Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

EKAVI SUVARNA KARNATAKA PROGRAM-PRESS RELEASE AUGUST 20th 07

ದಿನಾಂಕ ೨೯-೦೯-೨೦೦೭ ರಂದು ಈ-ಕವಿ ಸುವರ್ಣ ಕರ್ನಾಟಕ ಸಮಾರಂಭ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೆರವೇರಲಿದೆ. ಈ ಸಮಾರಂಭದ ಉದ್ಘಾಟನೆಯನ್ನು ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವಗೌಡ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷಪೀಠವನ್ನು ಹಿರಿಯ ಸಾಹಿತಿಗಳು, ಈ ಕವಿ ಗೌರವ ಅಧ್ಯಕ್ಷರಾದ ಡಾ|| ಚಂದ್ರಶೇಖರ ಕಂಬಾರರವರು ಅಲಂಕರಿಸಲಿದ್ದಾರೆ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ|| ಎ.ಎಸ್.ರಂಗನಾಥ್ , ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಮಾಹಾದೇವ್ ಪ್ರಸಾದ್ ಶಾಸಕರು ಮತ್ತು ಕಲಾವಿದರಾದ ನೆ.ಲ.ನರೇಂದ್ರಬಾಬು ಅಥಿತಿಗಳಾಗಿ ಬಾಗವಹಿಸಲಿದ್ದಾರೆ.


ಈ ಸಂಧರ್ಬದಲ್ಲಿ ಹಿರಿಯ ಗಾಯಕಿ ಸನ್ಮಾನ್ಯ ಗಂಗುಬಾಯಿ ಹಾನಗಲ್ಲ, ಸನ್ಮಾನ್ಯ ಸರೋಜಿನಿ ಮಹಿಷಿ, ಸನ್ಮಾನ್ಯ ಶಿವಮೊಗ್ಗ ಸುಬ್ಬಣ್ಣ, ಸನ್ಮಾನ್ಯ ಮುಖ್ಯಮಂತ್ರಿ ಚಂದ್ರು, ಸನ್ಮಾನ್ಯ ವಾಟಾಳ್ ನಾಗರಾಜ್ ರವರನ್ನು ಸನ್ಮಾನಿಸಲಾಗುವದು.


ಈ ಸಂಧರ್ಬದಲ್ಲಿ 4 ಲೇಖನ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಪೂರ್ಣಚಂದ್ರ ತೇಜಸ್ವಿಗೆ ನುಡಿ ನಮನ, ಕನ್ನಡದ ಪ್ರಗತಿಗಾಗಿ ನಾವೇನು ಮಾಡಬೇಕು? , ಯುವ ಬರಹಗಾರರಿಗೆ ಕವನ & ಕಥಾ ಸ್ಪರ್ಧೆ. ಹಮ್ಮಿಕೊಂಡಿದೆ. ಸ್ಪರ್ಧೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನವೀನ್ ಹಳೆಮನೆ(9901399318), ವಿಭು(9242766120) ಸಂಪರ್ಕಿಸಬಹುದು.

ಪತ್ರಿಕಾ ಗೋಷ್ಟಿಯಲ್ಲಿ ಬಾಗವಹಿಸಿದವರು

ಶ್ರೀ ಅಭಿನಾಶ್ ಗಣೇಶ್ (ಕರ್ಯದರ್ಶಿ ಈ-ಕವಿ)

ಶ್ರೀ ನವೀನ್ ಹಳೆಮನೆ( ಮಾಧ್ಯಮ ಸಮ್ಪರ್ಕ ಸಮಿತಿ ಈ-ಕವಿ)

ಶ್ರೀ ಬಾಬು ಶಂಕರ್(ಸಾಂಸ್ಕ್ರುತಿಕ ಸಮಿತಿ ಈ-ಕವಿ)

ಶ್ರೀ ವಿಭು (ಸ್ವಾಗತ ಸಮಿತಿ ಈ-ಕವಿ)
ಇಂತಿ
ಅಭಿನಾಶ್ ಗಣೇಶ್

೯೯೮೬೦೩೩೩೨೧
EKAVI TRUST Regd.
V. M. Kumaraswamy
s/o Late Dr. P. Venkatappa
“Nalanda” No. 34/1, 1st Cross
M. T. Layout, Malleshwaram
Bangalore – 560003

______________________________________________________________________
ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ)
ಎಲ್ಲಾದರು ಇರು,ಎಂತಾದರು ಇರು,ಎಂದೆಂದಿಗು ನೀ,ಕನ್ನಡವಾಗಿರು. -ಕುವೆಂಪು.
ಏನಿದು ಈ-ಕವಿ?
ಎಲ್ಲಾ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ.
ಕನ್ನಡಕ್ಕಾಗಿ ಅಂತರ್ಜಾಲದಲ್ಲಿ ಹುಟ್ಟಿಕೊಂಡ ಒಂದು ತಂಡ. ಕನ್ನಡದ ಏಳಿಗೆಗೆ ಶ್ರಮಿಸುತ್ತಿರುವ ಎಲ್ಲ ಕನ್ನಡಿಗರನ್ನು ಒಂದೆಡೆ ಸೇರಿಸಿದೆ.
ದಿನಾಂಕ ೧೮ ಜನವರಿ ೨೦೦೪ ರಂದು ಡಾ|| ಚಂದ್ರಶೇಖರ ಕಂಬಾರ ರವರಿಂದ ಈ-ಕವಿ ಬೆಂಗಳೂರಿನಲ್ಲಿ ಉದ್ಘಾಟನೆ.


ಈಗಾಗಲೆ ಪ್ರಪಂಚದ ಮೂಲೆ ಮೂಲೆಯನ್ನು ತಲುಪಿ ಅಮೇರಿಕ, ಇಂಗ್ಲೆಂಡ್, ದಕ್ಷಿಣ ಆಫ಼್ರಿಕ, ಸಿಂಗಪೂರ್, ಮಲೇಷಿಯ, ಸೌದಿ ಮುಂತಾದ ದೇಶಗಳಲ್ಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿದೆ, ಹಾಗೆಯ ಭಾರತದಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಹೈದರಾಬಾದ್ನಲ್ಲಿ ಈ-ಕವಿಯು ಹರಡಿಕೊಂಡಿದೆ.

ಈ-ಕವಿ ನಡೆದು ಬಂದಿರುವ ಹಾದಿ. . .
೧. ಯಾವುದೊ ಒಂದು ಖಾಸಗಿ ಸಂಸ್ಥೆಯ ಸ್ವಾಮ್ಯದಲ್ಲಿ ಕುಗ್ಗುತ್ತಿದ್ದ ಕನ್ನಡ ತಂತ್ರಾಂಶದ ಅಭಿವೃದ್ಧಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ ಸರ್ಕಾರವು ಕನ್ನಡ ತಂತ್ರಾಂಶದ ಬಗ್ಗೆ ಗಮನ ಹರಿಸುವಂತೆ ಮಾಡಿದೆ.
೨. ಈಗಾಗಲೆ ಮಂಡ್ಯ, ಹಾಸನ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ಪ್ರತಿ ವರ್ಷ ಶಾಲೆಯ ಆರಂಭದಲ್ಲಿ ವಿತರಿಸಲಾಗುತ್ತಿದೆ.
೩.ಚಿತ್ರಮಂದಿರ ಮಾಲಿಕರು ಮತ್ತು ಕೆಲವು ನಿರ್ಮಾಪಕರ ಕನ್ನಡ ವಿರೋಧಿ ನಿಲುವು ಹಾಗೂ ಪರಭಾಷಾ ವ್ಯಾಮೋಹವನ್ನು ವಿರೋಧಿಸಿ ಸಾಫ್ಟ್ವೇರ್ ತಂತ್ರಜ್ಞರು ಬೀದಿಗಿಳಿದು ಹೋರಾಟ ನಡೆಸಿದರು.
೪.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಅಂದಿನ ಸಚಿವರಾದ ಶ್ರೀ ಪಿ.ಜಿ.ಆರ್.ಸಿಂಧ್ಯಾ ರವರಲ್ಲಿ ಮನವಿ ಸಲ್ಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ಅದರ ಪರಿಣಾಮವಾಗಿ ಐ.ಟಿ. ಮತ್ತು ಬಿ.ಟಿ. ಕಂಪನಿಗಳಾದ ಇನ್ಫೊಸಿಸ್, ವಿಪ್ರೊ, ಬಯೋ ಕಾನ್ ಕಂಪನಿಗಳ ಮುಖ್ಯಸ್ಥರು ಎಚ್ಚೆತ್ತುಕೊಂಡರು.
೫. ರಾಷ್ಟ್ರಕವಿ ಕುವೆಂಪು ಜನ್ಮಶತಮಾನೋತ್ಸವದ ಅಂಗವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾವ ಗೀತೆ ಮತ್ತು ಏಕ ಪಾತ್ರಾಭಿನಯದ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಿದ್ದೆವು.
೬.ದಿನಾಂಕ ೧೨ ಡಿಸೆಂಬರ್ ೨೦೦೪ ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕುವೆಂಪು ಜನ್ಮಶತಮಾನೋತ್ಸವದ ಆಚರಿಸಿದೆವು.
೭. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಪ್ರಕಟಣೆಗಳನ್ನು ಮಾಡುತ್ತಿರುತ್ತೇವೆ.
೮.ರೇಡಿಯೊ ಸಿಟಿ(ಎಫ್ ಎಂ ೯೧)ನಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚಿಗೆ ಬರುವಂತೆ ಒತ್ತಾಯಿಸಿದ ಸುಮಾರು ೧೦ ಸಾವಿರ ಜನರ ಸಹಿಸಂಗ್ರಹ ಮಾಡಿ, ಇದನ್ನು ರೇಡಿಯೊ ಸಿಟಿ ಆಡಳಿತ ವರ್ಗದರೊಂದಿಗೆ ಚರ್ಚಿಸಿ ಪ್ರೈಂ ಟೈಂನಲ್ಲಿ ಪ್ರಸಾರವಾಗುವಂತೆ ಮಾಡಿದೆವು.
೯.ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆಗಳಾದ ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರದ ಜವಹರ್ ನವೋದಯ ವಿದ್ಯಾಲಯಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
೧೦. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡಲಾಗುತ್ತಿದೆ.
೧೧. ಡಾ||ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಹಾಗು ನೇತ್ರದಾನ ಶಿಬಿರ ನಡೆಸಲಾಯಿತು. ಡಾ|| ರಾಜ್ ರವರ ಸಮಾದಿಯ ಬಳಿ ೧೦೦೧ ದೀಪಗಳನ್ನು ಹಚ್ಚಿ ದೀಪ ನಮನ ಸಲ್ಲಿಸಿದೆವು. ಆಗಸ್ಟ್ ೬ ರಂದು ಡಾ|| ರಾಜ್ ಸವಿನೆನಪಿಗಾಗಿ ನಾದಮಯ ಈ ಲೋಕವೆಲ್ಲ. . . ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಿ, ಹಿರಿಯ ನಟರಾದ ಕೆ.ಎಸ್.ಅಶ್ವಥ್ ರವರಿಗೆ ಗೌರವಾನ್ವಿತವಾಗಿ ಸನ್ಮಾನಿಸಲಾಯಿತು.
೧೨. ನಾದಮಯ ಈ ಲೋಕವೆಲ್ಲ – ರಸಸಂಜೆ ಕಾರ್ಯಕ್ರಮದಲ್ಲಿ ಸುಮಾರು ೧೩ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿದೆವು.
೧೩. ರಾಷ್ಟ್ರಪ್ರಶಸ್ಥಿ ಪಡೆದ ಚಲನಚಿತ್ರಗಳಾದ ಬೇರು, ಹಸೀನಾ, ಸ್ಟಂಬಲ್ ಮುಂತಾದ ಕಲಾತ್ಮಕ ಚಿತ್ರಗಳ ವಿಶೇಷ ಪ್ರದರ್ಶನದೊಂದಿಗೆ, ಆ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವೆ.


ಈ-ಕವಿಯ ಮುಂದಿನ ಯೋಜನೆಗಳು . . . .
೧. ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು.
೨. ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು.
೩. ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು.

ಈ-ಕವಿ ಲೇಖನ ಸ್ಪರ್ಧೆ

ಪೂರ್ಣಚಂದ್ರ ತೇಜಸ್ವಿಗೆ ನುಡಿ ನಮನ

ಈಕವಿ ಕನ್ನಡ ಬಳಗವು ಪೂರ್ಣಚಂದ್ರ ತೇಜಸ್ವಿಯವರ ನೆನಪುಗಳನ್ನು ಮೆಲುಕು ಹಾಕಲು ಸಾಹಿತ್ಯ ಪ್ರೇಮಿಗಳಿಗೆ ಒಂದು ಸದವಕಾಶ ನೀಡುತ್ತಿದೆ. ತೇಜಸ್ವಿಯವರ ಯಾವುದಾದರು ಒಂದು ಕೃತಿಯನ್ನು ನೀವು ಏಕೆ ಮೆಚ್ಚಿಕೊಂಡಿರಿ ಎಂಬುದನ್ನು ಕುರಿತು ೫೦೦ ಪದಗಳಲ್ಲಿ ವಿವರಿಸಿ. ಉತ್ತಮ ೩ ಬರಹಗಳಿಗೆ ಬಹುಮಾನವಿರುತ್ತದೆ. ಒಟ್ಟು ೯ ಬಹುಮಾನಗಳು. ಹಾಗು ಬಹುಮಾನಿತ ಬರಹಗಳನ್ನು ‘ನನಗೇಕೆ ತೇಜಸ್ವಿ ಇಷ್ಟ’ ಎಂಬ ಕೃತಿಯಲ್ಲಿ ಪ್ರಕಟಿಸಲಾಗುವುದು.
ಈ ಸ್ಪರ್ಧೆಯನ್ನು 3 ವಿಭಾಗದಲ್ಲಿ ನೆಡಸಲಾಗುವುದು.

1) ಶಾಲಾ ಮಕ್ಕಳು

2) ಕಾಲೇಜು ವಿದ್ಯಾರ್ತಿಗಳು

3) ಇತರೆ ವಯಸ್ಸಿನ ಆಸಕ್ತರು

ಬರಹಗಳನ್ನು ತಲುಪಿಸಲು ಸೆಪ್ಟಂಬರ್ 24 ಕೊನೆಯ ದಿನ.

ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-

ನವೀನ್ ಹಳೆಮನೆ,

೮೮, ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು ,

೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,

ಸಂಪಿಗೆ ರಸ್ತೆ, ಮಲ್ಲೇಶ್ವರಂ,

ಬೆಂಗಳೂರು-೫೬೦೦೦೩

ಇಮೈಲ್- ekavisukapro@gmail.com

ಕನ್ನಡದ ಪ್ರಗತಿಗಾಗಿ ನಾವೇನು ಮಾಡಬೇಕು?

ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ನಮ್ಮ ನಾಡಿನ ಪ್ರಗತಿಯ ಬಗ್ಗೆ ಮತ್ತು ಮುಂದೆ ಸಾಗಬೇಕಾದ ಪಥದ ಬಗ್ಗೆ ಲೇಖನಗಳನ್ನ ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಪ್ರಗತಿಯ ಬಗ್ಗೆ ನಿಲುವುಗಳು ಹಾಗೂ ಆಲೋಚನೆಗಳಿರುತ್ತವೆ. ಇವುಗಳನ್ನು ಒಂದೆಡೆ ಕ್ರೋಢೀಕರಿಸಿ ಪ್ರಗತಿಪಥವೊಂದನ್ನು ಹುಟ್ಟು ಹಾಕುವ ಪ್ರಯತ್ನ ನಮ್ಮದು. ಆಸಕ್ತರು ಕನ್ನಡ ನಾಡಿನ ಬೆಳವಣಿಗೆಯ ಬಗ್ಗ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇದು ಸದವಕಾಶ. ಬರಹಗಳು ಪ್ರಬಂಧದ ರೂಪದಲ್ಲಿರಬೇಕು. ಬಹುಮಾನಿತ ಹಾಗು ಇತರೆ ಉತ್ತಮ ಬರಹಗಳನ್ನು “ಕನ್ನಡ ಪ್ರಗತಿ ಪಥ” ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗುವುದು.ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.

ಬರಹಗಳು ಪ್ರಬಂಧದ ರೂಪದಲ್ಲಿರಬೇಕು.

ಬರಹಗಳು ಸ್ಫುಟವಾಗಿರಬೇಕು.

ಪ್ರಬಂಧ ಫೂಲ್ಸ್ ಕ್ಯಾಪ್ ಹಾಳೆಯಲ್ಲಿ ಎರಡು ಪುಟಗಳನ್ನು ಮೀರದಂತಿರಬೇಕು.

ಸಾಧ್ಯವಾದಲ್ಲಿ ಡಿಟಿಪಿ ಅಥವಾ ಟೈಪ್ ಮಾಡಿಸಿ ಕಳುಹಿಸಬಹುದು.

ತಮ್ಮ ಬರಹದ ಜೊತೆಗೆ , ಹೆಸರು ವಿಳಾಸ, ಭಾವಚಿತ್ರ , ದೂರವಾಣಿ ಸಂಖ್ಯೆ , ಇ-ಮೈಲ್ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು.

ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.

ಬರಹಗಳನ್ನು ತಲುಪಿಸಲು ಸೆಪ್ಟಂಬರ್ 24 ಕೊನೆಯ ದಿನ.

ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-

ನವೀನ್ ಹಳೆಮನೆ, 9901399318

೮೮,ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು,

೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,

ಸಂಪಿಗೆ ರಸ್ತೆ, ಮಲ್ಲೇಶ್ವರಂ,

ಬೆಂಗಳೂರು-೫೬೦೦೦೩

ಇಮೈಲ್- ekavisukapro@gmail.com

ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಯುವ ಸಾಹಿತಿಗಳಿಗೆ ಸುವರ್ಣಾವಕಾಶ

ಈಕವಿ ಕನ್ನಡ ಬಳಗವು ಉದಯೋನ್ಮುಕ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಯುವ ಬರಹಗಾರರಿಂದ ಕಥೆ, ಕವನಗಳನ್ನು ಆಹ್ವಾನಿಸಿದೆ. ಆಯ್ದ ೩ ಕವನ ಹಾಗು ಕಥೆಗಳಿಗೆ ಬಹುಮಾನ ವಿತರಿಸಲಾಗುವುದು.ಯುವಕರು ಯುವತಿಯರಿಗೆ ಪ್ರತ್ಯೇಕ ಬಹುಮಾನ

ಕವಿಗಳು ಈ ಕೆಳಕಂಡ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

1) ಕನ್ನಡ ಭಾಷೆ

2) ಕನ್ನಡ ಚರಿತ್ರೆ

3) ಕನ್ನಡ ಸಂಸ್ಕೃತಿ

4) ಕನ್ನಡ ಮತ್ತು ಜಾಗತೀಕರಣ

5) ಕನ್ನಡ ನಾಡು ನುಡಿ ಸೇವೆ ಮಾಡಿದ ಮಹಾತ್ಮರು
ಕಥೆಗಾರರಿಗೆ ವಿಷಯ ಆಯ್ಕೆಯ ಸ್ವಾತಂತ್ರವಿದೆ ಆದರೆ ವಾಸ್ತವಿಕ ಮತ್ತು ಸಾಮಾಜಿಕ ಅಂಶಗಳನ್ನೊಳಗೊಂಡ ಕಥೆಗಳಿಗೆ ಮೊದಲ ಪ್ರಾಶಸ್ತ್ಯ.

ಬರಹಗಳನ್ನು ತಲುಪಿಸಲು ಸೆಪ್ಟಂಬರ್ 24 ಕೊನೆಯ ದಿನ.

ಸೂಚನೆಗಳು:-

ಕಥೆಯನ್ನು 3 ಪುಟಗಳಿಗೆ (ಎ-4 ) ಮೀರದಂತಿರಬೇಕು.

ಅಕ್ಷರ ಓದುವಂತೆ ಇರಬೇಕು ಸಾಧ್ಯವಾದಲ್ಲಿ ಟೈಪ್ ಅಥವಾ ಡಿ.ಟಿ.ಪಿ. ಮಾಡಿಸಿ ಕಳುಹಿಸಿ. ಒಬ್ಬರು ಕಥೆ ಮತ್ತು ಕವನ ವಿಭಾಗ ಎರಡರಲ್ಲೂ ಭಾಗವಹಿಸಬಹುದು

ತಮ್ಮ ಬರಹದ ಜೊತೆಗೆ, ಹೆಸರು ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆ, ಇ-ಮೈಲ್ ವಿಳಾಸ ಸ್ಪಷ್ಟವಾಗಿ ನಮೂದಿಸಬೇಕು

ಆಯ್ಕೆ ಸಮಿತಿಯ ತೀರ್ಮಾನವೆ ಅಂತಿಮ ತೀರ್ಮಾನ.

ಸ್ವೀಕೃತವಲ್ಲದ ಬರಹಗಳನ್ನು ಹಿಂತಿರುಗಿಸುವುದಿಲ್ಲ. ಮೂಲ ಪ್ರತಿ ತಮ್ಮ ಬಳಿ ಇಟ್ಟುಕೊಳ್ಳುವುದು ಕ್ಷೇಮ.

ಮೇಲ್ಕಂಡ ಸೂಚನೆಗಳನ್ನು ಪಾಲಿಸದಿದ್ದಲ್ಲಿ ತಮ್ಮ ಬರವಣಿಗೆ ತಿರಸ್ಕರಿಸಲಾಗುವುದು

ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-

ವಿಭು N.R.

s/o ನಾರಸಂದ್ರ ರಾಮಚಂದ್ರಯ್ಯ

#27, “ಜ್ಞಾನ ಸೂರ್ಯ”, 5ನೇ ಅಡ್ಡರಸ್ತೆ,

ಶೆಟ್ಟಿಹಳ್ಳಿ ರಸ್ತೆ, ಮಲ್ಲಸಂದ್ರ

ಬೆಂಗಳೂರು – 560057

ಇಮೈಲ್- ekavisukapro@gmail.com

ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.

August 20, 2007 Posted by | EKAVI Suvarna Karnataka Program, Karnataka World Heritage Sites | 1 Comment