Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

manasa – ಮಾನಸ

manasa – ಮಾನಸ (70 members)

ಬದುಕಿನ ಅಸಂಖ್ಯ ಸಾಧ್ಯತೆಯ ಬಗೆಗೊಂದು ಅಚ್ಚರಿ, ಅರಳುತ್ತಿರುವ ಯುವ ಮನಸ್ಸುಗಳ ಕಡೆಗೊಂದು ನಿಷ್ಕಲ್ಮಶ ಕಾಳಜಿ, ಮನಸ್ಸೆಂಬ ಮಾಯಾಲೋಕದ ಆಳ ವಿಸ್ತಾರಗಳನ್ನು ಬಿಚ್ಚಿಡುವ ತವಕ, ಬದುಕೆಂದರೆ ಹೀಗೋ ತಮ್ಮ ಎಂದು ಪಕ್ಕದಲ್ಲಿ ಕುಳಿತು ಹೇಳುವ ಹಿರಿಯಣ್ಣನ ಸಲುಗೆ, ಬಸಿದಷ್ಟೂ ಕರಗದ ಉತ್ಸಾಹ, ಲವಲವಿಕೆಯೊಂದಿಗೆ ಮೂಡಿರುವ ಮನಸುಗಳ ಕನ್ನಡಿಯಲ್ಲಿನ ಅಕ್ಷರಗಳ ಪ್ರತಿಬಿಂಬವೇ ‘ಮಾನಸ’.
ಕೆ.ಗಣೇಶ ಕಡೂರು ಎಂಬ ಪ್ರತಿಭಾವಂತ ಬರಹಗಾರ ಅದೆಷ್ಟು ದಿನ ಇಂತಹ ಪತ್ರಿಕೆಯೊಂದನ್ನು ಕಟ್ಟಿಕೊಡಲು ಹೊಂಚು ಹಾಕಿ ಕುಳಿತಿದ್ದನೋ ಎನ್ನುವ ಇಂಟೆನ್ಸಿಟಿಯೊಂದಿಗೆ, ಭಯಂಕರ ಫೋರ್ಸಿನೊಂದಿಗೆ ‘ಮಾನಸ’ ಎಂಬ ಅಜಮಾಸು ಐವತ್ತು ಪುಟಗಳ ರುಚಿಕಟ್ಟಾದ ಮಾಸ ಪತ್ರಿಕೆಯೊಂದನ್ನು ಹೊರತರುತ್ತಿದ್ದಾರೆ.
ಕಣ್ಣು ಬಿಟ್ಟು ಮೂರು ತಿಂಗಳಾಗಿರುವ ಈ ‘ಮಾನಸ’ಳ ಒಡಲಲ್ಲಿ ಏನುಂಟು, ಏನಿಲ್ಲ? ಓದಲ್ಲಿ ಆಸಕ್ತಿ ಕಳೆದುಕೊಂಡು ಕುಳಿತ ಹುಡುಗನಿಗೆ, ಬದುಕು ಕಟ್ಟಿಕೊಳ್ಳುವ ಹೊಸ್ತಿಲಲ್ಲಿ ನಿಂತಿರುವ ಯುವಕನಿಗೆ, ಮನಸ್ಸೆಂಬ ಗಾಂಧಿನಜಾರಿನಲ್ಲಿ ಪ್ರೇಮದ ಕೈಯಲ್ಲಿ ಬದುಕು ಕೊಟ್ಟ ಪ್ರೇಮಿಗಳಿಗೆ ತೀವ್ರ ಕಾಳಜಿಯಿಂದ, ತಾಯಿಯ ಮಮತೆಯಿಂದ, ಗೆಳೆಯನ ಆತ್ಮೀಯತೆಯಿಂದ, ಬರೆಯುವ ಲೇಖಕ-ಲೇಖಕಿಯರ ಸಮರ್ಥ ತಂಡವೇ ‘ಮಾನಸ’ಳ ಮನೆಯಲ್ಲಿದ್ದಾರೆ. ಜೀವಂತಿಕೆ, ಲವಲವಿಕೆಯೆನ್ನುವುದು ಪುಟ-ಪುಟದಿಂದ ತೊಟ್ಟಿಕ್ಕುವಂತೆ ಭಾಸವಾಗುತ್ತದೆ.

ಪ್ರತಿಗಳು ಬೇಕಾ ಹಾಗಾದರೆ ಸಂಪರ್ಕಿಸಿ: 9845276292
mns_manasa@yahoo.com

March 9, 2008 - Posted by | KANNADA

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: