Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

nanna manasina haadu-paadu GANESH

ನೀನು ಬಿಟ್ಟ ಮೇಲೆ… 
ನೀನು ಬಿಟ್ಟ ನನ್ನ ಬದುಕು,
ಆಗಿದೆ ನೋವಿಗೆ ನಿಲ್ದಾಣ.
ತುಂಬಿ ಸುರಿವ ಕಣ್ಣ ಹನಿಗೆ,
ಪಾಪ, ಗುರಿಯಿರದ ಪಯಣ.

ಕೊರೆವ ಹಾಡಾದ ನಿನ ನೆನಪು,
ಕೊಲುತಿದೆ ಮನವ ಪ್ರತಿಕ್ಷಣ.
ಮುರಿದ ಎದೆ ಮನೆಯೊಳಗೆ,
ನಗುತಿದೆ ಕಾಲ್ಮುರಿದ ಕವನ.

ಒಲವಿರದ ಮನದ ಮುಗಿಲಲಿ,
ಬತ್ತಿದೆ ನೂರು ಕನಸು.
ಕನಸ ಹನಿಗೆ ಕಾದ ಜೀವಕೆ,
ಬಂದಿದೆ ನನಮೇಲೆ ಮುನಿಸು.

ಯಾರೋ ಗುರಿಯಿರದೆ ಬಿಟ್ಟ ಬಾಣ,
ಬಂದು ನಾಟಿದೆ ನನ್ನೆದೆಯ.
ಸುರಿವ ಪ್ರೀತಿ ನೆತ್ತರ ಕಂಡು,
ಕೆಂಪೆಂದು ಕುಣಿದಿದೆ ನನ ಹೃದಯ.

ಮಗುವ ನಗುವಾದ ನಿನ್ನೊಲವಿಗೆ,
ಇಷ್ಟು ಕೋಪ ಕಲಿಸಿದವರಾರು.
ಎಚ್ಚರ ಇಲ್ಲದ ನನ ಮನವ,
ಮತ್ತೆ ಎಚ್ಚರಿಸುವರಾರು.

ಬರಿದೆ ಪದವಲ್ಲದ ಈ ಹಾಡ,
ನೀ ಬಂದು ಕೇಳುವುದೆಂದು.
ಮತ್ತೊಮ್ಮೆ ಮಿನುಗಲಿ ನಿನ್ನ ನಗೆಯು,
ನನ್ನ ಮನದ ಮುಗಿಲಲಿ ಇಂದು.

—- ಗಣೇಶ….

_______________

ಹೀಗೆ ಸುಮ್ಮನೆ ಅನಿಸಿದ್ದು, 

ಯಾಕೋ ಅನಿಸುವ ಮನಸಿನ ಭಾವಕೆ
ಮಾತಿನ ಹಂಗಿಲ್ಲ,

ಆಡಲು ಹೊರಟ ಮಾತಿಗೆ ಇಂದು
ಶಬ್ಧದ ನೆರವಿಲ್ಲ,

ಮನದೊಳು ಹುದುಗಿದೆ ಮಾತು ನೂರೆಂಟು,
ಅದ ಕೇಳಲೀಗ ಸಮಯ ಯಾವ ಕಿವಿಗುಂಟು ?

ಬರೆಯುವೆ ನಾ ಮನಸಿನ ಪದಗಳ
ನನ್ನೆದೆಯ ಹಾಳೆಯಲ್ಲಿ,

ಓದುವ ಹೃದಯ ಎಂದಿಗೆ ಬರುವುದೋ
ಕಂಡವರಾರಿಲ್ಲಿ ?

ಕಾದಿರುವೆ ನಾ ಪದಗಳ ಹಾಸಿ
ಆ ಹೃದಯದ ನಿರೀಕ್ಷೆಯಲ್ಲಿ………………

— ಗಣೇಶ

____________________

ಯಾಕೆ ? 

ಯಾಕೆ ?
ಅನಿಸುತಿದೆ ಯಾಕೆ ?
ನಿನ್ನ ಕಂಡು ಮನ ಮೋಹಗೊಂಡಿದೆ ಯಾಕೆ ?

ಬಿರುಬಿಸಿಲು ತಂಪಾಗಿಲ್ಲ
ಕಹಿಯಿಂದು ಸಿಹಿಯಾಗಿಲ್ಲ,
ಮುಳ್ಳು ರಸ್ತೆ ಹೂವಾಗಿಲ್ಲ,
ಎಲ್ಲವೂ ಅದರಂತೆ ಇದೆ,
ಆದರೂ ಮನದ ಮೂಲೆಯಲಿ
ನೀ ಕುಳಿತಿಹೆ.

ನಿನ್ನ ಹೆಸರ ಕೆರೆಯುವಾಸೆ,
ನಿನ್ನ ನೋಡುವಾಸೆ,
ನಿನ್ನೊಡನೆ ಮನಸು ಹಂಚಿಕೊಳುವಾಸೆ,
ನಿನ್ನೊಡನೆ ಚಂದಿರನ ತಂಬೆಳಕಲ್ಲಿ
ಚಂದನೆಯ ಕನಸು ಕಾಣುವಾಸೆ,
ನಿನ್ನೊಡನೆ ಬದುಕು ಕಟ್ಟಿಕೊಳುವಾಸೆ.

ಇಷ್ಟೆಲ್ಲಾ ಆಸೆ ಇದ್ದರೂ,
ಅದೆಲ್ಲಾ ಹೇಳುವ ತುಡಿತ ಇದ್ದರೂ,
ಅದ ಹೇಳಲಾಗದೆ ತಳಮಳಿಸುತ್ತಿದ್ದರೂ,
ಈ ನಿನ್ನ ನೆನಪಿನ
ಮಧುರ ಯಾತನೆ ಅನುಭವಿಸುವಾಸೆ,
ಯಾಕೆ ?

— ಗಣೇಶ

____________________

December 23, 2007 - Posted by | http://nannahaadu.wordpress.com/

1 Comment »

  1. kavana chennagide

    Comment by ajith kumar | August 18, 2008 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: