Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ekavi chitradurga modalane sabhe varadi-Jan-12-2009

ekavi chitradurga modalane sabhe varadi :: “ಈ-ಕವಿ” ಸಂಸ್ಥೆ :: ಚಿತ್ರದುರ್ಗದಲ್ಲಿ ನಡೆದ ಪ್ರಥಮ ಈ-ಕವಿ ಸಭೆ..
 
———- Forwarded message ———-
From: Raghavendra R <raghu.clk25@gmail.com>
Date: 2009/1/13
Subject: ಚಿತ್ರದುರ್ಗದಲ್ಲಿ ನಡೆದ ಪ್ರಥಮ ಈ-ಕವಿ ಸಭೆ..
To: ekavikumaraswamy <ekavikumaraswamy@gmail.com>
 
ನಮ್ಮ ನಾಡು, ನಮ್ಮ ನುಡಿ ಎಂಬ ಅಭಿಮಾನದಿಂದ ‘ಎಲ್ಲಾದರೂ ಇರು, ಎಂತಾದರು ಇರು’ ಎಂಬ ಕವಿವಾಣಿಯನ್ನು ಅಕ್ಷರಶಃ ಪರಿಪಾಲಿಸುತ್ತಿರುವ “ಈ-ಕವಿ” ಎಂಬ ಸಂಸ್ಥೆಯು ಕನ್ನಡ ನುಡಿಗಾಗಿ, ಕನ್ನಡ ನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯವ ಸಲುವಾಗಿ ರೂಪುಗೊಂಡಿರುವುದು ಸರಿಯಷ್ಟೆ. ಸದರಿ ಸಂಸ್ಥೆಯು 2003ರಂದು ಚಂದ್ರಶೇಖರ ಕಂಬಾರ ರವರಿಂದ ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಾರಂಭವಾಗಿರುತ್ತದೆ. ಈ ಸಂಸ್ಥೆಯು ಈಗಾಗಲೇ ಇಂಗ್ಲೆಂಡ್, ದಕ್ಷಿಣ ಆಫ್ರಿಕ, ಸಿಂಗಪೂರ್, ಆಸ್ಟ್ರೇಲಿಯಾ, ನ್ಯೂಝೀಲಾಂಡ್, ಕೆನಡ, ಮಲೇಷಿಯಾ, ಅರಬ್ ರಾಷ್ಟ್ರ ಹಾಗೂ ಭಾರತ ಸೇರಿದಂತೆ ವಿಶ್ವಾದಾದ್ಯಂತ ಇರುವ ಕನ್ನಡಿಗರನ್ನು ಒಂದೆಡೆ ಸೇರಿಸಿದೆ. ಇಂತಹ ಈ-ಕವಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಎಂ.ಕುಮಾರಸ್ವಾಮಿ ರವರ ಸಲಹೆಯಂತೆ ಚಿತ್ರದುರ್ಗದ ಈ-ಕವಿ ವೇದಿಕೆಯ ನಿರ್ಮಾಣದ ವಿಚಾರವಾಗಿ ಚಿತ್ರದುರ್ಗದ ಶ್ರೀ ಲಕ್ಷ್ಮಿನಾರಾಯಣ ತೊದಿನಯ್ಯರ ಮನೆಯಲ್ಲಿ ಪ್ರಥಮ ಸಭೆ ನಡೆಯಿತು.
 
ಕನ್ನಡ ನುಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಧ್ಯೇಯವನ್ನಿಟ್ಟಿಕೊಂಡಿರುವ ‘ಎಲ್ಲಾ ಕನ್ನಡ ಅಭಿಮಾನಿಗಳ ಅಂತರಾಷ್ಟ್ರೀಯ ವೇದಿಕೆ’ ಯಾದ “ಈ-ಕವಿ” ಸಂಸ್ಥೆಯು ಕುರಿತು ಮಾತನಾಡಿದ ಲಕ್ಷ್ಮಿನಾರಾಯಣ ತೊದಿನಯ್ಯರು ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಪರಿಚಯ ಮಾಡಿದರು. ಸಂಸ್ಥೆಯು ಕನ್ನಡ ಭಾಷೆ, ಸಂಸ್ಕೃತಿಯ ವೈಭವವನ್ನು ಹೆಚ್ಚಿಸುವ, ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರದಲ್ಲಿ ಕನ್ನಡವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈ ಕವಿ ಎಲ್ಲಾ ಕನ್ನಡಿಗರು, ಬಳಗಗಳು, ಕೂಟಗಳು, ಸಂಸ್ಥೇಗಳು,ವೇದಿಕೆಗಳೊಡನೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ಸಂಸ್ಥೆಯೊಂದಿಗೆ ಸೇರಿ ಕನ್ನಡ ನಾಡು-ನುಡಿಗಾಗಿ ಶ್ರಮಿಸೋಣ, ಅಳಿಲುಸೇವೆ ಮಾಡೋಣ ಎಂದು ಕರೆ ನೀಡಿದರು.
 
ಚಿತ್ತಾರದುರ್ಗ ವೆಬ್ ಸೈಟ್ ಖ್ಯಾತಿಯ ಆರ್.ರಾಘವೇಂದ್ರ ರವರು ಮಾತನಾಡುತ್ತಾ, ಈ-ಕವಿ ಸಂಸ್ಥೆಯು ನಡೆದು ಬಂದ ದಾರಿಯನ್ನು ಸವಿಸ್ತಾರವಾಗಿ ಸಭೆಗೆ ತಿಳಿಸುತ್ತಾ, ಕನ್ನಡ  ಅಭಿವೃದ್ಧಿ, ಗ್ರಾಮೀಣ ಶಾಲೆಗಳ ದತ್ತು, ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಇತ್ಯಾದಿಯಾಗಿ ಈ ಕವಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಈ-ಕವಿಯ ಸಾಧನೆಯ ಬಗ್ಗೆ ತಿಳಿಸುತ್ತಾ, ಸಾವಿರಾರು ಮೈಲು ದೂರದಲ್ಲಿದ್ದುಕೊಂಡೇ ಕನ್ನಡ ನಾಡು, ನುಡಿಗಾಗಿ ತನ್ನ ಸೇವೆ ಸಲ್ಲಿಸುತ್ತಿರುವ ಕುಮಾರಸ್ವಾಮಿಯವರನ್ನು ಸ್ಮರಿಸುತ್ತಾ ಅಭಿನಂದಿಸಿದರು. ಅಲ್ಲದೇ ಕನ್ನಡ ನಾಡಿನ ನೆಲದಲ್ಲಿಯೇ ಇರುವ ನಾವೇಲ್ಲಾ ಏಕೆ ಕನ್ನಡಮ್ಮನ ಸೇವೆ ಮಾಡಬಾರದು ಎಂದು ಹೇಳುತ್ತಾ ಕನ್ನಡ ತಾಯಿಯ ಸೇವೆಗಾಗಿ ಎಲ್ಲರೂ ಕಂಕಣಬದ್ಧರಾಗಿ ಸೇವೆ ಸಲ್ಲಿಸುವಂತೆ ಪ್ರತಿಜ್ಞೆ ಮಾಡಿಸಿದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಎ.ಹೆಚ್.ಈರಣ್ಣ, ಅಧ್ಯಕ್ಷರು, ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ವೇದಿಕೆ, ರವರು ಮಾತನಾಡಿ, ಈ-ಕವಿ ಸಂಸ್ಥೆಯ ಬೆಳವಣಿಗೆಗೆ ನಮ್ಮ ಶಿಕ್ಷಕ ಸಂಘದಿಂದ ಪ್ರೋತ್ಸಾಹ, ಸಹಕಾರವನ್ನು ಸದಾ ನೀಡುತ್ತೇವೆ. ಚಿತ್ತಾರದುರ್ಗದ ರಾಘವೇಂದ್ರ, ಹಾಗೂ ಹಿರಿಯರಾದ ಲಕ್ಷ್ಮಿನಾರಾಯಣ ತೊದಿನ್ನಯ್ಯರು ಹೇಳಿದಂತೆ ಕನ್ನಡಮ್ಮನ ಸೇವೆಗಾಗಿ ಸದಾಕಾಲ ಸೇವಾನಿರತರಾಗಿರುತ್ತೇವೆ ಎಂದು ತಿಳಿಸಿದರು.
 
ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸೋಣವೆಂದು ಎಲ್.ಕೃಷ್ಣಮೂರ್ತಿ, ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ, ಚಳ್ಳಕೆರೆ ರವರ ಸಭೆಗೆ ತಿಳಿಸುತ್ತಾ ಕಾರ್ಯಕ್ರಮ ನಡೆಸಿಕೊಟ್ಟ ಲಕ್ಷ್ಮಿನಾರಾಯಣ ತೊದಿನ್ನಯ್ಯರ್, ಸಭೆಯ ಅಧ್ಯಕ್ಷರಾದ ಈರಣ್ಣ, ಚಿತ್ತಾರದುರ್ಗದ ರಾಘವೇಂದ್ರ, ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಪಿ.ಕೆ.ರಾಮಕಿರಣ, ಜೀವವಿಮಾ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸಂಜೀವಕುಮಾರ ಜೋಷಿ, ಶಿಕ್ಷಕರುಗಳಾದ ಶ್ರೀ ಟಿ.ಜಿ.ವೆಂಕಟೇಶ್, ಶ್ರೀ ಗಂಗಾಧರ್, ಶ್ರೀ ಕೆ.ಶಂಕರಪ್ಪ, ಶ್ರೀ ಗೋವಿಂದರಾಜ್, ಶ್ರೀ ವಸಂತ್ ಕುಮಾರ್, ಹಾಗೂ ಪವನ್ ಕುಮಾರ್ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಸಭಿಕರಿಗೆ ವಂದನೆಗಳನ್ನು ಹೇಳುತ್ತಾ ಸಭೆಯನ್ನು ಮುಕ್ತಾಯಗೊಳಿಸಿದರು.

R Raghavendra
www.chitharadurga.com
http://durgasahityasammelana.blogspot.com
http://banadahoogalu.blogpspot.com
http://chitharaarticls.blogspot.com
___________________________________

Advertisements

February 7, 2009 - Posted by | EKAVI CHITRADURGA |

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: