Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಅತೃಪ್ತಿ

ಇಲ್ಲ ಇವರಿಗೆ ಎಂದಿಗೂ ತೃಪ್ತಿ
ಎಲ್ಲವನು ಎಲ್ಲರನು ಟೀಕಿಸುವುದೆ ಇವರ ಪ್ರವೃತ್ತಿ

ಎಷ್ಟು ಕೊಟ್ಟರು ಇವರ ಹೊಟ್ಟೆ ತುಂಬದು
ಹೊಟ್ಟೆ ತುಂಬಿದರು ಮನಸು ತುಂಬದು
ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆ
ಕಡು ಸುಖವ ಕಾಂಬಾಸೆ ಎಂಬ ದಾಸರ ವಾಣಿ

ನಿಜವಹುದು ಇವರಲಿ ಈ ಅತೃಪ್ತರಲಿ
ರಾಜಕೀಯದಿ ಆಳುವ ಪಕ್ಷವ ಕಂಡು
ಆಳುವ ಪಕ್ಷವಿದ್ದಂತೆ
ಇತರರ ಏಳಿಗೆಯ ಕಂಡು ಕರಬುತ್ತ

ಅಡ್ಡದಾರಿಯ ಹಿಡಿಯುವ ಮೂರ್ಖರಿವರು
ತಾವಾಗಿ ಮಾಡದ ಬೇರೆಯವರನು ಮಾಡಬಿಡದ
‘ಡಾಗ್ ಇಂದ ಮೆಂಜರ್‌ಗಳು’
ಇಲ್ಲವೆಂದಿಗೂ ಇವರಿಗೆ ಅಲ್ಪ ತೃಪ್ತಿ

ಇವರ ಈ ಗುಣಕೆ ಎಲ್ಲಿದೆ ನಿವೃತ್ತಿ?
ಅಭಿವೃದ್ಧಿ ಬೆಳವಣಿಗೆ ಎಂಬುದೆ ಇವರಿಗೆ ಗೊತ್ತಿಲ್ಲ
ವಿಷದ ಬಳ್ಳಿಯೆ ಮುಳ್ಳು ಕಳ್ಳಿಯೆ
ತುಂಬಿಹುದು ಇವರ ಸುತ್ತೆಲ್ಲ

ಕಾಸು ಖರ್ಚಿಲ್ಲದೆ ಕೈಲಾಸ ಕಾಣುವ
ಸ್ಥಾನಮಾನ ಪ್ರಚಾರ ಪ್ರಸಿದ್ಧಿ ಪಡೆವ ಹಂಬಲ ಇವರದು
ಸ್ಫರ್ಧೆಗೆ ನಿಂತರೆ ಗೆಲ್ಲಲೇಬೇಕು
ಗೆದ್ದರೆ ಗದ್ದುಗೆ ಏರಲೇಬೇಕು

ಏರಿ ಕುಳಿತರೆ ಕುರ್ಚಿಗೆ ಅಂಟಬೇಕು
ಎಂಬುದೆ ಇವರ ತತ್ವ ಧೋರಣೆ
ತಾವೇ ಲೋಕದಲಿ ಮೇಲೆಂಬ ಧಾರಣೆ
ಮತ್ತೊಬ್ಬರ ಏಳಿಗೆಯ ಕಂಡು ಸಹಿಸರು ಇವರು

ಸದಾ ಅತೃಪ್ತರು ಆಗಲಾರರು ಅಲ್ಪತೃಪ್ತರು
ಸದಾ ಅತೃಪ್ತಿ ಇಲ್ಲಿ ಅವರಿಗೆ ನಿತ್ಯ ತೃಪ್ತಿ

December 14, 2007 - Posted by | EKAVI Group

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: