Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ekavi Chitradurga-Jan 25th 09 meeting at HIRIYUR Taluk

ದಿನಾಂಕ ೨೫ -೦೧-೨೦೦೯ ರಂದು ಹಿರಿಯುರುನಲ್ಲಿ ನಡೆದ ಈಕವಿ ಸಭೆ ವರದಿ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಈ-ಕವಿ ಮೊದಲನೆ ಸಭೆಯು ಜನವರಿ 25, 2009ರಂದು ಬೆಳಿಗ್ಗೆ 11-00ಗಂಟೆಗೆ ಹಿರಿಯೂರಿನ ಜಿ.ಎಚ್.ವಸಂತಕುಮಾರ್ ರವರ ಮನೆಯಲ್ಲಿ ನಡೆಯಿತು. ಕುಮಾರಿ ರತ್ನ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಕೀಲರಾದ ಶ್ರೀ ಆರ್.ನಿಜಲಿಂಗಪ್ಪ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚಿತ್ರದುರ್ಗದ ಲಕ್ಷ್ಮಿನಾರಾಯಣ ತೊದಿನ್ನಯ್ಯ, ಪುಷ್ಪಲತಾ ಲಕ್ಷ್ಮಿನಾರಾಯಣ, ಚಿತ್ತಾರದುರ್ಗ ಖ್ಯಾತಿಯ ಆರ್.ರಾಘವೇಂದ್ರ ರವರು ಆಗಮಿಸಿದ್ದರು.
ಕನ್ನಡ ಭಾಷೆ, ನೆಲದ ಮೇಲಿನ ಅಭಿಮಾನದಿಂದ ಬಿ.ವಸಂತ್ ರವರು ತಮ್ಮ ತಾಲ್ಲೂಕಾದ ಹಿರಿಯೂರಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡುವ ಸಲುವಾಗಿ ಈ-ಕವಿ ಸಂಸ್ಥೆಯ ಒಂದು ಶಾಖಾ ಘಟಕವನ್ನು ತೆರೆಯಲು ತೀರ್ಮಾನಿಸಿದರು. ಅದರಂತೆ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾ, ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಭೆಯನ್ನು ನಡೆಸಿಕೊಡುವಂತೆ ವಕೀಲರಾದ ಆರ್.ನಿಜಲಿಂಗಪ್ಪರವರನ್ನು ಕೋರುತ್ತಾ ಸಭೆಗೆ ಸ್ವಾಗತಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಲಕ್ಷ್ಮಿನಾರಾಯಣ ತೊದಿನ್ನಯ್ಯ ಹಾಗೂ ಚಿತ್ತಾರದುರ್ಗದ ರಾಘವೇಂದ್ರ ರವರನ್ನು ಸಭೆಗೆ ಸ್ವಾಗತಿಸಿದರು. ಈ ಪ್ರಥಮ ಆಸಕ್ತರಾಗಿ ಆಗಮಿಸಿದ್ದ ಎಲ್ಲಾ ಸಭಿಕರಿಗೂ ಸ್ವಾಗತ ಮಾಡಿದರು.
 
ಲಕ್ಷ್ಮಿನಾರಾಯಣ ತೊದಿನ್ನಯ್ಯರವರು ಮಾತನಾಡುತ್ತಾ, ನಮ್ಮ ಭಾಷೆ, ನೆಲಕ್ಕೆ ಅಭಿಮಾನದಿಂದ ನಾವು ನಮ್ಮ ನಾಡಿಗೆ ಸೇವೆ ಸಲ್ಲಿಸದಿದ್ದರೆ ನಮ್ಮ ಜನ್ಮ ನಿರರ್ಥಕ; ಆದ್ದರಿಂದಲೇ ನಾವು ನಮ್ಮ ಕನ್ನಡ ನಾಡು-ನುಡಿಯ ಅಗತ್ಯ ಸೇವೆ ಸಲ್ಲಿಸಿದಾಗಲೇ ಸಾರ್ಥಕ ಎಂದು ಹೇಳುತ್ತಾ ಈ-ಕವಿ ಸಂಸ್ಥೆಯು ರಚನೆಯಾದದ್ದು ಯಾವಾಗ, ಎಲ್ಲಿ, ಹೇಗೆ ಎಂಬುದನ್ನು ವಿಸ್ತರಿಸಿದರು. ಈ-ಕವಿ ಸಂಸ್ಥೆಯು ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಗಾಗಿ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳು, ಸಂಸ್ಥೆಯ ರೂಪುರೇಷೆಗಳು ಮುಂತಾದ ವಿಚಾರವಾಗಿ ಸವಿಸ್ತಾರವಾಗಿ ಹೇಳಿದರು. ಈ ಹಿಂದೆ ದಿನಾಂಕ: 11-01-2009ರಂದು ಚಿತ್ರದುರ್ಗದಲ್ಲಿ ನಡೆದ ಈ-ಕವಿಯ ಸಭೆಯ ಕುರಿತು ಹೇಳುತ್ತಾ, ಈ-ಕವಿಯ ಮೂಲ ಉದ್ದೇಶಗಳನ್ನು ತಿಳಿಸಿ, ಈ-ಕವಿ ಮುಖಾಂತರ ಸೇವೆ ಸಲ್ಲಿಸಲು ಕರೆ ನೀಡಿದರು.
 
 
ಚಿತ್ತಾರದುರ್ಗ.ಕಾಂ website ಖ್ಯಾತಿಯ ರಾಘವೇಂದ್ರರವರು ಮಾತನಾಡುತ್ತಾ ಈ-ಕವಿ ಸಂಸ್ಥೆಯ ಕಾರ್ಯಯೋಜನೆಗಳ ರೂಪುರೇಷೆಯನ್ನು ವಿವರಿಸಿದರು. ಮಾಹಿತಿ ತಂತ್ರಜ್ಞಾನ ವಂಚಿತರಾಗಿರುವುದರಿಂದ ಈ-ಕವಿಯ ಮಹತ್ವ ಗ್ರಾಮಾಂತರ ಪ್ರದೇಶಕ್ಕಾಗಿ ತಿಳಿಯದಾಗಿದೆ. ಆದುದರಿಂದ ಮಾಹಿತಿ ತಂತ್ರಜ್ಞಾನದ ಮಹತ್ವ ಹಾಗೂ ಅಗತ್ಯತೆ ಬಗ್ಗೆ ಗ್ರಾಮ್ಯ ಜನರಲ್ಲಿ ಅರಿವು ಮೂಡಿಸುವಂತೆ ಕೋರಿದರು. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ, ಬಡಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಿಸುವ, ಬಡಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸವ ಪ್ರಮುಖ ಕಾರ್ಯಕ್ರಮಗಳನ್ನು ಈ-ಕವಿ ಸಂಸ್ಥೆ ಹೊತ್ತುನಿಂತಿದೆ. ಆದುದರಿಂದ ನಾವೆಲ್ಲಾ ಒಂದುಗೂಡಿ ಈ-ಕವಿ ಸಂಸ್ಥೆಯ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು. ಸಾವಿರಾರು ಮೈಲುಗಳಾಚೆ ದೂರದಲ್ಲಿದ್ದುಕೊಂಡು ನಮ್ಮ ಕನ್ನಡ ನೆಲದ ಬಗ್ಗೆ ಹಗಲಿರುಳು ಚಿಂತಿಸಿ, ನಮ್ಮಲ್ಲರಿಗೆ ಉತ್ತೇಜನ ನೀಡಿ ಕನ್ನಡಪರ ಕೆಲಸಗಳಿಗೆ ಕೈಹಾಕುವಂತೆ ಮಾಡುತ್ತಿರುವ ಈ-ಕವಿಯ ಅಧ್ಯಕ್ಷರಾದ ಶ್ರೀ ವಿ.ಎಂ.ಕುಮಾರಸ್ವಾಮಿ ರವರನ್ನು ಸ್ಮರಿಸುತ್ತಾ ಅವರ ನಿರುಪಸ್ಥಿತಿಯಲ್ಲಿಯೇ ಅವರ ಧನ್ಯವಾದಗಳನ್ನು ಅರ್ಪಿಸಿದರು. ನಾವೆಲ್ಲರೂ ಒಗ್ಗಟ್ಟಾಗಿ, ಪರಿಶ್ರಮ ವಹಿಸಿ, ನಾಡು-ನುಡಿಯ ಸೇವೆಯ ಮಾಡೋಣ ಬನ್ನಿ ಎಂದು ನೆರೆದಿದ್ದ ಎಲ್ಲರಿಗೂ ಕರೆ ನೀಡಿದರು.
 
 
ಸರ್ಕಾರಿ ಶಾಲಾ ಶಿಕ್ಷಕಿಯಾದ ಕುಮಾರಿ ಚಂದ್ರಕಲಾ,  ರವರು ಮಾತನಾಡುತ್ತಾ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದಲೇ ಸಾಕಷ್ಟು ಅನುದಾನ ಹಾಗೂ ಮೂಲಭೂತ ಸೌಕರ್ಯಗಳು ಬರುತ್ತಿವೆಯಾದ್ದರಿಂದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದೇ ಬೇರೆ ಸೌಕರ್ಯವಂಚಿತ ಖಾಸಗಿ ಶಾಲೆಗಳನ್ನು ದತ್ತು ತೆಗೆದುಕೊಂಡು ಸೌಕರ್ಯ ಒದಗಿಸುವಂತೆ ಕೋರಿದರು. ಹಾಗೂ ಕೇಶವಮೂರ್ತಿಯವರು ಮಾತನಾಡುತ್ತಾ ಜನತೆಗೆ ಈ-ಕವಿ ಸಂಸ್ಥೆಯ ಪರಿಚಯವನ್ನು ಮಾಡಲು ನಾವು ಇನ್ನಷ್ಟು ಕಾರ್ಯಪ್ರಬುದ್ಧರಾಗಬೇಕು. ತಿಂಗಳಿಗೊಮ್ಮೆಯಾದರೂ ಸಭೆ ಸಮಾರಂಭಗಳನ್ನು ಏರ್ಪಡಿಸಿ, ಜನರಿಗೆ ಈ-ಕವಿಯ ಸಂಸ್ಥೆಯ ಗುರಿ ತಲುಪುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ಪ್ರಯುಕ್ತ ರಾಘವೇಂದ್ರ ರವರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಈ-ಕವಿಯ ಮಾಸಿಕವನ್ನು ತರುವ ಯೋಜನೆಯ ಕುರಿತು, ಈ-ಕವಿಯ ಅಧ್ಯಕ್ಷರ ಗಮನಕ್ಕೆ ಶೀಘ್ರದಲ್ಲೇ ಅದನ್ನು ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯ ಗಮನಕ್ಕೆ ತಂದರು. ವಿ.ಆರ್.ಪ್ರತಿಭ, ಮಂಜುಳ, ರತ್ನ.ಜಿ. ಸೇರಿದಂತೆ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ನೀಡಿದರು.
 
 
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರಾದ ಆರ್.ನಿಜಲಿಂಗಪ್ಪ ರವರು ಮಾತನಾಡುತ್ತಾ “ನನಗೆ ತುಂಬಾ ಖುಷಿಯಾಗಿದೆ. ಈ ದಿನ ನಾವು ಕನ್ನಡವನ್ನು ಮರೆತು, ಇಂಗ್ಲಿಷ್ ಭಾಷೆಯ ವ್ಯಾಮೋಹಿಗಳಾಗಿ ನಮ್ಮತನವನ್ನು ನಾವು ಮರೆಯುತ್ತಿದ್ದೇವೆ. ಅದಕ್ಕಾಗಿ ಇನ್ನಾದರೂ ಎಚ್ಚೆತ್ತು, ಕನ್ನಡ ಭಾಷೆ, ನೆಲದ ಅಭಿವೃದ್ಧಿ ಶ್ರಮಿಸಬೇಕು. ರಾಘವೇಂದ್ರ ರವರು ಹೇಳಿದಂತೆ ಈ-ಕವಿಯ ಮಾಸಿಕವನ್ನು ಮಾಡಿ, ಜಿಲ್ಲೆಯ, ರಾಜ್ಯದ, ದೇಶದ ಹಾಗೂ ಪ್ರಪಂಚದ ಮೂಲೆಮೂಲೆಯಲ್ಲಿನ ಎಲ್ಲಾ ಕನ್ನಡಿಗರಿಗೆ (ಮಾಹಿತಿ ತಂತ್ರಜ್ಞಾನೇತರರಿಗೂ) ತಲುಪುವಂತೆ ಮಾಡಬೇಕು. ನಾವು ಇಲ್ಲಿ ಬಂದು ನಮ್ಮ ಸಮಯ ವಿನಿಯೋಗಿಸಿ, ಈ ಕುರಿತು ಚರ್ಚೆ ಮಾಡಿರುವುದು ತುಂಬಾ ಉಪಕಾರಿಯಾಗಿದ್ದು, ಇದನ್ನು ಸದ್ಬಳಕೆ ಮಾಡಲು ನಾವೆಲ್ಲಾ ಸನ್ನದ್ಧರಾಗಬೇಕು” ಎಂದು ಹೇಳುತ್ತಾ ತಮ್ಮ ಅಧ್ಯಕ್ಷ ಭಾಷಣವನ್ನು ಮುಗಿಸಿದರು.
 
 
ಬಿ. ವಸಂತ್ ರವರು ಮಾತನಾಡುತ್ತಾ ಈ-ಕವಿ ನಡೆದು ಬಂದ ಹಾದಿಯ ಬಗ್ಗೆ ವಿಸ್ತಾರವಾಗಿ, ಎಳೆಎಳೆಯಾಗಿ ತಿಳಿಹೇಳಿದರು. ನೆರೆದ ಎಲ್ಲಾ ಸಭಿಕರಿಗೂ ಈ-ಕವಿಯ ಕುರಿತು ಮತ್ತೊಮ್ಮೆ ಸವಿಸ್ತಾರವಾಗಿ ಹೇಳುತ್ತಾ, ಈ-ಕವಿಯ ಸಾಧನೆಗಳ ಕುರಿತು ಹೇಳಿದರು. ಅದರು ಗುರಿಗಳನ್ನು ಬಗ್ಗೆ ಹೇಳುತ್ತಾ, ನಾವೆಲ್ಲರೂ ಸೇರಿ ನಮ್ಮ ತಾಲ್ಲೂಕು, ಜಿಲ್ಲೆಗೆ ಸೇವೆ ಸಲ್ಲಿಸೋಣ ಎಂದು ಹೇಳಿದರು. ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹೊತ್ತಿದ್ದ ಇವರು ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ಕಾರಣರಾದವರು.
 
 
ಜಿ.ಹೆಚ್.ವಸಂತ್ ಕುಮಾರ್ ನಾವು ಕನ್ನಡಮ್ಮನ ಸೇವೆ ಸದಾ ಸಿದ್ದರಾಗಿರೋಣ ಎಂದು ಹೇಳುತ್ತಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆರ್.ನಿಜಲಿಂಗಪ್ಪ ರವರಿಗೆ, ಅತಿಥಿಗಳಾಗಿ ಭಾಗವಹಿಸಿದ್ದ ಲಕ್ಷ್ಮಿನಾರಾಯಣ ತೊದಿನ್ನಯ್ಯರವರಿಗೆ, ಶ್ರೀಮತಿ ಪುಷ್ಪಲತಾ ಲಕ್ಷ್ಮಿನಾರಾಯಣ ತೊದಿನ್ನಯ್ಯ ರವರಿಗೆ ಹಾಗೂ ಚಿತ್ತಾರದುರ್ಗದ ರಾಘವೇಂದ್ರ ರವರಿಗೆ ಹಾಗೂ ನೆರೆದ ಎಲ್ಲಾ ಸಭಿಕರಿಗೆ, ವಿಶೇಷವಾಗಿ ಈ ಕಾರ್ಯಕ್ರಮದ ನಿರೂಪಣೆ ಮಾಡಿ, ಕಾರ್ಯಕ್ರಮದ ಜವಬ್ದಾರಿ ಹೊತ್ತುನಿಂತಿದ್ದ ಬಿ.ವಸಂತ್ ರವರಿಗೆ ವಂದನಾರ್ಪಣೆಯನ್ನು ಸಲ್ಲಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

 
R Raghavendra
www.chitharadurga.com (A first Kannda website of Chitradurga District)
http://durgasahityasammelana.blogspot.com (75ನೇ ಕನ್ನಡ ಸಾಹಿತ್ಯ ಸಮ್ಮೇಳನ, ಚಿತ್ರದುರ್ಗದ ಕುರಿತು ಸಮಗ್ರ ವರದಿ)
http://banadahoogalu.blogspot.com (ಆರ್.ರಾಘವೇಂದ್ರ ರವರ “ಬನದ ಹೂಗಳು” ಕವನ ಸಂಕಲನ)
 ______________
ದಿನಾಂಕ ೨೫ -೦೧-೨೦೦೯ ರಂದು ಹಿರಿಯುರುನಲ್ಲಿ ನಡೆದ ಈಕವಿ ಸಭೆಯಲ್ಲಿ ಬಾಗವಹಿಸಿದವರ ವಿವರ.
 
B VASANTH., Eshvaragere, Hiriyur Taluk., +91 99802 99736., vasu_esh@rediffmail.com
G H VASANTH KUMAR ., Vedavathi Nagara, Hiriyru ., +91 99454 94029., vasu_anne@yahoo.com
CHANDRAKALA., D/o Chitralingappa, Hindasakatte, Yalladakere, Hiriyur Taluk
V.R.PRATHIBHA., D/o B.Rangaswamy, Vedavathinagara, Hitriyur
RATHNA G., D/o Gurumurthy, Infront of B.L.Gowda house, Vedavathinagara, Hiriyur
KESHAVAMURTHY., S/o T.V.Kariyanna, V.V.C.S.F, S.C.H.S, No. 80, Hiriyur
MANJULA V, D/o VENKATAPPA, Opp. Sent Anns School, Hiriyur
NAVEENAKUMARI., D/o Rajanna, H.M.Halli, Hiriyur taluk
S. MANJULA., W/o Suresh, Gowdanahally, Hiriyur taluk
R. NIJALINGAPPA., S/o Ramalingappa, Advocate, Behind Maruthi high school, Vedavathi nagara, Hiriyur taluk
B HANUMANTHAPPA., S/o Basavarajappa, Kyadiggere, Hiriyur taluk
 
Mr. Laximinarayana Thodinnaya, Chitradurga Taluk
Mrs. Pushpalatha Laximinarayana Thodinnaya, Chitradurga Taluk
Mr. Raghavendra, Challakere Taluk
______________________________________________________
 
ekavi Jan 25th 09 meeting at HIRIYUR Taluk- photo album
http://picasaweb.google.com/bmsceiaa/EkaviJan25th09MeetingAtHIRIYUR#
 
_______________________________________________________

Advertisements

February 7, 2009 - Posted by | EKAVI CHITRADURGA |

1 Comment »

  1. i need history about my native yalladakere

    Comment by Mahantesha | January 2, 2010 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: