eegondu kathe..by HARISH from Shravanabelagola
ಈಗೊಂದು ಕಥೆ,,
ಕಥೆಯಲ್ಲಿ ಮಾಮೂಲಿನಂತೆ ಹುಡುಗನಿಗೆ ಒಬ್ಬ ಹುಡುಗಿ,,, ಆದರೆ ಇಲ್ಲಿ ಹುಡುಗಿ ಹುಡುಗನ್ನ ಇಷ್ಟ ಪಡ್ತಾ ಇರ್ತಾಳೆ..
ಹುಡುಗಿಗೆ ಹುಡುಗ ಎಷ್ಟು ಇಷ್ಟ ಅಂದ್ರೆ.. ಪ್ರಾಣಕ್ಕಿಂತ ಹೆಚ್ಚು… ಅವನನ್ನ ಕಂಡ್ರೆ ಹುಡುಗಿಗೆ ಮೆಚ್ಚು..
ಹೀಗೆ ನಡೀತಾ ಇರುತ್ತೆ ಜೀವನ,,
ಆದರೆ ಹುಡುಗ ತುಂಬಾ ಸೌಮ್ಯ ಸ್ವಭಾವದವ… ಹುಡುಗಿ ಆತನನ್ನ ಇಷ್ಟ ಪಡೋ ವಿಷಯ ಹುಡುಗನಿಗೆ ತಿಳಿಯೋಕೆ ತುಂಬಾ ದಿನ ಏನು ಹಿಡಿಯೋಲ್ಲ… ಹುಡುಗನ ಮನಸ್ಸಲ್ಲಿ ಪ್ರೀತಿ ಇತ್ತೋ ಇಲ್ವೋ ಗೊತ್ತಿಲ್ಲ…
ಆದ್ರೆ ಅವನು ಮಾತ್ರ ಪ್ರೀತಿಸೋ ಸ್ಥಿತಿಯಲ್ಲಿ ಇರೋಲ್ಲ.. ಯಾಕೆ ಅಂದ್ರೆ ಹುಡುಗನ ಮನೆಯ ಪರಿಸ್ಥಿತಿ,,
“ಮನೆಯಲ್ಲಿ ಒಪ್ಪೋಲ್ಲ” ಅಂತ ಆತನಿಗೆ ಚನ್ನಾಗಿ ಗೊತ್ತು… ಅದಕ್ಕೆ ಆತ ಸುಮ್ಮನಿರದೆ ಹುಡುಗಿಯಲ್ಲಿ ಹೋಗಿ ಹೇಳಿಯೇ ಬಿಟ್ಟ,,,
“ನೋಡಿ,, ನಿಮ್ಮ ಮಾತಲ್ಲೇ ನನಗೆ ಎಲ್ಲ ಅರ್ಥ ಆಗ್ತಾ ಇದೆ.. ದಯವಿಟ್ಟು ನನ್ನ ಮೇಲಿನ ಆಸೇನ ಬಿಟ್ಟು ಬಿಡಿ.. ಯಾಕೇಂದ್ರೆ… ನಮ್ಮ ಮನೇಲಿ ಈ ಪ್ರೀತಿ,, ಪ್ರೇಮ,, ಅನ್ನೋ ವಿಷಯಗಳನ್ನೆಲ್ಲ ಒಪ್ಪೋಲ್ಲ.. ದಯವಿಟ್ಟು ಅರ್ಥ ಮಾಡ್ಕೊಳಿಪ… ” ಅಂತ ಹೇಳಿ ಬಿಡ್ತ್ಹಾನೆ…
ಹುಡುಗಿ ಕಣ್ಣಲ್ಲಿ ನೀರು ತುಂಬಿ ಬರುತ್ತೆ,,,
ಮನಸ್ಸಲ್ಲೇ ಕೇಳಿ ಕೊಳ್ತ್ಹಾಳೆ…”ಯಾಕೋ ಹುಡುಗ?? ನಾನು ನಿಂಗೆ ಇಷ್ಟ ಆಗ್ಲಿಲ್ವಾ??”ಅಂತ..
ಆದರೆ ಹುಡುಗಿಯ ಕೂಗು ಹುಡುಗನಿಗೆ ಕೇಳಬೇಕಲ್ಲ…. ಹುಡುಗಿಯ ಕಣ್ಣಲ್ಲಿದ್ದ ನೀರು ಹುಡಗನ ಕಣ್ಣಿಗೆ ಬೀಳುತ್ತದೆ.. ಆದರೆ,, ಇದಾವುದನ್ನು ಗಮನಿಸದಂತೆ ಹುಡುಗ ಹೊರತು ಹೋಗುತ್ತಾನೆ…
“ನಾನು ನಿಂಗೆ ಒಳ್ಳೆಯ ಗೆಳತಿ ಆಗ್ತ್ಹಿನಿ ಕಣೋ ಹುಡುಗ” ಅಂತಾಳೆ ಹುಡುಗಿ..ಹುಡುಗ ಒಪ್ಪುತ್ತಾನೆ..
ಆ ಹುಡುಗಿ ಹುಡುಗನಿಗೆ ಇನ್ನು ಹತ್ಥಿರವಾಗುತ್ತಾಳೆ… ಆ ಹುಡುಗನಲ್ಲಿ ಹುಡುಗಿ ಏನನ್ನು ಮುಚ್ಚಿಡದೆ ಎಲ್ಲವನ್ನು ಹೇಳಿಕೊಳ್ಳುತ್ತಾಳೆ… ಅವಳ ಹಳೆಯ ಪ್ರೇಮ ಕಥೆಯನ್ನು ಮುಚ್ಚಿಡದೆ ಹೇಳಿಕೊಳ್ಳುತ್ತಾಳೆ..
ಅವಳ ಮೊದಲ ಗೆಳೆಯ ಕಾರಣವೇ ಇಲ್ಲದೆ ತನ್ನಿಂದ ದೂರ ಹೋದದ್ದು ಯಾಕೋ ಗೊತ್ತಿಲ್ಲ ಅನ್ನುತ್ತಾಳೆ,,,
“ತಾನು ಪ್ರೀತಿಸಿದ ಯಾರು ನನಗೆ ಸಿಗೋಲ್ಲ.. ನಾನು ದುರಾದ್ರುಷ್ಟದ ಹುಡುಗಿ ಕಣೋ” ಅಂತ ಕಣ್ಣೀರು ಹಾಕುತ್ತಾಳೆ..
“ಮಾಡುವೆ ಮೇಲೆ ಆಸೆಗಳೇ ಹೊರತು ಹೋಗಿದೆ ಕಣೋ.. ನೋಡು ನೀನು ಮಾಡುವ ಆದ್ಮೇಲೆ ಕೂಡ ನನ್ ಜೊತೆ ಮಾತಾಡು,,ದಯವಿಟ್ಟು ನನ್ನ ಮರಿಬೇಡ ಕಣೋ.. ನೀನು ಅಂದ್ರೆ ನಂಗೆ ತುಂಬಾ ಇಷ್ಟ ಕಣೋ…
ನಿನ್ನಂತ ಒಳ್ಳೆ ಹುಡುಗನ ಪಡೆಯೋ ಹುಡುಗಿ ತುಂಬಾ ಅದೃಷ್ಟ ಮಾಡಿರಬೇಕು ಕಣೋ” ಅಂತ ಮುಗ್ಧವಾಗಿ ಹೇಳುತ್ತಾಳೆ..
ಹುಡುಗ ಹುಡುಗಿಯ ಮುಗ್ಧ ಮನಸ್ಸಿಗೆ ಮರುಗುತ್ತಾನೆ,,,
ಇಂತ ಒಳ್ಳೆ ಹುಡುಗಿಯ ಪಡೆಯೋ ಭಾಗ್ಯ ಯಾರಿಗಿದೆಯೋ?? ಅಂತ ಮನಸ್ಸಲ್ಲೇ ಕೇಳಿಕೊಳ್ಳುತ್ತಾನೆ..
“ಹಾಗೆಲ್ಲ ಮಾತಾಡಬೇಡ.. ಎಲ್ಲ ಒಳ್ಳೆದಾಗುತ್ತೆ ಬಿಡೇ ಹುಡುಗಿ” ಅಂತ ಸಮಾಧಾನ ಹೇಳುತ್ತಾನೆ…
ಹುಡುಗ ಕೂಡ ಅವಳ ಮುಗ್ಧ ಮನಸ್ಸಿಗೆ ಸೋತು ಹೋಗುತ್ತಾನೆ… ಅವನಲ್ಲೂ ಪ್ರೀತಿ ಟಿಸಿಲು ಹೊಡೆಯುತ್ತದೆ..
“ಊಟ ಆಯ್ತಾ ಚಿನ್ನು,,, ” ತಿಂಡಿ ಆಯ್ತಾ ಬಂಗಾರಿ” “ಉಷಾರಾಗಿದ್ದಿಯ?” ಹೀಗೆ ಪ್ರತಿ ನಿಮಿಷಕ್ಕೂ ಹುಡುಗಿ ಹುಡುಗನಿಗೆ ವಿಚಾರಿಸಿಕೊಳ್ಳುತಾಳೆ.. ಅವಳ ಆ ಗುಣ ಹುಡುಗನಿಗೆ ಇಷ್ಟ ವಾಗುತ್ತದೆ
ನಿಧಾನವಾಗಿ ಹುಡುಗ ಅವಳ ಕಡೆ ಬಾಗುತ್ತಾಹೋಗುತ್ತಾನೆ..
“ನಿನ್ ಜೊತೆ ಯಾವಾಗಲು ಮಾತಾಡ್ತಾನೆ ಇರ್ಬೇಕು ಕಣೋ ಹುಡುಗ,, ನಿನ್ನ ಧ್ವನಿ ಕೇಳ್ತಾನೆ ಇರಬೇಕು ಅನ್ಸುತ್ತೆ,,,
ಆದ್ರೆ ಏನ್ ಮಾಡ್ಲಿ… ಸಮಯಾನೆ ಇಲ್ಲ ಅಂತಾಳೆ ಹುಡುಗಿ..
ಆಕೆ ಬೀ ಕಾಂ ಓದುತ್ತಾ ಇರ್ತಾಳೆ..
ಅವಳ ಕೊನೆಯ ವರ್ಷದ ಪರೀಕ್ಷೆಗಳು ಹತ್ತಿರ ಬಂದು ಬಿಟ್ಟಿರುತ್ತದೆ…
ಅಲ್ಲಿಂದ ಇಬ್ಬರದು ಮಾತು… ಮಾತು.. ಬರಿ ಮಾತು…
ಆಕೆ ತನ್ನೆಲ್ಲ ಸ್ನೇಹಿತರನ್ನು ಹುಡುಗನಿಗೆ ಪರಿಚಯ ಮಾಡಿಕೊಳ್ಳುತ್ತಾಳೆ,,,
“ಮನೆಗೆ ಬಾರೋ” ನಮ್ಮ ಮನೆಯವರನ್ನೆಲ್ಲ ಪರಿಚಯ ಮಾಡಿಸಿಕೊಡ್ತ್ಹಿನಿ ಅಂತಾಳೆ..
ಹುಡುಗ ಹೋಗೋಲ್ಲ… ತಾನಾಯಿತು ತನ್ನ ಪಾಡಾಯಿತು,,, ದಿನಗಳು ಉರುಳಿತು…
ಅಲ್ಲಿ ೧ ಘಟನೆ ನಡೆದು ಹೋಗಿತ್ತು… ಹುಡುಗಿ ಯಾಕೋ ಸ್ವಲ್ಪ ಬದಲಾದಂತೆ ಕಾಣಿಸಿದರು ಹುಡುಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿಬಿಟ್ಟ..
ಅದು ಹುಡುಗಿ ಬಗ್ಗೆ ಹುಡುಗನಿಗಿದ್ದ ನಂಬಿಕೆ…
ಅಷ್ಟರಲ್ಲಿ ಹುಡುಗನ ಮನಸ್ಸಲ್ಲಿ ಆಸೆಯೊಂದು ಹುಟ್ಟಿ ಬಿಟ್ಟಿರುತ್ತದೆ..
ನಮ್ಮ ಮನೇಲಿ ಹೇಳಿ ಒಪ್ಪಿಸಿಬಿಟ್ರೆ ಹೇಗೆ? ಅಂತ..
ಆದದ್ದಾಗಲಿ ಅಂತ ಹುಡುಗ ಅವನ ಮನೆಯಲ್ಲಿ ಹೋಗಿ ವಿಷಯವನ್ನ ತಿಳಿಸುತ್ತಾನೆ ,,,
“ಅಪ್ಪ ಏನು ಹೇಳ್ತಾರೆ” ಆನೋ ಕುತೂಹಲ ಅವನಲ್ಲಿ ಹುಟ್ಟುತ್ತದೆ..
ಅಪ್ಪನ ಮುಂದೆ ತಲೆ ಭಾಗಿಸಿ ನಿಲ್ಲುತಾನೆ…
ಹುಡುಗನಿಗೆ ಆಕಾಶ ಅಂಗೈಯ್ಯಲ್ಲಿ.. ಓಡಿ ಹೋಗಿ ಹುಡುಗಿಗೆ ಹೇಳ್ತಾನೆ…
“ನಮ್ ಮನೇಲಿ ಒಪ್ಪಿಬಿಟ್ರು ಕಣೆ… ನಿಮ್ ಮನೇಲಿ ಒಪ್ಪಿಸ್ತೀನಿ ಅಂದ್ಯಲ್ಲ… ಒಪ್ಪಿಸು.. ಹಾ… ಹಾ…”
ಹುಡುಗ ತುಂಬಾ ಸಡಗರದಲ್ಲಿ ಹೇಳ್ತಾನೆ…
ಅಷ್ಟೇ….
ಹುಡುಗಿಯ ಮಾತು ಕೇಳಿದ ಹುಡುಗ ನೆಲಕ್ಕೆ ಕುಸಿಯುವುದೊಂದೇ ಭಾಕಿ,,,
“ಹೇಯ್.. ಏನ್ ಹೇಳ್ತಾ ಇದ್ದೀಯ ನೀನು,,,? ದಯವಿಟ್ಟು ನನ್ ಮೇಲಿನ ಆಸೆ ಬಿಟ್ಟು ಬಿಡು…
ಇಷ್ಟು ದಿನ ನಡೆದದ್ದೆಲ್ಲ ಕನಸು ಅಂತ ಮರೆತು ಬಿಡು,,,” ಅಂತಾಳೆ ಹುಡುಗಿ….
“ಹೇಯ್ ಹೀಗೆಲ್ಲ ಮಾತಾಡ್ ಬೇಡ… ತಮಾಷೆನ ಹೀಗ ಮಾಡೋದು” ಅಂತಾನೆ ಹುಡುಗ..
“ಇಲ್ಲ,, ನಾ ತಮಾಷೆ ಮಾಡ್ತಾ ಇಲ್ಲ.. ನಾ ಯಾಕೆ ತಮಾಷೆ ಮಾಡ್ಲಿ..?
ನಿನ್ ಮೇಲೆ ಮೊದಲು ಆ ಭಾವನೆಗಳು ಇತ್ತು . ಆದರೆ ಇವಾಗ ಅವೆಲ್ಲ ಸತ್ತು ಹೋಗಿವೆ… ಮತ್ತೆ ಆಗೋಲ್ಲ.. ಅದೆಲ್ಲಾ ಕನಸು ಅಂತ ಮರೆತು ಬಿಡು,, ” ಅಂತಾಳೆ ಹುಡುಗ..
ಹುಡುಗನ ಬಾಯಲ್ಲಿ ಮಾತಿಲ್ಲ ಕಣ್ಣಲ್ಲಿ ನೀರು,, ನೀರು… ಹಾಗೆ ಗೋಡೆಗೆ ಒರಗುತ್ತಾನೆ..
“ನೋಡು ನೀನು ಇನ್ನೊಂದು ಸರಿ ಹೀಗೆ ಮಾತಾಡಿದ್ರೆ ನಿನ್ ಜೊತೆ ಇವಾಗ ಆಡ್ತಾ ಇರೋ ಮಾತನ್ನು ನಿಲ್ಲಿಸಿ ಬಿಡ್ತ್ಹಿನಿ…
ಇನ್ನು ಯಾವತ್ತು ನಿನ್ನ ಬಾಯಲ್ಲಿ ಆ ರೀತಿ ಪ್ರೀತಿ ಅಂತ ಬರಬಾರದು” ಹುಡುಗಿಯ ಮಾತಲ್ಲಿ ನಿರ್ಭಾವುಕತೆ ಎದ್ದು ಕಾಣುತ್ತಿತ್ತು..
“ಹೀಗೆಲ್ಲ ಒರಟಾಗಿ ಮಾತಾಡಬೇಡ ಕಣೆಮನಸು ತಡೆಯೋಲ್ಲ ಪ್ಲೀಸ್ “ಅಂತಾನೆ ಹುಡುಗ..
“ನೀನು ಏನು ಹೇಳಬೇಡ,, ನಾ ಹೇಳೋದು ಇಷ್ಟೇ,,, ನಿನ್ನ ಪಾಡಿಗೆ ನೀನು ಇರು.. ದಯವಿಟ್ಟು ಇ ಪ್ರೀತಿ ಪ್ರೇಮ ಎಲ್ಲ ಬಿಟ್ಟು ಬಿಡು” ಅಷ್ಟೇ ಫೋನ್ ಕಾಲ್ ತುಂಡಾಗುತ್ತದೆ..
“ನೋಡು ನಿನ್ನ ಜೆ0ಟಲ್ ಮ್ಯಾನ್ ಅಂದ್ಕೊಂಡಿದ್ದೆ..ಆದ್ರೆ ಈ ಥರ ಅಂದ್ಕೊಂಡಿರಲಿಲ್ಲ.. ಹೀಗೆಲ್ಲ ಮತ್ತೆ ಮತ್ತೆ ಕಾಲ್ ಮಾಡಿ ತೊಂದ್ರೆ ಕೊಡಬೇಡ… ನಿನ್ನ ವಾಯ್ಸ್ ಕೆಲೋಕು ಅಸಹ್ಯ ಆಗುತ್ತೆ ನಂಗೆ” ಅಂತಾಳೆ ಹುಡುಗಿ..
ಹುಡುಗನದು ಮತ್ತೆ ಮಾತಿಲ್ಲ…
“ನೋಡು ನೀ ಹೀಗೆ ಡಿಸ್ಟರ್ಬ್ ಮಾಡ್ತಾ ಇದ್ರೆ.. ನಿನ್ ಫ್ರೆಂಡ್ಸ್ ಗೆ ಎಲ್ಲಾರಿಗೂ ಹೇಳಿಬಿಡ್ತ್ಹಿನಿ… ನಂಗೆ ತೊಂದ್ರೆ ಕೊಡ್ತಿದಿಯ ಅಂತ.. ಹೀಗೆಲ್ಲ ಕಾಲ್ ಮಾಡ್ಬೇಡ ಪ್ಲೀಸ್…..”
ಹುಡುಗನದು ಮತ್ತದೇ ಮೌನ…
“ನಿನ್ ಮಾತು ಕೇಳ್ತಾ ಇರಬೇಕು ಅಂತ ಹೇಳ್ತಾ ಇದ್ದ ಹುಡುಗಿ ಇವಳೆನಾ?…
ನಿನ್ನ ತುಂಬಾ ಇಷ್ಟ ಪಡ್ತ್ಹಿದಿನಿ ಕಣೋ ಅಂದೊಳು ಇವಳೆನ???
ನಿನ್ನಂತ ಗೆಳೆಯ ಸಿಕ್ಕಿದ್ದು ಪುಣ್ಯ ಕಣೋ ಅಂದೊಳು ಇವಳೆನ??” ಹುಡುಗ ಮನಸಲ್ಲೇ ಕೇಳಿ ಕೊಳ್ತಾನೆ….
“ಪ್ಲೀಸ್ ಹೀಗೆಲ್ಲ ಮಾತಾಡ ಬೇಡ,, ನಿಜವಾಗ್ಲು ನಿನ್ನ ಇಷ್ಟ ಪಡ್ತ್ಹಿನಿ ಕಣೆ… ನಿನ್ನ ಬೇಡಿಕೊಳ್ತಾ ಇದೀನಿ ನನ್ ಜೊತೆ ಹೀಗೆಲ್ಲ ಆಡಬೇಡ… ನಿಜವಾಗ್ಲು ನೀನು ಅಂದ್ರೆ ಇಷ್ಟ ಕಣೆ” ಹುಡುಗನದು ಮತ್ತದೇ ಮಾತು..
“ಈ ತರ ಆಡೋಕೆ ನಾಚಿಕೆ ಆಗೊಲ್ವ??? ಅಸಹ್ಯ ಆಗ್ತ ಇದೆ.. ಗುಡ್ ಬಾಯ್..
ನನ್ ಜೊತೆ ಜೀವನದಲ್ಲಿ ಇನ್ಯಾವತ್ತು ಮಾತಾಡ ಬೇಡ…”
ಮತ್ತೆ ಮಾತು ಮುಗಿಯುತ್ತದೆ…
ಇತ್ತ ಹುಡುಗನದು ಮತ್ತದೇ ಮೌನ…
ಹುಡುಗನ ಸ್ನೇಹಿತನೆಗೆ..
“ಏನೇ ಇವತ್ತು ಇಷ್ಟು ಪೀಠಿಕೆ ಹಾಕ್ತ ಇದ್ದೀಯ??”ಕೆಳುತಾನೆ ಸ್ನೇಹಿತ..
“ಏನಿಲ್ಲ ೧ ವಿಷಯ ಹೇಳಬೇಕಿತ್ತು ನಿಂಗೆ… ನಂಗೆ ಒಂದು ಹೆಲ್ಪ್ ಮಾಡ್ತ್ಹಿಯ??”ಕೇಳುತ್ತಾಳೆ ಹುಡುಗಿ..
“ಪರವಾಗಿಲ್ಲ ಕೇಳು,, ಏನು ನಿನ್ನ ಪ್ರಾಬ್ಲಮ್??” ಕೇಳುತ್ತಾನೆ ಸ್ನೇಹಿತ…
“ಏನಿಲ್ಲ.. ನಿನ್ ಫ್ರೆಂಡ್ ನನಗೆ ತುಂಬಾ ಕಾಲ್ ಮಾಡ್ತಾ ಇದಾನೆ… ಅವನಿಗೆ ಹೇಳು.. ನಂಗೆ ಹೀಗೆಲ್ಲ ಕಾಲ್ ಮಾಡಬೇಡ ಅಂತ…” ಅಂತಾಳೆ ಹುಡುಗಿ..
“ಅವನು ಹಾಗೆ ಮಾಡಿದ್ನಾ? ನಂಗೆ ಯಾಕೋ ನಂಬಿಕೆ ಬರ್ತಾ ಇಲ್ಲ,, ಯಾಕೆ ಅಂದ್ರೆ ಅವನು ಏನು ಅಂತ ನನಗೆ ಚನ್ನಾಗಿ ಗೊತ್ತು.. ಸರಿ ಬಿಡು ನಾ ವಿಚಾರಿಸಿ ಹೇಳ್ತಿನಿ…”ಅಂತಾನೆ ಸ್ನೇಹಿತ…
“ಅವನು ಯಾಕೆ ಹೀಗೆ ಮಾಡಿದ,,? ಇಲ್ಲ ಇವಳೇ ಸುಳ್ಳು ಹೇಳ್ತಾ ಇದಾಳ??
ನನ್ ಹತ್ರ ಏನು ಮುಚ್ಚಿಡೋಲ್ಲ ಅಲ್ವ ಅವನು… ಇರಲಿ.. ಇವಾಗ್ಲೆ ವಿಚಾರಿಸ್ಥಿನಿ ಅಂತ ಹುಡುಗನಿಗೆ ಕರೆ ಮಾಡಿದ ಗೆಳೆಯ…
“ಹಲೋ “ಎಂದ ಹುಡುಗ…
“ಏನಪ್ಪಾ ಹೇಗಿದ್ದೀಯ…?”ಕೇಳಿದ ಗೆಳೆಯ…
“ಹೇಯ್ ,, ನಿಂಗೆ ೧ ವಿಷಯ ಹೇಳ್ಬೇಕು ಕಣೋ..” ಎಂದ ಹುಡುಗ..
“ಏನೋ ಅದು…” ಕೇಳಿದ ಗೆಳೆಯ…
ಎಲ್ಲವನ್ನು ವಿವರಿಸಿ ಹೇಳಿದ ಹುಡುಗ…
ಸ್ನೇಹಿತನಿಗೆ ಎಲ್ಲ ಅರ್ಥವಾಗಿತ್ತು..
“ನೋಡೋ,, ನೀನು ಅವಳಿಗೆ ಬೇಡವಾಗಿದ್ದಿಯ..,, ಸುಮ್ಮನೆ ತಲೆ ಕೆಡಿಸ್ಕೋ ಬೇಡ,,ಬಿಟ್ಟು ಬಿಡೋ..
ನನಗೆ ಎಲ್ಲ ಅರ್ಥ ಆಗುತ್ತೆ.. ನಿನಗೆ ನೋವಾಗುತ್ತೆ ಅಂತ ಗೊತ್ತು,, ಆದ್ರೆ ಅವಳ ಮನಸ್ಸಲ್ಲಿ ನೀನು ಇಲ್ಲ ಇವಾಗ ಅರ್ಥ ಮಾಡ್ಕೋ… ” ಹೇಳಿದ ಗೆಳೆಯ,,,
“ಹೇಗೋ ಮರೀಲಿ ಅವಳನ್ನ “ಕೇಳಿದ ಹುಡುಗ
ಯಾಕೊಬ್ ತಲೆ ಕೆಡಿಸ್ಕೊತೀಯ??? ಬಿತ್ತು ಬಿಡೋ ಅವಳನ್ನ”…ಹೇಳಿದ ಗೆಳೆಯ..
“ಬಿಟ್ಟು ಹೇಗೋ ಬದುಕಲಿ??’.. ಹುಡುಗ ಕೇಳಿದ…
“ಇಷ್ಟು ದಿನ ನೀನು ಬದುಕಿರಲಿಲ್ವ??? ಅವಲೋಬ್ಬಲೇ ನಿನಗೆ ಬದುಕ..?? ನಾವು ಯಾರು ನಿನಗೆ ಲೆಕ್ಖಕ್ಕೆ ಇಲ್ಲ ಅನ್ನು ಆಗಿದ್ರೆ… ಬಿಡಪ್ಪ… ಇನ್ಮೇಲೆ ನಿನ್ನಿಷ್ಟ…” ನುಡಿದ ಗೆಳೆಯ…
ಹುಡುಗನ ಮನಸ್ಸಲ್ಲಿ ಆ ಪ್ರಶ್ನೆ ಹೊಳೆದಿತ್ತು..”ಹೌದಲ್ವಾ?? ನಾನು ಮೊದಲು ಬದುಕಿದ್ದೇ… ಮುಂದೇನು ಬದುಕಬಹುದು…???” ಆದರೆ “ಅವಳನ್ನು ಬಿಟ್ಟು ನೀನು ಬದುಕುತ್ತಿಯ??”…ಅವನ ಮನಸು ಕೇಳಿತ್ತು…
“ಹೇಯ್… ಪ್ಲೀಸ್.. ಅವಳು ನನ್ ಜೊತೆ ಒಳ್ಳೆ ಗೆಳತಿ ಆಗಿರಲಿ.. ಬರಿ ನನ್ ಜೊತೆ ಮಾತಾಡೋಕೆ ಹೇಳು… ನಾ ಅವಳಿಂದ ಏನನ್ನು ಬಯಸೋಲ್ಲ… ಇದೊಂದು ಸಹಾಯ ಮಾಡ್ತ್ಹಿಯೇನೋ ನಂಗೆ???” ಕೇಳಿದ ಹುಡುಗ..
“ಆಯ್ತಪ್ಪ..ಆದ್ರೆ ನೀನು ಮತ್ತೆ ಅವಳ ಹತ್ರ ಪ್ರೀತಿ ಪ್ರೇಮ ಅಂತ ಮಾತಾಡೋಲ್ಲ ಅಂತ ಆಣೆ ಮಾಡು… ಅವಳಿಗೆ ನಿನ್ ಜೊತೆ ಮಾತಾಡೋಕೆ ಹೇಳ್ತಿನಿ…”ಕೇಳಿದ ಗೆಳೆಯ…
“ಆಯ್ತು ಕಣೋ… ನಾನು ಇನ್ಯಾವತ್ತು ಅವಳ ಜೊತೆ ಹಾಗೆ ಮಾತಾಡೋಲ್ಲ.. ಅವಳು ನನ್ ಜೊತೆ ಮಾತಾಡಿದ್ರೆ ಸಾಕು,, ನನ್ನ ಮೇಲೆ ಆಣೆ ..” ಕುಶಿಯಲ್ಲಿ ಹೇಳಿದ್ದ ಹುಡುಗ..
“ಆಯ್ತಪ್ಪ ಇವಾಗ ಫೋನ್ ಮಾಡಿ ಹೇಳ್ತಿನಿ… ನೀನು ಅವಳ ಜೊತೆ ಮಾತಾಡು… ಹತ್ತು ನಿಮಿಷ ಬಿಟ್ಟು ನೀನು ಅವಳಿಗೆ ಕಾಲ್ ಮಾಡು..” ಹೇಳಿದ ಗೆಳೆಯ…
ಹುಡುಗನಿಗೆ ಆಕಾಶ ಸಿಕ್ಕಸ್ತು ಖುಷಿ ಆಗಿತ್ತು…
“ಹೇಳು” ನಿರ್ಭಾವುಕ ವಾಗಿತ್ತು ಹುಡುಗಿಯ ಧ್ವನಿ..
“ಯಾಕೆ ಹೀಗೆ ಮಾಡಿದ್ದು ನೀನು” ಕೇಳಬೇಕೆಂದು ಕೊಂಡರು ಬಾಯಿಂದ ಪದ ಹೊರಡಲಿಲ್ಲ ಹುಡುಗನಿಗೆ..
“ನಿನಗೆ ನೆನಪಿದೆಯೆ ಹುಡುಗಿ…?? ನನಗೆ ನೀನು ಒಂದು ಮಾತು ಹೇಳ್ತಾ ಇದ್ದೆ.. “ನೀನು ನನ್ ಜೊತೆ ಮಾತಾಡೋ ಯಾವಾಗಲು ಹುಡುಗ ನನಗೆ ಏನು ಬೇಡ ” ಅಂತ,, ಅದನ್ನ ನಾನು ನಿನಗೆ ಹೇಳ್ತಾ ಇದೀನಿ ಕಣೆ… ನಾನು ನಿನ್ನ ಬರಿ ಗೆಳತಿಯಾಗಿ ನೋಡ್ತೀನಿ ಅಷ್ಟೇ ಕಣೆ… ಮತ್ತೆ ಯಾವತ್ತು ನಿನ್ನನ್ನ ಆ ದೃಷ್ಟಿಯಲ್ಲಿ ನೋಡೋಲ್ಲ.. ನನಗೆ ಒಳ್ಳೆ ಗೆಳತಿಯಾಗಿರ್ತಿಯ???… .. ನಿನ್ನಿಂದ ನಾ ಬಯಸೋದು ಅಷ್ಟೇ,,, ಅರ್ಥ ಮಾಡ್ಕೋ ಪುಟ್ಟ…
ಯಾವತ್ತು ನಿನಗೆ ನಯು ತೊಂದರೆ ಕೊಡೋಲ್ಲ..” ಹುಡುಗನ ಬಿಕ್ಕಳಿಸಿ ಕೇಳಿದ..
“ನೋಡು,,ನಾನು ಇವಾಗ ಮೊದಲಿನ ಥರ ಮಾತಾಡೋಕೆ ಆಗೋಲ್ಲ… ಯಾಕೆ ಅಂದ್ರೆ ನಮ್ ಅಪ್ಪ ಅಮ್ಮ ನನಗೆ ಹುಡುಗನ್ನ ನೋಡಿದಾರೆ.. ನನಗು ಹುಡುಗ ಇಷ್ಟ ಆಗಿದಾನೆ… ದಯವಿಟ್ಟು ಅರ್ಥ ಮಾಡ್ಕೋ… ನನ್ನ ಬದುಕು ಇವಾಗ ಬದಲಾಗುತ್ತ ಇದೆ.. ಅಡ್ಡ ಬರಬೇಡ,,, ನನ್ ಜೀವನ ಚನ್ನಾಗಿರಬೇಕು ಅಂದ್ರೆ ನೀನು ನನ್ನ ಮರೆತು ಬಿಡು… ಪ್ಲೀಸ್… ಯಾವತ್ತು ನಿನ್ನ ಮುಖಾನ ನಂಗೆ ತೋರಿಸಬೇಡ… ಹೊರತು ಹೋಗ್ತಿಯ ನನ್ನ ಜೀವನದಿಂದ,,?????” ಹುಡುಗಿಯ ಮಾತಲ್ಲಿ ಬಯವಿತ್ತು… ಆತಂಕವಿತ್ತು…
ಹುಡುಗನ ಎದೆಯಲ್ಲಿ ಸಿಡಿಲು ಬಡಿದಿತ್ತು,,, ಫೋನ್ ಇಡಿದು ಹಾಗೆ ನೆಲಕ್ಕೆ ಕುಸಿದ… ಕಣ್ಣಲ್ಲಿ ನೀರಿಟ್ಟು…
ಪದಗಳು ಬಾಯಿಂದ ಹೊರಗೆ ಬರಲಿಲ್ಲ… ತಲೆ ಎತ್ತಿ ನೋಡಿದ,, ಮೇಲೆ ಸೂರ್ಯ ಕೆಂಪಗೆ ಹೊಳೆಯುತ್ತ ಅವನನ್ನು ಅಣಕಿಸಿ ನಕ್ಕಂತೆ ಕಾಣುತಿತ್ತು..
“ಇಲ್ಲ,,, ನಿನ್ನ ಮೇಲೆ ನಂಗೆ ಪ್ರೀತಿ ಹುಟ್ಟಿತ್ತು.. ಆದ್ರೆ ನೀ ಯಾವಾಗ ಬೇಡ ಅಂತ ಹೇಳಿದ್ಯೋ ಅವಾಗ್ಲೇ ನಾನು ಆ ಭಾವನೆಗಳನ್ನೆಲ್ಲ ಕೊಂದುಬಿಟ್ಟೆ ಅಷ್ಟೇ… ಇನ್ಯಾವತ್ತು ನಂಗೆ ಮುಖ ತೋರಿಸಬೇಡ.. ನೀನು ಈ ಥರ ಕೇಳ್ತಾ ಇರೋದನ್ನ ನೋಡ್ತಾ ಇದ್ರೆ ನಿನ್ ಮುಖ ನೋದೊಕು ನಂಗೆ ಅಸಹ್ಯ ಆಗುತ್ತೆ,,, ದಯವಿಟ್ಟು ನನ್ನ ಬದುಕಿಂದ ಹೊರಟು ಹೋಗು…
ನಾನು ನಿನ್ ಫ್ರೆಂಡ್ ಹತ್ರ ಎಲ್ಲ ಹೇಳಿದೀನಿ… ಕೇಳು ಹೋಗು… ನಿನ್ ಹತ್ರ ನಮ್ ಮನೆ ನಂಬರ್ ಇದೆ ,, ನಮ್ ಅಪ್ಪನ ನಂಬರ್ ಇದೆ,, ಅವರಿಗೆಲ್ಲ ಮಾಡಿ ನನ್ ಜೀವನ ಹಾಲು ಮಾಡಬೇಡ… ನನ್ನ ಮೇಲೆ ನಿನಗೆ ಅಷ್ಟು ಪ್ರೀತಿ ಇದ್ರೆ,, ನಾನು ಚನ್ನಾಗಿರ್ಲಿ ಅಂತ ಕಣ್ಣಿಗೆ ಕಾಣದಂತೆ ದೂರ ಉಳಿದುಬಿದು… ನಿನ್ನ ಕೈ ಮುಗಿದು ಬೇಡಿಕೊಳ್ತಾ ಇದೀನಿ,,,” ಹುಡುಗಿಯ ಧನಿಯಲ್ಲಿ ಒರಟುತನ ಆಗೇ ಇತ್ತು…
ಹುಡುಗ ಮಾತ್ರ ಮೌನಕ್ಕೆ ಶರಣಾಗಿದ್ದ… ಕಣ್ಣಲ್ಲಿ ನೀರು ಅವನಿಗೆ ಮಾತ್ರ ಕಾಣುತಿತ್ತು,, ಯಾಕೆ ಹೀಗಾಯ್ತು,,,??
ನಾನು ಏನು ತಪ್ಪು ಮಾಡಿದ್ದಿನೋ ಭಗವಂತ??? ಯಾಕೆ ಬಂದು ಹೋದಳು ನನ್ನ ಜೀವನಕ್ಕೆ ಇವಳು…???
ಮನಸ್ಸಲ್ಲೇ ಮಾತಾಡಿಕೊಂಡ ಹುಡುಗ…
“ನಿನಗೆ ನೆನಪಿದೆಯೆ ಹುಡುಗ… ಮಾಡುವೆ ಆದಮೇಲೆ ಕೂಡ ಮಾತಾಡು,,, ಅಂತ ನೀನು ಹೇಳಿದ್ಯಲ್ಲ,,, ನಾವು ಹಾಗೆ ಇರೋಕಾಗಲ್ವ???? ನಿನ್ನ್ನ ಮದುವೇಲಿ ನಾನೆ ನಿಂತು ಓಡಾಡ್ತ್ಹಿನಿ ಕಣೆ… ನಿನ್ನಿಂದ ನಾ ಬಯಸೋದು ಬರಿ ಮಾತು ಅಷ್ಟೇ… ಅದೊಂದನ್ನಾದ್ರು ಕೊಡ್ತಿಯ ನನಗೆ” ಹುಡುಗ ಕೇಳಿದ…
“ಈ ತರದ ಆಸೆಗಳನ್ನೆಲ್ಲ ಬಿಟ್ಟು ಬಿಡು…. ಇನ್ಮೇಲೆ ನಿನ್ನ ಮುಖಾನ ಯಾವತ್ತು ಕೂಡ ನನಗೆ ತೋರಿಸಬೇಡ,, ನನ್ ಪಾಡಿಗೆ ನನ್ನ ನೆಮ್ಮದಿಯಾಗಿರೋಕೆ ಬಿಟ್ಟು ಬಿಡು… ಇನ್ಮೇಲೆ ಕಾಲ್ ಮಾಡಬೇಡ… ಗುಡ್ ಬಾಯ್..” ಲೈನ್ ಕಟ್ಟಾಗಿತ್ತು, ಮತ್ತೆ ಡಯಲ್ ಮಾಡಿದ ಹುಡುಗ..”ಸ್ವಿಚ್ ಆಫ್..” ..
ರಸ್ತೆಯಲ್ಲಿ ಎದುರಿಗೆ ಬರುವವರಾರ ಅರಿವಿಲ್ಲ..
“ಒ ಪ್ರಿಯತಮೆ ಇದು ನ್ಯಾಯಾನ? ಎ ಹೃದಯಕೆ ಅನ್ಯಾಯಾನ??
ನಿನ್ನಿಂದ ತಾನೆ ನಾ ನನ್ನ ತಿಳಿದುಕೊಂಡೆ…
ಯಾರಿತ್ತ ಶಾಪ ನಾ ನಿನ್ನ ಕಳೆದುಕೊಂಡೆ….”
ಹಾಡನ್ನು ಗುನುಗುತ್ತಾ,,
ಕನ್ನಲ್ಲಿದ್ದ ನೀರನ್ನು ಒರೆಸಿಕೊಳ್ಳುತ್ತಾ ಹೊರಟ…
ಎದುರಿನಿಂದ ಬಂತು ಕಾರ್,, ಅಷ್ಟೇ,,, ಇನ್ನೇನು ಅಪ್ಪಳಿಸಬೇಕು…
ಹೇಗೋ ಬಚಾವಾಗಿಬಿಟ್ಟ…
“ಹೇಯ್.. ಗುಗ್ಗು,,, ಮನೇಲಿ ಹೇಳಿ ಬಂದಿದಿಯ???” ಕಾರ್ ಚಾಲಕ ಉಗಿದಿದ್ದ… ಅವನದು ಮಾತಿಲ್ಲ.. ಮೌನ..
ಆ ದಿನಗಳಲ್ಲಿ ಆತ ಪೂರ್ತಿ ಕಳೆದುಹೋಗಿದ್ದ,,, ಬದುಕು ಅವನನ್ನು ಬದಲಾಯಿಸಿಬಿಟ್ಟಿತ್ತು…
“ಯಾಕೋ.. ನೀನು ಶೇವ್ ಮಾಡಿಲ್ಲ… ತುಂಬಾ ಡಲ್ ಆಗಿದ್ದಿಯ??’ ಕೇಳಿದರು ಗೆಳೆಯರು…
ಇವನದು ಮಾತಿಲ್ಲ…
“ಅವಳು ಕಾರಣ ಹೇಳಿ ಹೋಗಿದ್ರೆ,,, ನನ್ನ ಪ್ರಾಣ ಬೇಕಿದ್ರು ಕೊಡ್ತಾ ಇದ್ದೆ… ಆದರೆ.. ಇಲ್ಲಿ…
ಮಾತಿಲ್ಲ… “ಹೇಳಿ ಹೋಗು ಕಾರಣ” ಅಂತ ಕೇಳಿದ್ರು ಅವಳು ಹೊರಟು ಹೋದಳಲ್ಲ…” ಅವನ ಮನಸ್ಸು ಹೀಗೆಯೇ ಸಾವಿರ.. ಸಾವಿರ ಪ್ರಶ್ನೆಗಳನ್ನು ಕೇಳಿಕೊಳ್ಳಲು ಆರಂಬಿಸಿತ್ತು…
ಆದರೆ ಅವುಗಳಿಗೆ ಅವನಲ್ಲಿ ಉತ್ತರ ಹೊಳೆಯುತ್ತಿರಲಿಲ್ಲ..
ಅವರು ಆ ಹುಡುಗಿಯ ಗೆಳತಿಯ ಅಮ್ಮ.. ತುಂಬಾ ದಿನಗಳಾಗಿತ್ತು ಹುಡುಗನ ಮುಖದಲ್ಲಿ ಕಳೆ ಇರಲಿಲ್ಲ…
“ಇಲ್ಲ ಅಮ್ಮ.. ನಂಗೆ ಬೇರೆ ಕಡೆ ಕೆಲಸ ಇತ್ತು… ಹಾಗಾಗಿ ಬರಲಿಲ್ಲ…” ಹುಡುಗ ಅಷ್ಟೇ ಉತ್ತರಿಸಿ ಸುಮ್ಮನಾದ..
“ಹುಡುಗ soft ware engnr ಅಂತೆ… ನನ್ನ ಮಗಳು ಹೇಳಿದ್ಲು… ಅವಳು ಕೂಡ ಹೋಗಿದ್ಲು..” ಹೋ.. ಹಾಗ ಅಮ್ಮ.. ನಾನು ಹೋಗೋಕೆ ಆಗ್ಲಿಲ್ಲ… ” ಹುಡುಗನ ಮುಖದಲ್ಲಿ ಗಲಿಬಿಲಿ ಇತ್ತು…
“ಎಲ್ಲಿ ಮದುವೆ..??? ಯಾವಾಗ ಅಂತೆ..” ಹುಡುಗ ಕೇಳಿದ…
“ಇನ್ನೊಂದು ಎರಡು ಮೂರೂ ತಿಂಗಳು ಇರಬಹುದು… ಚನ್ನಾಗಿ ಮಾಡ್ತಾರೆ ಬಿಡಪ್ಪ…” ನುಡಿದರು ಅವರು…
“ಹೋ.. ಹೇಗೋ… ಎಲ್ಲೋ ೧ ಕಡೆ ಚನ್ನಾಗಿದ್ರೆ ಅಷ್ಟೇ ಸರಿ ಅಲ್ವ ಅಮ್ಮ… ಬಿಡಿ,, ಹೇಗೋ,, ಎಲ್ಲ ಸರಿಯಾಗಿ ನಡೆದರೆ ಸರಿ… “ನುಡಿದಿದ್ದ ಹುಡುಗನ ಕಣ್ಣಲ್ಲಿ ನೀರಿತ್ತು.
“ಹು ಕಣಪ್ಪ… ಅವಳು ಚನ್ನಾಗಿರ್ಥಾಳೆ ಬಿಡು… ಯಾಕೆ ಅಂದ್ರೆ ಅವ್ಳು ಪ್ರೀತಿಸಿದ ಹುಡುಗನ್ನ ತಾನೆ ಮಾಡುವೆ ಆಗ್ತ ಇರೋದು…???”
“ಹಾಂ ??? ಪ್ರೀತಿಸಿದ ಹುಡುಗನ?? ಹುಡುಗನ ಮುಖದಲ್ಲಿ ಅಚ್ಚರಿ… ಆತಂಕ ಎಲ್ಲ ಎದ್ದು ಕಾಣುತಿತ್ತು… ಆದರೆ ಅವರಿಗೆ ಅದು ತಿಳಿಯಲಿಲ್ಲ
“ಅಮ್ಮ ಏನ್ ಹೇಳ್ತಾ ಇದ್ದೀರಾ ನೀವು?? ಪ್ರೀತಿಸಿದ ಹುಡುಗನಾ??? ಅವಳದು ಲವ್ ಮ್ಯಾರೆಜಾ?? ತಮಾಷೆ ಮಾಡ್ತಾ ಇದ್ದೀರಾ???” ಹುಡುಗನ ಮನದಲ್ಲಿದ್ದ ಎಲ್ಲ ಭಾವನೆಗಳು ಮುಖದಲ್ಲಿ ಎದ್ದು ಕಾಣುತಿತ್ತು…
“ಹು,, ಕಣಪ್ಪ… ನನ್ನ ಮಗಳೇ ಹೇಳಿದ್ಲು.. ಹುಡುಗನ್ನ ಅವಳೇ ಕರೆದು ಕೊಂಡು ಹೋಗಿ ಪರಿಚಯ ಮಾಡಿಕೊಟ್ಟು… ಆಮೇಲೆ ಎರಡು ಮನೆಯವರು ಒಪ್ಪಿ.. ಇವಾಗ ಮದುವೆ ಆಗ್ತಾ ಇರದು… ಯೀಕೆ ನಿನಗೆ ಗೊತ್ತಿಲ್ವ??? ನೀನು ಅಷ್ಟು ಒಳ್ಳೆ ಫ್ರೆಂಡ್ ಆಗಿದ್ದೆ ಅವಳಿಗೆ… ಅವಳು ಹೇಳಿರಲಿಲ್ವಾ??” ಅವರು ಕೇಳಿದರು…
“ಅದು… ಅದು…. ನಂಗೆ ಗೊತ್ತಿರಲಿಲ್ಲ ಅಮ್ಮ.. ನಂಗೆ ಇವಾಗ ತಾನೆ ಗೊತ್ತಾಗಿದ್ದು…”ತಡವರಿಸುತ್ತಾ ನುಡಿದ ಹುಡುಗ…
” ಸರಿನಪ್ಪ… ನಂಗೆ ಕೆಲಸ ಇದೆ.. ಬಾ ಅವಳ ಮದುವೇಲಿ ಸಿಗೋಣ.. ಅಲ್ಲಿ ನ್ಮಾಥಾಡೋಣ… ಸರಿನಾ??’ ನುಡಿದರು ಅವರು…
“ಆಯಿತು.. ಆಯ್ಥಮ್ಮ.. ಸಿಗ್ತ್ಹಿನಿ..” ಅಂತ ಅಲ್ಲಿಂದ ಹೊರತು ಬಿಟ್ಟ ಹುಡುಗ…
ಕಾಲೆಳೆಯುತ್ತಾ ಅಲ್ಲಿಂದ ಹೋರಾಟ ಹುಡುಗ ನೆರವಾಗಿ ಮನೆಗೆ ಬಂದ… ದಡದಡನೆ ಬಾಗಿಲು ತೆರೆದ…
“ನಂಗೆ ನಾನು ಪ್ರೀತಿಸೋರು ಯಾರು ಸಿಗೋಲ್ಲ ಕಣೋ… ನನ್ನ ಒಂದು ಆಸೆ ನಡೆಸಿ ಕೊಡ್ತ್ಹಿಯ????
ನನ್ ಜೊತೆ ಹೀಗೆ ಯಾವಾಗಲು ಮಾತಾಡ್ತಾ ಇರ್ತಿಯ?? ” ಮಾತುಗಳು ಎದೆಯಲ್ಲಿ ನೆನಪಾಗಿದ್ದವು…
“ದಯವಿಟ್ಟು ನಂಗೆ ನಿನ್ನ ಮುಖ ತೋರಿಸಬೇಡ.. ನಿನ್ ಕಂಡ್ರೆ ನಂಗೆ ಅಸಹ್ಯ ಆಗುತ್ತೆ… ದಯವಿಟ್ಟು ನನ್ ಜೀವನದಲ್ಲಿ ಯಾವತ್ತು ಬರ ಬೇಡ…” ಚುಚ್ಚುತ್ತಾ ಇದ್ದವು…
ಮಗ್ಗುಲು ಬದಲಿಸಿದ ಹುಡುಗ..” ನಾ ಯಾಕೆ ಹೀಗಾದೆ??” ಕೇಳಿಕೊಂಡ,,,
ಅವನಲ್ಲಿ ಉತ್ತರವಿರಲಿಲ್ಲ….
“ಪಟ್”ಎಟೊಂದು ಹಾಕಿಕೊಂಡ… ಸೊಳ್ಳೆಯೊಂದು.. ಸತ್ತು ಬಿದ್ದಿತ್ತು…
ಎಲ್ಲ ಮುಗೀತು ಅಂದ್ಕೊಂಡ…
“ನಾನು ಅವಳಿಗೆ ನೆನಪಾಗ್ತ್ಹಿನ…? ಅವಳ ಜೀವನದಲ್ಲಿ ಒಮ್ಮೆಯಾದರು ನನ್ನ ನೆನಪಿಸಿ ಕೊಳ್ಳುತ್ತಾಳ??
ತಪ್ಪಾಯ್ತು ಕಣೋ ಹುಡುಗ ಅಂತ ಒಮ್ಮೆಯಾದರು ಜೀವನದಲ್ಲಿ ಹೇಳಿ ಕೊಳ್ತಾಳ?? ಹೀಗೆ ಅವನಲ್ಲಿ ಪ್ರಶ್ನೆಗಳು ಕಾಡತೊದಗಿದ್ದವು…
ಅಷ್ಟೇ… ಹಚ್ಚಿಟ್ಟಿದ್ದ ದೀಪ ಹಾರಿ ಹೋಗಿತ್ತು…
ಅಲ್ಲಿ ಮನೆಯಲ್ಲಿ ಕತ್ತಲಿತ್ತು… ಮನದೊಳಗು ಕತ್ತಲು…
ಪ್ರಶ್ನೆಗಳು ಪ್ರಶ್ನೆಗಲಾಗೆ ಉಳಿದು ಬಿಟ್ಟಿದ್ದವು…
“ಇಲ್ಲ.. ಅವಳು ನನ್ನ ಯಾಕೆ ನೆನಪಿಸ್ಕೊಲ್ಲುತ್ತಾಳೆ??? ಸುಮ್ನಾಗಿ ಬಿಡೋಣ,,,,
ಹೀಗೆ ಹೇಳಿಕೊಂಡು ಮಗ್ಗುಲು ಬದಲಾಯಿಸಿದ ಹುಡುಗ,,,,
ಮದುವೆಗೆ ಬಟ್ಟೆ ತಗೊಳ್ಳೋಕೆ ಹೋಗಿರಬೇಕು ಇವಾಗ… ಮನದೊಳಗೆ ಈ ತರಹದ ಪ್ರಶ್ನೆ…
“ಚಿನ್ನು ನಿನ್ ಕಂಡ್ರೆ ನಂಗೆ ಇಷ್ಟ ಕಣೋ..” ಅನ್ನೋ ಮಾತು ನೆನಪಾಗಿತ್ತು,,,
ಅತ್ತ ಹುಡುಗ ನಿದ್ರೆ ಹೋಗಿದ್ದ,,,
mungaru maleya payana..Girsh Shetty
ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
“ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು, ಬರೆದು ಹೆಸರ ಕಾಮನಬಿಲ್ಲು…”, ಮೊಬೈಲಿಂದ ಮುಂಗಾರು ಮಳೆಯ ಶೀರ್ಷಿಕೆ ಗೀತೆ ಕೇಳುತಲಿದ್ದೆ. ಹಾಗೆ ಬಸ್ಸಿನ ಕಿಡಕಿಯನ್ನ ಸ್ವಲ್ಪ ಸರಿಸಿದೆ. ಹಿಂದಿನ ದಿನ ಬಿದ್ದ ಮಳೆಯಿಂದಾಗಿ ಬೆವರಿಳಿಯುವಷ್ಟು ಸೆಕೆ, ಒಡೋಡಿ ಬಂದು ಬಸ್ಸು ಹತ್ತಿದ ಕಾರಣ ಇನ್ನೂ ಜೋರಾಗೆ ಮೈ ಸುಡುತಿತ್ತು. ಹಾಡು ಕೇಳುತ್ತಾ ಮುಂಗಾರು ಮಳೆಯೊಳಗೆ ಹೊಕ್ಕಿದ್ದೆ.
“excuse me” ತುಸು ಜೋರಾಗೆ ಯಾರೊ ಕೂಗಿದ ಹಾಗೆ ಅನ್ನಿಸಿ ಕತ್ತು ತಿರುಗಿಸಿದರೆ, ಗಡಸು ಮುಖ ಮಾಡಿ ನಿಂತ ಹುಡುಗಿ!
“yes please” ಅಂದೆ. “ವಿಂಡೊ ಪಕ್ಕ ಇರೋ ಸೀಟು ನಂದು, ನೀವು ಈಚೆ ಕುಳಿತುಕೊಳ್ಳಬೇಕಾಗತ್ತೆ.”
ನಾನಂದೆ, “Sorry, I was just relaxing, you can sit here.” ಎದ್ದು ಪಕ್ಕದ ಸೀಟಿನಲ್ಲಿ ಕೂತೆ.
ಮತ್ತೆ ನನ್ನ ಮುಂಗಾರು ಮಳೆ ಹಾಡಿನ ಹುಚ್ಚು ಮುಂದುವರಿಯಿತು. ಕಿವಿಗೆ ಇಯರ್ ಫೋನ್ ಹಾಕಿ ಸೀಟಿಗೊರಗಿ ಕೂತೆ. ಹಾಡಿಗೆ ತಲೆ ಆಡಿಸುತಿದ್ದ ಹಾಗೆ ಒಮ್ಮೆಲೆ ಬಟ್ಟಲು ಕಣ್ಣುಗಳ ಹುಡುಗಿ ಕಾಣಿಸಿದಂತೆ! ಹೌದು, ನನ್ನ ಪಕ್ಕ ಕೂತ ಹುಡುಗಿಯೆ ಅವಳು, ಕತ್ತು ತಿರುಗಿಸಿ ಮತ್ತೆ ಅವಳ ಕಡೆ ನೋಡಲು ಮುಜುಗರವಾಯ್ತು. ಕೈಯಲ್ಲಿದ್ದ ಟಿಕೆಟ್ ಕೆಳಗೆ ಬೀಳಿಸಿ, ಟಿಕೆಟ್ ಎತ್ತಲು ಕೆಳಗೆ ಬಗ್ಗುವಾಗ ಅವಳತ್ತ ಕಣ್ಣ ನೋಟ ಹರಿಸಿದೆ. ದುಂಡನೆಯ ಮುಖದಲ್ಲಿ ಪೂರ್ಣ ಚಂದ್ರರಿಬ್ಬರು ವಿರಾಜಿಸುವಂತಿದ್ದವು ಆ ಎರಡು ಬಟ್ಟಲು ಕಣ್ಣುಗಳು. ಆಗಲೆ ಎರಡು ನಿಮಿಷಗಳು ಕಳೆದು ಹೋದವು ಎಂಬ ಅರಿವಾಗಿ, ಮತ್ತೆ ಸೀಟಿಗೊರಗಿ ಕೂತೆ.
ಸಹಜವಾಗಿ ಕುಳಿತುಕೊಳ್ಳುವುದು ತುಸು ಕಷ್ಟವೆ ಆಯ್ತು. ಮುಂದಿನ ಹತ್ತು ನಿಮಿಷದಲ್ಲಿ ಕಡಿಮೆಯೆಂದರೂ ೫ ಬಾರಿ ಅವಳ ಬಟ್ಟಲು ಕಣ್ಣುಗಳ ಕದ್ದು ಕದ್ದು ನೋಡಿದೆ, ಅವಳು ನನ್ನತ್ತ ಗಮನ ಹರಿಸಲಿಲ್ಲ ಎಂಬ ಧೈರ್ಯದಿಂದ. ಆಕೆಯ ಮಾತಾಡಿಸಬೇಕೆಂಬ ಒಣ ಆಸೆ, ಆದರೆ ಮನಸಲ್ಲಿ ಧೈರ್ಯದ ಕೊರತೆ. ವಿಪರ್ಯಾಸವೇನೆಂದರೆ, ಆಕೆ ನನ್ನತ್ತ ತಿರುಗಿ ನೋಡುವ ಪ್ರಯತ್ನ ಮಾಡಲಿಲ್ಲ! ಆಕೆಯನ್ನ ಕದ್ದು ನೊಡುವ ನನ್ನ ಪ್ರಯತ್ನ ಮುಂದುವರಿಯುತ್ತಲೇ ಇತ್ತು, ಹಾಗೆ ಕೊನೆಗೂ ಆಕೆ ನನ್ನತ್ತ ಒಮ್ಮೆ ನೋಟ ಬೀರಿದಳು. ಅಷ್ಟರಲ್ಲಿ ಆ ಬಟ್ಟಲು ಕಣ್ಣುಗಳಿಗೆ ನಾನು ಸೋತು ಹೋಗಿದ್ದೆ. ಪ್ರಯತ್ನಪೂರ್ವಕವಾಗಿ ಕಷ್ಟ ಪಟ್ಟು ನಕ್ಕೆ, ಅವಳ ನಗು ಸಿಗಬಹುದೆಂಬ ಮಹದಾಸೆಯಿಂದ. ನನ್ನ ಸ್ವರ್ಗದ ಬಾಗಿಲು ತೆರಿದಿರಬೇಕು, ತುಟಿ ಬಿಚ್ಚಿ ನನ್ನ ನಗುವ ಹಿಂದಿರುಗಿಸಿದಳು, ಸ್ವರ್ಗಕ್ಕೆ ಮೂರೇ ಗೇಣು!
ಅಲ್ಲಿಗೆ ಮತ್ತೆ ಹತ್ತು ನಿಮಿಷಗಳು ಕಳೆದವು, ತಿರುಗಿ ಆಕೆಯ ಕಡೆ ನೋಡಲು ಭಯ, ನನ್ನ ಬಗ್ಗೆ bad impression ಬಂದರೆ ಎಂದು ಆತಂಕ.
“ಅಮ್ಮಾ” ಎಂದು ಜೋರಾಗಿ ಕೂಗುತಿರುವ ಎಳೆ ಮಗುವೊಂದು ನನ್ನ ಆಲೋಚನೆಯ ಲಹರಿಗೆ ಬ್ರೇಕ್ ಹಾಕಿತು. ಮಗುವಿನ ತಾಯಿ ತನ್ನೊಂದಿಗಿರುವ ಬಟ್ಟೆಗಳ ಬ್ಯಾಗ್ ಮತ್ತು ಅಳುತಿರುವ ಮಗುವಿನ ಜೊತೆ ಸರ್ಕಸ್ ಮಾಡುತಿದ್ದರು. ಎದ್ದು ಆ ತಾಯಿಯ ಬ್ಯಾಗ್ ಎತ್ತಿ ಮೇಲೆ ಇಟ್ಟು ಮತ್ತೆ ನನ್ನ ಸೀಟಿಗೊರಗಿದೆ. ಮಗುವಿನ್ನು ಅಳು ನಿಲ್ಲಿಸಿರಲಿಲ್ಲ. ಅಳುವ ಮಗುವಿನೆಡೆ ನೋಡಿದೆ, ಮುದ್ದಾಗಿತ್ತು ಮಗು, ಆದರೂ ಬಟ್ಟಲು ಕಣ್ಣಿನ ಹುಡುಗಿಯಷ್ಟಲ್ಲ. ಮಗುವಿನತ್ತ ತಿರುಗಿ ಮಗುವ ನಗಿಸುವ ಪ್ರಯತ್ನ ಮಾಡುತಲಿದ್ದೆ. ನನ್ನ ಪ್ರಯತ್ನದ ಪರಿಣಾಮವೋ, ಇಲ್ಲ ಅತ್ತು ಅತ್ತು ಬೇಜಾರಾಗಿಯೋ, ಮಗು ಅಳು ನಿಲ್ಲಿಸಿ ನಗಲು ಶುರು ಮಾಡಿತು. ಮುಗ್ದತೆಯ ಪರಮಾವಧಿಯಂತಿರುವ ನಗು, ಎತ್ತಿ ಮುತ್ತಿಕ್ಕುವಾಸೆಯಾಯ್ತು. “ಬರ್ತೀಯ ಇಲ್ಲಿ” ಎಂದೆ. ತನ್ನೆರದು ಪುಟ್ಟ ಕೈಗಳನ್ನು ನನ್ನತ್ತ ಚಾಚಿತು. ಬಾಚಿ ನನ್ನತ್ತ ಸೆಳೆದು ತೊಡೆ ಮೇಲೆ ಕೂರಿಸಿಕೊಂಡೆ.
ಮತ್ತೆ ಮಗುವಿನ ಜೊತೆ ಹತ್ತು ನಿಮಿಷ ಕಳೆದು ಹೋಯಿತು. ಇಷ್ಟೆಲ್ಲ ವಿಧ್ಯಾಮಾನವನ್ನು ಕೂತಲ್ಲೆ ವೀಕ್ಷಿಸುತಿದ್ದಳು ಬಟ್ಟಲು ಕಣ್ಣಿನ ಹುಡುಗಿ. ಯಾವುದೇ ಉದ್ದೇಶ ಇಲ್ಲದೆ ಮಾಡಿದ್ದರೂ, ನನ್ನ ಬಗ್ಗೆ ಒಳ್ಳೆಯ ನಿಲುವು ಬಂದಿರಬೇಕು ಆಕೆಗೆ. ಆಕೆಯ ದುಪ್ಫಟ್ಟವ ಹಿಡಿದೆಳೆಯುತಿದ್ದ ಮಗುವಿಗೆ ಬಗ್ಗಿ ಒಂದು ಮುತ್ತಿಕ್ಕಳು. ನಿದ್ದೆಗೆ ಜಾರಿದ ಮಗುವನ್ನು, ತಾಯಿಯ ತೋಳಿನಲ್ಲಿಟ್ಟು ನನ್ನ ಸೀಟಿಗೆ ಹಿಂದಿರುಗಿದೆ.
“ಮಗು ತುಂಬ ಮುದ್ದಾಗಿದೆ ಅಲ್ವ?” ಆಕೆಯ ಪ್ರಶ್ನೆ. “ಹೌದು, ತುಂಬಾನೆ ಮುದ್ದಾಗಿದೆ” ನಾನಂದೆ.
“ಚಿಕ್ಕ ಮಕ್ಕಳು ಅಂದ್ರೆ ಇಷ್ಟನಾ ನಿಮಗೆ?”
“ಹೌದು, I just love kids”
ಇನ್ನೊಂದು ನಗುವ ಹಿಂದಿರುಗಿಸಿದಳು. ಮುಂದೆ ಹೇಗೆ ಮುಂದುವರಿಸುವುದು ಎಂದು ತಡವರಿಸಹತ್ತಿದೆ.
ಅವಳೇ ಹೇಳಿದಳು, “ಎಷ್ಟೊಂದು ಸೆಕೆ!”
“ವಿಪರಿತ ಸೆಕೆ ಇದೆ, ನಿನ್ನೆ ಮಳೆ ಬಂದ ಕಾರಣ ಇರಬೇಕು.” ಇಷ್ಟೊತ್ತಿಗೆ ತುಸು ಧೈರ್ಯ ಬಂದಿತ್ತು.
ಮುಂದುವರಿಸಿದೆ, “ಎಲ್ಲಿ ನಿಮ್ಮ ಊರು?”
“ಮೂಲ್ಕಿಯ ಪಕ್ಕ, ನಿಮ್ಮದು?”
“ಉಡುಪಿಯ ಪಕ್ಕ ಬರುತ್ತೆ”
ಅಲ್ಲಿಗೆ ನಮ್ಮ ಕಿರು ಸಂವಾದಕ್ಕೊಂದು ಕಿರು ಅಂತ್ಯ. ಮತ್ತೆ ಅವಳ ಲೋಕ ಅವಳಿಗೆ, ಆದರೆ ನನ್ನ ಲೋಕದ ತುಂಬ ಅವಳೇ!
ಆಕೆಯ ಕಣ್ಣುಗಳ ಕದ್ದು ನೋಡುವ ನನ್ನ ಪ್ರಯತ್ನ ಮತ್ತೆ ಮುಂದುವರಿಯಿತು. ಲೈಟ್ off ಮಾಡಿದ ಬಸ್ಸಿನ ಕ್ಲೀನರ್ ಹುಡುಗನಿಗೆ ಮನಸ್ಸಲ್ಲೇ ಶಾಪ ಹಾಕಿಕೊಂಡು ಸೀಟಿಗೊರಗಿ ಬರದ ನಿದ್ದೆಯ ಬಾ ಎಂದು ಪ್ರಾಥಿಸುತ್ತಾ ಕಣ್ಣು ಮುಚ್ಚಿದೆ. ತುಂಬ ತಡವಾಗಿ ಬಂದ ನಿದ್ದೆ ತುಂಬಾ ಅವಳೇ ತುಂಬಿದ್ದಳು.
ಉದಯ ನೇಸರನ ಕಿರಣ ಕಣ್ಣ ಸೋಕಿದಾಗ ನಿದ್ದೆಯಿಂದ ಎಚ್ಚೆತ್ತೆ. ಪಕ್ಕದಲ್ಲಿ ಅವಳಿನ್ನು ನಿದ್ದೆಯಲ್ಲಿದ್ದಳು. ತೆರೆದ ಕಿಟಕಿಯ ನುಸುಳಿ ಬಂದ ಸೂರ್ಯನ
ಕಿರಣ ಆಕೆಯ ಕೆನ್ನೆಗೆ ಮುತ್ತಿಕ್ಕುವುದರ ಜೊತೆ, ಅವಳ ಕಣ್ಣ ರೆಪ್ಪೆ ಮೇಲೆ ಬೀಳುತಿತ್ತು. ಸೂರ್ಯನ ಮೇಲೊಂದಿಷ್ಟು ಕೋಪ, ಅಸೂಯೆ ಬಂದು, ಕಿಟಕಿಗೆ ಹಾಕಿದ ಪರದೆಯ ಸರಿಸಿ, ಆಕೆಯ ಮೇಲೆ ಬೆಳಕು ಬೀಳದಂತೆ ಮಾಡಿದೆ. ಅವಳ ತುಟಿ ಮೇಲೊಂದು ಕಿರು ನಗೆ, ಕಣ್ಣ ತೆರೆದು ನನ್ನತ್ತ ಕಿರು ನಕ್ಕಳು. ಆಕೆಯ ನಗೆಯ ಹಿಂದಿರುಗಿಸಿದೆ.
“ನಿದ್ದೆ ಬಂದಿರಲಿಲ್ಲ, ಹಾಗೆ ಕಣ್ಣು ಮುಚ್ಚಿದ್ದೆ, Thanks for moving the curtain”
“ಸೂರ್ಯನ ಮೇಲೆ ಹೊಟ್ಟೆಕಿಚ್ಚಾಯ್ತು, ಅದಕ್ಕೆ ಸರಿಸಿದೆ”, ನನಗರಿವಿಲ್ಲದೆ ಉತ್ತರಿಸಿದೆ!
“What!?”
“just kidding, ನಿದ್ದೆ ಹಾಳಗತ್ತೆ ಅಂತ ಅಷ್ಟೆ”
ಅಕೆಯದು ಮತ್ತೊಂದು ನಗು, ನನ್ನ ನೋಟ ಅವಳ ಬಟ್ಟಲು ಕಣ್ಣ ಮೇಲಷ್ಟೆ.
“ಯಾಕೆ ನನ್ನ ಕದ್ದು ಕದ್ದು ನೊಡ್ತಾ ಇರೋದು ನೀವು?, ನಿನ್ನೆಯಿಂದ ನೊಡ್ತಾ ಇದ್ದೀನಿ”
ನಿರೀಕ್ಷೆ ಮಾಡದ ಪ್ರಶ್ನೆ! “ಸುಲಭದ ಪ್ರಶ್ನೆ, ಆದರೆ ಉತ್ತರ ತುಂಬಾನೆ ಕಷ್ಟ”
“ಇರಲಿ, ಏನು ನಿಮ್ಮ ಹೆಸರು?”
“ತೇಜಸ್, ನಿಮ್ಮದು?”
“ನವಮಿ”
“ಮುದ್ದಾಗಿದೆ ಹೆಸರು, ನಿಮ್ಮ ಬಟ್ಟಲು ಕಣ್ಣಿನ ಹಾಗೆ”
“ಬಟ್ಟಲು ಕಣ್ಣು!, ಎನದು?”
“ನಿಮ್ಮ ಕಣ್ಣಿಗೆ ನಾನಿಟ್ಟ ಹೋಲಿಕೆ, ತುಂಬು ಕಣ್ಣುಗಳು, ತುಂಬಾನೆ ಚೆನ್ನಾಗಿವೆ”
“Interesting and thank you”
ಮುಂದುವರಿಸಿದಳು, “ಕದ್ದು ನೋಡಬೇಕಾಗಿಲ್ಲ, ಹಾಗೆನೇ ನೋಡಿ”
“ಕದ್ದು ನೊಡುವುದರಲ್ಲಿ ತುಂಬಾ ಸುಖವಿದೆ”
“ನಾನು ಕದ್ದು ನೋಡಬಹುದೇನೊ?” ಸ್ವಗತವೆಂಬಂತಿತ್ತು ಅವಳ ಮಾತು.
“ಉಹೂ, ಮುಜುಗರವಾಗತ್ತೆ ನನಗೆ”
“ನನಗೂ ಆಗಬಹುದಲ್ಲ..”
“ಕಷ್ಟ ಆದರೆ ನೋಡಲ್ಲ ಬಿಡಿ”
“ಅಷ್ಟೊಂದು ಇಷ್ಟ ಆದ್ರೆ ನೋಡಿ, ಪರವಾಗಿಲ್ಲ”
ಅದೇನೋ ತ್ರಪ್ತಿಯ ನಗು ನನಗೆ.
ಮತ್ತೆ ಮೌನ, ಹತ್ತು ನಿಮಿಷ ಕಳೆದಿರಬಹುದು.
“ನಾನು ಮುಂದಿನ stopನಲ್ಲಿ ಇಳಿತಿದೀನಿ”
ಮೌನವೇ ನನ್ನ ಉತ್ತರ, ಅದೇ ವಾಕ್ಯ ಇನ್ನೊಮ್ಮೆ ಉಸುರಿದಳು.
ಮತ್ತೆ ನೀರವ ಮೌನ, ನನ್ನ ನೋಟ ದೂರ ದಿಗಂತದತ್ತ ನೆಟ್ಟಿತ್ತು.
ದೇಹದಲ್ಲಿರುವ ಶಕ್ತಿಯ ಒಗ್ಗೂಡಿಸಿ ಕೇಳಿದೆ, “ನಿಮ್ಮ ಮೊಬೈಲ್ ನಂಬರ್ ಕೊಡ್ತೀರ?”
ನನ್ನ ನೋಟ ಇನ್ನೂ ಆಕೆಯ ಕಡೆ ತಿರುಗಿರಲಿಲ್ಲ. ಆಕೆಯತ್ತ ತಿರುಗಿ, ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ, ಕಷ್ಟ ಅನ್ನಿಸ
ಸುಮ್ಮನಾದೆ. ಒಂದು ನಿಮಿಷದ ಧೀರ್ಘ ಯೋಚನೆಯ ನಂತರ, ಆಕೆಯಿಂದ ಉತ್ತರ ಬಂತು!
“I want to be very honest with you! ನಾಳೆ ನನ್ನ engagement program ಇದೆ, ನಮ್ಮ ಮನೆಯಲ್ಲಿ.”
ಮನದಾಳದಿಂದ ಅರಿವಾಗದಂತ ಹೊಸ ನೋವಿನ ಉಧ್ಬವ ನನಗೆ.
ಬಟ್ಟಲು ಕಣ್ಣಿನ ಹುಡುಗಿ ಮುಂದುವರಿಸಿದಳು, “ನಿಮ್ಮ ಮೊಬೈಲ್ ನಂಬರ್ ತಗೋಬೇಕು, ನನ್ನ ನಂಬರ್ ಕೊಡಬೇಕು ಅಂತ ನಂಗೂ ಅನಿಸುತ್ತಿದೆ, ಆದರೆ ಮುಂದೆ ಏನು ಅನ್ನುವ ಪ್ರಶ್ನೆ ಕಾಡುತಿದೆ. ನಮ್ಮ ಈ ಚಿಕ್ಕ ಮುಖಮುಖಿಯಲ್ಲಿ ನಿಮ್ಮ ಪ್ರತಿಯೊಂದು ಭಾವನೆ, ಕ್ರೀಯೆ, ಪ್ರತಿಕ್ರೀಯೆ ನನಗಿಷ್ಟವಾಯ್ತು. ನಿಮ್ಮೊಂದಿಗೆ ಇದ್ದಷ್ಟು ನಾನು ನಿಮಗೆ ಸೋಲುವೆನೇನೊ ಎಂಬ ಭಯ. ನನ್ನ ತಂದೆ-ತಾಯಿ, ನನ್ನ ಮದುವೆ ಆಗುವ ಹುಡುಗನ, ನಾಳೆಯ ನನ್ನ ಬದುಕಿನ ನಿರೀಕ್ಷೆಗಳನ್ನೆಲ್ಲ ಕೆಡಿಸುವೆನೇನೋ ಎಂಬ ಆತಂಕ”
ಒಂದು ಪೇಲವ ನಗೆಯ ಹೊರತು ಬೇರೆ ಪ್ರತಿಕ್ರೀಯೆ ನನ್ನಲ್ಲಿರಲಿಲ್ಲ. ತಲೆ ತಗ್ಗಿಸಿ ಕೂತೆ, ಸೋತು ಬಿದ್ದ ಯುದ್ದ ಕೈದಿಯಂತೆ.
“ಬದುಕಿನ ಪಯಣದಲ್ಲಿ ದೊರೆತ ಮಧುರ ಕ್ಷಣದ ಹರಿಕಾರ ನೀವು, ಮರೆಯಲಾರದ ಹುಡುಗ, ಮರೆಯಲಾರೆ ಕೂಡ, ನಾನಿನ್ನು ಇಲ್ಲೇ ಇಳಿಬೇಕು.”
ಎದ್ದು ನಿಂತು ಅವಳ ಬ್ಯಾಗ್ ಎತ್ತಿ ಹೊರ ನಡೆದಳಾಕೆ, ಹೋಗೊ ಮೊದಲೊಂದು ಕೊನೆಯ ನೋಟ.
ಬಸ್ಸು ನಿಂತು, ಅವಳು ಇಳಿದಿದ್ದು ಅಯ್ತು, ನನ್ನ ಯೋಚನೆಯ ಲಹರಿ ಇನ್ನೂ ನಿಂತಿಲ್ಲ!
ಬಸ್ಸು ಮತ್ತೆ ಹೊರಟಿತು, ಕೊನೆಯೇ ಇಲ್ಲದ ರಹದಾರಿಯ ಕೊನೆ ನೋಡುವ ಛಲದಿಂದ, ತನಗೂ, ಈ ಮನುಷ್ಯರಿಗೂ ಯಾವ ಸಂಭಂದವಿಲ್ಲವೆಂಬಂತೆ.
ಕಿಟಕಿಯ ಪರದೆ ಸರಿಸಿ, ಕತ್ತನ್ನು ಹೊರ ಹಾಕಿ, ಆಕೆ ಹೋದತ್ತ ನೋಡಿದೆ, ನನ್ನತ್ತ ತಿರುಗಿ ನೋಡಿ, ಮತ್ತೆ ತನ್ನ ದಾರಿಯ ಅನುಸರಿಸದಳಾಕೆ.
ಬಟ್ಟಲು ಕಣ್ಣುಗಳ ಮತ್ತೆ ನೋಡುವ ಆಸೆಯಾಗಿ ಮತ್ತೆ ಮತ್ತೆ ಆಕೆಯ ದಾರಿಯತ್ತ ನೋಡುತಿದ್ದೆ.
“ತಿರುಗಿ ಒಮ್ಮೆ ನೋಡು ನನ್ನ, ಹಾಗೆ ಸುಮ್ಮನೆ” ಮನಸ್ಸಿಂದ ಹೊರಬಿತ್ತು ಭಾವನೆ ಹಾಡಾಗಿ, ನನಗರಿವಿಲ್ಲದೆ.
Girish Shetty
avaligaagi mattu O!gelathi..Dheerendra Nagarahalli
Kannadigare nimma anisikagallannu tilisi about Dheerendra Nagarahalli
ಅವಳಿಗಾಗಿ….?
ಇದು ನಿನ್ನ ತುಟಿಯ ಮೇಲೆ ಚಿಮ್ಮುತ್ತಿರುವ ಹತ್ತಾರು ಪ್ರೆಶ್ನೆಗಳಿಗೆ ಉತ್ತರ!
ಇದು ಅವಳ ಆ ದ್ರೋಹದ ಧಗೆಗೆ ತುಂತುರು!
ಹೊಸಕಿ ಹೋದ ಕನಸುಗಳ ಹೊಸ ಹಾದಿ!
ಹೌದು! ಕಡಳಷ್ಟು ಪ್ರೇಮದ,ಸಣ್ಣ ದ್ರೋಹದ ಅದದೇ ಕಥೆ!
ಇದು ನನ್ನ ಹೊಸ ಕವನ ಸಂಕಲನ!
“ಚೈತ್ರಗಳ ಸೋಲು….!” ಗಳಿಗಿಂತ ಭಿನ್ನ.
ಇದು ಹನಿ ಹನಿ ಕವನ ಗಳ ಗುಚ್ಛ!
…..ಬೇರೆಯಾರಿಗೂ ಅಲ್ಲ!
ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ!
ಓ! ಗೆಳತಿ!
ಗೆಳಯರೇ ,”ಆವಳಿಗಾಗಿಯೇ …!” ಗುಚ್ಛ ದಿಂದ
ಸಣ್ಣ ಪಕಳೆ ಜಾರಿ ಬಿದ್ದಿದೆ ಓದಿ!
ಎದೆ ಭಾರ ವಾದರೆ? ನನ್ನ ದೂರದಿರಿ!ಓ! ಗೆಳತಿ!
———
ಓ! ಗೆಳತಿಯೇ,
ನನ್ನೆದೆಯನ್ನು ಒದ್ದೋಡುವ,
ಇರಾದೆ ಇದ್ದಿದ್ದೇ ಆಗಿದ್ದರೆ,
ಒಂದು ಕಣ್ಸನ್ನೆ ಸಾಕಿತ್ತು!
ಈ ಹೃದಯವನ್ನೆ ಹಾಸಿರುತಿದ್ದೆ,
ನಿನ್ನ ಪಾದದಡಿಗೆ!
ಕಡೆಯಾದೆ…?
ಕೈಗೆ ಸಿಗದಂತೆ ಏರಿದಳು…!ಎತ್ತರದಲಿ ನಿಂತ ಮೇಲೆ……ಮುಂದೇನಾಯಿತು…?
ಓದಿ…!
ಅದು ನಿಮ್ಮದೇ ಒಂದು ಅಂಗ ಕತ್ತರಿಸಿ ತೆಗೆದಂತೆ ಅನ್ನಿಸಿದರೆ,ಹಿಂಸೆಯಾದರೆ,
…ನೂಂದು ಕೊಳ್ಳಬೇಡಿ!ಕಡೆಯಾದೆ…?
———
ಅವಳೇರುವ ಎತ್ತರಕ್ಕೆ,
ಏಣಿಯಾದೆ!
ಎತ್ತರದಲಿ ನಿಂತಮೇಲೆ,
ನಾ ಬೇಡವಾದೆ!
ಕಾಲ ಧೂಳಿಗಿಂತಲೂ,
ಕಡೆಯಾದೆ!
ಮಡಿಲು..!
ಅದರೂ ಪ್ರೀತಿಯ ಅಮೃತ ನೀಡಿದ್ದು ಸುಳ್ಳೆ?ಅವಳ ಸಾಮಿಪ್ಯವೇ
ಸ್ವರ್ಗ!ಹೊಸ ಹಾದಿ ಹಾಡು ,ಓದಿ!ಹೊಟ್ಟೆ ಕಿಚ್ಚು ಯಾದೀತು!ಮಡಿಲು..!
ನಿನ್ನ ಮೆದು ಮಡಿಲಲಿ,
ಮಲಗಿರಲು ಕನಸುಗಳು ಬಗೆ ಬಗೆ!
ಬದುಕೆಲ್ಲವೂ ಬಣ್ಣ ಬಣ್ಣ!
ಮನಸಿನ ಹಾಡೆಲ್ಲವೂ ನಿನದೆ ರಾಗ!
ನನಗೇನ್ನೇನು ಬೇಕು?
ಸೋಲು…!
ಅವಳ ಸಿಹಿ ಮಾತು ಮುಂದೊಮ್ಮೆ ಬಾಳಿನ ಹಾಲಹಲ.
ಹೌದು! ನಮ್ಮದಲ್ಲದ ಪ್ರೀತಿಯನ್ನು ದಕ್ಕಿಸಿ ಕೊಂಡಾಗ,
ಅದು ಗೆಲುವೆಂದು ಅಂದುಕೊಳ್ಳುತ್ತೇವೆ.ನಿಜವಾದ ಅರ್ಥ ದಲ್ಲಿ ಅದು ಗೆಲುವಲ್ಲ!
ನಮ್ಮದೆಲ್ಲರ ಸೋಲಿನ ಆರಂಭ ಮತ್ತು ನಮ್ಮೆಲ್ಲರ ಅಂತ್ಯ ದ ಆರಂಭ.
ಗೆಳೆಯರೇ ಒಂದು ಸಣ್ಣ ಎಚ್ಚರಿಕೆ:
ಮುಗುಳು ನಗೆಗೆ ಜಾರಿ ಬಿದ್ದೆ.
ಸಿಹಿ ಮಾತಿಗೆ ಸೋತು ಗೆದ್ದೆ..!
ಅವಳು ಸಿಗಲಾರದೆ…,
ಇನ್ನೆಂದು ಪ್ರೀತಿ ಎನ್ನದ ಹಾಗೆ,
ಮನಸೆ ಮುರಿದು ಕೊಂಡು ಅಂಗಾತ ಮಲಗಿದ್ದೆ!
ನಾ ಮಲಗಿ ಮಲಗಿ ಸೊರಗಿದ್ದೆ!
ನೆನಪು…..?
ಅದು ‘ಆವಳ’ ನೆನಪು ಮಧುರವೇ ಸೈ!
ನೆನೆದಾಗಲೊಮ್ಮೆ ರೋಮಾಂಚನ!ಅದೇ ನೆನಪು-ಅವಳ ಆ ‘ದ್ರೋಹ’ ದ ಹಿಂದೆ ಬಂದರೇ:
ಮುಗಿಯಿತು! ಅದು ‘ಧಗ್ಗ್’ಎನ್ನುವ ಸಮಯ.ಅದು ಜೀವಗಳು ಹೊತ್ತಿ ಉರಿಯುವ ಕ್ಷಣ. ಅಲ್ಲಿ ಒಂದು ಸುಳ್ಳು,ಮುರಿದ ಮಾತು,ಕಹಿಯಾದ ಹಿಂದಿನ ಕಥೆ,ಯಾವುದೂ ನೆನಪಿಗೆ ಬರಲ್ಲ.ಅಲ್ಲಿ ಉಳಿದಿರುವುದು ಬದಿಗಿಟ್ಟ ಬದುಕು.ಹೌದು! ಅಲ್ಲಿ ಬೇರೆ ಏನು ಕಾಣಲ್ಲ ಆ ‘ದ್ರೋಹ’ದ ವಿನಃ.
ನನಗೊಬ್ಬನಿಗೆ ಅವಳ ನೆನಪು ಏಕೆ ಕಾಡಬೇಕು?ಅವಳಿಗೂ ನನ್ನ ನೆನಪು ಕಾಡಬೇಕು ಅದು ಅವಳು ಸತ್ತು ಹೋಗುವಷ್ಟು!”ಅವಳಿಗೆ…,ನನ್ನ ನೆನಪಾಗಲ್ಲ ಏಕೆ?”
ನೆನಪು…..?
‘ನೆನಪೇ ‘- ನನ್ನನೊಂದೇ? ಹೀಗೆ ಕಾಡದಿರು,
ನಗುವಾಗಿ,ಬೆಳಗಾಗಿ,ಬೈಗಾಗಿ….,
ಮನಸಾಗಿ,ಕನಸಾಗಿ!ಅಷ್ಟಿಷ್ಟು.
ಈ ಪ್ರೀತಿ ನನ್ನೊಬ್ಬನದಲ್ಲ.
ಅವಳನ್ನೂ ಕಾಡು!
ಅವಳು ಸತ್ತು ಹೋಗುವಷ್ಟು!
ನನ್ನನ್ನು ಮರೆಯದೇ ಇರುವಷ್ಟು.
ದ್ರೋಹ!
ಪ್ರತಿ ಸಾರಿ ಯೂ ಹುಡುಗಿಯರೇ ಏಕೆ ಡಿಚ್ ಮಾಡ್ತಾರೆ,
ಹುಡುಗರೇ ಏಕೆ ಡಿಚ್ ಮಾಡಿಸಿ ಕೊಳ್ತಾರೆ?”ದ್ರೋಹ!
———–
ದ್ರೋಹವೆಂದರೆನೆಂದು ನಿನ್ನಿಂದಲೇ
ಕಲಿಯಬೇಕು!
ದಶಕಗಳ ದ್ವೇಷವೆಂಬಂತೆ ಒಂದು
ಸಣ್ಣ ಸುಳ್ಳು ಹೇಳಿಬಿಟ್ಟೆ!
ಪ್ರೀತಿಸಿಯೂ ಪ್ರೀತಿಸಿಲ್ಲ ವೆಂದು ಬಿಟ್ಟೆ.
ನನ್ನದೊಂದು ಮಾತಿತ್ತು ಅದ ಮುಗಿಸುವ ಮೊದಲೇ,
ಅಲ್ಲಿಂದ ಹೊರಟು ಬಿಟ್ಟೆ!
ಉರಿಯುತಿದೆ ಜೀವ …!
ನೀನು ತುಂಬ ಜಾಣೆ ಇದ್ದ ಒಂದೇ ಒಂದು ಪ್ಯಾರಚುಟ್ ನ್ನು ನಿನ್ನ ಬೆನ್ನಿಗೆ ಕಟ್ಟಿ ಕೊಂಡು
ನೀ ಬಚಾವದೇ.ಉರಿಯುವ ಏರೋಪ್ಲೇನ್ ನಿಂದ ನಾನು ಹ್ಯಾಗೋ ಬಚವಾದೆ.ಆ ಮಾತು ಬೇರೆ!
ಆದರೇ ಈಗ ನನ್ನ ಮನವೇ ಹೊತ್ತಿ ಉರಿತಾ ಇದೆ!ಅದು ಧಗ ಧಗಿಸಿ ಉರಿಯಲು ನೀನಲ್ಲದೆ ಮತ್ತಿನ್ಯಾರು ಕಾರಣ!”….ಅದು ಬದುಕು ಉರಿಯುವ ಪರ್ವ ಕಾಲ….”
ಉರಿಯುತಿದೆ ಜೀವ …
ಧಗ ಧಗನೇ…!
ನುಂಗಿ ಒಳಒಳಗೆ ನೋವ.
ಹೇಳಲು ಆಗದು
ನುಂಗಲು ಬಾರದು ಈ ನೋವ
ಇದು ನೋವಲ್ಲ ನಿಗಿ ನಿಗಿ ಕೆಂಡದ ‘ಲಾವ’!
ಆ ಯಮಹ ದ ಗುಟುರು ನನ್ನನ್ನ ಮೊದಮೊದಲು ಬೆಚ್ಚಿ ಬೀಳಿಸ್ತಾ ಇತ್ತು!
ನಂತರ ಕಾಲೇಜಿನಲ್ಲಿಅವನ್ನ ನೋಡಿದ ಮೇಲೆ ಅನ್ನಿಸಿತ್ತು…ಅವನ ಆ ಯಮಹ ದ
ಗುಟುರು ಕೇವಲ ನನಗಾಗಿ ಯೇ ಎಂದು.ಮುಂದಿನ ದಿನಗಳಲ್ಲಿ ಅದೆ ಗುಟುರುಗಾಗಿ ನಾನು ಕಾದು
ಕುಳಿತಿರ್ತಾ ಇದ್ದೆ.ಮುಂದೆ ಅದೆ ಕಣ್ಣಾಗಿ,ಸ್ನೇಹವಾಗಿ …….ಪ್ರೇಮವೂ ಆಗಿ ಹೋಯ್ತು!”….ಅವನೂ ಯಮಹ ದ ರಣ ಗಾಂಭಿರ್ಯ ; ನಾನೋ ಫೋರ್ಡ್ ಐಕಾನ್ ನ ವಯ್ಯಾರ್….”
ಕಣ್ಣನು ನೋಡಿದೆ…,
ಮಾತನು ಆಡದೆ..,ಪ್ರೀತಿಯ ಮಾಡಿದೆ!
ಮನಸಿನ ಮಾತಿಗೆ ಕನಸಿನ ಕಥೆ ಗೆ,
ನಿನ್ನಯ ಹೆಸರ ನಾ ಬರೆದೆ!
ವೇಗವು ನೀನು ಆಮೆಯು ನಾನು,
ಅದರೂ ಪ್ರೀತಿ ಅಯಿತು ನೋಡು!
–ಅವಳು
ನೀನಿಲ್ಲದೆ!
ಕನಸಾಗದ ಕನಸಗಳು…
ಹಾಡಾಗದೆ ಉಳಿದ ಸ್ವರಗಳು..
ನೂರಿಹುವು,
ನೀನಿಲ್ಲದೆ!
ದಿನಗಳೆಲ್ಲವೂ ದಿನಗಳಲ್ಲಾ…!
ನಿದಿರೆಗಳೆಲ್ಲವೂ ಅರ್ದ ವಾಗೆಹೆವಲ್ಲ..!
ಬದುಕೆಲ್ಲಾ ಬದುಕಲ್ಲಾ!
ನೀನಿಲ್ಲದೆ
ಆ ಮೂಕ ಭೇಟಿ…!
ಗೆಳತಿ!
ನಿನೇ ಮುನಿದರೆ ಮಾತೆಲ್ಲಿಯದು
ನನಗೆ!
ಮಾತಿಲ್ಲದ ಆ ಮೂಕ ಭೇಟಿಗೆ
ಅರ್ಥವೆಲ್ಲಿಯದು?
ಇನ್ನೇನು ಬೇಕು?
ನನ್ನದೆ ಬಿಂಬ.
ನನ್ನ ಕನಸುಗಳ ಆ ಪಸೆಯಲಿ,
ನೀನೇ ನೀನು.
ನಮ್ಮಿಬ್ಬರ ಈ ‘ಪ್ರೀತಿ’ಗೆ
ಆ ‘ಚಡಪಡಿಕೆ’ಗೆ ಇನ್ನೇನು ಬೇಕು?ಧೀರೇಂದ್ರ ನಾಗರಹಳ್ಳಿ
ಮುಗಿಯದ ಮಾತು…!
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.
ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ ಮತ್ತೊಬ್ಬರ ತೆಕ್ಕೆಯಲಿ ಮಿಂದು.
VIJAY wrote about Dheerendra Nagarahalli
ಧೀರು ನಾಗರಹಳ್ಳಿ ಕನ್ನಡದ ಚಿಂಥನಾಶೀಲ ಸಾಹಿತ್ಯದ ಅಭಿರುಚಿ ಮತ್ತು ಕೆಚ್ಚನ್ನ ತೀವ್ರವಾಗಿ ಹಚ್ಚಿಕೊಂಡ ಬಿಸಿರಕ್ತದ ಯುವ ಬರಹಗಾರ. ಮೊನ್ನೆ ಮೊನ್ನೆ ಮೊದಲ ಸಲ ಅವರು ನಮ್ಮ ಮನೆಗೆ ಭೆಟ್ಟಿ ನೀದಿದ್ದರು .
21 ಡಿಸೆಂಬರ್ ಬೆಳಿಗ್ಗೆ ೧೦ ರ ಆಸುಪಾಸು.. ಮನೆಯಿಂದ ತುಸು ದೂರದಿಂದ ಬರಮಾಡಿಕೊಂಡಾಗಿನಿಂದ
ಅವರಲ್ಲಿ ಆತ್ಮವಿಶ್ವಾಸ, ಪ್ರೌಢತೆಯ ಕಳೆಯೊಂದಿಗಿನ ನಗುಮೊಗದ ವಿನಯತೆ ಎದ್ದು ಕಾಣುತಿತ್ತು.
ಚೊಚ್ಚಲ ಕವನ ಸಂಕಲನ “ಚೈತ್ರಗಳ ಸೋಲು” ವಿನ ನಂತರ, ತಾವು ಬರೆಯಲಿರುವ ಮುಂದಿನ ಪುಸ್ತಕದ ಬಗ್ಗೆ ಹೇಳುತ್ತಿದ್ದರು. ಅದರ ಶೀರ್ಷಿಕೆ ” ಭೂಮಿಗೆ ಈಗ ಮಿಥುನದ ಸಮಯ..”..ಹಾಂ..ಹಾಗೆ ಹೇಳುವಾಗ ಜತೆಯಲ್ಲೇ, ಅವರ ಭಾವ ಕೂಡ ಇದ್ದರು. ಜತೆಗೆ ನಾನು ಮತ್ತೆ ನನ್ನ ಗೆಳೆಯ. ಯಾವುದೇ ಬಗೆಯ ನಿರ್ವಿಕಾರತೆಯೂ ಅಲ್ಲಿ ಸುಳಿದಿರಲಿಲ್ಲ.
ಇದೆ ಜನವರಿ ೨೭ ಕ್ಕೆ ನಡೆವ ತಮ್ಮ ವಿವಾಹ ಹಾಗೂ ಉತ್ತಮ ಅಭಿರುಚಿಯ ಜೀವನ ಸಂಗಾತಿಯ ಬಗೆಗೂ ಉತ್ಸಾಹದಿಂದ ಹೇಳುತಿದ್ದರು.. ಅನೇಕ ಕೆಲಸಗಳ ಒತ್ತಡದ ನಡುವೆ , ತಮ್ಮ ಕಿರು ಅವಧಿಯನ್ನು ಈ ಓದುಗ ಗೆಳೆಯನಿಗಾಗೆ ಮೀಸಲಿಟ್ಟಿದ್ದರು… ಹಾಂ.. ಅಂದಿನ ಮುಂಜಾವಿಗಂತು ಬಿಸಿಲಾಗುವ ತೀವ್ರ ತವಕ. ಕನ್ನಡದ ಮೇರು ಲೇಖಕರ ಬಗ್ಗೆ ಧೀರು ಅವರಿಂದ ಹೆಚ್ಚಿನ ಮಾಹಿತಿ ಕೇಳುವ ಬಗ್ಗೆ ನನ್ನಲ್ಲಿ ಇದ್ದದ್ದು ಅಷ್ಟೆ ತವಕ, ಕೂತೂಹಲ !…. ಅವರ ನೆಚ್ಚಿನ ಲಂಕೇಶರ ಬಗ್ಗೆ ತುಸುವಾಗೆ ಹೇಳಿದರು..
ತುರ್ತು ಕಾರ್ಯದ ನಿಮಿತ್ತ, ಬಹು ಬೇಗನೆ ಅವರನ್ನು ಬೀಳ್ಕೊಡುವ ಸಮಯ ಬಂದಾಗ…ನನಗೂ, ನನ್ನ ಸ್ನೇಹಿತಂಗೂ ಅರೆ ಮನಸು…
ನಮ್ಮ ಮನೆ ಬಿಟ್ಟು ಹೊರತು ಹೋದ ಬಳಿಕ…ನಮ್ಮನ್ನು ಕಾಡಿದ್ದು..ಅವರು ಕೊಟ್ಟು ಹೋದ ಪುಸ್ತಕ.. ಬಹುತೇಕರಿಗೆ ಗೊತ್ತಿರದ, ದೈತ್ಯ ಪ್ರತಿಭೆಯ, ಅಸಾಮಾನ್ಯ ಕಥೆಗಾರ ರಾಘವೇಂದ್ರ ಖಾಸನೀಸ್ ಅವರ ಕನ್ನಡದ ಅದ್ಭುತ ಕತೆಗಳ ಗುಚ್ಚ ಅದು… ಅಲ್ಲಿವರೆಗೆ, ಓ ಹೆನ್ರಿ ಥರದ ಕಥೆಗಳು ಯಾಕಿರಲ್ಲ ಕನ್ನಡದಲ್ಲಿ ಅನ್ನೋನಿಗೆ, ಧೀರು ಆ ಪುಸ್ತಕ ಕೊಟ್ಟು ಸತ್ಯ ದರ್ಶನ ಮಾಡಿಸಿದರು…
ಹೊಂಗಿರಣದಂಥ ಕನಸುಗಳುಳ್ಳ, ಅಪಾರ ಕಡಲ ನಟ್ಟ ನಡುವೆ ಒಂಟಿ ದೀಪದ ನಿಲುವುಳ್ಳ, ಬಳ್ಳಾರಿಯ ಚುರುಕು ಬಿಸಿಲಿನ, ಮಾಗಿಯ ಚಳಿಯ ಒಲವುಳ್ಳ ಗೆಳೆಯನ ಪ್ರತಿ ಕನಸುಗಳೂ ರೆಕ್ಕೆ ಬಲಿತು ಬಲಿತು ಮೇಲ ಮೇಲಕೆ ಹಾರುತಿರಲಿ ಎಂದು ಹಾಡಿ ಕೂಗುತಿದೆ ನನ್ನ ಚಿಕ್ಕ ಚೊಕ್ಕ ಮನಸ ಕಹಳೆ..
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS