Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ekavi CHITRADURGA jille mattu taalookugala udghtane

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ-ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ
ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…
ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ
ಕನ್ನಡವೇ ಜಾತಿ   ಕನ್ನಡವೇ ಧರ್ಮ
ELLA KANNADA ABHIMAANIGALA VEDIKE INTERNATIONAL-EKAVI 
 
eGovINDIA, EKAVI, INDIA RTI, Judicial Reforms & India Whistle Blower’s Action Group
Facilitating Emergence of New India
Based on Values of Transparency & Accountability, E Governance,
Natural Justice, Human Rights and Human Dignity
No: 31/1 , 1st Cross, M. T. Layout, Malleshwaram, Bangalore-560003
India: 9972210413,

 

ದಿನಾಂಕ: 08.03.2009ರಂದು ಐತಿಹಾಸಿಕ ನಗರಿ ‘ಚಿತ್ರದುರ್ಗ’ದ ಐಶ್ವರ್ಯಾ ಫೋರ್ಟ್ ನಲ್ಲಿ ಈ-ಕವಿ ಸಂಸ್ಥೆಯ “ಚಿತ್ತದುರ್ಗ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಉದ್ಘಾಟನೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕುಮಾರಿ ಮೇಘನಾ ರವರಿಂದ ಪ್ರಾರ್ಥನಾ ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಹಾಗೂ ಚಿತ್ರದುರ್ಗ ಜಿಲ್ಲೆಯ ಈ-ಕವಿ ಅಧ್ಯಕ್ಷರು ಹಾಗೂ ಜಿಲ್ಲಾ ಸಂಚಾಲಕರಾದ ಶ್ರೀ ಲಕ್ಷ್ಮಿನಾರಾಯಣ ತೊದಿನ್ನಯ ರವರು ಸ್ವಾಗತ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಚಿತ್ರದುರ್ಗದ ಡಿ.ಡಿ.ಪಿ.ಐ. ಗಳಾದ ಶ್ರೀ ಶಂಕರಪ್ಪನವರು ವಹಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ.ಎಂ.ವೀರೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕನ್ನಡನಾಡಿನ ಹಾಗೂ ಕನ್ನಡ ಭಾಷೆಯ ಬಗ್ಗೆ ಕಾಳಜಿ ವಹಿಸಿ ಸಾವಿರಾರು ಮೈಲು ದೂರದಿಂದ ಇಲ್ಲಿಗೆ ಆಗಮಿಸಿ, ಯುವಕರಲ್ಲಿ ಕನ್ನಡಾಭಿಮಾನ ಮೊಳಗುವಂತೆ ಪ್ರೇರೇಪಿಸಿರುವ ಈ-ಕವಿ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ವಿ.ಎಂ.ಕುಮಾರಸ್ವಾಮಿಯವರನ್ನು ಅಭಿನಂದಿಸಿದರು. ಅಲ್ಲದೇ ಕನ್ನಡ ನಾಡು ಸಾವಿರಾರು ಅನ್ಯಭಾಷಿಕರಿಂದ ತುಂಬಿಹೋಗಿದ್ದು, ಕನ್ನಡ ಭಾಷೆಯ ಸರ್ಕಾರವೇ ಉದಾಸೀನ ಧೋರಣೆಯನ್ನು ತಳೆದಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಜಗತ್ತಿನ ಅತ್ಯಂತ ಸುಂದರ ಭಾಷೆಯಾಗಿದ್ದರೂ, ಶಾಸ್ತ್ರೀಯ ಸ್ಥಾನ ಮಾನ ಪಡೆಯುವಲ್ಲಿ ವಿಳಂಬವಾಗಿದೆ. ಇನ್ನಾದರೂ ನಾವುಗಳು ಎಚ್ಚೆತ್ತು, ಕನ್ನಡಮ್ಮನ ಸೇವೆಗೆ ಕಂಕಣಬದ್ಧರಾಗಿ ತಯಾರಾಗಬೇಕು ಎಂದು ಕರೆ ನೀಡಿದರು.
 
ಈ-ಕವಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಸಿ.ವಿ.ಕಿರಣ್ ರವರು ಮಾತನಾಡುತ್ತಾ, ಸಂಸ್ಥೆಯ ಚಟುವಟಿಕೆಗಳ ಬಗ್ಗೆ, ಹಾಗೂ ಶ್ರೀ ವಿ.ಎಂ.ಕುಮಾರಸ್ವಾಮಿಯವರ ಕುರಿತು ಪರಿಚಯ ಮಾಡಿದರು. ನಾವು ದಿನನಿತ್ಯದ ಜೀವನದಲ್ಲಿ ಜಂಜಾಟದಲ್ಲಿ ನಾವು ನಮ್ಮ ತಾಯಿಯನ್ನು ಹೇಗೆ ಮರೆಯದಿಲ್ಲವೋ, ಹಾಗೇ ನಮ್ಮ ಕನ್ನಡ ಭಾಷೆಯನ್ನು ನಾವು ಮರೆಯಬಾರದು. ನಾವು ನಮ್ಮ ಭಾಷೆಯ ಉಳಿವಿಗಾಗಿ ಹೋರಾಟ ನಡೆಸಲೇಬೇಕು. ನಮ್ಮ ಭಾಷೆಯನುಳಿದು, ಬೇರೆ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿ, ಆದರೆ ಅನ್ಯಭಾಷೆಯ ಅಭಿಮಾನದಲ್ಲಿ ನಮ್ಮ ಭಾಷೆಯ ಸಿರಿತನವನ್ನು ಮರೆಯಬೇಡಿ. ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ ಸುಮಾರು 25 ವರ್ಷಗಳಿಂದ ನೆಲೆನಿಂತು, ನಮಗಿಂತಲೂ ಚೆನ್ನಾಗಿ ಕನ್ನಡ ಮಾತನಾಡುವ ಶ್ರೀ ಕುಮಾರಸ್ವಾಮಿಯವರ ಕನ್ನಡಾಭಿಮಾನ ಹಾಗೂ ತಾಯ್ನಾಡಿನ ಪ್ರೇಮದ ಬಗ್ಗೆ, ಈ-ಕವಿ ಸಂಸ್ಥೆಯ ವತಿಯಿಂದ ಈಗಾಗಲೇ ತೆಗೆದುಕೊಂಡ ಕಾರ್ಯಕ್ರಮಗಳ ಯಶಸ್ವಿ ಬಗ್ಗೆ, ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕಾರ್ಯದರ್ಶಿಗಳಾದ ಶ್ರೀ ಸಿ.ವಿ.ಕಿರಣ್ ರವರು ಸುಧೀರ್ಘವಾಗಿ ವೇದಿಕೆಗೆ ಪರಿಚಯಿಸಿದರು.
 
ನಂತರ ಚಿತ್ರದುರ್ಗ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖಾ ಅಧಿಕಾರಿಗಳಾದ ಶ್ರೀ ಎಸ್.ಮಹೇಶ್ವರಯ್ಯ ರವರು “ಮಾಹಿತಿ ಹಕ್ಕು ಕೈಪಿಡಿ” ಪುಸ್ತಕವನ್ನು ಬಿಡುಗಡೆ ಮಾಡಿ, ಮಾತನಾಡುತ್ತಾ ಕನ್ನಡ ಸೇವೆ ನಾವೆಲ್ಲರೂ ಒಮ್ಮನಸ್ಸಿನಿಂದ ಕಾರ್ಯೋನ್ಮುಖರಾಗೋಣ ಎಂದು ಹೇಳಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಂಕರಪ್ಪ ರವರು ಮಾತನಾಡುತ್ತಾ ಈ-ಕವಿ ಸಂಸ್ಥೆಯ ಶ್ರೀ ವಿ.ಎಂ.ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿಗಳಾದ ಶ್ರೀ ಸಿ.ವಿ.ಕಿರಣ್ ರವರ ಪ್ರಯತ್ನವನ್ನು ಅಭಿನಂದಿಸುತ್ತಾ, ಈ-ಕವಿ ಸಂಸ್ಥೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲಾ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಹಾಗೂ ಶೈಕ್ಷಣಿಕ ವಲಯದ ಕಾರ್ಯಕ್ರಮಗಳಿಗೆ ಸದಾ ಸಹಾಯಹಸ್ತವನ್ನು ನೀಡಿ, ಸಹಕರಿಸಲಾಗುವುದು ಎಂದು ಹೇಳಿದರು. ಚಳ್ಳಕೆರೆ ತಾಲ್ಲೂಕು ಈ-ಕವಿ ಗೌರವಾಧ್ಯಕ್ಷರಾದ ಹಾಗೂ ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪಿ.ತಿಪ್ಪೇಸ್ವಾಮಿ ರವರು ಹಾಗೂ ಮೊಳಕಾಲ್ಮೂರು ತಾಲ್ಲೂಕು ಈ-ಕವಿ ಗೌರವಾಧ್ಯಕ್ಷರಾದ ಹಾಗೂ ಮೊಳಕಾಲ್ಮೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಜಿ.ವೆಂಕಟೇಶ್ ರವರು ಮಾತನಾಡಿದರು.
 
 
ನಂತರದಲ್ಲಿ ಮಾತನಾಡಿದ ಶ್ರೀ ವಿ.ಎಂ.ಕುಮಾರಸ್ವಾಮಿ ರವರು ಈ-ಕವಿ ಸಂಸ್ಥೆಯು ಇಲ್ಲಿಯವರೆಗೂ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ಸಭೆಯ ಗಮನಕ್ಕೆ ತಂದರು. ಕನ್ನಡ ಗಣಕ ಪರಿಷತ್ತಿನಿಂದ ಬಿಡುಗಡೆಯಾಗಿರುವ ಕನ್ನಡ ತಂತ್ರಾಂಶದ ಬಗ್ಗೆ ಹಾಗೂ ತಂತ್ರಾಂಶದಲ್ಲಿನ ಲೋಪದೋಷದ ಬಗ್ಗೆ ಎಲ್ಲರ ಗಮನ ಸೆಳೆದರು. ಕನ್ನಡ ಭಾಷೆಯ ಅಭಿವೃದ್ಧಿಯಾಗಬೇಕೆಂದರೆ ಕನ್ನಡ ತಂತ್ರಾಂಶ ಸರಿಹೋಗಬೇಕು. ಕನ್ನಡ ತಂತ್ರಾಂಶದ ಅಭಿವೃದ್ಧಿಯಿಂದ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಹೇಳಿದರು. ಕನ್ನಡ ತಂತ್ರಾಂಶ ಕುರಿತು ಕರ್ನಾಟಕ ಸರ್ಕಾರ ಹಾಗೂ ಕನ್ನಡ ಗಣಕ ಪರಿಷತ್ತಿನ ಧೋರಣೆಯನ್ನು ತೀವ್ರವಾಗಿ ವಿರೋಧಿಸಿದರಲ್ಲದೇ, ಈ ಕುರಿತು ಎಲ್ಲಾ ಕನ್ನಡಿಗರು ಎಚ್ಚೆತ್ತು, ಪ್ರತಿಭಟಿಸಬೇಕು ಎಂದು ಹೇಳಿದರು. ಕನ್ನಡ ಸೇವೆಗಾಗಿ ಸದಾಕಾಲ ದುಡಿಯಲು ಈ-ಕವಿ ಸಂಸ್ಥೆಯು ಸದಾ ಸಿದ್ದವಾಗಿರುವ ವಿಚಾರವನ್ನು ತರುತ್ತಾ, ಸ್ಥಳಿಯ ಕನ್ನಡಿಗರೇ ಇದರಲ್ಲಿ ತಮ್ಮ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
 
 
ಕಾರ್ಯಕ್ರಮದಲ್ಲಿ ಶ್ರೀ ಗಣೇಶ್ ಹಾಗೂ ಕುಮಾರಿ ಸೌಮ್ಯರವರ ಗಾಯನ, ಹಾಗೂ ಚಿತ್ರದುರ್ಗದ ಕವಿಗಳಾದ ಶ್ರೀ ನಿಸಾರ್ ಅಹಮದ್ ಹಾಗೂ ಚಿತ್ತಾರದುರ್ಗ ಖ್ಯಾತಿಯ ಆರ್.ರಾಘವೇಂದ್ರ ರವರ ಕಾವ್ಯವಾಚನ ಕಾರ್ಯಕ್ರಮಗಳು ವಿಶೇಷವಾಗಿತ್ತು. ಕವಿ ಹಾಗೂ ಈ-ಕವಿ ಹೊಸದುರ್ಗ ಶಾಖೆಯ ರೂವಾರಿಗಳಾದ ಶ್ರೀ ನಿಸಾರ್ ಅಹಮದ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಚಿತ್ರದುರ್ಗ ಜಿಲ್ಲಾ ಸಂಚಾಲಕರಾದ ಶ್ರೀ ಲಕ್ಷ್ಮಿನಾರಾಯಣ ತೋದಿನ್ನಯ್ಯ, ಶ್ರೀ ಆರ್.ರಾಘವೇಂದ್ರ, ಶ್ರೀ ವಸಂತ, ಶ್ರೀ ನಿಸಾರ್ ಅಹಮದ್, ಶ್ರೀ ಎಂ.ಕೃಷ್ಣಪ್ಪ, ಶ್ರೀ ವಸಂತಕುಮಾರ್, ಕುಮಾರಿ ರತ್ನಮ್ಮ, ಕುಮಾರಿ ಚಂದ್ರಕಲಾ, ಕುಮಾರಿ ಮಹಬೂಬಿ, ಶ್ರೀ ಎಂ.ಜಿ.ವೆಂಕಟೇಶ್, ಶ್ರೀ ಕೆ.ಬಿ.ಬಸವರಾಜಯ್ಯ, ಶ್ರೀ ಜೋಷಿ, ಶ್ರೀ ಸಲೀಮ್, ಶ್ರೀ ಜಾಕೀರ್ ಹುಸೇನ್, ಶ್ರೀ ಉಪ್ಪಾರಹಟ್ಟಿ ಚಿತ್ತಯ್ಯ, ಮುಂತಾದವರು ಸೇರಿದಂತೆ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಜನ ಭಾಗಹಿಸಿದ್ದರು.
 
ವರದಿ:
ಆರ್.ರಾಘವೇಂದ್ರ, ಚಳ್ಳಕೆರೆ. 9916822102
ಈ-ಕವಿ-ಚಳ್ಳಕೆರೆ ಘಟಕ ಕಾರ್ಯದರ್ಶಿಗಳು,
ಈ-ಕವಿ ಚಿತ್ರದುರ್ಗ ಜಿಲ್ಲಾ ಸಂಚಾಲಕರು, 
 
ಕಾರ್ಯಕ್ರಮದ ಛಾಯಾಚಿತ್ರಗಳು:
 
ekavi CHITRADURGA, March 09
http://picasaweb.google.com/bmsceiaa/EkaviCHITRADURGAMarch09#
ekavi CHITRADURGA Press Conf March 09
http://picasaweb.google.com/bmsceiaa/EkaviCHITRADURGAPressConfMarch09#
ekavi Holalkere, chitradurga
http://picasaweb.google.com/bmsceiaa/EkaviHolalkereChitradurga#

April 11, 2009 - Posted by | EKAVI CHITRADURGA, KANNADA, Kannada and Kannadigas North America

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: