Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಇಷ್ಟು ದಿನ ಈ ವೈಕುಂಠ

kanakadasa.jpg

ಇಷ್ಟು ದಿನ ಈ ವೈಕುಂಠ

ಎಷ್ಟು ದೂರವೂ ಎನ್ನುತಲಿದ್ದೆ

ದೃಷ್ಟಿಯಿಂದಲಿ ನಾನು ಕಂಡೆ

ಸೃಷ್ಟಿಗೀಶನೆ ಶ್ರೀರಂಗಶಾಯಿ  ││ಪ││

ಎಂಟು ಏಳನು ಕಳೆದುದರಿಂದ

ತುಂಟರೈವರ ತುಳಿದುದರಿಂದ

ಕಂಟಕನೊಬ್ಬನು ಅಳಿದುದರಿಂದ

ಭಂಟನಾಗಿ ಬಂದೇ ಶ್ರೀರಂಗಶಾಯಿ ││ಪ││

ವನ ಉಪವನಗಳಿಂದ

ಘನ ಸರೋವರಗಳಿಂದ

ಕನಕ ಗೋಪುರಗಳಿಂದ

ಘನಶೋಭಿತನೆ ಶ್ರೀರಂಗಶಾಯಿ ││ಪ││

ವಜ್ರ ವೈಡೂರ್ಯ ತೊಲೆಗಳ ಕಂಡೆ

ಪ್ರಜ್ವಲಿಪ ಮಹಾದ್ವಾರವ ಕಂಡೆ

ನಿರ್ಜರಾದಿ ಮುನಿಗಳ ಕಂಡೆ

ದುರ್ಜನಾಂತಕ ಶ್ರೀರಂಗಶಾಯಿ ││ಪ││

ರಂಭೆ ಊರ್ವಶಿ ಮೇಳವ ಕಂಡೆ

ತುಂಬುರು ನಾರದರ ಕಂಡೆ

ಅಂಬುಜೋದ್ಭವ ಪ್ರಮುಖರ ಕಂಡೆ

ಶಂಬರಾರಿ ಪಿತನೆ ಶ್ರೀರಂಗಶಾಯಿ ││ಪ││

ನಾಗಶಯನನ ಮೂರುತಿ ಕಂಡೆ

ಭೋಗಿ ಭೂಷಣ ಶಿವನನು ಕಂಡೆ

ಭಾಗವತರ ಸಮ್ಮೇಳನವ ಕಂಡೆ

ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ││ಪ││

  •             ಕನಕದಾಸರು 

November 7, 2007 - Posted by | EKAVI Group

1 Comment »

  1. hi

    Comment by vishwas | November 9, 2007 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: