Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

avaligaagi mattu O!gelathi..Dheerendra Nagarahalli

Kannadigare nimma anisikagallannu tilisi about Dheerendra Nagarahalli

ಅವಳಿಗಾಗಿ….?

ಅವಳಿಗಾಗಿ….ಸ್ನೇಹಿತರೇ ಹೀಗಿದೆ ಹೆಸರು…?
ಇದು ನಿನ್ನ ತುಟಿಯ ಮೇಲೆ ಚಿಮ್ಮುತ್ತಿರುವ ಹತ್ತಾರು ಪ್ರೆಶ್ನೆಗಳಿಗೆ ಉತ್ತರ!
ಇದು ಅವಳ ಆ ದ್ರೋಹದ ಧಗೆಗೆ ತುಂತುರು!
ಹೊಸಕಿ ಹೋದ ಕನಸುಗಳ ಹೊಸ ಹಾದಿ!
ಹೌದು! ಕಡಳಷ್ಟು ಪ್ರೇಮದ,ಸಣ್ಣ ದ್ರೋಹದ ಅದದೇ ಕಥೆ!
ಇದು ನನ್ನ ಹೊಸ ಕವನ ಸಂಕಲನ!
“ಚೈತ್ರಗಳ ಸೋಲು….!” ಗಳಿಗಿಂತ ಭಿನ್ನ.
ಇದು ಹನಿ ಹನಿ ಕವನ ಗಳ ಗುಚ್ಛ!

…..ಬೇರೆಯಾರಿಗೂ ಅಲ್ಲ!

ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ!

ಓ! ಗೆಳತಿ!

ಅಯ್ಯೂ……!!!!
ಗೆಳಯರೇ ,”ಆವಳಿಗಾಗಿಯೇ …!” ಗುಚ್ಛ ದಿಂದ
ಸಣ್ಣ ಪಕಳೆ ಜಾರಿ ಬಿದ್ದಿದೆ ಓದಿ!
ಎದೆ ಭಾರ ವಾದರೆ? ನನ್ನ ದೂರದಿರಿ!ಓ! ಗೆಳತಿ!
———
ಓ! ಗೆಳತಿಯೇ,
ನನ್ನೆದೆಯನ್ನು ಒದ್ದೋಡುವ,
ಇರಾದೆ ಇದ್ದಿದ್ದೇ ಆಗಿದ್ದರೆ,
ಒಂದು ಕಣ್ಸನ್ನೆ ಸಾಕಿತ್ತು!
ಈ ಹೃದಯವನ್ನೆ ಹಾಸಿರುತಿದ್ದೆ,
ನಿನ್ನ ಪಾದದಡಿಗೆ!

ಕಡೆಯಾದೆ…?

ಹೃದಯ ಒದ್ದ ಗೆಳತಿ,ಏರಿದಳು…ಏರಿದಳು…
ಕೈಗೆ ಸಿಗದಂತೆ ಏರಿದಳು…!ಎತ್ತರದಲಿ ನಿಂತ ಮೇಲೆ……ಮುಂದೇನಾಯಿತು…?
ಓದಿ…!
ಅದು ನಿಮ್ಮದೇ ಒಂದು ಅಂಗ ಕತ್ತರಿಸಿ ತೆಗೆದಂತೆ ಅನ್ನಿಸಿದರೆ,ಹಿಂಸೆಯಾದರೆ,
…ನೂಂದು ಕೊಳ್ಳಬೇಡಿ!ಕಡೆಯಾದೆ…?
———
ಅವಳೇರುವ ಎತ್ತರಕ್ಕೆ,
ಏಣಿಯಾದೆ!
ಎತ್ತರದಲಿ ನಿಂತಮೇಲೆ,
ನಾ ಬೇಡವಾದೆ!
ಕಾಲ ಧೂಳಿಗಿಂತಲೂ,
ಕಡೆಯಾದೆ!

ಮಡಿಲು..!

ಪ್ರೀತಿಯ ಸುರಿದ ಆ ಒಡತಿ!ನಂತರ ದ್ರೂಹಿ ಅದದ್ದೇನೋ ನಿಜ.
ಅದರೂ ಪ್ರೀತಿಯ ಅಮೃತ ನೀಡಿದ್ದು ಸುಳ್ಳೆ?ಅವಳ ಸಾಮಿಪ್ಯವೇ
ಸ್ವರ್ಗ!ಹೊಸ ಹಾದಿ ಹಾಡು ,ಓದಿ!ಹೊಟ್ಟೆ ಕಿಚ್ಚು ಯಾದೀತು!ಮಡಿಲು..!
ನಿನ್ನ ಮೆದು ಮಡಿಲಲಿ,
ಮಲಗಿರಲು ಕನಸುಗಳು ಬಗೆ ಬಗೆ!
ಬದುಕೆಲ್ಲವೂ ಬಣ್ಣ ಬಣ್ಣ!
ಮನಸಿನ ಹಾಡೆಲ್ಲವೂ ನಿನದೆ ರಾಗ!
ನನಗೇನ್ನೇನು ಬೇಕು?

ಸೋಲು…!

ಸೋಲು…!ಆ ಮಾಟಗಾತಿ ನಗುವಿನ ಹಿಂದಿನ ಮರ್ಮ ತಿಳಿಯದು.
ಅವಳ ಸಿಹಿ ಮಾತು ಮುಂದೊಮ್ಮೆ ಬಾಳಿನ ಹಾಲಹಲ.
ಹೌದು! ನಮ್ಮದಲ್ಲದ ಪ್ರೀತಿಯನ್ನು ದಕ್ಕಿಸಿ ಕೊಂಡಾಗ,
ಅದು ಗೆಲುವೆಂದು ಅಂದುಕೊಳ್ಳುತ್ತೇವೆ.ನಿಜವಾದ ಅರ್ಥ ದಲ್ಲಿ ಅದು ಗೆಲುವಲ್ಲ!
ನಮ್ಮದೆಲ್ಲರ ಸೋಲಿನ ಆರಂಭ ಮತ್ತು ನಮ್ಮೆಲ್ಲರ ಅಂತ್ಯ ದ ಆರಂಭ.

ಗೆಳೆಯರೇ ಒಂದು ಸಣ್ಣ ಎಚ್ಚರಿಕೆ:

ಮುಗುಳು ನಗೆಗೆ ಜಾರಿ ಬಿದ್ದೆ.
ಸಿಹಿ ಮಾತಿಗೆ ಸೋತು ಗೆದ್ದೆ..!
ಅವಳು ಸಿಗಲಾರದೆ…,
ಇನ್ನೆಂದು ಪ್ರೀತಿ ಎನ್ನದ ಹಾಗೆ,
ಮನಸೆ ಮುರಿದು ಕೊಂಡು ಅಂಗಾತ ಮಲಗಿದ್ದೆ!
ನಾ ಮಲಗಿ ಮಲಗಿ ಸೊರಗಿದ್ದೆ!

ನೆನಪು…..?

‘ನೆನಪು’ ಯಾವತ್ತೂ ಪುಳಕವನ್ನೇ ತರುವುದಿಲ್ಲ.
ಅದು ‘ಆವಳ’ ನೆನಪು ಮಧುರವೇ ಸೈ!
ನೆನೆದಾಗಲೊಮ್ಮೆ ರೋಮಾಂಚನ!ಅದೇ ನೆನಪು-ಅವಳ ಆ ‘ದ್ರೋಹ’ ದ ಹಿಂದೆ ಬಂದರೇ:
ಮುಗಿಯಿತು! ಅದು ‘ಧಗ್ಗ್’ಎನ್ನುವ ಸಮಯ.ಅದು ಜೀವಗಳು ಹೊತ್ತಿ ಉರಿಯುವ ಕ್ಷಣ. ಅಲ್ಲಿ ಒಂದು ಸುಳ್ಳು,ಮುರಿದ ಮಾತು,ಕಹಿಯಾದ ಹಿಂದಿನ ಕಥೆ,ಯಾವುದೂ ನೆನಪಿಗೆ ಬರಲ್ಲ.ಅಲ್ಲಿ ಉಳಿದಿರುವುದು ಬದಿಗಿಟ್ಟ ಬದುಕು.ಹೌದು! ಅಲ್ಲಿ ಬೇರೆ ಏನು ಕಾಣಲ್ಲ ಆ ‘ದ್ರೋಹ’ದ ವಿನಃ.
ನನಗೊಬ್ಬನಿಗೆ ಅವಳ ನೆನಪು ಏಕೆ ಕಾಡಬೇಕು?ಅವಳಿಗೂ ನನ್ನ ನೆನಪು ಕಾಡಬೇಕು ಅದು ಅವಳು ಸತ್ತು ಹೋಗುವಷ್ಟು!”ಅವಳಿಗೆ…,ನನ್ನ ನೆನಪಾಗಲ್ಲ ಏಕೆ?”

ನೆನಪು…..?

‘ನೆನಪೇ ‘- ನನ್ನನೊಂದೇ? ಹೀಗೆ ಕಾಡದಿರು,
ನಗುವಾಗಿ,ಬೆಳಗಾಗಿ,ಬೈಗಾಗಿ….,
ಮನಸಾಗಿ,ಕನಸಾಗಿ!ಅಷ್ಟಿಷ್ಟು.
ಈ ಪ್ರೀತಿ ನನ್ನೊಬ್ಬನದಲ್ಲ.
ಅವಳನ್ನೂ ಕಾಡು!
ಅವಳು ಸತ್ತು ಹೋಗುವಷ್ಟು!
ನನ್ನನ್ನು ಮರೆಯದೇ ಇರುವಷ್ಟು.

ದ್ರೋಹ!

“ಹೌದು ಅದೆಲ್ಲಾ ಸರಿ!
ಪ್ರತಿ ಸಾರಿ ಯೂ ಹುಡುಗಿಯರೇ ಏಕೆ ಡಿಚ್ ಮಾಡ್ತಾರೆ,
ಹುಡುಗರೇ ಏಕೆ ಡಿಚ್ ಮಾಡಿಸಿ ಕೊಳ್ತಾರೆ?”ದ್ರೋಹ!
———–

ದ್ರೋಹವೆಂದರೆನೆಂದು ನಿನ್ನಿಂದಲೇ
ಕಲಿಯಬೇಕು!
ದಶಕಗಳ ದ್ವೇಷವೆಂಬಂತೆ ಒಂದು
ಸಣ್ಣ ಸುಳ್ಳು ಹೇಳಿಬಿಟ್ಟೆ!
ಪ್ರೀತಿಸಿಯೂ ಪ್ರೀತಿಸಿಲ್ಲ ವೆಂದು ಬಿಟ್ಟೆ.
ನನ್ನದೊಂದು ಮಾತಿತ್ತು ಅದ ಮುಗಿಸುವ ಮೊದಲೇ,
ಅಲ್ಲಿಂದ ಹೊರಟು ಬಿಟ್ಟೆ!

ಉರಿಯುತಿದೆ ಜೀವ …!

ನಂಗೊತ್ತಿತ್ತು ನಾವಿಬ್ಬರೂ ಹೋಗ್ತಾ ಇರೋ ಆ ಏರೋಪ್ಲೇನ್ ಗೆ ಬೆಂಕಿ ಬಿದ್ದಿದೆ ಎಂದು.
ನೀನು ತುಂಬ ಜಾಣೆ ಇದ್ದ ಒಂದೇ ಒಂದು ಪ್ಯಾರಚುಟ್ ನ್ನು ನಿನ್ನ ಬೆನ್ನಿಗೆ ಕಟ್ಟಿ ಕೊಂಡು
ನೀ ಬಚಾವದೇ.ಉರಿಯುವ ಏರೋಪ್ಲೇನ್ ನಿಂದ ನಾನು ಹ್ಯಾಗೋ ಬಚವಾದೆ.ಆ ಮಾತು ಬೇರೆ!
ಆದರೇ ಈಗ ನನ್ನ ಮನವೇ ಹೊತ್ತಿ ಉರಿತಾ ಇದೆ!ಅದು ಧಗ ಧಗಿಸಿ ಉರಿಯಲು ನೀನಲ್ಲದೆ ಮತ್ತಿನ್ಯಾರು ಕಾರಣ!”….ಅದು ಬದುಕು ಉರಿಯುವ ಪರ್ವ ಕಾಲ….”

ಉರಿಯುತಿದೆ ಜೀವ …
ಧಗ ಧಗನೇ…!
ನುಂಗಿ ಒಳಒಳಗೆ ನೋವ.

ಹೇಳಲು ಆಗದು
ನುಂಗಲು ಬಾರದು ಈ ನೋವ
ಇದು ನೋವಲ್ಲ ನಿಗಿ ನಿಗಿ ಕೆಂಡದ ‘ಲಾವ’!

ಬಹುಶಃ ಅವನ ಉದ್ದೇಶ ಅದೆ ಅಗಿತ್ತೇನೋ…?
ಆ ಯಮಹ ದ ಗುಟುರು ನನ್ನನ್ನ ಮೊದಮೊದಲು ಬೆಚ್ಚಿ ಬೀಳಿಸ್ತಾ ಇತ್ತು!
ನಂತರ ಕಾಲೇಜಿನಲ್ಲಿಅವನ್ನ ನೋಡಿದ ಮೇಲೆ ಅನ್ನಿಸಿತ್ತು…ಅವನ ಆ ಯಮಹ ದ
ಗುಟುರು ಕೇವಲ ನನಗಾಗಿ ಯೇ ಎಂದು.ಮುಂದಿನ ದಿನಗಳಲ್ಲಿ ಅದೆ ಗುಟುರುಗಾಗಿ ನಾನು ಕಾದು
ಕುಳಿತಿರ್ತಾ ಇದ್ದೆ.ಮುಂದೆ ಅದೆ ಕಣ್ಣಾಗಿ,ಸ್ನೇಹವಾಗಿ …….ಪ್ರೇಮವೂ ಆಗಿ ಹೋಯ್ತು!”….ಅವನೂ ಯಮಹ ದ ರಣ ಗಾಂಭಿರ್ಯ ; ನಾನೋ ಫೋರ್ಡ್ ಐಕಾನ್ ನ ವಯ್ಯಾರ್….”

ಕಣ್ಣನು ನೋಡಿದೆ…,
ಮಾತನು ಆಡದೆ..,ಪ್ರೀತಿಯ ಮಾಡಿದೆ!
ಮನಸಿನ ಮಾತಿಗೆ ಕನಸಿನ ಕಥೆ ಗೆ,
ನಿನ್ನಯ ಹೆಸರ ನಾ ಬರೆದೆ!
ವೇಗವು ನೀನು ಆಮೆಯು ನಾನು,
ಅದರೂ ಪ್ರೀತಿ ಅಯಿತು ನೋಡು!

–ಅವಳು

ನೀನಿಲ್ಲದೆ!

ಮಾತಾಗದ ಮಾತು ಗಳು
ಕನಸಾಗದ ಕನಸಗಳು…
ಹಾಡಾಗದೆ ಉಳಿದ ಸ್ವರಗಳು..
ನೂರಿಹುವು,
ನೀನಿಲ್ಲದೆ!
ದಿನಗಳೆಲ್ಲವೂ ದಿನಗಳಲ್ಲಾ…!
ನಿದಿರೆಗಳೆಲ್ಲವೂ ಅರ್ದ ವಾಗೆಹೆವಲ್ಲ..!
ಬದುಕೆಲ್ಲಾ ಬದುಕಲ್ಲಾ!
ನೀನಿಲ್ಲದೆ

ಆ ಮೂಕ ಭೇಟಿ…!

ಮಾತು ಮಾತಿಗೆ ಮುನಿಯದಿರು
ಗೆಳತಿ!
ನಿನೇ ಮುನಿದರೆ ಮಾತೆಲ್ಲಿಯದು
ನನಗೆ!
ಮಾತಿಲ್ಲದ ಆ ಮೂಕ ಭೇಟಿಗೆ
ಅರ್ಥವೆಲ್ಲಿಯದು?

ಇನ್ನೇನು ಬೇಕು?

ನಿನ್ನ ಆ ಬಟ್ಟಲು ಕಂಗಳಲಿ,
ನನ್ನದೆ ಬಿಂಬ.
ನನ್ನ ಕನಸುಗಳ ಆ ಪಸೆಯಲಿ,
ನೀನೇ ನೀನು.
ನಮ್ಮಿಬ್ಬರ ಈ ‘ಪ್ರೀತಿ’ಗೆ
ಆ ‘ಚಡಪಡಿಕೆ’ಗೆ ಇನ್ನೇನು ಬೇಕು?ಧೀರೇಂದ್ರ ನಾಗರಹಳ್ಳಿ

ಮುಗಿಯದ ಮಾತು…!

ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.

ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ ಮತ್ತೊಬ್ಬರ ತೆಕ್ಕೆಯಲಿ ಮಿಂದು.

VIJAY wrote about Dheerendra Nagarahalli

ಧೀರು ನಾಗರಹಳ್ಳಿ ಕನ್ನಡದ ಚಿಂಥನಾಶೀಲ ಸಾಹಿತ್ಯದ ಅಭಿರುಚಿ ಮತ್ತು ಕೆಚ್ಚನ್ನ ತೀವ್ರವಾಗಿ ಹಚ್ಚಿಕೊಂಡ ಬಿಸಿರಕ್ತದ ಯುವ ಬರಹಗಾರ. ಮೊನ್ನೆ ಮೊನ್ನೆ ಮೊದಲ ಸಲ ಅವರು ನಮ್ಮ ಮನೆಗೆ ಭೆಟ್ಟಿ ನೀದಿದ್ದರು .
21 ಡಿಸೆಂಬರ್ ಬೆಳಿಗ್ಗೆ ೧೦ ರ ಆಸುಪಾಸು.. ಮನೆಯಿಂದ ತುಸು ದೂರದಿಂದ ಬರಮಾಡಿಕೊಂಡಾಗಿನಿಂದ
ಅವರಲ್ಲಿ ಆತ್ಮವಿಶ್ವಾಸ, ಪ್ರೌಢತೆಯ ಕಳೆಯೊಂದಿಗಿನ ನಗುಮೊಗದ ವಿನಯತೆ ಎದ್ದು ಕಾಣುತಿತ್ತು.
ಚೊಚ್ಚಲ ಕವನ ಸಂಕಲನ “ಚೈತ್ರಗಳ ಸೋಲು” ವಿನ ನಂತರ, ತಾವು ಬರೆಯಲಿರುವ ಮುಂದಿನ ಪುಸ್ತಕದ ಬಗ್ಗೆ ಹೇಳುತ್ತಿದ್ದರು. ಅದರ ಶೀರ್ಷಿಕೆ ” ಭೂಮಿಗೆ ಈಗ ಮಿಥುನದ ಸಮಯ..”..ಹಾಂ..ಹಾಗೆ ಹೇಳುವಾಗ ಜತೆಯಲ್ಲೇ, ಅವರ ಭಾವ ಕೂಡ ಇದ್ದರು. ಜತೆಗೆ ನಾನು ಮತ್ತೆ ನನ್ನ ಗೆಳೆಯ. ಯಾವುದೇ ಬಗೆಯ ನಿರ್ವಿಕಾರತೆಯೂ ಅಲ್ಲಿ ಸುಳಿದಿರಲಿಲ್ಲ.

ಇದೆ ಜನವರಿ ೨೭ ಕ್ಕೆ ನಡೆವ ತಮ್ಮ ವಿವಾಹ ಹಾಗೂ ಉತ್ತಮ ಅಭಿರುಚಿಯ ಜೀವನ ಸಂಗಾತಿಯ ಬಗೆಗೂ ಉತ್ಸಾಹದಿಂದ ಹೇಳುತಿದ್ದರು.. ಅನೇಕ ಕೆಲಸಗಳ ಒತ್ತಡದ ನಡುವೆ , ತಮ್ಮ ಕಿರು ಅವಧಿಯನ್ನು ಈ ಓದುಗ ಗೆಳೆಯನಿಗಾಗೆ ಮೀಸಲಿಟ್ಟಿದ್ದರು… ಹಾಂ.. ಅಂದಿನ ಮುಂಜಾವಿಗಂತು ಬಿಸಿಲಾಗುವ ತೀವ್ರ ತವಕ. ಕನ್ನಡದ ಮೇರು ಲೇಖಕರ ಬಗ್ಗೆ ಧೀರು ಅವರಿಂದ ಹೆಚ್ಚಿನ ಮಾಹಿತಿ ಕೇಳುವ ಬಗ್ಗೆ ನನ್ನಲ್ಲಿ ಇದ್ದದ್ದು ಅಷ್ಟೆ ತವಕ, ಕೂತೂಹಲ !…. ಅವರ ನೆಚ್ಚಿನ ಲಂಕೇಶರ ಬಗ್ಗೆ ತುಸುವಾಗೆ ಹೇಳಿದರು..
ತುರ್ತು ಕಾರ್ಯದ ನಿಮಿತ್ತ, ಬಹು ಬೇಗನೆ ಅವರನ್ನು ಬೀಳ್ಕೊಡುವ ಸಮಯ ಬಂದಾಗ…ನನಗೂ, ನನ್ನ ಸ್ನೇಹಿತಂಗೂ ಅರೆ ಮನಸು…
ನಮ್ಮ ಮನೆ ಬಿಟ್ಟು ಹೊರತು ಹೋದ ಬಳಿಕ…ನಮ್ಮನ್ನು ಕಾಡಿದ್ದು..ಅವರು ಕೊಟ್ಟು ಹೋದ ಪುಸ್ತಕ.. ಬಹುತೇಕರಿಗೆ ಗೊತ್ತಿರದ, ದೈತ್ಯ ಪ್ರತಿಭೆಯ, ಅಸಾಮಾನ್ಯ ಕಥೆಗಾರ ರಾಘವೇಂದ್ರ ಖಾಸನೀಸ್ ಅವರ ಕನ್ನಡದ ಅದ್ಭುತ ಕತೆಗಳ ಗುಚ್ಚ ಅದು… ಅಲ್ಲಿವರೆಗೆ, ಓ ಹೆನ್ರಿ ಥರದ ಕಥೆಗಳು ಯಾಕಿರಲ್ಲ ಕನ್ನಡದಲ್ಲಿ ಅನ್ನೋನಿಗೆ, ಧೀರು ಆ ಪುಸ್ತಕ ಕೊಟ್ಟು ಸತ್ಯ ದರ್ಶನ ಮಾಡಿಸಿದರು…
ಹೊಂಗಿರಣದಂಥ ಕನಸುಗಳುಳ್ಳ, ಅಪಾರ ಕಡಲ ನಟ್ಟ ನಡುವೆ ಒಂಟಿ ದೀಪದ ನಿಲುವುಳ್ಳ, ಬಳ್ಳಾರಿಯ ಚುರುಕು ಬಿಸಿಲಿನ, ಮಾಗಿಯ ಚಳಿಯ ಒಲವುಳ್ಳ ಗೆಳೆಯನ ಪ್ರತಿ ಕನಸುಗಳೂ ರೆಕ್ಕೆ ಬಲಿತು ಬಲಿತು ಮೇಲ ಮೇಲಕೆ ಹಾರುತಿರಲಿ ಎಂದು ಹಾಡಿ ಕೂಗುತಿದೆ ನನ್ನ ಚಿಕ್ಕ ಚೊಕ್ಕ ಮನಸ ಕಹಳೆ..

January 16, 2008 - Posted by | Dheerendra Nagarahalli, Kannadigas

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: