Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

hambala mattu preethi kavanas by pushpalatha

ಹಂಬಲ

ಬೀಜವು ಒಡೆದು ಮೊಳೆತು
ಸಸಿಯಾಗಿ ಹೆಮ್ಮರವಾಗಿ
ಬೆಳೆದು ನಿಂತರೂ
ಮರದಲ್ಲಿ
ಹಣ್ಣುಗಳೇ ಇಲ್ಲ.

ಮೊಗ್ಗು ಬಿರಿದಾಗ
ಮಕರಂದ ಹೀರಿ
ಮೈತುಂಬಿಕೊಂಡ
ದುಂಬಿಗಳೆಷ್ಟೋ?

ಹೂಗಳು ಮಾಗಿ
ಪೀಚಲು ಕಾಯಿಗಳಾದಾಗ
ಹುಡುಗರ ದಂಡಿಗೆ ತುತ್ತಾಗಿ
ಕಲ್ಲೇಟು ತಿಂದು
ಸೊರಗಿ
ಬಿದ್ದು ಹೋದವುಗಳೆಷ್ಟೋ?

ಕಾಯಿಗಳು ಮಾಗಿ
ಇನ್ನೇನು ಹಣ್ಣಾಗಬೇಕು
ಎನ್ನುವಷ್ಟರಲ್ಲಿ
ಕುಕ್ಕೆ ಹಿಡಿದು ನಿಂತಿದ್ದ:
ತೋಟಮಾಲಿ,
ತಾನೇ ಹಣ್ಣಾಗಿಸುವ
ಚಪಲವಿತ್ತೇನೋ?

ಬೋಳು ಬೋಳಾದ
ಮರ
ಚಿಗುರೆಲೆ, ಹಸುರೆಲೆಗಳನ್ನು
ಹೊತ್ತು
ಹಣ್ಣೆಲೆಗಳನ್ನು ಉದುರಿಸುತ್ತಾ
ತೊನೆದಾಡುತ್ತಿದೆ.

ಆದರೂ ಎಲ್ಲೋ ಒಂದೆಡೆ
ಯಾರ ಕಣ್ಣಿಗೂ
ಬೀಳದೆ
ಎಲೆಗಳ ಸಂದುಗೂಡಿನಲ್ಲಿ
ಮರಯಾಗಿ ಉಳಿದ
ಒಂದೇ ಒಂದು ಕಾಯಿ,
ಮಾಗಿ ಹಣ್ಣಾಗಿ ಒಣಗಿ ಸುಕ್ಕುಗಟ್ಟಿ
ಬೀಜವಾಗಿ ಜೋತಾಡುತ್ತಿದೆ
ನಾಳಿನ ಹಂಬಲದಲ್ಲಿ.


ಪುಷ್ಪಲತ.

_______________________________________

ಪ್ರೀತಿ…….

ನನ್ನ ಕನಸಿನ ಹುಡುಗ
ಎಲ್ಲಿ ಹೋದನೋ ಏನೋ…

ಗಾಳಿಯಲಿ ತೇಲಿದನೋ
ನೀರಲಿ ಮುಳುಗಿದನೋ
ನನ್ನ ಪ್ರೀತಿಯ ಹುಡುಗ
ಎಲ್ಲಿ ಹೋದನೋ ಏನೋ…

ಬಾ ಎ೦ದು ಕರೆದಾಗ
ಕಣ್ಣ್ಮುಚ್ಚಿ ಕಾಡುವನು
ಬರೆದಿಟ್ಟ ಹಾಡಲ್ಲಿ
ದ್ವನಿಯಾಗಿ ಹಾಡುವನು

ಮುತ್ತುಗಳ ಮಾತಲ್ಲಿ
ಏನೇನೋ ಕೊಟ್ಟವನು
ಸ೦ಪಿಗೆಯೋ ಮಲ್ಲಿಗೆಯೋ
ನೀನೆ ನನಗೆ೦ದವನು

ತೆರೆದಿಟ್ಟ ಬಾಗಿಲಲಿ
ಅವ ಕಾಣಲಿಲ್ಲ
ಬ೦ದಿತ್ತು ಬಿರುಗಾಳಿ
ಅವ ಬರಲೇ ಇಲ್ಲ

ನನ್ನ ಕನಸಿನ ಹುಡುಗ
ಎಲ್ಲಿ ಹೋದನೋ ಏನೋ…………..



ಪುಷ್ಪಲತ

July 27, 2007 - Posted by | Kavanagalu by Kannadigas

18 Comments »

  1. tumba chennagide……. pushpa……

    best of luck for ur future……….!

    Comment by madhu | July 27, 2007 | Reply

  2. thumbaa chennagidhe,,, dhanyavaadagalu ..
    please continue writing

    Comment by shivaraj | July 27, 2007 | Reply

  3. Hi Pushpa, gr8 poems, keep the good work on

    Comment by nagen | July 27, 2007 | Reply

  4. thumba channagi ide Pushpa. Good job.

    Comment by JHawk | July 27, 2007 | Reply

  5. Hi pusha, poems r gr8, keep it up! good luck for future…..

    Comment by Thara vasanth | July 27, 2007 | Reply

  6. ಬದುಕೆ೦ಬ ಕಡಲಿನಲಿ, ಕನಸುಗಳ ದೋಣಿಯೇರಿ
    ಹುಡುಕುತಿದ್ದೆ ನಾನು ಪ್ರೀತಿಯೆಂಬ ತೀರ
    ಅರಿವಿಲ್ಲ ನನಗೆ ಅದು ಸಿಗದಷ್ಟು ದೂರ
    ನಿಜವಾಯ್ತು ನನಗಿ೦ದು ನಿನ್ನ ಕವನ ಓದಿ
    ಆದರೂ ಹಾರೈಸುವೆ ಗೆಳತಿ ನಾ ತು೦ಬು ಹೃದಯದಿ೦ದ

    ಕಾಯುತಿರು ನೀ ನಿನ್ನ ಗೆಳೆಯ ಬರುವ ಹಾದಿ
    ಸೋತು ಹಿ೦ದಿರುಗದಿರು ಅವ ಬರನೆ೦ದು ನೊ೦ದ ಮನಸಿನಿ೦ದ

    Comment by Mohan | August 28, 2007 | Reply

    • adbutha

      Comment by Lokesh | July 6, 2012 | Reply

  7. hi,

    I also used to write a kavana’s. But not U elder people.
    I have to get contact with u.

    Prashanth kadya

    Comment by prashanth kadya | November 27, 2007 | Reply

    • ಅದ್ಯ

      Comment by Prashanth kadya | August 21, 2009 | Reply

      • It is not posted by me.

        Comment by prashanth | November 13, 2009

  8. My poem first para is:

    Banage kandaga chandirana bimbha
    manadhage moodidhalu manadhake thumba

    Comment by prashanth kadya | November 27, 2007 | Reply

  9. nimma kavana prithisuvarige prithige kaithe iruvavarige darideepa vagide

    Comment by Roopa Rao | October 20, 2008 | Reply

  10. hi iamnithyasingh iam looking for an anchor jobs in kannada channels

    Comment by nithya singh | July 3, 2010 | Reply

  11. mugiyitu nanna manassina vayassu,,
    moosade ninna maiyya sogasu,,
    ninna preeti yannu bayasida nanna
    jeevana ayitu kannendu kaanada kanasu,, how is tis guys ,,

    Comment by sahil | May 28, 2011 | Reply

  12. Dabba kavanas…………

    Comment by Avinash | May 26, 2012 | Reply

  13. nimma kavanagalu tumba chennagide hege continue madi

    Comment by GOVINDA | July 30, 2012 | Reply

  14. Thumba channagide pushpa kavana
    ninna kalpane thumba channagide…
    Best of luck pushpa…

    Comment by Pratham | February 1, 2013 | Reply

  15. superb

    Comment by Suresh | March 12, 2014 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: