Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

EKAVI LEKHANA

ಈ-ಕವಿ  ಲೇಖನ ಸ್ಪರ್ಧೆ

ಪೂರ್ಣಚಂದ್ರ ತೇಜಸ್ವಿಗೆ ನುಡಿ ನಮನ  

ಈಕವಿ ಕನ್ನಡ ಬಳಗವು ಪೂರ್ಣಚಂದ್ರ ತೇಜಸ್ವಿಯವರ ನೆನಪುಗಳನ್ನು ಮೆಲುಕು ಹಾಕಲು ಸಾಹಿತ್ಯ ಪ್ರೇಮಿಗಳಿಗೆ ಒಂದು ಸದವಕಾಶ ನೀಡುತ್ತಿದೆ. ತೇಜಸ್ವಿಯವರ ಯಾವುದಾದರು ಒಂದು ಕೃತಿಯನ್ನು ನೀವು ಏಕೆ ಮೆಚ್ಚಿಕೊಂಡಿರಿ ಎಂಬುದನ್ನು ಕುರಿತು ೫೦೦ ಪದಗಳಲ್ಲಿ ವಿವರಿಸಿ. ಉತ್ತಮ ೩ ಬರಹಗಳಿಗೆ ಬಹುಮಾನವಿರುತ್ತದೆ. ಒಟ್ಟು ೯ ಬಹುಮಾನಗಳು. ಹಾಗು ಬಹುಮಾನಿತ ಬರಹಗಳನ್ನು ‘ನನಗೇಕೆ ತೇಜಸ್ವಿ ಇಷ್ಟ’ ಎಂಬ ಕೃತಿಯಲ್ಲಿ ಪ್ರಕಟಿಸಲಾಗುವುದು.


ಈ ಸ್ಪರ್ಧೆಯನ್ನು 3 ವಿಭಾಗದಲ್ಲಿ ನೆಡಸಲಾಗುವುದು.

1)  ಶಾಲಾ ಮಕ್ಕಳು

2) ಕಾಲೇಜು ವಿದ್ಯಾರ್ತಿಗಳು

3)  ಇತರೆ ವಯಸ್ಸಿನ ಆಸಕ್ತರು

ಬರಹಗಳನ್ನು ತಲುಪಿಸಲು ಸೆಪ್ಟಂಬರ್ 10 ಕೊನೆಯ ದಿನ.

ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-

ನವೀನ್ ಹಳೆಮನೆ, 9901399318

೮೮,ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು, 

೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,

ಸಂಪಿಗೆ ರಸ್ತೆ, ಮಲ್ಲೇಶ್ವರಂ,

ಬೆಂಗಳೂರು-೫೬೦೦೦೩

ಇಮೈಲ್- ekavisukapro@gmail.com 

 

ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.


_____________________________________________________

 

ಈ-ಕವಿ  ಲೇಖನ ಸ್ಪರ್ಧೆ

 

ಕನ್ನಡದ ಪ್ರಗತಿಗಾಗಿ ನಾವೇನು ಮಾಡಬೇಕು?

ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ನಮ್ಮ ನಾಡಿನ ಪ್ರಗತಿಯ ಬಗ್ಗೆ   ಮತ್ತು ಮುಂದೆ ಸಾಗಬೇಕಾದ ಪಥದ ಬಗ್ಗೆ ಲೇಖನಗಳನ್ನ ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಪ್ರಗತಿಯ ಬಗ್ಗೆ  ನಿಲುವುಗಳು ಹಾಗೂ  ಆಲೋಚನೆಗಳಿರುತ್ತವೆ. ಇವುಗಳನ್ನು ಒಂದೆಡೆ ಕ್ರೋಢೀಕರಿಸಿ ಪ್ರಗತಿಪಥವೊಂದನ್ನು ಹುಟ್ಟು ಹಾಕುವ ಪ್ರಯತ್ನ ನಮ್ಮದು.    ಆಸಕ್ತರು ಕನ್ನಡ ನಾಡಿನ ಬೆಳವಣಿಗೆಯ ಬಗ್ಗ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇದು ಸದವಕಾಶ. ಬರಹಗಳು ಪ್ರಬಂಧದ ರೂಪದಲ್ಲಿರಬೇಕು. ಬಹುಮಾನಿತ ಹಾಗು ಇತರೆ ಉತ್ತಮ ಬರಹಗಳನ್ನು “ಕನ್ನಡ ಪ್ರಗತಿ ಪಥ” ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗುವುದು.ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.

ಬರಹಗಳು ಪ್ರಬಂಧದ ರೂಪದಲ್ಲಿರಬೇಕು.

ಬರಹಗಳು ಸ್ಫುಟವಾಗಿರಬೇಕು.

ಪ್ರಬಂಧ ಫೂಲ್ಸ್ ಕ್ಯಾಪ್ ಹಾಳೆಯಲ್ಲಿ ಎರಡು ಪುಟಗಳನ್ನು ಮೀರದಂತಿರಬೇಕು.

ಸಾಧ್ಯವಾದಲ್ಲಿ ಡಿಟಿಪಿ ಅಥವಾ ಟೈಪ್ ಮಾಡಿಸಿ ಕಳುಹಿಸಬಹುದು.

ತಮ್ಮ ಬರಹದ ಜೊತೆಗೆ , ಹೆಸರು ವಿಳಾಸ, ಭಾವಚಿತ್ರ , ದೂರವಾಣಿ ಸಂಖ್ಯೆ , ಇ-ಮೈಲ್ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು.

ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.

ಬರಹಗಳನ್ನು ತಲುಪಿಸಲು ಸೆಪ್ಟಂಬರ್ 10 ಕೊನೆಯ ದಿನ.

ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-

ನವೀನ್ ಹಳೆಮನೆ, 9901399318

೮೮,ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು, 

೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,

ಸಂಪಿಗೆ ರಸ್ತೆ, ಮಲ್ಲೇಶ್ವರಂ,

ಬೆಂಗಳೂರು-೫೬೦೦೦೩

ಇಮೈಲ್- ekavisukapro@gmail.com

 

ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.


_________________________________________________________

 

ಈ-ಕವಿ  ಲೇಖನ ಸ್ಪರ್ಧೆ

 

ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಯುವ ಸಾಹಿತಿಗಳಿಗೆ ಸುವರ್ಣಾವಕಾಶ 

 

ಈಕವಿ ಕನ್ನಡ ಬಳಗವು ಉದಯೋನ್ಮುಕ ಸಾಹಿತ್ಯ  ಪ್ರತಿಭೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಯುವ ಬರಹಗಾರರಿಂದ ಕಥೆ, ಕವನಗಳನ್ನು ಆಹ್ವಾನಿಸಿದೆ. ಆಯ್ದ ೩ ಕವನ ಹಾಗು ಕಥೆಗಳಿಗೆ ಬಹುಮಾನ ವಿತರಿಸಲಾಗುವುದು.ಯುವಕರು ಯುವತಿಯರಿಗೆ ಪ್ರತ್ಯೇಕ ಬಹುಮಾನ 

ಕವಿಗಳು ಈ ಕೆಳಕಂಡ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

1) ಕನ್ನಡ ಭಾಷೆ

2) ಕನ್ನಡ ಚರಿತ್ರೆ

3) ಕನ್ನಡ ಸಂಸ್ಕೃತಿ

4) ಕನ್ನಡ ಮತ್ತು ಜಾಗತೀಕರಣ

5) ಕನ್ನಡ ನಾಡು ನುಡಿ ಸೇವೆ ಮಾಡಿದ ಮಹಾತ್ಮರು 

ಕಥೆಗಾರರಿಗೆ ವಿಷಯ ಆಯ್ಕೆಯ ಸ್ವಾತಂತ್ರವಿದೆ ಆದರೆ ವಾಸ್ತವಿಕ ಮತ್ತು ಸಾಮಾಜಿಕ  ಅಂಶಗಳನ್ನೊಳಗೊಂಡ ಕಥೆಗಳಿಗೆ ಮೊದಲ ಪ್ರಾಶಸ್ತ್ಯ.

ಬರಹಗಳನ್ನು ತಲುಪಿಸಲು ಸೆಪ್ಟಂಬರ್ 10 ಕೊನೆಯ ದಿನ. 

ಸೂಚನೆಗಳು:-

ಕಥೆಯನ್ನು 3 ಪುಟಗಳಿಗೆ (ಎ-4 )  ಮೀರದಂತಿರಬೇಕು. 

ಅಕ್ಷರ ಓದುವಂತೆ ಇರಬೇಕು ಸಾಧ್ಯವಾದಲ್ಲಿ  ಟೈಪ್ ಅಥವಾ ಡಿ.ಟಿ.ಪಿ. ಮಾಡಿಸಿ ಕಳುಹಿಸಿ. ಒಬ್ಬರು ಕಥೆ ಮತ್ತು ಕವನ ವಿಭಾಗ ಎರಡರಲ್ಲೂ ಭಾಗವಹಿಸಬಹುದು

ತಮ್ಮ ಬರಹದ ಜೊತೆಗೆ, ಹೆಸರು ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆ, ಇ-ಮೈಲ್ ವಿಳಾಸ ಸ್ಪಷ್ಟವಾಗಿ ನಮೂದಿಸಬೇಕು

ಆಯ್ಕೆ ಸಮಿತಿಯ ತೀರ್ಮಾನವೆ ಅಂತಿಮ ತೀರ್ಮಾನ.

ಸ್ವೀಕೃತವಲ್ಲದ ಬರಹಗಳನ್ನು ಹಿಂತಿರುಗಿಸುವುದಿಲ್ಲ. ಮೂಲ ಪ್ರತಿ ತಮ್ಮ ಬಳಿ ಇಟ್ಟುಕೊಳ್ಳುವುದು ಕ್ಷೇಮ.

ಮೇಲ್ಕಂಡ ಸೂಚನೆಗಳನ್ನು  ಪಾಲಿಸದಿದ್ದಲ್ಲಿ ತಮ್ಮ ಬರವಣಿಗೆ ತಿರಸ್ಕರಿಸಲಾಗುವುದು 

ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-

ವಿಭು N.R.

s/o ನಾರಸಂದ್ರ ರಾಮಚಂದ್ರಯ್ಯ

#27, “ಜ್ಞಾನ ಸೂರ್ಯ”, 5ನೇ ಅಡ್ಡರಸ್ತೆ,

ಶೆಟ್ಟಿಹಳ್ಳಿ ರಸ್ತೆ, ಮಲ್ಲಸಂದ್ರ

ಬೆಂಗಳೂರು – 560057

ಇಮೈಲ್- ekavisukapro@gmail.com  

 

ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.
__________________________________________________________________

Advertisements

August 22, 2007 Posted by | EKAVI Suvarna Karnataka Program, Karnataka World Heritage Sites | 2 Comments