ekavi CHAMARAJANAGARA meeting,Jan-24-2009 at GUNDLUPETE Taluk
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ
ಕನ್ನಡವೇ ಜಾತಿ ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL – EKAVI
ಈಕವಿ ಸಭೆ ವರದಿ:
ಗುಂಡ್ಲುಪೇಟೆಯಲ್ಲಿ ದಿನಾಂಕ ೨೪/೦೧/೨೦೦೯ ಶನಿವಾರದಂದು ಸುಮಾರು ಬೆಳಗ್ಗೆ ೧೧:೩೦ಕೆ, ಈಕವಿ ಚಾಮರಾಜನಗರ ಜಿಲ್ಲೆಯ ಮೊದಲನೆ ಸಭೆಯ ಈಕವಿ ಗುಂಡ್ಲುಪೇಟೆ ಯ ಮೊದಲ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಒಟ್ಟು ೧೫ ಜನ ಭಾಗವಹಿಸಿದ್ದರು. ಕರ್ನಾಟಕ, ಕನ್ನಡ ಭಾಷೆಯ ಇಂದಿನ ಪರಿಸ್ಥಿತಿ ಮತ್ತು ಈಕವಿ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದೆವು.
ಈಕವಿ ಸ್ಥಾಪಕ ಅಧ್ಯಕ್ಷ್ಯ ಕುಮಾರಸ್ವಾಮಿ ಯವರು ಅಮೇರಿಕಾ ಇಂದ ಸಭೆ ಗೆ ಕರೆದು ಈಕವಿ ಬಗ್ಗೆ ಎಲ್ಲರಿಗು ತಿಳಿಸಿದರು. ಅವರು ಎಲ್ಲರ ಜೊತೆಯಲ್ಲಿ ಮಾತನಾಡಿ ಈಕವಿ ಸೇರಿಕೊಂಡು ಬಾಗವಹಿಸಿ ಅಂಥ ಹೇಳಿದರು.
ಆನಂತರ ಈಕವಿಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ೨ ಗುಂಪನ್ನಾಗಿ ಮಾಡಿಕೊಂಡೆವು.
೧) ಹಿರಿಯರ ಗುಂಪು: ಇದರ ಕಾರ್ಯ ಸಾಹಿತ್ಯ ಅಭಿವೃದ್ಧಿ ಹಾಗು ಹಿರಿಯ ನಾಗರೀಕರಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದು.
೨) ಕಿರಿಯರ ಗುಂಪು:- ಈಕವಿಯ ಮತ್ತಿತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವುದು.
ಈ ಕಾರಣಕ್ಕಾಗಿ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ಸಲಹೆಗಾರರುಗಳು:
೧) ಜವರೇ ಗೌಡರು
೨) ದೊಡ್ಡಯ್ಯ
೩) ಗು.ಚಿ.ರಮೇಶ್
ಹಿರಿಯರ ಸಂಘ:
೧) ಅಧ್ಯಕ್ಷರು:- ನಾಗಭೂಷಣ ಬಸವಪುರ
೨) ಕಾರ್ಯದರ್ಶಿ:-ವೇಣುಗೋಪಾಲ್ ರೋ
೩) ಖಜಾಂಚಿ:- ವತ್ಸಲ
ಕಿರಿಯರ ಸಂಘ
೧) ಅಧ್ಯಕ್ಷರು:- ಶಂಕರ ನಾರಾಯಣ ಜೋಯಿಸ್
೨) ಕಾರ್ಯದರ್ಶಿ:- ಕೇಶವ ಮೂರ್ತಿ
೩) ಖಜಾಂಚಿ:- ಸಜ್ಯೋಜ್ಜಾತ
ಈಕವಿ ಚಾಮರಾಜನಗರ ಸಧಸ್ಯರುಗಳು: ಮಂಜುಳಾ, ರುಕ್ಮಿಣಿ, ಮಡಹಳ್ಳಿ ಮಹೇಶ್, ಸುಮಾ, ಕಮಲಾಕ್ಷಿ, ನೇತ್ರ, ಜವರೇ ಗೌಡರು, ದೊಡ್ಡಯ್ಯ, ಗು.ಚಿ.ರಮೇಶ್, ನಾಗಭೂಷಣ ಬಸವಪುರ, ವೇಣುಗೋಪಾಲ್ ರೋ, ವತ್ಸಲ, ಶಂಕರ ನಾರಾಯಣ ಜೋಯಿಸ್, ಕೇಶವ ಮೂರ್ತಿ, ಸಜ್ಯೋಜ್ಜಾತ,
ekavi Jan 24th 09, meeting at Gundlupet, Chamarajanagara
http://picasaweb.google.com/bmsceiaa/EkaviJan24th09MeetingAtGundlupetChamarajanagara#
ಧನ್ಯವಾದಗಳು
– ಅಶ್ವಿನಿ ರಾವ್
ಈಕವಿ ಚಾಮರಾಜನಗರ
_____________________________
Get involved with EKAVI Community !!
EKAVI ಈ-ಕವಿ COMMUNITY on ORKUT –
http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO – 3500 members
Join:: http://groups.yahoo.com/group/ellaKAVI
EKAVI 177 Talukh Communities
https://ellakavi.wordpress.com/2007/07/08/ekavi-177-talukh-communities/
EKAVI BANGALORE LOCAL COMMUNITIES
https://ellakavi.wordpress.com/2008/07/09/ekavi-bangalore-local-communities/
EKAVI COUNTRY COMMUNITIES
https://ellakavi.wordpress.com/tag/ekavi/ekavi-countries/
EKAVI USA STATES NETWORK,
https://ellakavi.wordpress.com/2007/05/05/ekavi-usa-states-network/
ee kavithe
https://ellakavi.wordpress.com/2008/07/16/ee-kavithe/
____________________________________________
ಈಕವಿ ನಿಯಂತ್ರಣದ ನೀಲ ನಕ್ಷೆ:
ಈಕವಿ ಸುಪ್ರೀಂ ಪವರ್
ಈಕವಿ ಗೌರವ ಅಧ್ಯಕ್ಷರು ಅಧ್ಯಕ್ಷರು
(board of Trutess both Lifetime and nominated)
E-Kavi Secretary ಈಕವಿ ಖಜಾಂಚಿ
(Excutive Commitee – other board members like PRO,
Commitee Chiarperson, etc)
! – – – – – – – – – – – – – -ಈಕವಿ ಆಡಳಿತ ವರ್ಗ- – – – – – – – – – !
(Excutive Council – exisitng members + all district District Secretray and Treasurers)
ಜಿಲ್ಲೆ ಮಟ್ಟದ ಶಾಖೆಗಳು
^
!
District Excutive Committee (selected by Excutive Council) and Excutive Council
(all taluks president and secretary of individual clubs of that district)
ತಾಲ್ಲೂಕು ಮಟ್ಟದ ಶಾಖೆಗಳು
(consists President, Secretary, Treasurer and other Board members)
ಹೋಬಳಿ ಮಟ್ಟದ ಶಾಖೆಗಳು
(consists President, Secretary, Treasurer and other Board members)
ನಗರ ಮತ್ತು ಗ್ರಾಮೀಣ ಶಾಖೆಗಳು
(consists President, Secretary, Treasurer and other Board members)
ರಾಜಕೀಯ:
ಈಕವಿ ಸಂಸ್ಥೆಯಲ್ಲಿ ರಾಜಕೀಯ ಸಲ್ಲದು, ರಾಜಕೀಯದ ಆಸಕ್ತಿ ಇರುವ ಯಾವುದೇ ಸಧಸ್ಯರು ಈಕವಿಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ (they can participate in the E-kavi programmes but will not be eligible to hold any office positions in the organisation). ಹಾಗೇನಾದರು ರಾಜಕೀಯದಲ್ಲಿ ಆಸಕ್ತಿ ಇರುವ ಸದಸ್ಯರು ಕಂಡುಬಂದಲ್ಲಿ ಈಕವಿ ಸಂಸ್ಥೆಯಿಂದ ಅವರನ್ನು ಬಹಿಷ್ಕರಿಸಲಾಗುವುದು.
________________________________________________________________________________
ekavi Chitradurga-Jan 25th 09 meeting at HIRIYUR Taluk
ದಿನಾಂಕ ೨೫ -೦೧-೨೦೦೯ ರಂದು ಹಿರಿಯುರುನಲ್ಲಿ ನಡೆದ ಈಕವಿ ಸಭೆ ವರದಿ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಈ-ಕವಿ ಮೊದಲನೆ ಸಭೆಯು ಜನವರಿ 25, 2009ರಂದು ಬೆಳಿಗ್ಗೆ 11-00ಗಂಟೆಗೆ ಹಿರಿಯೂರಿನ ಜಿ.ಎಚ್.ವಸಂತಕುಮಾರ್ ರವರ ಮನೆಯಲ್ಲಿ ನಡೆಯಿತು. ಕುಮಾರಿ ರತ್ನ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಕೀಲರಾದ ಶ್ರೀ ಆರ್.ನಿಜಲಿಂಗಪ್ಪ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚಿತ್ರದುರ್ಗದ ಲಕ್ಷ್ಮಿನಾರಾಯಣ ತೊದಿನ್ನಯ್ಯ, ಪುಷ್ಪಲತಾ ಲಕ್ಷ್ಮಿನಾರಾಯಣ, ಚಿತ್ತಾರದುರ್ಗ ಖ್ಯಾತಿಯ ಆರ್.ರಾಘವೇಂದ್ರ ರವರು ಆಗಮಿಸಿದ್ದರು.
ಕನ್ನಡ ಭಾಷೆ, ನೆಲದ ಮೇಲಿನ ಅಭಿಮಾನದಿಂದ ಬಿ.ವಸಂತ್ ರವರು ತಮ್ಮ ತಾಲ್ಲೂಕಾದ ಹಿರಿಯೂರಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡುವ ಸಲುವಾಗಿ ಈ-ಕವಿ ಸಂಸ್ಥೆಯ ಒಂದು ಶಾಖಾ ಘಟಕವನ್ನು ತೆರೆಯಲು ತೀರ್ಮಾನಿಸಿದರು. ಅದರಂತೆ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾ, ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಭೆಯನ್ನು ನಡೆಸಿಕೊಡುವಂತೆ ವಕೀಲರಾದ ಆರ್.ನಿಜಲಿಂಗಪ್ಪರವರನ್ನು ಕೋರುತ್ತಾ ಸಭೆಗೆ ಸ್ವಾಗತಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಲಕ್ಷ್ಮಿನಾರಾಯಣ ತೊದಿನ್ನಯ್ಯ ಹಾಗೂ ಚಿತ್ತಾರದುರ್ಗದ ರಾಘವೇಂದ್ರ ರವರನ್ನು ಸಭೆಗೆ ಸ್ವಾಗತಿಸಿದರು. ಈ ಪ್ರಥಮ ಆಸಕ್ತರಾಗಿ ಆಗಮಿಸಿದ್ದ ಎಲ್ಲಾ ಸಭಿಕರಿಗೂ ಸ್ವಾಗತ ಮಾಡಿದರು.
ಲಕ್ಷ್ಮಿನಾರಾಯಣ ತೊದಿನ್ನಯ್ಯರವರು ಮಾತನಾಡುತ್ತಾ, ನಮ್ಮ ಭಾಷೆ, ನೆಲಕ್ಕೆ ಅಭಿಮಾನದಿಂದ ನಾವು ನಮ್ಮ ನಾಡಿಗೆ ಸೇವೆ ಸಲ್ಲಿಸದಿದ್ದರೆ ನಮ್ಮ ಜನ್ಮ ನಿರರ್ಥಕ; ಆದ್ದರಿಂದಲೇ ನಾವು ನಮ್ಮ ಕನ್ನಡ ನಾಡು-ನುಡಿಯ ಅಗತ್ಯ ಸೇವೆ ಸಲ್ಲಿಸಿದಾಗಲೇ ಸಾರ್ಥಕ ಎಂದು ಹೇಳುತ್ತಾ ಈ-ಕವಿ ಸಂಸ್ಥೆಯು ರಚನೆಯಾದದ್ದು ಯಾವಾಗ, ಎಲ್ಲಿ, ಹೇಗೆ ಎಂಬುದನ್ನು ವಿಸ್ತರಿಸಿದರು. ಈ-ಕವಿ ಸಂಸ್ಥೆಯು ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಗಾಗಿ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳು, ಸಂಸ್ಥೆಯ ರೂಪುರೇಷೆಗಳು ಮುಂತಾದ ವಿಚಾರವಾಗಿ ಸವಿಸ್ತಾರವಾಗಿ ಹೇಳಿದರು. ಈ ಹಿಂದೆ ದಿನಾಂಕ: 11-01-2009ರಂದು ಚಿತ್ರದುರ್ಗದಲ್ಲಿ ನಡೆದ ಈ-ಕವಿಯ ಸಭೆಯ ಕುರಿತು ಹೇಳುತ್ತಾ, ಈ-ಕವಿಯ ಮೂಲ ಉದ್ದೇಶಗಳನ್ನು ತಿಳಿಸಿ, ಈ-ಕವಿ ಮುಖಾಂತರ ಸೇವೆ ಸಲ್ಲಿಸಲು ಕರೆ ನೀಡಿದರು.
ಚಿತ್ತಾರದುರ್ಗ.ಕಾಂ website ಖ್ಯಾತಿಯ ರಾಘವೇಂದ್ರರವರು ಮಾತನಾಡುತ್ತಾ ಈ-ಕವಿ ಸಂಸ್ಥೆಯ ಕಾರ್ಯಯೋಜನೆಗಳ ರೂಪುರೇಷೆಯನ್ನು ವಿವರಿಸಿದರು. ಮಾಹಿತಿ ತಂತ್ರಜ್ಞಾನ ವಂಚಿತರಾಗಿರುವುದರಿಂದ ಈ-ಕವಿಯ ಮಹತ್ವ ಗ್ರಾಮಾಂತರ ಪ್ರದೇಶಕ್ಕಾಗಿ ತಿಳಿಯದಾಗಿದೆ. ಆದುದರಿಂದ ಮಾಹಿತಿ ತಂತ್ರಜ್ಞಾನದ ಮಹತ್ವ ಹಾಗೂ ಅಗತ್ಯತೆ ಬಗ್ಗೆ ಗ್ರಾಮ್ಯ ಜನರಲ್ಲಿ ಅರಿವು ಮೂಡಿಸುವಂತೆ ಕೋರಿದರು. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ, ಬಡಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಿಸುವ, ಬಡಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸವ ಪ್ರಮುಖ ಕಾರ್ಯಕ್ರಮಗಳನ್ನು ಈ-ಕವಿ ಸಂಸ್ಥೆ ಹೊತ್ತುನಿಂತಿದೆ. ಆದುದರಿಂದ ನಾವೆಲ್ಲಾ ಒಂದುಗೂಡಿ ಈ-ಕವಿ ಸಂಸ್ಥೆಯ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು. ಸಾವಿರಾರು ಮೈಲುಗಳಾಚೆ ದೂರದಲ್ಲಿದ್ದುಕೊಂಡು ನಮ್ಮ ಕನ್ನಡ ನೆಲದ ಬಗ್ಗೆ ಹಗಲಿರುಳು ಚಿಂತಿಸಿ, ನಮ್ಮಲ್ಲರಿಗೆ ಉತ್ತೇಜನ ನೀಡಿ ಕನ್ನಡಪರ ಕೆಲಸಗಳಿಗೆ ಕೈಹಾಕುವಂತೆ ಮಾಡುತ್ತಿರುವ ಈ-ಕವಿಯ ಅಧ್ಯಕ್ಷರಾದ ಶ್ರೀ ವಿ.ಎಂ.ಕುಮಾರಸ್ವಾಮಿ ರವರನ್ನು ಸ್ಮರಿಸುತ್ತಾ ಅವರ ನಿರುಪಸ್ಥಿತಿಯಲ್ಲಿಯೇ ಅವರ ಧನ್ಯವಾದಗಳನ್ನು ಅರ್ಪಿಸಿದರು. ನಾವೆಲ್ಲರೂ ಒಗ್ಗಟ್ಟಾಗಿ, ಪರಿಶ್ರಮ ವಹಿಸಿ, ನಾಡು-ನುಡಿಯ ಸೇವೆಯ ಮಾಡೋಣ ಬನ್ನಿ ಎಂದು ನೆರೆದಿದ್ದ ಎಲ್ಲರಿಗೂ ಕರೆ ನೀಡಿದರು.
ಸರ್ಕಾರಿ ಶಾಲಾ ಶಿಕ್ಷಕಿಯಾದ ಕುಮಾರಿ ಚಂದ್ರಕಲಾ, ರವರು ಮಾತನಾಡುತ್ತಾ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದಲೇ ಸಾಕಷ್ಟು ಅನುದಾನ ಹಾಗೂ ಮೂಲಭೂತ ಸೌಕರ್ಯಗಳು ಬರುತ್ತಿವೆಯಾದ್ದರಿಂದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದೇ ಬೇರೆ ಸೌಕರ್ಯವಂಚಿತ ಖಾಸಗಿ ಶಾಲೆಗಳನ್ನು ದತ್ತು ತೆಗೆದುಕೊಂಡು ಸೌಕರ್ಯ ಒದಗಿಸುವಂತೆ ಕೋರಿದರು. ಹಾಗೂ ಕೇಶವಮೂರ್ತಿಯವರು ಮಾತನಾಡುತ್ತಾ ಜನತೆಗೆ ಈ-ಕವಿ ಸಂಸ್ಥೆಯ ಪರಿಚಯವನ್ನು ಮಾಡಲು ನಾವು ಇನ್ನಷ್ಟು ಕಾರ್ಯಪ್ರಬುದ್ಧರಾಗಬೇಕು. ತಿಂಗಳಿಗೊಮ್ಮೆಯಾದರೂ ಸಭೆ ಸಮಾರಂಭಗಳನ್ನು ಏರ್ಪಡಿಸಿ, ಜನರಿಗೆ ಈ-ಕವಿಯ ಸಂಸ್ಥೆಯ ಗುರಿ ತಲುಪುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ಪ್ರಯುಕ್ತ ರಾಘವೇಂದ್ರ ರವರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಈ-ಕವಿಯ ಮಾಸಿಕವನ್ನು ತರುವ ಯೋಜನೆಯ ಕುರಿತು, ಈ-ಕವಿಯ ಅಧ್ಯಕ್ಷರ ಗಮನಕ್ಕೆ ಶೀಘ್ರದಲ್ಲೇ ಅದನ್ನು ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯ ಗಮನಕ್ಕೆ ತಂದರು. ವಿ.ಆರ್.ಪ್ರತಿಭ, ಮಂಜುಳ, ರತ್ನ.ಜಿ. ಸೇರಿದಂತೆ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರಾದ ಆರ್.ನಿಜಲಿಂಗಪ್ಪ ರವರು ಮಾತನಾಡುತ್ತಾ “ನನಗೆ ತುಂಬಾ ಖುಷಿಯಾಗಿದೆ. ಈ ದಿನ ನಾವು ಕನ್ನಡವನ್ನು ಮರೆತು, ಇಂಗ್ಲಿಷ್ ಭಾಷೆಯ ವ್ಯಾಮೋಹಿಗಳಾಗಿ ನಮ್ಮತನವನ್ನು ನಾವು ಮರೆಯುತ್ತಿದ್ದೇವೆ. ಅದಕ್ಕಾಗಿ ಇನ್ನಾದರೂ ಎಚ್ಚೆತ್ತು, ಕನ್ನಡ ಭಾಷೆ, ನೆಲದ ಅಭಿವೃದ್ಧಿ ಶ್ರಮಿಸಬೇಕು. ರಾಘವೇಂದ್ರ ರವರು ಹೇಳಿದಂತೆ ಈ-ಕವಿಯ ಮಾಸಿಕವನ್ನು ಮಾಡಿ, ಜಿಲ್ಲೆಯ, ರಾಜ್ಯದ, ದೇಶದ ಹಾಗೂ ಪ್ರಪಂಚದ ಮೂಲೆಮೂಲೆಯಲ್ಲಿನ ಎಲ್ಲಾ ಕನ್ನಡಿಗರಿಗೆ (ಮಾಹಿತಿ ತಂತ್ರಜ್ಞಾನೇತರರಿಗೂ) ತಲುಪುವಂತೆ ಮಾಡಬೇಕು. ನಾವು ಇಲ್ಲಿ ಬಂದು ನಮ್ಮ ಸಮಯ ವಿನಿಯೋಗಿಸಿ, ಈ ಕುರಿತು ಚರ್ಚೆ ಮಾಡಿರುವುದು ತುಂಬಾ ಉಪಕಾರಿಯಾಗಿದ್ದು, ಇದನ್ನು ಸದ್ಬಳಕೆ ಮಾಡಲು ನಾವೆಲ್ಲಾ ಸನ್ನದ್ಧರಾಗಬೇಕು” ಎಂದು ಹೇಳುತ್ತಾ ತಮ್ಮ ಅಧ್ಯಕ್ಷ ಭಾಷಣವನ್ನು ಮುಗಿಸಿದರು.
ಬಿ. ವಸಂತ್ ರವರು ಮಾತನಾಡುತ್ತಾ ಈ-ಕವಿ ನಡೆದು ಬಂದ ಹಾದಿಯ ಬಗ್ಗೆ ವಿಸ್ತಾರವಾಗಿ, ಎಳೆಎಳೆಯಾಗಿ ತಿಳಿಹೇಳಿದರು. ನೆರೆದ ಎಲ್ಲಾ ಸಭಿಕರಿಗೂ ಈ-ಕವಿಯ ಕುರಿತು ಮತ್ತೊಮ್ಮೆ ಸವಿಸ್ತಾರವಾಗಿ ಹೇಳುತ್ತಾ, ಈ-ಕವಿಯ ಸಾಧನೆಗಳ ಕುರಿತು ಹೇಳಿದರು. ಅದರು ಗುರಿಗಳನ್ನು ಬಗ್ಗೆ ಹೇಳುತ್ತಾ, ನಾವೆಲ್ಲರೂ ಸೇರಿ ನಮ್ಮ ತಾಲ್ಲೂಕು, ಜಿಲ್ಲೆಗೆ ಸೇವೆ ಸಲ್ಲಿಸೋಣ ಎಂದು ಹೇಳಿದರು. ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹೊತ್ತಿದ್ದ ಇವರು ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ಕಾರಣರಾದವರು.
ಜಿ.ಹೆಚ್.ವಸಂತ್ ಕುಮಾರ್ ನಾವು ಕನ್ನಡಮ್ಮನ ಸೇವೆ ಸದಾ ಸಿದ್ದರಾಗಿರೋಣ ಎಂದು ಹೇಳುತ್ತಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆರ್.ನಿಜಲಿಂಗಪ್ಪ ರವರಿಗೆ, ಅತಿಥಿಗಳಾಗಿ ಭಾಗವಹಿಸಿದ್ದ ಲಕ್ಷ್ಮಿನಾರಾಯಣ ತೊದಿನ್ನಯ್ಯರವರಿಗೆ, ಶ್ರೀಮತಿ ಪುಷ್ಪಲತಾ ಲಕ್ಷ್ಮಿನಾರಾಯಣ ತೊದಿನ್ನಯ್ಯ ರವರಿಗೆ ಹಾಗೂ ಚಿತ್ತಾರದುರ್ಗದ ರಾಘವೇಂದ್ರ ರವರಿಗೆ ಹಾಗೂ ನೆರೆದ ಎಲ್ಲಾ ಸಭಿಕರಿಗೆ, ವಿಶೇಷವಾಗಿ ಈ ಕಾರ್ಯಕ್ರಮದ ನಿರೂಪಣೆ ಮಾಡಿ, ಕಾರ್ಯಕ್ರಮದ ಜವಬ್ದಾರಿ ಹೊತ್ತುನಿಂತಿದ್ದ ಬಿ.ವಸಂತ್ ರವರಿಗೆ ವಂದನಾರ್ಪಣೆಯನ್ನು ಸಲ್ಲಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
—
R Raghavendra
www.chitharadurga.com (A first Kannda website of Chitradurga District)
http://durgasahityasammelana.blogspot.com (75ನೇ ಕನ್ನಡ ಸಾಹಿತ್ಯ ಸಮ್ಮೇಳನ, ಚಿತ್ರದುರ್ಗದ ಕುರಿತು ಸಮಗ್ರ ವರದಿ)
http://banadahoogalu.blogspot.com (ಆರ್.ರಾಘವೇಂದ್ರ ರವರ “ಬನದ ಹೂಗಳು” ಕವನ ಸಂಕಲನ)
______________
ದಿನಾಂಕ ೨೫ -೦೧-೨೦೦೯ ರಂದು ಹಿರಿಯುರುನಲ್ಲಿ ನಡೆದ ಈಕವಿ ಸಭೆಯಲ್ಲಿ ಬಾಗವಹಿಸಿದವರ ವಿವರ.
B VASANTH., Eshvaragere, Hiriyur Taluk., +91 99802 99736., vasu_esh@rediffmail.com
G H VASANTH KUMAR ., Vedavathi Nagara, Hiriyru ., +91 99454 94029., vasu_anne@yahoo.com
CHANDRAKALA., D/o Chitralingappa, Hindasakatte, Yalladakere, Hiriyur Taluk
V.R.PRATHIBHA., D/o B.Rangaswamy, Vedavathinagara, Hitriyur
RATHNA G., D/o Gurumurthy, Infront of B.L.Gowda house, Vedavathinagara, Hiriyur
KESHAVAMURTHY., S/o T.V.Kariyanna, V.V.C.S.F, S.C.H.S, No. 80, Hiriyur
MANJULA V, D/o VENKATAPPA, Opp. Sent Anns School, Hiriyur
NAVEENAKUMARI., D/o Rajanna, H.M.Halli, Hiriyur taluk
S. MANJULA., W/o Suresh, Gowdanahally, Hiriyur taluk
R. NIJALINGAPPA., S/o Ramalingappa, Advocate, Behind Maruthi high school, Vedavathi nagara, Hiriyur taluk
B HANUMANTHAPPA., S/o Basavarajappa, Kyadiggere, Hiriyur taluk
Mr. Laximinarayana Thodinnaya, Chitradurga Taluk
Mrs. Pushpalatha Laximinarayana Thodinnaya, Chitradurga Taluk
Mr. Raghavendra, Challakere Taluk
______________________________________________________
ekavi Jan 25th 09 meeting at HIRIYUR Taluk- photo album
http://picasaweb.google.com/bmsceiaa/EkaviJan25th09MeetingAtHIRIYUR#
_______________________________________________________
ekavi chitradurga modalane sabhe varadi-Jan-12-2009
ekavi chitradurga modalane sabhe varadi :: “ಈ-ಕವಿ” ಸಂಸ್ಥೆ :: ಚಿತ್ರದುರ್ಗದಲ್ಲಿ ನಡೆದ ಪ್ರಥಮ ಈ-ಕವಿ ಸಭೆ..
———- Forwarded message ———-
From: Raghavendra R <raghu.clk25@gmail.com>
Date: 2009/1/13
Subject: ಚಿತ್ರದುರ್ಗದಲ್ಲಿ ನಡೆದ ಪ್ರಥಮ ಈ-ಕವಿ ಸಭೆ..
To: ekavikumaraswamy <ekavikumaraswamy@gmail.com>
ನಮ್ಮ ನಾಡು, ನಮ್ಮ ನುಡಿ ಎಂಬ ಅಭಿಮಾನದಿಂದ ‘ಎಲ್ಲಾದರೂ ಇರು, ಎಂತಾದರು ಇರು’ ಎಂಬ ಕವಿವಾಣಿಯನ್ನು ಅಕ್ಷರಶಃ ಪರಿಪಾಲಿಸುತ್ತಿರುವ “ಈ-ಕವಿ” ಎಂಬ ಸಂಸ್ಥೆಯು ಕನ್ನಡ ನುಡಿಗಾಗಿ, ಕನ್ನಡ ನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯವ ಸಲುವಾಗಿ ರೂಪುಗೊಂಡಿರುವುದು ಸರಿಯಷ್ಟೆ. ಸದರಿ ಸಂಸ್ಥೆಯು 2003ರಂದು ಚಂದ್ರಶೇಖರ ಕಂಬಾರ ರವರಿಂದ ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಾರಂಭವಾಗಿರುತ್ತದೆ. ಈ ಸಂಸ್ಥೆಯು ಈಗಾಗಲೇ ಇಂಗ್ಲೆಂಡ್, ದಕ್ಷಿಣ ಆಫ್ರಿಕ, ಸಿಂಗಪೂರ್, ಆಸ್ಟ್ರೇಲಿಯಾ, ನ್ಯೂಝೀಲಾಂಡ್, ಕೆನಡ, ಮಲೇಷಿಯಾ, ಅರಬ್ ರಾಷ್ಟ್ರ ಹಾಗೂ ಭಾರತ ಸೇರಿದಂತೆ ವಿಶ್ವಾದಾದ್ಯಂತ ಇರುವ ಕನ್ನಡಿಗರನ್ನು ಒಂದೆಡೆ ಸೇರಿಸಿದೆ. ಇಂತಹ ಈ-ಕವಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಎಂ.ಕುಮಾರಸ್ವಾಮಿ ರವರ ಸಲಹೆಯಂತೆ ಚಿತ್ರದುರ್ಗದ ಈ-ಕವಿ ವೇದಿಕೆಯ ನಿರ್ಮಾಣದ ವಿಚಾರವಾಗಿ ಚಿತ್ರದುರ್ಗದ ಶ್ರೀ ಲಕ್ಷ್ಮಿನಾರಾಯಣ ತೊದಿನಯ್ಯರ ಮನೆಯಲ್ಲಿ ಪ್ರಥಮ ಸಭೆ ನಡೆಯಿತು.
ಕನ್ನಡ ನುಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಧ್ಯೇಯವನ್ನಿಟ್ಟಿಕೊಂಡಿರುವ ‘ಎಲ್ಲಾ ಕನ್ನಡ ಅಭಿಮಾನಿಗಳ ಅಂತರಾಷ್ಟ್ರೀಯ ವೇದಿಕೆ’ ಯಾದ “ಈ-ಕವಿ” ಸಂಸ್ಥೆಯು ಕುರಿತು ಮಾತನಾಡಿದ ಲಕ್ಷ್ಮಿನಾರಾಯಣ ತೊದಿನಯ್ಯರು ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಪರಿಚಯ ಮಾಡಿದರು. ಸಂಸ್ಥೆಯು ಕನ್ನಡ ಭಾಷೆ, ಸಂಸ್ಕೃತಿಯ ವೈಭವವನ್ನು ಹೆಚ್ಚಿಸುವ, ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರದಲ್ಲಿ ಕನ್ನಡವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈ ಕವಿ ಎಲ್ಲಾ ಕನ್ನಡಿಗರು, ಬಳಗಗಳು, ಕೂಟಗಳು, ಸಂಸ್ಥೇಗಳು,ವೇದಿಕೆಗಳೊಡನೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ಸಂಸ್ಥೆಯೊಂದಿಗೆ ಸೇರಿ ಕನ್ನಡ ನಾಡು-ನುಡಿಗಾಗಿ ಶ್ರಮಿಸೋಣ, ಅಳಿಲುಸೇವೆ ಮಾಡೋಣ ಎಂದು ಕರೆ ನೀಡಿದರು.
ಚಿತ್ತಾರದುರ್ಗ ವೆಬ್ ಸೈಟ್ ಖ್ಯಾತಿಯ ಆರ್.ರಾಘವೇಂದ್ರ ರವರು ಮಾತನಾಡುತ್ತಾ, ಈ-ಕವಿ ಸಂಸ್ಥೆಯು ನಡೆದು ಬಂದ ದಾರಿಯನ್ನು ಸವಿಸ್ತಾರವಾಗಿ ಸಭೆಗೆ ತಿಳಿಸುತ್ತಾ, ಕನ್ನಡ ಅಭಿವೃದ್ಧಿ, ಗ್ರಾಮೀಣ ಶಾಲೆಗಳ ದತ್ತು, ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಇತ್ಯಾದಿಯಾಗಿ ಈ ಕವಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಈ-ಕವಿಯ ಸಾಧನೆಯ ಬಗ್ಗೆ ತಿಳಿಸುತ್ತಾ, ಸಾವಿರಾರು ಮೈಲು ದೂರದಲ್ಲಿದ್ದುಕೊಂಡೇ ಕನ್ನಡ ನಾಡು, ನುಡಿಗಾಗಿ ತನ್ನ ಸೇವೆ ಸಲ್ಲಿಸುತ್ತಿರುವ ಕುಮಾರಸ್ವಾಮಿಯವರನ್ನು ಸ್ಮರಿಸುತ್ತಾ ಅಭಿನಂದಿಸಿದರು. ಅಲ್ಲದೇ ಕನ್ನಡ ನಾಡಿನ ನೆಲದಲ್ಲಿಯೇ ಇರುವ ನಾವೇಲ್ಲಾ ಏಕೆ ಕನ್ನಡಮ್ಮನ ಸೇವೆ ಮಾಡಬಾರದು ಎಂದು ಹೇಳುತ್ತಾ ಕನ್ನಡ ತಾಯಿಯ ಸೇವೆಗಾಗಿ ಎಲ್ಲರೂ ಕಂಕಣಬದ್ಧರಾಗಿ ಸೇವೆ ಸಲ್ಲಿಸುವಂತೆ ಪ್ರತಿಜ್ಞೆ ಮಾಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಎ.ಹೆಚ್.ಈರಣ್ಣ, ಅಧ್ಯಕ್ಷರು, ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ವೇದಿಕೆ, ರವರು ಮಾತನಾಡಿ, ಈ-ಕವಿ ಸಂಸ್ಥೆಯ ಬೆಳವಣಿಗೆಗೆ ನಮ್ಮ ಶಿಕ್ಷಕ ಸಂಘದಿಂದ ಪ್ರೋತ್ಸಾಹ, ಸಹಕಾರವನ್ನು ಸದಾ ನೀಡುತ್ತೇವೆ. ಚಿತ್ತಾರದುರ್ಗದ ರಾಘವೇಂದ್ರ, ಹಾಗೂ ಹಿರಿಯರಾದ ಲಕ್ಷ್ಮಿನಾರಾಯಣ ತೊದಿನ್ನಯ್ಯರು ಹೇಳಿದಂತೆ ಕನ್ನಡಮ್ಮನ ಸೇವೆಗಾಗಿ ಸದಾಕಾಲ ಸೇವಾನಿರತರಾಗಿರುತ್ತೇವೆ ಎಂದು ತಿಳಿಸಿದರು.
ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸೋಣವೆಂದು ಎಲ್.ಕೃಷ್ಣಮೂರ್ತಿ, ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ, ಚಳ್ಳಕೆರೆ ರವರ ಸಭೆಗೆ ತಿಳಿಸುತ್ತಾ ಕಾರ್ಯಕ್ರಮ ನಡೆಸಿಕೊಟ್ಟ ಲಕ್ಷ್ಮಿನಾರಾಯಣ ತೊದಿನ್ನಯ್ಯರ್, ಸಭೆಯ ಅಧ್ಯಕ್ಷರಾದ ಈರಣ್ಣ, ಚಿತ್ತಾರದುರ್ಗದ ರಾಘವೇಂದ್ರ, ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಪಿ.ಕೆ.ರಾಮಕಿರಣ, ಜೀವವಿಮಾ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸಂಜೀವಕುಮಾರ ಜೋಷಿ, ಶಿಕ್ಷಕರುಗಳಾದ ಶ್ರೀ ಟಿ.ಜಿ.ವೆಂಕಟೇಶ್, ಶ್ರೀ ಗಂಗಾಧರ್, ಶ್ರೀ ಕೆ.ಶಂಕರಪ್ಪ, ಶ್ರೀ ಗೋವಿಂದರಾಜ್, ಶ್ರೀ ವಸಂತ್ ಕುಮಾರ್, ಹಾಗೂ ಪವನ್ ಕುಮಾರ್ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಸಭಿಕರಿಗೆ ವಂದನೆಗಳನ್ನು ಹೇಳುತ್ತಾ ಸಭೆಯನ್ನು ಮುಕ್ತಾಯಗೊಳಿಸಿದರು.
—
R Raghavendra
www.chitharadurga.com
http://durgasahityasammelana.blogspot.com
http://banadahoogalu.blogpspot.com
http://chitharaarticls.blogspot.com
___________________________________
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS