಇವು ಭರವಸೆ
ಹುಟ್ಟಿಸುತ್ತವೆ.


ಆದ್ದರಿಂದ ಇವರನ್ನು ಬಿಟ್ಟು ನನ್ನ ಮುಂದಿನ ಮಾತುಗಳನ್ನು ಆಡಬಯಸುತ್ತೇನೆ. ಉಳಿದ ಇಬ್ಬರಲ್ಲಿ
ಒಬ್ಬರಾದ ಸುಮತೀಂದ್ರರ ನಿರ್ಬಲತೆ ಮತ್ತು ಸುಕುಮಾರತೆ ಅವರ ಕಾವ್ಯದ ಸಾರ್ಥಕ
ವಸ್ತುಗಳಾಗುವುದಿಲ್ಲ. ಕಾರಣ, ಅವರ ಬರವಣಿಗೆಯೂ ದುರ್ಬಲ ಎನ್ನಿಸುವುದರಿಂದ.

ಬುದ್ಧಿಶಕ್ತಿ ಕಮ್ಮಿಯಾಗಿರುವ ಕಾಲೇಜು ವಿದ್ಯಾರ್ಥಿಯೊಬ್ಬನು ಡೈರಿಯಲ್ಲಿ ಬರೆದುಕೊಂಡ
ಆತ್ಮಮಂಥನ ಅವನ ಉದ್ಧಾರಕ್ಕೆ
ಅವಶ್ಯವಿರಬಹದು; ಆದರೆ ಎಲ್ಲರೂ ಅದನ್ನು ಓದಬೇಕಾದ್ದಿಲ್ಲ. ನಮ್ಮ ಕವಿಗಳಲ್ಲನ್ನೇಕರಿಗೆ ಈ ವಿವೇಕ
ಇಲ್ಲದಿರುವುದರಿಂದಲೇ ನವೋದಯ ನವ್ಯ ಮಾರ್ಗಗಳೆರಡರಲ್ಲೂ ಈ ಕನ್ನಡ ಕಂದರ ವೇದನೆ
ಆಕ್ರೋಶಗಳಿಗೆ ಇಷ್ಟೊಂದು ಪ್ರಾಮುಖ್ಯತೆ ಸಿಕ್ಕುಬಿಟ್ಟಿರುವುದು. ಸುಮತೀಂದ್ರರ ‘ಕಪ್ಪು
ದೇವತೆಯ’ ಕೆಲವು ಸಾರ್ಥಕ ಭಾಗಗಳನ್ನು ನಾನು ಮೆಚ್ಚಿಕೊಂಡಿದ್ದರೂ, ಅವರು ಈ ತನಕ
ಸಾಹಿತ್ಯದಲ್ಲಿ ತತ್ಪರವಾದ ತಪಸ್ಸಿನಿಂದ ಸಾಧಿಸಿದ್ದು ಅಲ್ಪವೆಂದು ನಾನು
ತಿಳಿದಿದ್ದೇನೆ.


ಲೀಲಾರಾವ್ ಎನ್ನುವ ಇನ್ನೊಂದು ಹೆಣ್ಣು ಹೆಸರಿನಲ್ಲಿ ಇವರು ಬರೆದ ಕೆಲವು ಕವನಗಳು ಮನಃಶಾಸ್ತ್ರದ
ದೃಷ್ಟಿಯಿಂದಲಾದರೂ ಕುತೂಹಲಕರವಾಗಿವೆ- ಅಷ್ಟೆ.


ಲಕ್ಷ್ಮಣರಾವ್ರವರ ಬರವಣಿಗೆ ಜಾಣತನದಿಂದ ಕೂಡಿದೆ; ಆದರೆ ಇನ್ನು ಎಳಸು, ಕಾದು
ನೋಡಬೇಕು ಅನ್ನಿಸುತ್ತದೆ. ಸಂಡೇ ಕಾವ್ಯದ ಜಾಣತನದಲ್ಲೇ ಇವರು ತೃಪ್ತರಾಗಿ ಉಳಿದರೆ
ಸಾಲದು. (ಈ ಸಂಡೇ ಕಾವ್ಯಕ್ಕಿಂತ ಇವುಗಳಿಗೆ ಚಿತ್ರ ಬರೆಯುವ ಮೂರ್ತಿಯವರ ಕಲೆಗಾರಿಕೆಯೇ
ಆಕರ್ಷಕವಾಗಿರುತ್ತದೆ ಎಂದು ನನಗೆ ಅನ್ನಿಸಿಸುದ್ದುಂಟು) ತನ್ನ ಸದ್ಯದ ಸ್ಥಿತಿಯನ್ನು
ಕವಿ
ವ್ಯಕ್ತಪಡಿಸಿಕೊಳ್ಳುವುದರ ಜೊತೆಗೇ, ಅದನ್ನು ದಾಟಿ ಹೋಗಲು ಪ್ರಯತ್ನಿಸುತ್ತಾನೆ.
ಇದರಿಂದ ಕಾವ್ಯ ತೀವ್ರವಾಗುತ್ತದೆ ಎಂಬುದರಲ್ಲಿ ತಿಳಿಯದ ಹೊರತು ಲಕ್ಷ್ಮಣರಾವ್ರಂತಹ
ಕವಿಗಳು ನಮ್ಮ ಮನಸ್ಸನ್ನು ದುಡಿಸಿಕೊಳ್ಳುವಂತಹ ಕವನಗಳನ್ನು ಬರೆಯಲಾರರು. “ಜಾಣತನ,
ಕಿಡಿಗೇಡಿತನ, ಪ್ರತಿಭಟನೆ, ಸೃಷ್ಮ್ಯಾತ್ಮಕವಾದ ಪ್ರತಿಭೆ”ಗಳಿಗೆ ತಾನು ಬೆಲೆ
ಕೊಡುತ್ತೇನೆಂಬ ಲಂಕೇಶರು, “ಜಾಣತನ, ಕಿಡಿಗೇಡಿತನ”ಗಳಂದ ಮಾತ್ರ ತೃಪ್ತರಾಗುವಂತೆ ನನಗೆ
ಕಂಡಿದ್ದರಿಂದ ಲಕ್ಷ್ಮಣರಾವ್, ಸುಮತೀಂದ್ರರ ನೆಪದಲ್ಲಿ ಹೀಗೆ ಮಾತು ಬೆಳೆಸಬೇಕಾಯಿತು.
ಒಟ್ಟಿನಲ್ಲಿ ನನಗೆ ಅನುಮಾನ: ಲಂಕೇಶರ ಆದರ್ಶ ಕವಿ ಎಲ್ಲ ಮರ್ಯಾದೆಗಳನ್ನೂ ಮೀರಿನಿಂತ
ಹಿಪ್ಪಿಯಲ್ಲ; ಮಧ್ಯಮ ವರ್ಗದ ಪರಿಮಿತ ಸಂವೇದನೆಯ ಡ್ಯಾಂಡಿ- ಎಂದು. ಪೇಟೆಯ ವಿಲಾಸಿತನ
ಮುಜುಗರದಿಂದ ಹುಟ್ಟಿದ ಹಾಸ್ಯ, ಚಪಲದ ಮಟ್ಟದಲ್ಲಿರುವ ಕಾಮ, ಸ್ತ್ರೀ ಸಹವಾಸಕ್ಕೆ
ಹಾತೊರೆಯುವ ಕಾಲೇಜು ವಿದ್ಯಾರ್ಥಿಗಳಿಗೆ ಪೋಲಿ ಜೋಕು- ಒಟ್ಟಿನಲ್ಲಿ ಮಧ್ಯಮ ವರ್ಗದ
ಅಳ್ಳೆದೆಯೆ
ಅಲ್ಪತನಗಳೇ ಅಡಿಗರ ನಂತರ ಬರೆಯುತ್ತಿರುವ ಕವಿಗಳ ಧಾಟಿಯಾಗಬೇಕೆಂದು ಲಂಕೇಶರು ಭಾವಿಸಿದಂತಿದೆ.
ಅಡಿಗರಿಗಿಂತ ಪ್ರತ್ಯೇಕವಾದ ವ್ಯಕ್ತಿತ್ವ ಸೃಷ್ಟಿಸಿಕೊಳ್ಳಲೆಂದು ಈ ಎಲ್ಲ ಆಟ,
ಚೇಷ್ಟೆಗಳು ಕೆಲವು ಕವಿಗಳಿಗೆ ಅವಶ್ಯವಿರಬಹುದು. ಆದರೆ ಸಂಸ್ಕೃತಿಯ ದೃಷ್ಟಿಯಿಂದ ಈ
ಬಗೆಯ ಸ್ವಂತಿಕೆಯ ಹುಡುಗಾಟ ಅರ್ಥಪೂರ್ಣವಾಗದೇ ಹೋಗಬಹುದು. ಅಡಿಗರ ಕಾವ್ಯದ
ಬೇರುಗಳು ಬ್ರಾಹ್ಮಣ ಧರ್ಮದಲ್ಲಿ, ಹಳೆಗನ್ನಡ ಕಾವ್ಯದಲ್ಲಿ ನಮ್ಮ ಸಮಕಾಲೀನ
ಜೀವನದಲ್ಲಿ, ತನ್ನ ಸ್ವಂತದ ತಳಮಳದಲ್ಲಿ ಇವೆ. ಉಳಿದವರಿಗೆ ಈ ಹಿನ್ನೆಲೆ ಇಲ್ಲ.
ಇರದಿದ್ದರೂ ಸಹ, ಮಧ್ಯಮ ವರ್ಗದ ಅನುಭವ ಹೀನತೆ, ಅಲ್ಪತನ, ಸಪ್ಪೆತನಗಳೇ ಕಾವ್ಯದ
ವಸ್ತುವಾಗಿ ಉತ್ತಮ ಕಾವ್ಯ ಹುಟ್ಟಿ ಬರುವುದೂ ಸಾಧ್ಯ. ಇದಕ್ಕೆ ಅವಶ್ಯವಾದ ಎಚ್ಚರ
ಕೆಲವು ನವ್ಯಕವಿಗಳಲ್ಲಾದರೂ
ಇದೆಯೆಂಬುದನ್ನು ಈ ಚರ್ಚೆಯಲ್ಲಿ ಮರೆಯಕೂಡದು. ಆದರೆ ಲಂಕೇಶರು ಮೆಚ್ಚುವ ಕಿಡಿಗೇಡಿ
ಡ್ಯಾಂಡಿಗೆ ತನ್ನ
ಮಧ್ಯಮ ವರ್ಗತನ, ಅನುಭವದ ಅಲ್ಪತೆಗಳು ಸ್ವತಂತೃಪ್ತಿಯ ವಿಷಯಗಳು. ಹೀಗೆ ನೋವು,
ತೀವ್ರತೆ, ಪರವಶತೆ, ಸಂಕಟಗಳಿಂದ ಬಾಧಿತನಾಗದೆ ಇರುವುದೇ ಪರಮ ಆದರ್ಶವಾಗಿಬಿಟ್ಟರೆ,
‘ಬ್ಲಿಟ್ಸ್’ ಪತ್ರಿಕೆಯಂತೆ ಮಾತಾಡುವುದೇ ನಮ್ಮ ಪ್ರಾಮಾಣಿಕತೆ ವ್ಯಕ್ತವಾಗುವ ಬಗೆಯಾಗಿ
ಬಿಟ್ಟರೆ, ಕಾವ್ಯ ಮುರುಟೆಕೊಳ್ಳುತ್ತದೆ; ಅಥವಾ ಹಲ್ಕ (ಹಗುರ ಎನ್ನುವ ಅರ್ಥದಲ್ಲೂ)
ಆಗುತ್ತದೆ.


ಉತ್ತಮ ಕಾವ್ಯದಲ್ಲಿ ತನಗೆ ಹೊರತಾದ್ದನ್ನು, ಮೀರಿದ್ದನ್ನು ಜೀವನ ದ್ರವ್ಯವಾಗಿ
ಮಾರ್ಪಾಡಿಸಿಕೊಳ್ಳುವ ಕವಿಯ ಹೋರಾಟವನ್ನು ಕಾಣತ್ತೇವೆ. ಆದರೆ ಎಲ್ಲ ಬಗೆಯ (ಈಗಿನ,
ಆಗಿನ) ರೊಮ್ಯಾಂಟಿಕ್ ಕಾವ್ಯದ ದೋಷವೆಂದರೆ ಲೋಲುಪತೆ. ಕೃತಕ ಗಾಂಭೀರ್ಯದಲ್ಲಿ ಸುಳ್ಳು
ಆಧ್ಯಾತ್ಮವನ್ನು ಮಾತಾಡಿ ತಮ್ಮ ಮಧ್ಯಮ ವರ್ಗದ ನೀರಸತೆಯನ್ನು ಮರೆಯುವ ಕವಿಗಳು ಮತ್ತು
ತಮ್ಮ ಮಧ್ಯಮ ವರ್ಗತನವನ್ನು ಮೆರೆಸುವ ಲಂಕೇಶರ ಡ್ಯಾಂಡಿಗಳು- ಇವರ ನಡುವಿನ ವೈರಕ್ಕೆ ಅರ್ಥವಿಲ್ಲ.
ಸೋಗಿನ ಅಧ್ಯಾತ್ಮದ ಟ್ವೇಡಲ್ ಡಮ್ ಒಬ್ಬನಾದರೆ, ಸೊಗಸಿನ ರಸಿಕತೆಯ ಟ್ವೀಡಲ್ ಡೀ
ಇನ್ನೊಬ್ಬ. ಸುಳ್ಳು
ಪ್ರೀತಿ, ಶೃಂಗಾರ, ವೈಭವಗಳನ್ನೊಡ್ಡಿ ನಿತ್ಯ ಜೀವನದ ಒತ್ತಡಗಳನ್ನೂ ದಾರಿದ್ರ್ಯವನ್ನೂ,
ಸಂಕಟಗಳನ್ನೂ,
ಮರೆಮಾಚುವ ಹಿಂದೀ ಚಿತ್ರಗಳಂತೆಯೇ ಇಂಥವರ ಕಾವ್ಯ ಕೂಡ ಅಶ್ಲೀಲ. ಆದ್ದರಿಂದಲೇ ಕಾವ್ಯದಲ್ಲಿ ಮುಕ್ತ
ಸಂವೇದನೆಯಿರಬೇಕೆಂದು ನಾನು ಚಿತ್ತಾಲರ ಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು. ಆದರೆ
ಲಂಕೇಶರಿಗೆ ಮುಕ್ತ ಸಂವೇದನೆ
ಸೆಂಟಿಮೆಂಟ್ಯಾಲಿಟಿಯಾಗಿ ಕಂಡಿದೆ. ಮುಕ್ತ ಸಂವೇದನೆಯೆಂದರೆ ನಿಸ್ಸಂಕೋಚವಾಗಿ ಜೀವನದ
ಅನುಭವವನ್ನು ಎದುರಿಸುವ, ಸುಳ್ಳು ಗಾಂಭೀರ್ಯದಲ್ಲಾಗಲೀ ಅಥವಾ ಇದಕ್ಕೆ
ಪ್ರತಿಕ್ರಿಯೆಯಾಗಿ ಹುಟ್ಟಿಕೊಳ್ಳುವ ಮುಜುಗರದ ಹಾಸ್ಯದಲ್ಲಾಗಲೀ ತನ್ನ ಶೋಧನೆಯಿಂದ
ವಂಚಿತವಾಗದ ಧೋರಣೆ. ಕೃತಕ ಗಾಂಭೀರ್ಯಕ್ಕೆ ಅಲ್ಪತನವೊಂದೇ ಮದ್ದೆಂದು ತಿಳಿದಿರುವ
ಲಂಕೇಶರು ನನ್ನ ಮಾತನ್ನು ಅಪಾಯಕಾರಿ ಎಂದು ತಿಳಿದದ್ದು ಆಶ್ಚರ್ಯವಲ್ಲ. ಭಾರತದ
ಸ್ವಸಂತೃಪ್ತ ಮಾಧ್ಯಮ ವರ್ಗದ ವೈಚಾರಿಕ
ಮಿತಿಯನ್ನು ಇವರ ಧೋರಣೆ ಎತ್ತಿ ತೋರಿಸುತ್ತದೆ- ಅಷ್ಟೆ. ಹಿಪ್ಪಿ ಏನೇ ಇರಲಿ- ಪುಣ್ಯ
ಸಂಪಾದನೆಯಲ್ಲಾಗಲೀ,
ಡ್ಯಾಂಡಿಯ ಕಿಡಿಗೇಡಿತನದ ‘ರಸಿಕ’ ಚೇಷ್ಟೆಗಳಲ್ಲಾಗಲೀ ತೊಡಗಿರುವ ಲಂಕೇಶರ ಮಧ್ಯಮ ವರ್ಗದ ಪಳಗಿದ
ಪ್ರಾಣಿಯಂತೂ ಖಂಡಿತಾ ಅಲ್ಲ. ಯಾವುದು ‘ಜೀವಂತ’ ಎಂದು ನಿರ್ಣಯಿಸುವಲ್ಲಿ, ಪುಟಗಳನ್ನು
ಹಂಚುವಲ್ಲಿ ಲಂಕೇಶರ ವಿಮರ್ಶಾ ತತ್ವಗಳು ಕೆಲಸ ಮಾಡಿವೆಯಾದ್ದರಿಂದ ಮೇಲಿನ ಈ
ಮಾತುಗಳನ್ನು ಬರೆಯಬೇಕಾಯಿತು.


ಗೋಕಾಕರನ್ನು ಸಂಕಲನಕ್ಕೆ ಸೇರಿಸದ ಇವರ ಧೋರಣೆ ವಿಮರ್ಶೆಗೆ ಅವಶ್ಯಕವಾದ
ನಿಷ್ಠುರತನದ್ದೋ ಅಥವಾ ಚೇಷ್ಟೆ ವ್ಯಂಗ್ಯ ಕಂಡಕೂಡಲೇ ದ್ರವಿಸಿಬಿಡುವ ಇವರ ಸಂವೇದನೆ
ಅತಿ ಔದಾರ್ಯದ್ದೋ ಅಥವಾ ನವ್ಯ ಸಾಹಿತ್ಯಕ್ಕೂ ರಾಜಕಾರಣ ಪ್ರವೇಶಿಸಿ
ಇದೂ ಪ್ರಗತಿಶೀಲ ಚಳುಳಿಯಂತಾಗಿ ಬಿಡುತ್ತದೆಯೋ ಎಂದು ಲಂಕೇಶರ ‘ಅಕ್ಷರ ಹೊಸ ಕಾವ್ಯ’ ಸಂಕಲವನ್ನು
ತಿರುವಿ ಹಾಕುತ್ತಿದ್ದಂತೆ ಅನುಮಾನವಾಗುತ್ತದೆ.

ನಿಸಾರ್, ಪಾಟೀಲ, ಕಂಬಾರ, ತಿರುಮಲೇಶ್, ತೇಜಸ್ವಿ, ಲಕ್ಷ್ಮಿನಾರಾಯಣ ಭಟ್ಟ, ಚನ್ನಯ್ಯ
ಇತ್ಯಾದಿ ಯುವಕ
ಲೇಖಕರು ತಮ್ಮ ವ್ಯಕ್ತಿತ್ವಕ್ಕೆ ಗಟ್ಟಿಯಾದದ್ದು ಯಾವುದು ಎಂಬುದನ್ನು
ಹುಡುಕಿಕೊಳ್ಳುತ್ತಿದ್ದಾರೆ. ಇವರಿಗಿಂತ
ಕಿರಿಯರಾದ ಆಲನಹಳ್ಳಿ ಕೃಷ್ಣ, ಚೊಕ್ಕಾಡಿ, ರಾಮಚಂದ್ರದೇವ, ರಾಮದಾಸ್, ದೇವನೂರು ಮಹದೇವ
ಇತ್ಯಾದಿ ಸತ್ವಶಾಲಿಗಳಾದ ಕವಿಗಳೂ ಇದ್ದಾರೆ. ಇವರನ್ನೆಲ್ಲ ಓದುತ್ತಿರುವಂತೆ ಈಗಿನ
ಕವಿಗಳು ಎಷ್ಟು ದಕ್ಷತನದಿಂದ ಬರೆಯಬಲ್ಲರು ಎನ್ನುವುದನ್ನು ಜೊತೆಗೇ ಇವರು ತಮ್ಮ
ವ್ಯಕ್ತಿತ್ವಕ್ಕೆ ಸಹಜವಾದ, ಅವಶ್ಯವಾದ ಜೀವನ ದ್ರವ್ಯಕ್ಕೆ ಈತನಕ
ಅರ್ಥಪೂರ್ಣವಾದ ರೂಪು ಕೊಡಲಾರದೆ ಹೋಗಿದ್ದರೆಂದೂ ಅನ್ನಿಸುತ್ತದೆ. ಈ ಕವಿಗಳಲ್ಲೆಲ್ಲ
ನಾನು ಮೆಚ್ಚಿಕೊಂಡಿರುವ ಗುಣವೆಂದರೆ- ಅವರಿಗೆ ತಮ್ಮ ಬಗೆಗೇ ಇರುವ ಅತೃಪ್ತಿ. ಈ ಕವಿಗಳ
ನಡುವೆ ಲಕ್ಷ್ಮಣರಾವ್ ಒಬ್ಬರನ್ನು ಮಾತ್ರ ಹೊಗಳಲು
ಎತ್ತಿಕೊಂಡದ್ದು ಲಂಕೇಶರ ಪರಿಮಿತ ಸಂವೇದನೆಗೆ ಉದಾಹರಣೆಯಾಗಿದೆ. ಲಂಕೇಶರಿಗೆ
ಸಂರ್ಕೀರ್ಣವಾದದ್ದು, ತೀವ್ರವಾದದ್ದು ಬೇಡ; ಸಲೀಸಾದ್ದು ಬೇಕು. ಅಲ್ಲದೆ ತನ್ನ
ಮಾರ್ಗದಲ್ಲಿ ಬರೆಯುತ್ತಿರುವವರನ್ನು ಹುರಿದುಂಬಿಸುವುದು ಬೇಕು. ಆದರೆ ಲಂಕೇಶರ ಕಾವ್ಯ
ಶೈಲಿಯ ಜರ್ನಲಿಸ್ಟ್ ಸದ್ಯತನ, ಗತ್ತು, ತತ್ಪರತೆಗಳನ್ನಾಗಲಿ, ರಾಮಾನುಜರ ಸೂಕ್ಷ್ಮ
ಕಲೆಗಾರಿಕೆಯನ್ನಾಗಲಿ ಹೊಂದಿರದ ಲಕ್ಷ್ಮಣರಾವ್ ತನ್ನ ತನದ ಶೋಧನೆಯಲ್ಲಿ ಇನ್ನೂ ಬಹಳ
ಕಷ್ಟದ ದಾರಿಯನ್ನು ತುಳಿಯಬೇಕಾದಿದೆ ಎಂಬುದನ್ನು
ಮರೆಯಕೂಡದು.


ಅಡಿಗರ ನಂತರ ಬರೆಯುತ್ತಿರುವ ಈ ಎಲ್ಲರೂ (ಇವರಲ್ಲೆಲ್ಲ ಹೆಚ್ಚು ಪ್ರತಿಭಾಶಾಲಿಗಳಾದ
ಕಂಬಾರರೂ ಸಹ) ಉತ್ತಮ ಬಿಡಿ ಕವನಗಳನ್ನೂ ಮಾತ್ರ ಈ ತನಕ ಬರೆದಿದ್ದಾರೆ ಎಂದು ನನಗೆ
ಅನ್ನಿಸುತ್ತದೆ. ಒಂದು ಶಿಷ್ಟ ಸಂವೇದನೆಯಾಗಿ, ಅರ್ಥಪೂರ್ಣ ವ್ಯಕ್ತಿತ್ವವಾಗಿ ಇವರಲ್ಲಿ
ಯಾರು ಯಾರು ಬೆಳೆಯಬಲ್ಲರು, ಯಾರು ತಮ್ಮ ಕಲೆಗಾರಿಕೆಯಲ್ಲೆ ಲೋಲುಪರಾಗಿ ನಿಂತು
ಬಿಟ್ಟಾರು,
ಯಾರು ಫ್ಯಾಶನ್ನಿನಲ್ಲಿರುವ ತತ್ವಗಳ ಬೆನ್ನುಹತ್ತಿ ಜಾರಿಕೊಂಡಾರು, ಯಾರು “ಗಹ್ವರದ
ಒಳಗತ್ತಲಲ್ಲಿ ಸುತ್ತಲು ತಡಕಿ ತಡೆದು ನಡೆಯುವ, ನಡೆದು ಮುಗ್ಗರಿಸಿ ಬಿದ್ದೆದ್ದು
ಹರೆವ, ಹರಿಯವ ಜಾಡು ಹಿಡಿವ, ಗುರುತಿಸುವ, ಬೇರ ಬಗೆವ, ಕಳೆದದ್ದನ್ನು ಪಡೆವ,
ಪಡೆದದ್ದಕ್ಕೆ ಪಡಿ ಹತ್ತು ಹಡೆವಕವನದಕರಡು ಸಿದ್ಧಪಡಿಸುವ…” (ಅಡಿಗರ ‘ವರ್ಧಮಾನ’)
ದಿವ್ಯವನ್ನು ಎದುರಿಸಲಾರದೆ ಗೆಳೆಯರ ಪರಸ್ಪರ ಹೊಗಳಿಕೆಯ ಸಹಕಾರೀ ಸಂಸ್ಥೆಗಳಲ್ಲಿ
ಮೈಮರೆತು ಕೂರುತ್ತಾರೆ- ಇವೇ ಇವತ್ತು ವಿಮರ್ಶೆ ಎಚ್ಚರದಿಂದ
ಚರ್ಚಿಸಬೇಕಾದ ವಿಷಯಗಳಾಗಿವೆ. ಆದರೆ ಲಂಕೇಶರು ಎತ್ತಿ ಹಿಡಿಯುವ “ಆಂಟಿ ಹೀರೋ” ಸೋಗಿನ
ಡ್ಯಾಂಡಿ-ಮೌಲ್ಯಗಳು ಈ ಕವಿಗಳಲ್ಲಿ ಹಗುರವಾದದ್ದನ್ನು ಮಾತ್ರ ಮೆಚ್ಚುವಂಥವು. ಅವರು
ನಡೆಯಬೇಕಾದ ಸ್ವಂತಿಕೆಯ ಹಾದಿಯನ್ನು ಸಲೀಸುಗೊಳಿಸುವವಂಥವು.


‘ತೆರೆದ ಬಾಗಿಲು’, ಫೋಟೋಗ್ರಾಫರ್, ‘ಗೋಪಿ ಮತ್ತು ಗಾರಡಲೀನ’ ದಂತದ ಜಾಣ, ಸಾಮಾನ್ಯ ಕವನಗಳಲ್ಲಿ
ಕನ್ನಡ ಕಾವ್ಯದ ಭವಿಷ್ಯವನ್ನು ಕಾಣುವ ಲಂಕೇಶರು ಸಾಹಿತ್ಯದಿಂದ ಅತ್ಯಂತ
ಅಲ್ಪವಾದದ್ದನ್ನು ಅಪೇಕ್ಷಿಸುತ್ತಾರೆಂಬುದರಲ್ಲಿ ಸಂದೇಹವಿಲ್ಲ. ‘ಕೊರವಂಜಿ’
ಜೀವಂತವಾಗಿದ್ದು ಅದರಲ್ಲಿ ಈ ಕವನಗಳು ಬಂದಿದ್ದರೆ ನಾನು ಅವುಗಳನ್ನು ಓದಿ
ಸಂತೋಷಪಡುತ್ತಿದ್ದೆ. ಮನರಂಜನೆ ಯಾರಿಗೆ ಬೇಡ?
ನಮ್ಮ ಸಾಹಿತ್ಯ ಲೋಕದ ದೊಡ್ಡ ಅಪಾಯ ಇನ್ಬ್ರೀಡಿಂಗ್. ಸಾಹಿತಿಗಳು ಇನ್ನಿತರ
ಸಾಹಿತಿಗಳಿಗಾಗಿ ಬರೆಯುವುದೇ ಹೆಚ್ಚು. ಅಡಿಗರ ‘ಭೂತ’, ‘ರಾಮನವಮಿಯ ದಿವಸ’,
‘ಭೂಮಿಗೀತ’ ಇತ್ಯಾದಿ ಕವನಗಳನ್ನು, ಕಾರಂತರ ಕಾದಂಬರಿಗಳನ್ನು,
ಗ್ರಾಮಾಯಣವನ್ನು, ಕಾರ್ನಾಡ್, ಜಿ.ಬಿ. ಜೋಷಿಯವರ ನಾಟಕಗಳನ್ನು ಸಾಹಿತಿಗಳಲ್ಲದವರ ಜೊತೆಯೂ
ಚರ್ಚಿಸಬೇಕು ಎನ್ನಿಸುತ್ತದೆ. ಯಾಕೆಂದರೆ ಇವು ನಾರ್ಸಿಸಸ್ಸಿನಂತೆ ಸ್ವಮಗ್ನವಾದ ಕೃತಿಗಳಲ್ಲ; ನಮ್ಮ
ಸುಖ ದುಃಖಕ್ಕೆ ಕಾರಣವಾದ ಪ್ರಪಂಚದ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸಬಲ್ಲ ಕೃತಿಗಳು.
ಈಸ್ತೇಟರ ಕಸರತ್ತು
ಸ್ವತಃ ಸಾಹಿತಿಗಳಾದವರ ಕಸುಬುದಾರಿಕೆಯ ಕುತೂಹಲವನ್ನು ಮಾತ್ರ ಕೆರಳಿಸೀತು. ಚಿತ್ತಾಲರನ್ನು
ಓದುವಾಗ ಅವರ ಕಲೆಗಾರಿಕೆ ಸೀಮಿತವಾದ್ದು ಎಂದು ನನಗೆ ಅನ್ನಿಸಿದರೂ, ಜೀವನ ತತ್ಪರವಾದ ಅವರ ದೃಷ್ಟಿ
ನಮ್ಮ ನವ್ಯರಿಗೆ ಅವಶ್ಯ ಚಿಕಿತ್ಸೆಯಾದೀತು ಎಂದು ನನಗೆ ಮೇಲಿನ ಕಾರಣಗಳಿಂದ
ಅನ್ನಿಸಿದ್ದು. ಗುಂಪುಗಾರಿಕೆ
ತರುವ ಸುಖವನ್ನು ತಿರಸ್ಕರಿಸಿ ಒಂಟಿಯಾಗಿ ನಿಲ್ಲದ ಲೇಖಕ ಎಂದೂ ತನ್ನತನವನ್ನು ಕಂಡುಕೊಳ್ಳಲಾರ;
ಸಾರ್ಥಕ ಕೃತಿಗಳನ್ನು ರಚಿಸಲಾರ. ಆದ್ದರಿಂದ ಹೊಸ ಸಾಹಿತ್ಯಕ್ಕೆ ಲಂಕೇಶರು
ವಹಿಸುತ್ತಿರುವ ವಕೀಲಿಯ ರೀತಿ
(ಹಿಂದಿನ ಅನಕೃ, ನಿರಂಜನರನ್ನು ನೆನಪಿಗೆ ತರುವ ರೀತಿ) ಅಪಾಯಕಾರಿ ಎಂದು ನಾನು ತಿಳಿದಿದ್ದೇನೆ.

-1973ರಲ್ಲಿ ಅಕ್ಷರ ಹೊಸಕಾವ್ಯ ಬಂದ ಅವಧಿಯಲ್ಲಿ ಲಂಕೇಶರು ಕನ್ನಡ ಕಾವ್ಯದ ಕುರಿತು ಅಕ್ಷರ ಕಾವ್ಯದ
ಮುನ್ನುಡಿಯಲ್ಲಿ ಆಡಿರುವ ಮಾತುಗಳಿಗೆ ಯು ಆರ್ ಅನಂತಮೂರ್ತಿಯವರು ಸ್ಪಂದಿಸಿದ ರೀತಿ
ಇದು. ಕನ್ನಡಪ್ರಭದಲ್ಲಿ ಆಗ ಪ್ರಕಟವಾದ ಲೇಖನವನ್ನು ಅವರು ಓದು ಜನಮೇಜಯದಲ್ಲಿ
ಬಳಸಿಕೊಳ್ಳುವುದಕ್ಕೆ ಅನುಮತಿ
ಕೊಟ್ಟಿದ್ದಾರೆ. ಈ ಹಿನ್ನೆಲೆಯ ಕುರಿತು ಅವರ ಪುಟ್ಟ ಸಂದರ್ಶನವೊಂದು ಇಷ್ಟರಲ್ಲೇ
ಪ್ರಕಟವಾಗಲಿದೆ. ಅಲ್ಲಿಯ
ತನಕ ಇದನ್ನು ಸುಮ್ಮನೆ ಓದಿಕೊಳ್ಳಿ. ಸುಮಾರು ಮೂರೂವರೆ ದಶಕದ ಹಿಂದೆ ಅವರು ಆಡಿರುವ ಮಾತು
ಇವತ್ತಿನ ಕಾವ್ಯಕ್ಕೂ ಅನ್ವಯಿಸುತ್ತದೆ ಎಂದು ನಿಮಗೆ ಅನ್ನಿಸಿದರೆ, ಕಾವ್ಯ ನಿಂತ
ನೀರಾಗಿದೆ ಅನ್ನೋಣವೇ
ಅಥವಾ ಅನಂತಮೂರ್ತಿಯವರು ತುಂಬ ಫ್ಯೂಚರಿಸ್ಟಿಕ್ ಅನ್ನುತ್ತೀರಾ..
-ಜೋಗಿ

Posted by ಗಿರೀಶ್ ರಾವ್, ಎಚ್ (ಜೋಗಿ) at 5:09 PM 0 comments

Wednesday, August 8, 2007
ಕತೆ ಹೇಳುವುದು ಒಂದು ಒಳ್ಳೆಯ ಕೆಲಸ

August 12, 2007 Posted by | ANANTHAMURTHY, EKAVI COUNTRIES | Leave a comment

Anand, Akruti Fonts and Cyberscape Multimedia Ltd and Anand on KGP, NUDI and BARAHA

Anand, Akruti Fonts and Cyberscape Multimedia Ltd

a. Way back in 1983, with a group of like minded professionals, I started a company called VSS Computer Engg. Pvt. Ltd. in Mumbai. As an Electronics & Communications engineer, with a burning zeal to develop technology indigenously, I designed one of the the few Z-80 based, micro-computer called “Asterix” and among other uses we developed it as an offline composing terminal to feed text ( including all Indian languages) for photo-composing machines. In those days before DTP, the publishing industry used photo-composing machines for producing bromide output and make master plates for printing. So my brush with languages including, Kannada and the technicalities like fonts, coding and composing dates from those days. I think the only other group with this kind of knowledge and experience is the Pune based Modular Systems Pvt. Ltd, who are our worthy competitors.

b. In Printek-1988 in New Delhi, we were the first to demonstrate the use of an IBM PC clone, running DOS and Ventura (GEM) version to do composing in Hindi and then subsequently in all languages like Kannada. It was called the “Asterix Publishing System”. This was the first step of establishing the DTP industry in the country and it was a real low cost alternative to the one based on Apple Macintosh and Apple Laserwriter Postscript printer. For the first time an inexpensive PC based, GUI based and a non Postscript (HP laserjet) based DTP solution for Indian languages with much superior quality than the expensive Apple Mac based system was demonstrated by us. It is with great satisfaction that today I see that this kind of system is virtually the defacto standard in the industry.

c. Along with Mr. Mohan Tambe, then at IIT Kanpur, I helped evolve the first ever GIST card, which was then taken up for further development at CDAC, Pune and we at VSS were the first to build an ISCII, GIST card ( Asterix Language Card) based DTP system with GUI support on Windows 3.0, with ATM fonts and Truetype fonts in Windows 3.11, working on Ventura 2.0 and Page Maker 2.0 (Windows version).

d. In 1990, along with a colleague Mr. M.S. Sridhar, I founded ACES Technologies and ACES Consultants and “Akruti” was born. Akruti had the concept of a DOS based ISCII editor which could edit all Indian scripts including Kannada which could be imported by PageMaker or Ventura and was the first to allow direct editing of Hindi, Kannada and other Indian scripts in the Windows GUI environment. Some of our newspaper and magazine customers use this solution even today. In fact Pavanaja was one of our earliest Kannada DTP software customers in Mumbai. I also was a technical adviser to CDAC for setting up the Fonts Development Cell, when Mr. Vijay Bhatkar was the Executive Director and Mohan Tambe was in charge of the GIST technology group.

e. In 1992, I shifted to Bangalore from Mumbai and sort of returned to my roots to further the development of “Akruti” in Kannada and all south indian languages. Slowly it dawned on us that, publishing was just one of the application areas for language software and we started exploring other areas like office productivity applications like Word, Excel, Power Point, Lotus Smart Suite etc. all on the Windows platform.

f. In 1996, we were the first in the country to recognise and launch (along with Mr. Ninad Pradhan of Mumbai) the first ever Indian language website called http://www.indianlanguages.com . This was the primary starting point for Indian language Web publications like “Mai Boli” in Marathi, “Daily Milap” in Hindi and “Vishwa Kannada” in Kannada, edited by Pavanaja.

g. 1996 also saw the founding of Cyberscape Multimedia Pvt. Ltd. which took over ACES Technologies and ACES Consultants and the “Akruti” line of products. We also developed some pioneering applications, like the “Grievance Monitoring System” for the Chief Minister’s Secretariat and KSRTC in Kannada. A payroll system in Kannada with Mr. Sathyanarayana of Kidwai and a Library management System in Kannada with Mr. Annamalai of NAL. It was around this time when Srinath Sastry of NAL and Narsimurthy of SBI who had no clue as to the technicalities of Kannada software started approaching me to illuminate them about these technical issues. In fact there were times when they would pick my brain for hours to-gether on Sundays and late nights to understand the nitty gritty of these issues. Of course, today they are self proclaimed experts in Kannada Computing and people like me Mr. Anbarasan of Applesoft and Mr. Muthu Krishnan of SRG with over two decades of experience in this area have to be certified by these amateurs whether our software meets standards or not.

h. Mr. Mohan Tambe subsequently started a company called Innomedia in Bangalore in which Cyberscape was an angel investor and the idea was to develop a convergent media solution called the “Chois Pad” a set-top box, which would provide infotainment services thru cable. Our contribution was to help in enabling the solution to work in all Indian languages. It was in connection with this that I facilitated Pavanaja’s shift from Mumbai where he was languishing in BARC to the more fertile and intellectually active private info-tech industry in Bangalore and helped him take up a job with Innomedia. Subsequently, due to some differences with Mr. Tambe and his style of working, Pavanaja quit and waded thru various jobs to finally start Vishwa Kannada Softech. Cyberscape too disassociated with Innomedia, but for the record today, Innomedia with Reliance having aquired 55% stake in it is one of the leading New Media solutions company and is one of the key strategic IP that Reliance is going to use to grab a major chunk of the yet to develop but potentially huge convergent telecom/infotainment/home computing market.

i. Today, Cyberscape Multimedia Ltd. of which, I am the Managing Director, is a publicly listed company since 2000, and has more than 18,000 Akruti installations all across the country. Kannada being my mother tongue does interest me academically still, but the kind of sordid politics I experienced in KGP makes me feel I would be better off keeping away from such petty politics and concentrate on the future technologies and products. We are currently pioneering in the following areas:
e-Governance: We have a product called e-Karyalaya which handles all basic office admin functions in Kannada or any Indian language.
e-Banking: We have cyBANK and cyCRED which cater to total branch automation in local languages for co-op banks and micro-credit institutions.
DM & KM: With our cyDOCS and cyKNIT products, we cater to Document management and Knowledge Management in any Indian or Global script.
Akruti WDK / SDK : We enable any software or web application developer to enable his solution in any local language including Kannada using our Software Development Kit or Web Development Kit.
We are actively looking at language enabling of embedded devices using Linux and Windows CE/XP embedded OS.
While I will have a lot to say of my experience with KGP in succeeding mails, I will currently focus on some specific questions you have raised:
Do you have any correspondences with KGP and it’s Executives? Please send these in a separate email to me. All of it. Exactly like you have sent to them or to any KGP persons that were involved at the time you were in KGP.
Yes, I do have some mails with KGP and its execs. I will be attaching them seperately.
Who developed KALITHA? Was it developed from Scaratch? Who paid for it tobe developed?
Do you know how did KGP developed the NUDI software? IS THIS done from Scaratch? Are there anything COPIED or PIRATED or REVERSE ENGINERED from some one else’s Software that was submitted to KGP? Do you know anything about this? Who did the majority of NUDI software development? How long it took to complete that ?
Kalitha was developed in a hush-hush manner, behind our back by reverse engineering the software obtained for certifying that they comply with GOK Keyboard and font standards by some part time developers in active connivance with Srinath Sastry and Narsimurthy. I think the developer named Harsha was introduced by Pavanaja to them and probably he knows more about it. I know for sure that our Akruti font “Padmini” was definitely used without our permission as the initial font for Kalitha. later when I objected to this in a KGP meeting. I was asked to prove this or take it to a court of law by them knowing very well how difficult it is for courts in India with their scant knowledge of software and IP rights and their very long decision making time frames to give any kind of speedy justice. Mr. Srinath Sastry and Narsimurthy had been for quite some time using Akruti provided by us for their correspondence and other Kannada related activity and they had also sent me drafts of the font code for approval. This I see nothing but a stab in the back to someone who gave them all the technical guidance when they were absolute ingnoramuses.

Do you know of any relationship between KGP and DIT ? Do you know any relatives of KGP worked in DIT ?
I think, the nexus and plot to retrospectively finance this NUDI developement, probably with the connivance of some elements in DIT was hatched, by the abovementioned active members of KGP without taking any of us other so called committee members into confidence. Srinath Sastry’s son was spotted on many occasions with DIT members doing some software work, and Srinath Sastry’s daughter used to hang around quite a bit in KGP office, I do not know if this work was voluntary or there was some consideration.

You told me that you have read all the emails of Mr. N. Anbarsan and Mr. Muthukrishanan. Can you write answers in detail to those emails whether they are telling the TRUTH or NOT. Please be precise in writing the facts. It helps to solve the problems of KANNADA.
I think most of the points raised by these two gentlemen seems to reflect facts. Maybe I will take it up point wise in succeeding mails. More importantly, the fact that they are not true blue Kannadigas being of Tamil origin, is being used to kind of discredit their assertions. As far as I am concerned, these two have done a lot for development of Kannada software and though they are competitors in the commercial space, I see them as equal partners in the endeavour to develop Kannada.
Do you know how much of work is completed by KGP for GoK?
I think from the long list of Kannada software development projects for which funds over Rs. 30 Lakhs were obtained from DIT, expect Nudi ( which is of doubtful origin) and the kind of software which at least 10 commercial vendors and free software developers have been giving solutions for decades, no other significant Kannada software, other than a few utilities and a so called e-book which is a replica of the work done by RCILTS has seen the light of the day. It should have been very clear to DIT that a rag-tag bunch of amateurs and part time programmers cannot deliver products, which normally is difficult for even professional companies with significant budgets to deliver. I think the whole issue of Kannada software development has been treated shabbily and very casually by DIT. Hopefully, more sense will prevail in the future.
Did you quit KGP b yourself ? Why you are not working with KGP anymore?
As mentioned by Mr. Satyanarayana earlier, using a facade of fake democracy, I along with Satyanarayana and Pavanaja, who were viewed as inconvenient were first removed from the committee memberships by some members who had never showed their face even once in KGP meetings. Subsequently, on technical grounds that we had not renewed our membership, we were kicked out of the KGP. Under these circumstances, is it even wise to associate with such people, leave alone working with them?
Did you advise KGP not to do somethings in KGP? Did they listen to you? Have you kept tarck of these things? Please include these in your email.
I have already mentioned, how we tried to object to some wrong paths KGP was taking and how we got sidelined. Yes, I do have some mails and I will send them as stated earlier for public scrutiny.

Thats all for now. More later.

Anand S.K.
Managing Director
Cyberscape Multimedia Ltd.
941, 21st main, 22nd “A” Cross,
Banashankari 2nd Stage,

Bangalore – 560070.
Ph: 91-80-26714446 Ext. 29
Fx: 91-80-26710925 Ext. 31

Mobile (GSM): +91-9844079270
Mobile (CDMA):+91-80-31845270

email: anand@cyberscapeindia.com

August 21, 2006 Posted by | Anand of Akruthi Fonts on Baraha, NUDI and KGP, ANANTHAMURTHY | 3 Comments