Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

Google chitragala hudukaata

Google chitragala hudukaata
http://images.google.com/imghp?oe=UTF-8&hl=kn&tab=wi&q=

 
   

Google chitragala hudukaata
http://images.google.com/imghp?oe=UTF-8&hl=kn&tab=wi&q=

December 6, 2007 Posted by | Google Kannada | Leave a comment

GoogleKannada

GoogleKannada

ಶರವೇಗದಲ್ಲಿ ಕನ್ನಡ ಬರೆಯಿರಿ.

http://www.google.com/transliterat e/indic/Kannada

ಈ ಕೊಂಡಿ ತುಂಬ ಉಪಯೋಗಕಾರಿ ಆಗಿದೆ. ದಯವಿಟ್ಟು ಇದರ ಬಳಕೆ ಮಾಡಿ .
ಇದರಿಂದ ಇಂಗ್ಲಿಷ್ ನಲ್ಲಿ ಬರೆಯೋದು ತಪ್ಪುತ್ತೆ . ಇದರಲ್ಲಿ ನಾವು ತುಂಬ ವೇಗದಲ್ಲಿ ಕನ್ನಡ ಬರೆಯಬಹುದು.

ಇಲ್ಲಿಂದನೂ ಬಳಸಬಹುದು

http://www.googlekannada.com

December 6, 2007 Posted by | Google Kannada | 9 Comments

ವಿಚಿತ್ರ

g.jpg

– ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ
ಇಂದು ಈ ಲೋಕದಲಿ ಎಲ್ಲವೂ ವಿಚಿತ್ರ
ಕಾಣದಾಗಿದೆ ಯಾವುದರ ಬಗೆಗೂ ಸ್ಪಷ್ಟ ಚಿತ್ರ
ತಲೆಕೆಳಗು ಕಾಲು ಮೇಲೆ ಬಲು ವಿಪರೀತ
ದೊರೆಯದಾಗಿದೆ ಬದುಕಿನ ವಿವರ ಸಚಿತ್ರ

ನೋಡಿದರೆ ಇಲ್ಲಿ ಎಲ್ಲವೂ ಹಿಂದು ಮುಂದು
ಕಂಡ ಕಂಡಲ್ಲಿ ಕಾಣುತಿದೆ ಬಹಳ ಕುಂದು
ಸರಿಯಾಗಲಾರದಿದು ಎಂದೆಂದು
ದೇವರೇ ಯತ್ನಿಸಿದರು ಧರೆಗಿಳಿದು ಬಂದು

ವಿಚಾರಿಸಿದರೆ ಇಲ್ಲಿ ಎಲ್ಲವೂ ತಿರುಗು ಮುರುಗು
ಪ್ರತಿಯೊಬ್ಬರಿಗು ಅವರವರದೇ ಕೊರಗು
ಯೋಚಿಸಿ ನೋಡಿದರರೆ ಎಲ್ಲಡೆಯು ಅತಿ ಬೆರಗು
ತಿಳಿಯಲಾರದು ಕೆಲವರ ಒಳಗು ಹೊರಗು

ಯಾವುದು ನಾವು ನೆನೆದಂತೆ ಇಲ್ಲ
ಕ್ಷಣ ಮಾತ್ರದಲ್ಲಿ ಭಗ್ನ ನಮ್ಮ ಹೊಂಗನಸೆಲ್ಲ
ವರುಷಗಟ್ಟಲೆ ಶ್ರಮಿಸಿ ಮಾಡಿದ ಯೋಜನೆಗಳೆಲ್ಲ
ನೀರ ಮೇಲಿನ ಹೋಮ ಯಾವುದೇ ಫಲವಿಲ್ಲ

ಸರಿತಪ್ಪು ನ್ಯಾಯಾನ್ಯಾಯ ನಿರ್ಧರಿಪರಾರು?
ಅರ್ಹತೆ ಅನರ್ಹತೆಯ ತಿಳಿಸುವವರಾರು?
ಯೋಗ್ಯತೆ ಅಯೋಗ್ಯತೆಗೆ ಬೆಲೆ ಕಟ್ಟುವವರಾರು?
ಅಯೋಗ್ಯ ಅನರ್ಹ ಜನರಿಂದ ತುಂಬಿರಲು ಊರು

ಎಲ್ಲಿ ಹೋದರು ಅಲ್ಲಿ ನಡೆದಿದೆ ಲಂಚಾವತಾರ
ಯಾವುದೇ ಕ್ಷೇತ್ರವನು ಬಿಟ್ಟಿಲ್ಲ ರಾಜಕೀಯ
ಜಾತಿ ಮತ ವರ್ಗಕ್ಕೆ ಮೇಲ್ಮಣೆ ನೀತಿಗಭಾವ
ಸುಶಿಕ್ಷಿತ ಜನರೆ ತೋರುವರು ಭೇದಭಾವ

ಎಲ್ಲಿ ನೋಡಿದರಲ್ಲಿ ಮೆರೆದಿದೆ ಭ್ರಷ್ಟಾಚಾರ
ಇಲ್ಲ ಯಾರಲೂ ಸತ್ಯ ನ್ಯಾಯ ಶಿಷ್ಚಾಚಾರ
ಶ್ರದ್ಧೆ ಪ್ರಾಮಾಣಿಕತೆ ಸಾಗಿಹುದು ಬಲು ದೂರ
ಇದುವೆ ಆಧುನಿಕ ಜನಜೀವನದ ಸಾರ

ಬರಬಹುದು ಬೇಗದಲೆ ಮುಂದೊಂದು ಸುದಿನ
ಎಲ್ಲವೂ ಸರಿಯಾಗಿ ನಡೆವ ಆ ಶುಭದಿನ
ಬುದ್ಧ ಗಾಂಧಿಯ ತೆರದಿ ಬರಲಿ ಯುಗಪುರುಷ
ತುಂಬಲೆಲ್ಲರ ಮನಕೆ ಶಾಂತಿ ನೆಮ್ಮದಿ ಹರುಷ

December 6, 2007 Posted by | EKAVI Group | Leave a comment

ಶ್ರೀಬಸವೇಶ್ವರರ ವಚನಗಳು

b.jpg

ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು?
ಮನದಾ ಕೋಪ ತನ್ನರಿವಿನಾ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ !!

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ?
ಈ ಮಾಯೆಯ ಕಳವೊಡೆ ಎನ್ನಳವಲ್ಲ;
ನೀವೇ ಬಲ್ಲಿರಿ ಕೂಡಲಸಂಗಮದೇವಾ!!

ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ !!

ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ
ಮನ ನಿಮ್ಮದೆಂದ ಬಳಿಕ ಬೇರೆ ಮನವಿಲ್ಲ
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ
ಇಂತೀ ತ್ರಿವಿಧವೂ ನಿಮ್ಮದೆಂದರಿದ ಬಳಿಕ ಎನಗೆ ಬೇರೆ
ವಿಚಾರವುಂಟೆ ಕೂಡಲಸಂಗಮದೇವಾ!!

December 6, 2007 Posted by | EKAVI Group | 35 Comments

ಆಗೋಣ ನಾವೆಲ್ಲ ಒಂದು

h.jpg

ಆಗೋಣ ನಾವೆಲ್ಲ ಒಂದು
ಐಕ್ಯದಿಂದಲಿ ಸಾಗೋಣ ಮುಂದು

ಮುಂದು ಮುಂದಕ್ಕೆ ಸಾಗೋಣ ಎಂದೆಂದು
ಭಾಷೆ ಬಣ್ಣ ಬೇರೆ ಬೇರೆ ಆದರೇನು

ನಮ್ಮ ಚಿಂತನೆ ಒಂದೆ ಅಲ್ಲವೇನು?
ಜಾತಿ ಮತ ಬೇರೆ ಬೇರೆ ಇದ್ದರೇನು
ನಮ್ಮ ಸಂಸ್ಕೃತಿ ಒಂದೆ ಅಲ್ಲವೇನು
ರಾಜ್ಯಗಳು ಹಲವು ಇದ್ದರೇನು

ಭರತ ಭೂಮಿ ಅಖಂಡವಲ್ಲವೇನು
ಹಲವು ಪಕ್ಷ ಪಂಗಡವಿದ್ದರೇನು
ನಮ್ಮ ಧ್ಯೇಯ ಒಂದೆ ಆಗಬೇಡವೇನು
ನಮ್ಮ ಹೃದಯವು ಅದುವೇ ಭಾರತ

ನಮ್ಮ ಎಲುಬು ಮಾಂಸಗಳೆಲ್ಲ ಭಾರತ
ನಮ್ಮ ರಕ್ತದ ಹನಿಹನಿಯು ಭಾರತ
ನಮ್ಮ ಜೀವದ ಉಸಿರದು ಭಾರತ
ಹಿಂದು ಮುಸ್ಲಿಂ ಕ್ರೈಸ್ತ ಸಿಕ್ಖ

ಎಂಬ ಜಾತಿ ಧರ್ಮದ ಭೇದ ಭಾವ ಬೇಡ
ಮಾನವ ಕುಲವು ಒಂದೆ ಎಂಬ
ಭಾವನೆ ಇರಲಿ ಹೃದಯ ತುಂಬ
ಅನೇಕತೆಯಲಿ ಇಹುದು ನೋಡಿ ಐಕ್ಯ

ಶಾಂತಿ ನೆಮ್ಮದಿ ಪಡೆವುದೆ ಮುಖ್ಯ
ನಾವು ಒಂದಾಗಿ ಬಾಳಬೇಕು ನಿತ್ಯ
ನಮ್ಮ ನಡತೆಯಲಿ ಇರಲಿ ಧರ್ಮ ಸತ್ಯ
ಆಸೇತು ಹಿಮಾಚಲವೊಂದು

ಅತಿಪಾವನ ವೀ ನಮ್ಮ ನಾಡು
ಸತ್ಯ ಸದ್ಧರ್ಮದಾ ನೆಲೆವೀಡು
ವಿಶ್ವಶಾಂತಿಯ ಸಾರುವ ನಾಡು
ಲೋಕನಾಯಕರುದಿಸಿದ ನಾಡು

ಅಧ್ಯಾತ್ಮ ತತ್ವದ ಬೀಡು
ಧರ್ಮ ಪುರುಷರು ಬಾಳಿದಾ ನಾಡು
ಕವಿ ಪುಂಗವರುದಿಸಿದ ಬೀಡು
ಕಷ್ಟನಷ್ಟವು ದುಃಖವು ಬಂದರೆ

ಐಕ್ಯವಿರಲು ನಮಗಿಲ್ಲವು ತೊಂದರೆ
ನಾವೆಲ್ಲರೊಂದುಗೂಡಿ ಬಾಳುವಾ
ತಾಯ್ನಾಡ ಹಿರಿಮೆಯನ್ನು ಸಾರುವಾ
ದೇಶದುನ್ನತಿಯ ನಾಂದಿಯನ್ನು ಹಾಡುವಾ

ಐಕ್ಯದ ಕಹಳೆಯನ್ನು ಮೊಳಗುವಾ
ಬಾಳೋಣ ಒಂದಾಗಿ ಮುಂದು
ಭಾರತಾಂಬೆಯ ಮಕ್ಕಳು ಎಂದು
ಆಗೋಣ ನಾವೆಲ್ಲ ಒಂದು

ಒಂದಾಗಿ ಸಾಗೋಣ ಮುಂದು

December 6, 2007 Posted by | EKAVI Group | Leave a comment

ಬೆಳಗು ನೀ ಭಾರತಮಾತೆ

1.jpg

ಬೆಳಗು ನೀ ಭಾರತಮಾತೆ
ಬೆಳಗು ನೀ ಪಾವನ ಗುಣ ಚರಿತೆ

ಶೋಭಿಸು ಶಾಂತಿ ಪ್ರದಾತೆ
ನಮಿಸುವೆ ತಾಯೆ ಸದ್ಗುಣ ಭರಿತೆ

ಪರದಾಸ್ಯದಲಿ ತೊಳಲಿದೆ ನೀನು
ನಾನಾ ಕಷ್ಟವನನುಭವಿಸುತಲಿ
ಹೆದರದೆ ನಡೆದು ದಾಸೃವ ತೊರೆದು
ಪ್ರಜೆಗಳ ಪೊರೆದು ಹರುಷದಲಿ

ಸಾಹಿತ್ಯ ಕಲೆಗಳ ತವರೂರಾಗಿ
ನಾಡಿಮನ ಸಂಸ್ಕ್ರತು ಎಲ್ಲೆಡೆ ಹರಡಿ
ನಾನ್ನಾ ಮಹಿಮೆಯ ವಿಶ್ವಕೆ ತೋರಿ
ಮೆರೆದಿಹೆ ಪರರಿಗೆ ಸರಿಸಮನಾಗಿ

ತತ್ವ ಪುರುಷರಿಗೆ ಧರ್ಮ ಗುರುಗಳಿಗೆ
ರಾಜ ಶ್ರೇಷ್ಠರಿಗೆ ಜನ್ಮವ ನೀಡಿ
ಧರ್ಮ ತೇಜವನು ಕ್ಷಾತ್ರ ತೇಜವನು
ಬೆಳೆಸಿದೆ ಜನರಲಿ ಮೋಡಿಯ ಮಾಡಿ

December 6, 2007 Posted by | EKAVI Group | Leave a comment

ವಿಶ್ವಮಾನವರಾಗಿ ನಾವು ಬಾಳುವ

images2.jpg

ಬೆಳೆಸೋಣ ಎಂದೆಂದು ಸದ್ಭಾವನೆ
ಅಳಿಸೋಣ ನಮ್ಮೆಲ್ಲ ದುರ್ಭಾವನೆ

ಉಳಿಸೋಣ ಮನದಲ್ಲಿ ಸತ್‌ಚಿಂತನೆ
ಕಳೆಯೋಣ ಒಳಗಿರುವ ದುಶ್ಚಿಂತನೆ

ಬಾಳೋಣ ಒಮ್ಮತದ ಸಹಜೀವನ
ಪಡೆಯೋಣ ಬಾಳಿನಲಿ ನವಚೇತನ
ನಲಿಯೋಣ ಒಂದಾಗಿ ನಾವನುದಿನ
ತೊರೆಯೋಣ ಮನದಲ್ಲಿ ತುಂಬಿರುವ ಕೀಳ್ತನ

ಮಾನವತೆ ನಮ್ಮಲ್ಲಿ ನೆಲೆ ನಿಲ್ಲಲಿ
ದಾನವತೆ ನಮ್ಮಿಂದ ಹೊರಸಾಗಲಿ
ಸತ್ಯ ಶಾಂತಿಯು ಬಾಳ ಬೆಳಕಾಗಲಿ
ನಿತ್ಯ ನೆಮ್ಮದಿ ನೆಲಸಿ ಸುಖವಾಗಲಿ

ಮೇಲು ಕೀಳೆಂಬ ಭಾವವನ್ನು ತೊರೆಯುವ
ಜಾತಿ ಧರ್ಮದ ಭೇದವನ್ನು ನೀಗುವ
ಅಸೂಯೆ ಹಗೆತನ ದ್ವೇಷವನ್ನು ಮರೆಯುವ
ವಿಶ್ವಮಾನವರಾಗಿ ನಾವು ಬಾಳುವ

December 6, 2007 Posted by | EKAVI Group | Leave a comment

Dr.Kambar on KSD M$ GoK

Dr.Kambar on KSD M$ GoK
http://picasaweb.google.com/vmkumaraswamy/DrKambarOnKSDMGoK?authkey=RXqznPbZJ_8

December 6, 2007 Posted by | Govt. of Karnataka - GoK, KAMBARA, KANNADA FONTS, KANNADA KARNATAKA | 1 Comment

aadunika ugadalli kannada-sthitithi gathi

 Dr.Kambar on KSD M$ GoK
http://picasaweb.google.com/vmkumaraswamy/DrKambarOnKSDMGoK?authkey=RXqznPbZJ_8

girish-ksd-lekhana001.jpg

girish-ksd-lekhana002.jpg

girish-ksd-lekhana003.jpg

December 6, 2007 Posted by | Dr. Sarojini Mahishi, EkaviSUKAPRO, Govt. of Karnataka - GoK, KAMBARA | Leave a comment