Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

kannada habbada shubhaashayagalu.

ನಿತ್ಯಹರಿದ್ವರ್ಣದ ನಾಡಾದ, ಸುವರ್ಣ ಸಂಭ್ರಮವಾಚರಿಸಿಕೊಂಡ ನಮ್ಮ ಚೆಲುವಕನ್ನಡನಾಡಿಗೆ ೫೧ ರ ಸಂಭ್ರಮ….

ಈ ಶುಭಸಂದರ್ಭದಲ್ಲಿ ನಾವು ಕನ್ನಡೇತರರಿಗೂ ಕನ್ನಡಭಾಷೆಯ ಬಗೆ ತಿಳುವಳಿಕೆ ನೀಡಿ, ಕಲಿಸಿ, ನಮ್ಮ ಭಾಷೆಯನ್ನು ಇನ್ನೂ ಶ್ರೀಮಂತಗೊಳ್ಳಿಸಿ, ಕನ್ನಡಿಗರ ಬಹುದಿನದ ಬೇಡಿಕೆಯಾದ ನಮ್ಮಭಾಷೆಗೆ ಶಾಸ್ರೀಯ ಸ್ಥಾನಮಾನ ಲಬಿಸಲೆಂದು ಆಶಿಸುತ್ತೇನೆ.

ನನ್ನ ಕನ್ನಡ ಮಿತ್ರರೆ, ಕನ್ನಡ ರಾಜ್ಯೋತ್ಸವದ ಹಾರ್ಥಿಕ ಶುಭಾಷಯಗಳು, ಕನ್ನಡ ತಾಯಿ ರಾಜರಾಜೇಶ್ವರಿ ಎಲ್ಲರಿಗೂ ಒಳ್ಳೇದು ಮಾಡಲಿ, ಶುಭದಿನ.

_____________________________________________

ಎಲ್ಲರಿಗು ನಮಸ್ಕಾರ

ನವೆಂಬರ್ ಒಂದನೇ ತಾರೀಕು ನಮ್ಮ ಕರ್ನಾಟಕ ರಾಜ್ಯ ಹುಟ್ಟಿದ ದಿನ

ಕನ್ನಡಿಗರ ದಿನ ...

ಸಮಸ್ತ ಕನ್ನಡ ಬಂಧುಗಳಿಗೆ ನನ್ನ ಶುಭಾಶಯಗಳು ….


ಕನ್ನಡ ಉಳಿಯಲಿಕನ್ನಡ ಬೆಳೆಯಲಿ

ಕನ್ನಡಿಗರು ಎಲ್ಲೇ ಇದ್ದರೂ ಚೆನ್ನಾಗಿರಲಿ

ಸಿರಿ ಗನ್ನಡಂ ಗೆಲ್ಗೆ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ


ಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗ

_______________________________________________

ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಯೆಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೇತೇವು ಮರವ ತರದೇವು ಮನವ ಎರದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೊರೇವು
ಹಮ್ಮಿರಲು ಪ್ರೀತಿ ಎಲ್ಲಿಹುದು ಭೀತಿ ನಾಡೊಲವ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ

ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತೆ ಹಾಡೇವು
ತೊರೆದೇವು ಮರುಳ ಕಡದೇವು ಇರುಳ ಪಡದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

ಕನ್ನಡವೇ ಸತ್ಯ….. ಕನ್ನಡವೇ ನಿತ್ಯ ……..ಜೈ ಕರ್ನಾಟಕ ಮಾತೆ………

ಕನ್ನಡ ರಾಜ್ಯೋತ್ಸವದ ಶುಭಾಶಯಗಳು……….ಮನ-ಮನಗಳಲ್ಲಿ ಕನ್ನಡದ ದೀಪ ಬೆಳಗಿಸಿ,

ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಪಸರಿಸೋಣ………………………

____________________________________________________________

Elladaroo iru Entadaroo iru – Dr. Raj

http://www.youtube.com/watch?v=qwZxKREpvCI

_________________________________________________________________

Kannada – Huttidaare kannadanadalli huttabekku

http://www.youtube.com/watch?v=6Xy2pdVtKcs

___________________________________________________

Dr. Rajkumar

http://www.youtube.com/watch?v=5tRvg1SzmIE

__________________________________________________________

Photo Sharing and Video Hosting at Photobucket

_____________________________________________________________________________

ಉಸಿರಾಗಲಿ ಕನ್ನಡ , ಹೆಸರಾಗಲಿ ಕರ್ನಾಟಕ
ಸರ್ವರಿಗೂ ಕನ್ನಡ
ರಾಜ್ಯೋತ್ಸವದ
ಶುಭಾಶಯಗಳು .ಸಿರಿಗನ್ನಡಮ್ ಗೆಲ್ಗೆ

________________________________________________

“ಕನ್ನಡ ಭಾಷೆ ಉಳಿಸಿ.. ಬೆಳಸಿ.. ನಾಡು ನುಡಿಯ ಅಭ್ಯುದಯಕ್ಕೆ ಕಂಕಣ ತೊಡಿ”

ಎಂಬ ಮಾತು ಕೇಳಿದರೆ ಏನೆನಿಸುತ್ತದೆ, ಕನ್ನಡ ರಾಜ್ಯೋತ್ಸವ ಬಂದೆ ಬಿಟ್ಟಿತೆ0ದು ಅರ್ಥವಾಗಿಬಿಡುತ್ತದೆ.
ಕನ್ನಡ ಮೈಮೇಲೆ ಬಂದಂತೆ ಆದುವುದು……..ಎಲ್ಲಿ ನೋಡಿದರು ಕನ್ನಡ ಬಾವುಟ , ಕನ್ನಡ ಗೀತೆ ಗಾಯನ, ನಾಡಿನ ಗರಿಮೆ ಸಾರುವ ಭಾವೋದ್ರೇಕದ ಭಾಷಣ, ಇಷ್ಟೇ ಏನು ಕನ್ನಡ ರಾಜ್ಯೋತ್ಸವದ ಉದ್ದೇಶ?
ಏನು ಮಾಡಬೇಕಿದೆ? ರಾಜ್ಯೋತ್ಸವ ಎಂದರೆ ಕನ್ನಡ ಭಾಷೆ ಉದ್ದಾರ ಅಲ್ಲ, ಒಟ್ಟಾರೆ ಕನ್ನಡ ನೆಲ , ಜಲಗಳ ಕಾಳಜಿಯ ಬಿಂಬಿಸುವ ಸಂದರ್ಭ. ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ದೇಶಿ ಉದ್ಯಮಿಗಳು ನಮ್ಮ ಫಲವತ್ತಾದ ಭೂಮಿಯನ್ನು ಸೂರೆ ಮಾಡುತ್ತಿದ್ದಾರೆ. ರೈತರು ನಿರ್ಗತಿಕರಾಗುತ್ತಿದ್ದಾರೆ.
ಗಡಿ ವಿವಾದ , ಜಲ ಸಮಸ್ಯೆ , ಶಾಸ್ತ್ರೀಯ ಭಾಷೆ ಹೀಗೆ ಅನೇಕ ವಿಷಯಗಳ ಬಗ್ಗೆ ಕಾರ್ಯೋನ್ಮುಖರಾಗಬೇಕಿದೆ. ಇವೆಲ್ಲ ಮಾಡದಿದ್ದರೂ ಕರ್ನಾಟಕ ರಾಜ್ಯಕ್ಕೆ ಏನೂ ಆಗದು.
ಆದರೆ ಅಲ್ಲಿ ಕನ್ನಡ ಇರುತ್ತದೆಯೇ? ಕನ್ನಡಿಗರ ಹೋರಾಟದ ಪಟ್ಟಿಯಲ್ಲಿ ಇವು ಪ್ರಮುಖ ಸ್ಥಾನ ಪಡೆಯುವಂತಾಗಲಿ.
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು
____________________

ಪಡುವಣ ಕಡಲಿನ ನೀಲಿಯ ಬಣ್ಣ,
ಮುಡಿಯೊಳು ಸಂಜೆಯ ಅಂಚಿನ ಚಿನ್ನ,
ಹೊಳೆಗಳ ಸೆರೆಗಿನ ಪಚ್ಚೆಯ ಬಯಲು,
ಬಿರುಮಳೆಗಂಜದ ಬೆಟ್ಟದ ಸಾಲು,
ಹುಲಿ ಕಾಡನೆಗಳಲೆಯುವ ಕಾಡಿದು,
ಸಿರಿಗನ್ನಡ ನಾಡು!

ಕಲ್ಲಿಗೆ ಬಯಸಿದ ರೂಪವ ತೊಡಿಸಿ,
ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ,
ದಾನ ಧರ್ಮಗಳ ಕೊಡುಗೈಯಾಗಿ,
ವೀರಾಗ್ರಣಿಗಳ ತೊಟ್ಟಿಲ ತೂಗಿ,
ಬೆಳಗಿದ ನಾಡಿದು, ಚಂದನಗಂಪಿನ
ಸಿರಿಗನ್ನಡ ನಾಡು!

ಇಲ್ಲಿ ಅರಳದಿಹ ಹೂವುಗಳಿಲ್ಲ :
ಹಾಡಲು ಬಾರದ ಹಕ್ಕಿಗಳಿಲ್ಲ –
ಸಾವಿರ ದೀಪಗಳರಮನೆಯೊಳಗೆ
ಶರಣೆನ್ನುವೆನೀ ವೀಣಾಧ್ವನಿಗೆ.
ಕನ್ನಡ ನಾಡಿದು ; ಮಿಂಚುವ ಕಂಗಳ
ಸಿರಿಗನ್ನಡ ನಾಡು.

– ಕೆ ಎಸ್ ನರಸಿಂಹಸ್ವಾಮಿಯವರು.
_________________

ಕದಂಬ ಗಂಗಾ ಚಾಲುಕ್ಯಾದಿಗಳನ್ನು ನೆನದು ತೊಡೆ ತಟ್ಟುವ ಕನ್ನಡಿಗ,
ಪಂಪ ಜನ್ನ ರನ್ನಾದಿಗಳನ್ನು ನಮ್ಮವರೆಂದು ಹೆಮ್ಮೆ ಪಡುವ ಕನ್ನಡಿಗ,
ಪುಟ್ಟಪ್ಪ ಬೇಂದ್ರೆ ಮಾಸ್ತಿ ಆದಿ ಮಾಸ್ತರಿಗೆ ಕೈ ಜೋಡಿಸುವ ಕನ್ನಡಿಗ,
ಕಾರಂತ ಗುಂಡಪ್ಪಾದಿಗಳ ಆದರ್ಶಕ್ಕೆ ಕರಗುವ ಕನ್ನಡಿಗ,
ಕಣ್ಣಂಬಾಡಿ ಮುಂದೆ ಸರ್ ಎಂ ವಿ ಯ ನೆನೆಯೋ ಕನ್ನಡಿಗ,
ಹಂಪಿಯ ವೈಭೋಗ ನೆನೆದು ಕಣ್ಣಿರಿಟ್ಟು ಕೊರಗುವ ಕನ್ನಡಿಗ,
ಏಳು ಜ್ನಾನಪೀಠ ನಮ್ಮದೆನ್ದು ಗರ್ವಿಸುವ ಕನ್ನಡಿಗ,
ಬೇಲೂರು ಹಳೆಬೀಡ ಮುಂದೆ ಮೈ ಮೇರೆವ ಕನ್ನಡಿಗ,
ಡಾ.ರಾಜ್ ರನ್ನು ಅಣ್ಣಾವ್ರು ಎಂದ ಅಭಿಮಾನಿ ಕನ್ನಡಿಗ.
ಲಂಕೇಶ್ ಬೆಳೆಗೆರೆಯ ಕ್ರಾಂತಿ ಬರಹಕ್ಕೆ ಕಂಪಿಸುವ ಕನ್ನಡಿಗ,
ಕಾವೇರಿ ಶರಾವತಿಯಲ್ಲಿ ಮಿಂದ ಧನ್ಯ ಕನ್ನಡಿಗ,
20 ಶತಮಾನದ ಭಾಷೆ ನನ್ನದೆಂದು ಆಡುವ ಕನ್ನಡಿಗ,
ಅಭಿಮಾನದ ಹೊಳೆ ಹರಿಸಿ ಸುವರ್ಣ ಮಹೋತ್ಸವ ಕಂಡ ಕನ್ನಡಿಗ ಇದು ನಿನಗೆ 51ನೇ ರಾಜ್ಯೋತ್ಸವದ ಶುಭಾಶಯಗಳು

_____________________________________________________

ಕನ್ನಡ ರಾಜ್ಯೋತ್ಸವದ ಶುಭಾಶಯಗಳು , ಸಿರಿ ಕನ್ನಡಂ ಗೆಲ್ಗೆ ಸಿರಿ ಕನ್ನಡಂ ಬಾಳ್ಗೆ
ಜೈ ಕರ್ನಾಟಕ ಮಾತೇ

___________________________________________________________

ಕನ್ನಡ ರಾಜ್ಯೋತ್ಸವ

 

ದ ಶುಭಾಶಯಗಳು

______________________________________________________

ಕನ್ನಡವೆಂದರೆ ಭಾಷೆಯಲ್ಲ ,
ಅದೊಂದು ಚಿರಂಜೀವ !
ಭಾವಗಳಿವೆ ,ಸಂಸ್ಕೃತಿಯಿದೆ ,
ನೀತಿಯಿದೆ , ಮಂತ್ರವಿದೆ…….
” ಈ ಹೆಸರಲ್ಲಿ ಏನಿಲ್ಲ ?! ”
ಬೆಳೆಯುತ್ತಿರಲಿ ಕನ್ನಡ,
ಭಾಷಾಭಿಮಾನಿಗಳಿಂದ…
ಭಾಷಾಂಧಿಗಳಿಂದಲ್ಲ..!!
ಬರಲಿ ಬಿಡಿ ಹೊಸ ಪದಗಳು
ಮಣ್ಣಿನ ವಾಸನೆ ಬೆರೆತು `ಕನ್ನಡವಾಗಲಿ’
ಅದರಲ್ಲೂ ಮಿತಿ ಇರಲಿ..
ಬೇರೆ ಭಾಷೆಗಳಿಗೂ ನಮ್ಮ ಬಳುವಳಿಯಿದೆ..
ಕಾಲ-ದೇಶಗಳ ಮೀರಿದ ಭಾಷೆ ಕನ್ನಡ.
ಎಲ್ಲೆಯಿಲ್ಲದ ಭಾಷೆ ಕನ್ನಡ,
ಜೀವ ಸಂಕುಲದ ಉಸಿರು ಕನ್ನಡ,
ಜೀವ ಜೀವದ ತೊದಲ್ನುಡಿ ಕನ್ನಡ.
ಯಾವ ಮೂಲೆಯಲ್ಲಾದರೂ ಇರು…
ಯಾವ ಭಾಷೆಯವನೇ ಆಗಿರು …
ನಿನ್ನ ನೋವಿಗೂ ದನಿಯಾಗುವಳು..
`ಅಮ್ಮ’,”ಕನ್ನಡಮ್ಮ”
ಅವಳ ಮಡಿಲಲ್ಲೇ ಉಸಿರಾಡುತಿರುವೆ..
ನಾನು ಕನ್ನಡದ ಕಂದ…!
_____________________

ಪ್ರೀತಿಯ ಮಿತ್ರರೇ,
51ನೇ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು
ಕನ್ನಡ ತಾಯಿ ಭುವನೇಶ್ವರಿಯೂ ತಮ್ಮಗೆಲ್ಲರಿಗೂ
ಸುಖ, ಶಾಂತಿ, ನೆಮ್ಮದಿ, ಅಯುಶು, ಆರೋಗ್ಯ, ಸಂತೋಷ, ಸಂಬ್ರಮ ಹಾಗೂ ಸಕಲವನ್ನು ಕರುಣಿಸಲಿ
ಏನು ಬೆದಿಕೋಳೂತ್ತೇನೆ…………….

_____________________

ನಿನ್ನ ಮಡಿಲಲ್ಲಿರುವ ಪ್ರೀತಿ ಸಹನೆ ಮಮತೆ ಎಲ್ಲರನ್ನು ನನ್ನವರೆಂದು ಬರಸೆಳೆದಪ್ಪಿಕೊಳ್ಳುವ ನಿನ್ನ ಅಗಾಧ ವಾತ್ಸಲ್ಯವನ್ನ ಸ್ವಲ್ಪ ಅಕ್ಕ ಪಕ್ಕದವರಿಗೂ ಕೊಟ್ಟು ಬಿಡು ಕನ್ನಡ ದಿನದ ಶುಭಾಷಯಗಳು

__________________________________________________

ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ದಿನದ ಶುಭಾಶಯ

________________________________________________________

_______________________________________________________________

ಕನ್ನಡ ತಾಯಿಯ ಮಡಿಲೊಳಗೆ ಮಗುವಾಗುವಾಸೆ ಅವಳ ಪ್ರೀತಿಯ ಮಾಯೆಯ ಮಳೆಯಲ್ಲಿ ತೋಯುವಾಸೆ

ಕನ್ನಡ ನಿನ್ನ ಮನಸ್ಸಾಗಲಿ ಕರ್ನಾಟಕ ನಿನ್ನ ಮನೆಯಾಗಲಿ
_________________________________________________

ಜೇನ ಹನಿಯಷ್ಟು ಸಿಹಿ, ಕೊಗಿಲೆ ದನಿಯಷ್ಟು ಸವಿ ಈ ಕನ್ನಡ,

ಸಹ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯ

_________________________________________________

ಚೆಲ್ಲಲಿ ನಿಮ್ಮೆಲ್ಲರೆದೆಗೆ ಕನ್ನಡದ ಹೂವ ಕಂಪು ಕವಿ ಕವಿಯತ್ರಿಯರ ಪ್ರೀತಿಯ

ಕಾವ್ಯದಾ ಇಂಪು

___________________________________________________________

___________________________________________

______________________________________________________________

_____________________________________________________________________

Advertisements

October 31, 2007 - Posted by | KANNADA

4 Comments »

 1. this write up has really inspired me..i love karnataka more now after this powerful write up whioever is the author..hats off to you!!

  Comment by anupama | October 31, 2007 | Reply

 2. kannada Rajyotsavada Shubhashayagalu!!! It doesn’t matter in which part of the world we live in… all that matters is the true love we have for namma nadu and namma nudi.

  Comment by shruthi | October 31, 2007 | Reply

 3. naanu obba kanndiga

  Comment by B R Manjunathachar | September 3, 2010 | Reply

 4. I love kannada

  Comment by Avinash | October 17, 2010 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: