Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

maatrubhashaa kannadadalliye bhoodane: hightcourt mahatvada teerpu

ಮಾತೃಭಾಷಾ ಕನ್ನಡದಲ್ಲಿಯೇ ಬೋಧನೆ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು (ಏಜೆನ್ಸಿ), ಸೋಮವಾರ, 25 ಜೂನ್ 2007   ( 22:01 IST )
ಸರಕಾರ ನೀಡಿದ ಅನುಮತಿಗೆ ವಿರುದ್ಧವಾಗಿ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿದ್ದ ಆರೋಪದಲ್ಲಿ ಮಾನ್ಯತೆ ಕಳೆದುಕೊಂಡ, ಕರ್ನಾಟಕದ 2000 ಅಧಿಕ ಶಾಲೆಗಳು ಕಡ್ಡಾಯವಾಗಿ ಮಾತೃಭಾಷಾ ಕನ್ನಡ ಮಾಧ್ಯಮದಲ್ಲಿಯೇ ಪ್ರವೇಶ ನೀಡುವಂತೆ ರಾಜ್ಯ ಹೈಕೋರ್ಟ್ ಸೋಮವಾರ ಆದೇಶಿಸಿತು.

ಸರಕಾರಕ್ಕೆ ಈ ಸಂಬಂಧ ಪ್ರಮಾಣ ಸಲ್ಲಿಸಲು ಜುಲೈ 2 ರ ಗಡುವನ್ನು ನೀಡಿದ ನ್ಯಾಯಾಲಯವು, ಸರಕಾರ ಈ ಹಿಂದೆ ಹೇಳಿರುವ ಸ್ವಇಚ್ಛೆ ಯೋಜನೆಯನ್ನು ಒಪ್ಪಿಕೊಳ್ಳುವಂತೆ ಸೂಚಿಸಿತು.

ಈ ಯೋಜನೆಯಲ್ಲಿರುವ ಆಡಳಿತಾತ್ಮಕ ವೆಚ್ಚ ಪಾವತಿಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ತನ್ನ ಅಂತಿಮ ತೀರ್ಪಿನಲ್ಲಿ ನಿರ್ಧರಿಸಲಿದ್ದು, ಸದ್ಯಕ್ಕೆ ಶಾಲೆಗಳು ಅದನ್ನು ಪಾಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

ಇಲ್ಲಿಯರೆಗೆ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ನಿಯಮಗಳನ್ನು ಉಲ್ಲಂಘಿಸಿತ್ತಲೇ ಬಂದಿದ್ದು, 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗು 12 ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಅತಂತ್ರತೆಯಲ್ಲಿ ಸಿಲುಕಿಸಿತ್ತು.

ಈ ಮಧ್ಯೆ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಜೂನ್ 30 ರಂದು ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಕುಸ್ಮಾ ಹೇಳಿದೆ.

ಪ್ರತಿಕ್ರಿಯೆ
ಕುಸ್ಮಾ ಅಧ್ಯಕ್ಷ ಜಿ.ಎಸ್.ಶರ್ಮಾ ಮಾತನಾಡಿ, ಜೂನ್ 30 ರಂದು ಸಭೆಯಲ್ಲಿ ಇದರ ಸಾಧಕ ಬಾಧಕಗಳ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

http://in.kannada.yahoo.com/News/Regional/0706/25/1070625050_1.htm

June 26, 2007 Posted by | Blogroll, KANNADA | Leave a comment