Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ

ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾ
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದಾ ವರದಿಗಾರನು
ನಿನ್ನ ಕಂಡ ಕ್ಷಣದಲ್ಲೆ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೆ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣ ತೆರೆದು ದೋಚಿಕೊಂಡ ನಾ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ..

January 16, 2008 Posted by | EKAVI Group | Leave a comment

ಏನೋ ಒ೦ಥರಾ ಏನೋ ಒ೦ಥರಾ ಈ ಪ್ರೀತಿಯು

ಏನೋ ಒ೦ಥರಾ ಏನೋ ಒ೦ಥರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನನಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥಾ ಈ ದಿನ ಇ೦ಥಾ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಬಾಳಲ್ಲಿ
ಏನೋ ಒ೦ಥರಾ ಏನೋ ಒ೦ಥರಾ ಈ ಪ್ರೀತಿಯು
ಈ ರೀತಿಯು ಶುರುವಾದ ಆನ೦ತರ
ನಿನ ನೆನಪಲೆ ಮೈಮರೆಯುವೆ ಅದು ಎಲ್ಲಿಯೆ ನಾನಿದ್ದರೂ
ನಿನ್ನ ಹೆಸರನೆ ನಾ ಬರೆಯುವೆ ಅದು ಏನನ್ನೆ ನಾ ಬರೆಯ ಹೋದರೂ
ಕಳವಳ… ತಳಮಳ…
ನೀ ದೂರಾ ಹೋದಾ ಕ್ಷಣ ನಾನಿಲ್ಲ ಆ ತಕ್ಷಣ ನಿನದೇನೆ ಈ ಜೀವನ
ಏನೋ ಒ೦ಥರಾ ಏನೋ ಒ೦ಥರಾ ಈ ಪ್ರೀತಿಯು
ಈ ರೀತಿಯು ಶುರುವಾದ ಆನ೦ತರ
ಮು೦ಜಾನೆಯೊ ಮುಸ್ಸ೦ಜೆಯೊ ನೀನಿದ್ದಾಗ ಆನ೦ದವೋ
ಮಾತಾಗಲಿ ಹಾಡಾಗಲಿ ನಿನ್ನ ದನಿಯಿ೦ದ ಎಲ್ಲಾನು ಚ೦ದವು
ಸುಮಧುರ… ಸಡಗರ…
ಜೊತೆಯಾಗಿ ನೀನಿದ್ದರೆ ಬದುಕಾಗಿ ನೀ ಬ೦ದರೆ ಭುವಿಯೆ ಆ ಸ್ವರ್ಗವು
ಏನೋ ಒ೦ಥರಾ ಏನೋ ಒ೦ಥರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನ೦ತರ
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನನಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥಾ ಈ ದಿನ ಇ೦ಥಾ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಈ ಬಾಳಲ್ಲಿ
ಏನೋ ಒ೦ಥರಾ ಏನೋ ಒ೦ಥರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನ

January 12, 2008 Posted by | EKAVI Group | 1 Comment

ಸುವರ್ಣ ಕರ್ನಾಟಕದ ಸುವರ್ಣ ಸಂಭ್ರಮ

karunadu.jpg

ಸುವರ್ಣ ಕರ್ನಾಟಕವಿದು ಸುಂದರವು

ಸುರನದಿ, ಸರೋವರ, ಗಿರಿ ಕಂದರವು

ಸುರಮ್ಯ ಝರಿ, ಜಲಪಾತ ಬೆಳಕಿನ ಸಿರಿಯು

ಸುಮಲತೆ ಸಂಪಿಗೆ, ಕೋಗಿಲೆ ಗಾನವು

ವರನಟ ರಾಜಣ್ಣನ ಗಂಧದ ಗುಡಿಯು

ವರದಾಚಾರ್ಯರು ಗರ್ಜನೆಗೈದ ರಂಗವು

ವಚನ ಶ್ರೇಷ್ಟರು ಅಲ್ಲಮ ಬಸವ ಶರಣರು

ವನರಾಜಿ, ಮಲೆಕಾನು ಹಸುರು ಜೀವದುಸಿರು

ವರ್ಣ ಮಾಲೆಯ ಸುಂದರ ಅಕ್ಷರ ಸಂಪದವು

ಸ್ವರ್ಣ ಸಂಭ್ರಮದ ಹೆಮ್ಮೆಯ ಏಕೀಕರಣವು

ಕರ್ಣ, ಭೀಮ, ಪಾಂಡವರ ಪಂಪ ಭಾರತವು

ಸ್ವರ್ಣ, ರತ್ನ, ಖನಿಜದೊಡತಿ ಕನ್ನಡತಿಯು

ಕನಕ ಪುರಂದರ ಯೋಗಿವರ್ಯರ ದಿವ್ಯಧಾಮವು

ಕನ್ನಡ ಹುಡಿಗಣ ಶಿಶುನಾಳ ತತ್ವಪದವು

ಕನ್ನಡ ಕಸ್ತೂರಿಯು, ಸಿರಿಗಂಧದ ಘಮಘಮವು

ಕನ್ನಡ ನಾಡಿದು ವಿಜಯನಗರ ವೈಭವ ನೆಲೆಯು

ಕರ್ನಾಟಕವಿದು ಕಿತ್ತೂರು ಚೆನ್ನಮ್ಮನ ವೀರನಾಡು

ಕರ್ನಾಟಕವಿದು ರಣಕಲಿಗಳ ಕೆಚ್ಚೆದೆಯ ನಾಡಿದು

ಕರ್ನಾಟಕವಿದು ಕಲೆಯನಾಡು, ಬೇಲೂರು ಹಳೇಬೀಡು

ಕರ್ನಾಟಕವಿದು ಋಷಿಗಳ ತೊಓದಾಮವು

ನಾಟಕ ಶಿರೋಮಣಿಗಳ ರಂಗಸ್ಥಳವಿದು

ನೀನಾಸಂ, ಗುಬ್ಬಿ ನಾಟಕ ಕಾರ್ಯ ಕ್ಷೇತ್ರವು

ನಟ, ನಿರ್ದೇಶಕರ ಪ್ರಯೋಗ ಶಾಲೆಯಿದು

ನಾಟ್ಯ, ಸಂಗೀತ, ಯಕ್ಷಗಾನ, ಜನಪದ ನಾಕವು

ಕವಿ ಕುವೆಂಪುಗೆ ಸ್ಫೂರ್ತಿಯ ಸೆಲೆಯಿದು

ಕವಿ ಬೇಂದ್ರೆಯ ಸಾಧನ ಕೇರಿಯ ಸನ್ನಿಧಿಯು

ಕಣವಿ, ನಿಸಾರರ ನಿಸರ್ಗ ಪ್ರೇಮ ನಿಧಿಯು

ಕನ್ನಡ ಜನತೆ ಸಂಭ್ರಮಿಸುವ ಶುಭದಿನವಿದು

December 31, 2007 Posted by | EKAVI Group | Leave a comment

ಅಮ್ಮಾ

2.jpg

ನಿನ್ನ ಕಣ್ಣೋಟದಲಿ ಜಗಜಗಗಳುರುಳುತಿವೆ

 ಉಸಿರಲಾಡುತ್ತಲಿದೆ ಕಾಲ ಮೃತ್ಯು

ತೆರೆದ ಬಾಯಲಿ ಸೂಸುತಿಹುದು ಜ್ವಾಲಾಮುಖಿಯು

ಬಿಗಿದ ಬೃಕುಟಿಯಲಗ್ನಿ ಸೇವಾಬೃತ್ಯು

ಕೆದರಿದಾ ಕೂದಲಲಿ ಗಾಳಿಗೇ ತೆರೆತೆರೆಯಾಟ

ಹೋಲುತಿದೆ ಆಷಾಢ ಮೇಘಮಾಲೆ

                   ನೀನಾರೋ ನಾನರಿಯೆ

                  ಯಾರು ನೀ ಸಬಲೆ?

‘ಕಾಳಿ’ ಎನ್ನುವರೇನು? ಕಪ್ಪಲ್ಲ ನಿನ್ನ ಬಣ್ಣ

             ಅಚ್ಚ ಕರ್ಪೂರದಾ ಕಾಂತಿ ದೇಹ

‘ಕಾಲನೋಡತೀ ನಾನು’ ಎನುವೆ ನಿಜವಹುದೇನು?

              ನಿನ್ನ ಕಣ್ಣಲಿ ಇಹುದು ಸ್ನೇಹದಾ ದಾಹ

‘ಲಯಕರ್ತೆ ಎನ್ನುವೆಯೇನು’ ಅವಳಲ್ಲ ನಾ ಬಲ್ಲೆ

              ಪ್ರೇಮದೊಡಲಲಿ ಮೈದೋರಿ ನಿಂತಿರುವೆ

ಏನೆಂದು ಕರೆಯೆ ನಾ ……

ಓ ಗೊಡುವೆ ಸಬಲೆ

                 ಓಡೋಡಿ ಬಂದೆನ್ನ

                 ತೆಕ್ಕೈಸಿ ಮುದ್ದಿಡುವೆ

ಬಾ ………… ಕಂದಾ ……..

ಕೂಗಿದೆಯಾ?

ನನ್ನೆಡೆಗೆ ನೋಡುವೆಯಾ?

ನಿಜವರಿತೆನಮ್ಮ

ನಿನ್ನೆದೆಯಲುಕ್ಕುತಿದೆ ಮಾತೃಪ್ರೇಮಾ ….

ನೀ ನನ್ನ ಅಮ್ಮಾ……….

ಅಮ್ಮಾ ….. ನನ್ನಮ್ಮಾ …….

 

December 22, 2007 Posted by | EKAVI Group | Leave a comment

ಜಾತಿ

images7.jpg

ಅಂದಿನಿಂದ ಇಂದಿನವರೆಗೂ
ಮುಂದೆ ಎಂದೆಂದಿಗೂ ಇದು ಒಂದು


ಬಿಡಿಸಲಾರದ ಒಗಟು
ಒಂದು ಎರಡು ನಾಲ್ಕು
ನೂರು ಸಾವಿರ ಕೋಟಿ
ಒಂದೊಂದೂ ಬೇರೆ ಬೇರೆ

ಆದರೂ ಎಲ್ಲಾ ಒಂದೇ
ಒಂದೊಂದಕ್ಕೂ ಉತ್ತರ ದಕ್ಷಿಣ ಧ್ರುವಗಳ ಅಂತರ
ಪರಸ್ಪರ ದ್ವೇಷ- ರೋಷ ನಿರಂತರ
ಏಕೆ ಈ ವೈಪರೀತ್ಯ ಈ ಭೇದ

ಎಂದು ಇದಕ್ಕೆ ಕೊನೆ
ಎಂತು ಇದಕ್ಕೆ ಮುಕ್ತಿ?ಬಹುದು ವಿರಕ್ತಿ?
ಇದೊಂದು ಜಾಡ್ಯ
ಔಷಧಿ ಮಾಡಿದಷ್ಟೂ ಉಲ್ಬಣ ಗೊಳ್ಳುವ ಅಂಟುಜಾಡ್ಯ

ಭೀಕರ ಸಾಂಕ್ರಾಮಿಕ ರೋಗ
ಎಲ್ಲೆಲ್ಲು ಹರಡುವುದು ಸರಾಗ
ಇದು ದಿನದಿಂದ ದಿನಕ್ಕೆ ಕಾಲದಿಂದ ಕಾಲಕ್ಕೆ
ಬಣ್ಣ ಬದಲಾಯಿಸುವ ಓತಿ

ರೆಂಬೆಯಿಂದ ರೆಂಬೆಗೆ ಮರದಿಂದ ಮರಕ್ಕೆ
ಮೇಲಿಂದ ಕೆಳಕ್ಕೆ ಕೆಳಗಿಂದ ಮೇಲಕ್ಕೆ
ಹಾರುವ ಕೋತಿ
ಎಂದಿಗೂ ಇದು ತನ್ನ ಹುಟ್ಟುಗುಣ ಬಿಡದು

ಬೀಜ ಒಂದೆ ಹೂವು ಹಣ್ಣು ಹಲವು
ಪರಿಮಳ ದುರ್ವಾಸನೆ ಸಿಹಿ- ಕಹಿ
ಕೆಲವೊಮ್ಮೆ ಪ್ರೀತಿ ಭಯ ಭೀತಿ
ಕೆಲವರ ಬಾಳಿಗೆ ಪೂರಕ ಕ್ರಾಂತಿಕಾರಕ

ಸ್ನೇಹಕ್ಕೆ ಮಾರಕ ಗಲಭೆಗೆ ಪ್ರೇರಕ
ನಾಯಿ ನಾಯನ್ನು ಕಂಡಂತೆ ಕವಿ ಕವಿಯನ್ನು ಕಂಡಂತೆ
ಒಂದಕೆ ಇನ್ನೊಂದು ಎಣ್ಣೆ ಸೀಗೆ
ಕಪ್ಪು ಬಿಳಿ ಬೂದು ಕೆಂಪು

ಎಷ್ಟೊಂದು ವರ್ಣ ವೈವಿಧ್ಯ
ಆದರೂ ಎಲ್ಲರ ಮೈಯ ರಕ್ತದ ಬಣ್ಣ ಒಂದೆ ಕೆಂಪು
ಒಂದು ಎರಡು ನಾಲ್ಕು ನೂರಾರು ಮತ್ತೆ ಸಾವಿರಾರು
ಏಕತ್ವದಿಂದ ಬಹುತ್ವ ಎಲ್ಲ ಕಲಸು ಮೇಲೋಗರ

                                                                         ಡಾ. ಶ್ರೀಕೃಷ್ಣ ಭಟ್

December 21, 2007 Posted by | EKAVI Group | Leave a comment

ನಾವು ಕೂಲಿಯವರು

images6.jpg

ನಾವು,
ಬಳಲಿ ಬೆಂಡಾದವರು ಬೆವರು ನೀರ
ಸುರಿಸಿ ಎದೆಗೂಡನುಬ್ಬಿಸಿ
ಮೂಳೆ ಮುರಿತದ ಹೊತ್ತಲೂ ಸತ್ತು ಬೇಸತ್ತ
ನಾವು ಕೂಲಿಯವರು || 1 ||

ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ
ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು
ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ
ನಾವು ಕೂಲಿಯವರು || 2 ||

ಬದುಕು-ಬವಣೆಯ ನಡುವೆ
ಹರಿದ-ಕರಿದ ಬೆಂದ ರೊಟ್ಟಿ
ಗಳ ಒಳಗೆ ರಕ್ತ ಮಡುಗಟ್ಟಿ
ಎದೆಗುಂದದೆ ಈಸಿ ಜೈಸುವ
ನಾವು ಕೂಲಿಯವರು || 3 ||

ಬಂದು ಕೊಂದು ತಿಂದ ಜನರೆಡೆಯಲಿ
ರಕ್ತದೋಕುಳಿಯ ಮಾಸದಾ ಹೆಜ್ಜೆಯದು
ನಾತ ಬೀರುವ ಕೊಳೆತ ಅಸ್ಥಿಮಜ್ಜೆ
ಯೆಡೆಯಲ್ಲಿ ಹಗಲಿರುಳೆನ್ನದೆ ದುಡಿವ
ನಾವು ಕೂಲಿಯವರು || 4 ||

ಹಬ್ಬ ದಿಬ್ಬಣದಿ ಹಿಟ್ಟಿರದ ಬರಿ ಹೊಟ್ಟೆ
ಮುರುಕಲು ಗುಡಿಸಲ ಹಳೆ ಮಂಚದಲಿ
ಗೆದ್ದಲು ಕೆಡವಿ ಬಣ್ಣ ತೊಯ್ದ ಉಡುಬಟ್ಟೆ
ಆದರೂ ಗಟ್ಟಿಯಿದೆ ನಮ್ಮ ರಟ್ಟೆ
ನಾವು ಕೂಲಿಯವರು || 5 ||

ಕನಸುಗಳ ಹೆಣೆಯುವೆವು ಆ
ಒಣದೇಹದ ಬತ್ತಿದಾ ಹೃದಯದಲಿ
ನಭವ ಚುಂಬಿಸಿ, ತಾರೆಗೀಳಲು ಸದಾ
ಬಯಸುವೆವು ಮೇಲೆ ಬರಲೆಂದೂ
ನಾವು ಕೂಲಿಯವರು || 6||

ಏಳ ಬಯಸುವೆವು ಶಿರವೆತ್ತಿ ದೊಡ್ಡ ಪಾದ
ಗಳ ದಮನ ತುಳಿತಗಳಡಿಯಿಂದ
ರವಿ ರಶ್ಮಿಯ ಮುಂದೆ ದೀವಟಿಗೆ ಹಿಡಿದು
ಚಂದಿರನ ಮಡಿಲಲ್ಲಿ ಜೋ ಹಾಡಲಿರುವ
ನಾವು ಕೂಲಿಯವರು || 7||

ನಾವು ಅಳುವುದಿಲ್ಲ ಅತ್ತಿಲ್ಲ
ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು?
ರಕ್ತ ಹಿಂಡಿದರೆ ರಕ್ತವೂ ಖಾಲಿ
ಜೀವನದ ಗೋಳೇ ನಮ್ಮ ಈದ್, ಹೋಳಿ !
ನಾವು ಕೂಲಿಯವರು || 8 ||

ಎಂದೆನಿತು ಬಾಯ್ತೆರೆದರೆ, ಪ್ರತಿದನಿ ಇಲ್ಲ
ಹಣತೆ ಬೆಳಕ ಹೊರ ಸೂಸುವುದೂ ಇಲ್ಲ
ಕಣ್ತೆರೆದ ಜನರಾವರಿಸಿದೆ ದರ್ಪದಾ ಪೊರೆ
ಭೋರ್ಗರೆವ ದುಃಖದಲ್ಲಡಗಿದೆ ನಮ್ಮ ಕರೆ
ಇದೇನು ಮಹಾ?
ಕಿಂಡಿಗಳು ಮುಚ್ಚಿವೆಯಲ್ಲಾ!!!! || 9 ||

|| 1 ||

ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ
ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು
ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ
ನಾವು ಕೂಲಿಯವರು || 2 ||

ಬದುಕು-ಬವಣೆಯ ನಡುವೆ
ಹರಿದ-ಕರಿದ ಬೆಂದ ರೊಟ್ಟಿ
ಗಳ ಒಳಗೆ ರಕ್ತ ಮಡುಗಟ್ಟಿ
ಎದೆಗುಂದದೆ ಈಸಿ ಜೈಸುವ
ನಾವು ಕೂಲಿಯವರು || 3 ||

ಬಂದು ಕೊಂದು ತಿಂದ ಜನರೆಡೆಯಲಿ
ರಕ್ತದೋಕುಳಿಯ ಮಾಸದಾ ಹೆಜ್ಜೆಯದು
ನಾತ ಬೀರುವ ಕೊಳೆತ ಅಸ್ಥಿಮಜ್ಜೆ
ಯೆಡೆಯಲ್ಲಿ ಹಗಲಿರುಳೆನ್ನದೆ ದುಡಿವ
ನಾವು ಕೂಲಿಯವರು || 4 ||

ಹಬ್ಬ ದಿಬ್ಬಣದಿ ಹಿಟ್ಟಿರದ ಬರಿ ಹೊಟ್ಟೆ
ಮುರುಕಲು ಗುಡಿಸಲ ಹಳೆ ಮಂಚದಲಿ
ಗೆದ್ದಲು ಕೆಡವಿ ಬಣ್ಣ ತೊಯ್ದ ಉಡುಬಟ್ಟೆ
ಆದರೂ ಗಟ್ಟಿಯಿದೆ ನಮ್ಮ ರಟ್ಟೆ
ನಾವು ಕೂಲಿಯವರು || 5 ||

ಕನಸುಗಳ ಹೆಣೆಯುವೆವು ಆ
ಒಣದೇಹದ ಬತ್ತಿದಾ ಹೃದಯದಲಿ
ನಭವ ಚುಂಬಿಸಿ, ತಾರೆಗೀಳಲು ಸದಾ
ಬಯಸುವೆವು ಮೇಲೆ ಬರಲೆಂದೂ
ನಾವು ಕೂಲಿಯವರು || 6||

ಏಳ ಬಯಸುವೆವು ಶಿರವೆತ್ತಿ ದೊಡ್ಡ ಪಾದ
ಗಳ ದಮನ ತುಳಿತಗಳಡಿಯಿಂದ
ರವಿ ರಶ್ಮಿಯ ಮುಂದೆ ದೀವಟಿಗೆ ಹಿಡಿದು
ಚಂದಿರನ ಮಡಿಲಲ್ಲಿ ಜೋ ಹಾಡಲಿರುವ
ನಾವು ಕೂಲಿಯವರು || 7||

ನಾವು ಅಳುವುದಿಲ್ಲ ಅತ್ತಿಲ್ಲ
ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು?
ರಕ್ತ ಹಿಂಡಿದರೆ ರಕ್ತವೂ ಖಾಲಿ
ಜೀವನದ ಗೋಳೇ ನಮ್ಮ ಈದ್, ಹೋಳಿ !
ನಾವು ಕೂಲಿಯವರು || 8 ||

ಎಂದೆನಿತು ಬಾಯ್ತೆರೆದರೆ, ಪ್ರತಿದನಿ ಇಲ್ಲ
ಹಣತೆ ಬೆಳಕ ಹೊರ ಸೂಸುವುದೂ ಇಲ್ಲ
ಕಣ್ತೆರೆದ ಜನರಾವರಿಸಿದೆ ದರ್ಪದಾ ಪೊರೆ
ಭೋರ್ಗರೆವ ದುಃಖದಲ್ಲಡಗಿದೆ ನಮ್ಮ ಕರೆ
ಇದೇನು ಮಹಾ?
ಕಿಂಡಿಗಳು ಮುಚ್ಚಿವೆಯಲ್ಲಾ!!!! || 9 ||

December 20, 2007 Posted by | EKAVI Group | Leave a comment

ಕವಿ(ತಾ)ತೆಗೆ

l.jpg

 ಅನಿಸಿಕೆಗಳು ಸಾವಿರಾರು

ನುಡಿಯಲು ಸಹಸ್ರಾರು

ತಿಳಿಸಲು ನಾ ನಿನ್ನ

ಕಾಯುತಲಿರುವೆ ಬಹು ಸಮಯದಿ

ಕಳೆಯುತಲಿರುವೆ

ದಿನಗಳ ಎನ್ನ

             ಸಾಧ್ಯವಿಲ್ಲದೆ ಇರಲು

             ನೋಡದೆ ನಿನ್ನ

             ಬರುತಲಿರುವೆ ಮುನ್ನ

              ತೋಚದೆ ನುಡಿಯಲು

              ಹಿಂತಿರುಗುತಲಿರುವೆನು ನಿನ್ನ

ಪ್ರೇಮದ ನಿನ್ನಯಾ ಕಣ್ಣುಗಳು

ನುಡಿಯುತಲಿರುವುದು ಎನ್ನಯಾ

ಮನದೊಳು

ಪ್ರೀತಿಸುವೆ ನಾ ನಿನ್ನ

ಬಯಸುವೆ ನೀ ಎನ್ನ

ನುಡಿಯಲಾರದ

ಭಾವನೆಗಳನು

ಹೇಳಲು ಬಹು ಚೆನ್ನ

                ನೀ ಧರಿಸಿದ ಚೂಡೀದಾರ

                ನನ್ನಯಾ ಮನಸಿಗೆ ಸುಮಧುರ

                ಮನಗಳ ಭಾವನೆಗಳನು

               ನೋಟಗಳಲಿ ಒಂದಾಗಿ

               ನುಡಿಯುತಲಿರುವುದು ನನ್ನಯಾ

               ಈ ………… ಕವಿ(ತಾ)ತೆಗೆ

ನೀ ನೀಡಿದ ಸ್ಫೂರ್ತಿಯೋ

ನಾ ಬರೆದ ಈ ಕವಿತೆಯೋ

ನೀ ನೋಡಿ (ನುಡಿ)ದರೂ

ನಾ ಧನ್ಯನಾದನು

       

December 18, 2007 Posted by | EKAVI Group | Leave a comment

ಮರಳಿ ಬಾ ಬಸವಣ್ಣ

3.jpg

ಜಗಜ್ಯೋತಿ ಬಸವಣ್ಣ

ಜಗಕ್ಕೆಲ್ಲ ನೀ ಅಣ್ಣ

ಮನುಕುಲವ ಉದ್ದರಿಸಲು

ಮತ್ತೆ ಬಾರಯ್ಯ ಈ ಧರೆಗೆ

                   ಶತಮಾನಗಳು ಕಳೆದರೂ

                   ಮತ ಭೇಧಗಳಳಿಯಲಿಲ್ಲ

                   ಮನದ ಕತ್ತಲನಳಿಸಲು

                   ಮತ್ತೆ ಬಾರಯ್ಯ ಈ ಧರೆಗೆ

ಧರ್ಮ-ಧರ್ಮಗಳ ತಿಕ್ಕಾಟ

ಮನುಜ ಕುಲದ ಕಾದಾಟ

ಸಮತೆ ಸಾರವ ತಿಳಿಸಲು

ಮತ್ತೆ ಬಾರಯ್ಯ ಈ ಧರೆಗೆ

                ಬೇಲು-ಕೀಳಿನ ಅರಿವು

                 ರಾಗ ದ್ವೇಷದ ಕಾವು

                 ವಚನ ಸಿಂಚನ ನೀಡಲು

                 ಮತ್ತೆ ಬಾರಯ್ಯ ಈ ಧರೆಗೆ

    

December 18, 2007 Posted by | EKAVI Group | Leave a comment

ಯುವ ಚೇತನ

13.jpg

ಉತ್ಸಾಹದ ಚಿಲಿಮೆಗಳೆ, ನವ ಚೇತನ ಯುವ ಜನರೆ

ಜಡತೆಯ ನೂಕೋಣ, ನಮ್ಮ ನಾಡನು ಕಟ್ಟೋಣ ││ಪ││

ಜಾತಿ ಮತದ ಕಲಹ, ನಮ್ಮಿಂದ ಇರಲಿ ದೂರ│

ಪ್ರಗತಿ ಪಥಕೆ ಮುಳ್ಳು, ಎಂದೆಂದಿಗೂ ಈ ಸಮರ││

ಬೆವರಿನ ಬೆಲೆ ಅರಿಯೆ, ದುಡಿಯಿರಿ ಮನಸಾರ│

ಹರಿಸಿರಿ ಈ ನೆಲದಿ, ಸಂತೃಪ್ತಿಯ ಮಹಾಪೂರ││೧││

ನಡೆಯಲಿ ಹೋರಾಟ, ಅಜ್ಞನವ ತೊಲಗಿಸಲು

ಮೂಡಲಿ ಎಲ್ಲೆಡೆಯು ವಿಜ್ಞನದ ಹೊಂಬಿಸಿಲು││

ಈ ಮಣ್ಣಿನ ಕಣಕಣದೀ, ನಿಮ್ಮಯ ಒಲವಿರಲು│

ವಿಶ್ವದೊಳ್ಯಾರಿಹರು ನಮಗೊಡ್ಡಲು ಸವಾಲು ││೨││

December 18, 2007 Posted by | EKAVI Group | Leave a comment

ಪ್ರಪಂಚ

images5.jpg

ಮನುಜ ಕೋಟಿ ಹುಟ್ಟಿಬಂದ

ನೆಲೆಯನೊಂದು ಅರಿಯಬಲ್ಲಿರಾ?

ಅರಿತು ಅರ್ಥ ಮಾಡಿಕೊಂಡು

ಬಾಳ ನೌಕೆಯಲ್ಲಿ ಬಾಳ ಬಲ್ಲಿರಾ

ಇರುವುದೊಂದು ಮನುಜ ಕೋಟಿ│

ಹರಿವುದೊಂದು ಮನುಜರಕ್ತ│

ಸತ್ಯ ಧರ್ಮ ನ್ಯಾಯ ನಿಷ್ಟೆ ಬಾಳಿನಲ್ಲಿ ಅರಗಲಿ│

ಬಾಳ ಸಂತೆಯಲ್ಲಿ ಬದುಕಿಬಾಳ ಜೈಸಲಿ│

ನಾನು ಎಂಬ ಅಹಂಕಾರದಿಂದ

ಬೀಗುತಿರಲು ಭಯಂಕರ│

ನಿನ್ನೆ ಹುಟ್ಟಿ ಇಂದು ಬೆಳೆದು ನಾಳೆ ಸಾಯೋ

ಮನುಜಗೆ ಬೇಡ ಬೇಡ ದುರಂಕಾರ│

ಆಸೆಗೆಲ್ಲಿ ಮಿತಿ ಇದೆ ಅಂತ್ಯವಿಲ್ಲ ಜಗದಲಿ │

ಹುಟ್ಟಿದವರು ಸಾಯಬೇಕು ಸತ್ತು ಸ್ವರ್ಗ ಸೇರಬೇಕು│

ಪ್ರಾಣಿಪಕ್ಷಿ ಹಾರುತಿರಲು ಇಲ್ಲ ಶೂನ್ಯ ಜಗದಲಿ │

ಸತ್ಯವೆಂಬ ಸುಳಿವು ಸಾಯುತಿರಲು │

ಹಿಂಸೆಯೊಂದು ಬಾಳಿನಲ್ಲಿ ಬೆರೆಯುತಿರಲು│

ಸುಳಿವಿನಲ್ಲಿ ಮನುಜ ಬೆಂದು ಬಾಡುತಿರಲು│

ಕಾಲ ಚಕ್ರ ಉರುಳುತಿರಲು│

ತೀಕ್ಷ್ಣವಾಗಿ ಅರಿಯುತಿರಲು │

ಮನುಜ ಧ್ವಂಸ ಸತ್ಯವೇ?

December 18, 2007 Posted by | EKAVI Group | Leave a comment