Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಕನ್ನಡ ಬಂದರೂ ನೆಟ್ಟಗೆ ಕನ್ನಡ ಮಾತಾಡದ ನಟ-ನಟಿಯರನ್ನು ಗುಂಡಿಟ್ಟು ಹೊಡೆಯಿರಿ…!

ಕನ್ನಡ ಬಂದರೂ ನೆಟ್ಟಗೆ ಕನ್ನಡ ಮಾತಾಡದ ನಟ-ನಟಿಯರನ್ನು ಗುಂಡಿಟ್ಟು ಹೊಡೆಯಿರಿ…!

ದಿನಕ್ಕೊಂಮ್ಮೆ ಕ್ರಾಂತಿ ಬಗ್ಗೆ ಭಾಷಣ ಮಾಡ್ತಾ, ಕ್ರಾಂತಿಯ ಭ್ರಾಂತಿಯಲ್ಲೇ ಮುಳುಗಿರುವ ರಾಜಕಾರಣಿಗಳೇ, ಕನ್ನಡ ಹೋರಾಟಗಾರರೆಂದು ಬಿಂಬಿಸಿಕೊಳ್ಳುವ ಕೆಲವು ‘ಓರಾಟಗಾರರೇ’, ದಿನಾಲೂ ಟಿ.ವಿಯಲ್ಲಿ, ಪೇಪರಲ್ಲಿ ಕನ್ನಡದ ಬಗ್ಗೆ ವಿಧ ವಿಧವಾಗಿ ಥರಾವರಿ ಹೇಳಿಕೆಗಳನ್ನ ಕೊಡುವ ಮಂದಿ ಇಂಥ ಒಂದು ಹೇಳಿಕೆನಾದ್ರೂ ಕೊಟ್ರೆ ಉಪಯೋಗವಾದರೂ ಆದೀತು…!
ಕನ್ನಡ ಬಂದರೂ ಕನ್ನಡ ಉಲಿಯದ, ಕಾವೇರಿ ಗಲಾಟೆ ಆದ ತಕ್ಷಣ ಕಾವೇರಿ ನಮ್ಮದು ಅಂತಾ ಬೊಗಳೆ ಬಿಟ್ಟು “ಕನ್ನಡ ನಿಷ್ಠೆ ತೋರುವ ನಟನಾ ಮಣಿಗಳಿರಾ…, ಕನ್ನಡ ಎಂಬೋ ಒಂದು ಸುಂದರ ಭಾಷೆ ಇದೆ. ಅದನ್ನ ಇಂಗ್ಳೀಷ್ ಜೊತೆ “ಕಲಬೆರಿಕೆ ಮಾಡಿ ಕಲಸಂಬಲಸ ಮಾಡಿ ನಿಮ್ಮ ಮಾನ ಮರ್ಯಾದೆ ಜಗಜ್ಜಾಹೀರಾಗಿಸಿಕೊಳ್ಳಬೇಡಿ! ನಿಮ್ಮ ಹಾಗೆ ಕನ್ನಡ ಬೇವರ್ಸಿಯಲ್ಲ. ಅದಕ್ಕೊಂದು ಹಿನ್ನೆಲೆ ಇದೆ, ಭದ್ರ ತಳಪಾಯವಿದೆ.
ಕನ್ನಡದ ಸ್ಟಾರು ಪಟ್ಟಕ್ಕೆ ಏರಿದ ಹಲವು ಮಂದಿಯ ಕನ್ನಡ ಮಾತುಗಳನ್ನ ಕೇಳುತ್ತಿದ್ದರೆ, ಕೈಗೆ ಸಿಕ್ಕಿದ್ದರಲ್ಲಿ ಹೊಡೆಯೋಣವೆನ್ನುವಷ್ಟು ಸಿಟ್ಟು ನೆತ್ತಿಗೇರುತ್ತದೆ. ಇವರಿಗೆ ಭಾವನಾತ್ಮಕವಾಗಿ ಜನರ ಭಾವನೆಗಳನ್ನು ಕೆರಳಿಸಿ ಡೈಲಾಗು ಹೊಡಿಯಕ್ಕೆ ಬರುತ್ತೆ, ಕೋಟಿಗಟ್ಲೆ ಗಂಟು ಹೊಡಿಯಕ್ಕೆ ಬರುತ್ತೆ, ಆದ್ರೆ ಇದೆಲ್ಲಾ ಬಂದ್ರೆ ಏನ್ ಉಪಯೋಗ..? ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ? ಇವರ ಸಂದರ್ಶನಗಳನ್ನ ಒಮ್ಮೆ ಗಮನವಿಟ್ಟು ನೋಡಿ. ಅದರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚಾಗಿ ಇಂಗ್ಳೀಷ್ ಶಬ್ಧಗಳು ರಾರಾಜಿಸುತ್ತವೆ(ಭಲೇ ಕಿರಿ ಕಿರಿ ಮಾಡುತ್ತವೆ). ಎಲ್ಲವನ್ನೂ ಕನ್ನಡದಲ್ಲಿ ಹೇಳಲಿಕ್ಕೆ ಹೊರಟರೆ ಕನ್ನಡವನ್ನೇ ಅಪಹಾಸ್ಯ ಮಾಡಿದಂತಾಗುತ್ತದೆ. ಮಧ್ಯ ಮಧ್ಯ ಇಂಗ್ಳೀಶ್ ಅನಿವಾರ್ಯವಾಗಿ ಬಂದರೆ ಅದನ್ನು ಒಪ್ಪಿಕೊಳ್ಳಬಹುದು. ಇಲ್ಲದಿದ್ದರೆ ಅದು ಕನ್ನಡ  ಕಟ್ಟರ್ವಾದಿತನ ಆದೀತು. ಆದರೆ ಇಂಗ್ಳೀಶ್ನ ಮಧ್ಯ ಮಧ್ಯ ಕನ್ನಡ ತೂರಿ ಬಂದರೆ, ಅದಕ್ಕಿಂತ ಕಿರಿಕಿರಿ ಮತ್ತೊಂದಿಲ್ಲ. ಅದನ್ನ ಸಹಿಸಿಕೊಳ್ಳುವುದಾದರೂ ಹೇಗೆ? ಸ್ಯಾಂಪಲ್ಗೆ ಅಂತಾ ರಮ್ಯ, ರಕ್ಷಿತ, ಡೈಸಿ ಬೋಪಣ್ಣ ಮುಂತಾದವರ ಟಿ.ವಿ ಸಂದರ್ಶನಗಳನ್ನ ನೋಡಿ. ಇವರ ಕನ್ನಡಾಭಿಮಾನ ತೋರ್ಪಡುತ್ತದೆ. so ಹಾಗಾಗಿ, its really funtastic, you know..? i like it very much.  ಅನ್ನೋ ಅಣಿಮುತ್ತುಗಳನ್ನು ಉದುರಿಸುತ್ತಾರೆ. (ತಲೆಯಲ್ಲಿರೋ ಕೂದಲು ಉದುರುವವರೆಗೂ ಹೀಗೆ ಮುತ್ತುಗಳನ್ನು ಉದುರಿಸುತ್ತಲೇ ಹೋಗುತ್ತಾರೆ!) ಗಮನಿಸಿ, ಇವರೆಲ್ಲಾ ಕನ್ನಡದ ಮಹಾನ್ ಮಹಾನ್ ತಾರೆಯರು! ಅದ್ಯಾವ ಸೀಮೆ ತಾರೆಯರೋ? ಇವರನ್ನ ತಾರೆಯರನ್ನಾಗಿಸಿದ ನಮಗೆ ನಾವು…
ಇವರಿಗೆ ಬೆಳೆಯೋದಕ್ಕೆ ಕನ್ನಡ ಇಂಡಸ್ಟ್ರಿ ಬೇಕು, ಇವರ ಸಿನಿಮಾ ನೋಡಕ್ಕೆ ಬಡಪಾಯಿ ಕನ್ನಡಿಗರು ಬೇಕು, ಸಿನಿಮಾದಿಂದ ಬರುವ ದುಡ್ಡನ್ನ ಬಾಚಿಕೊಳ್ಳಲೂಬೇಕು. ಇನ್ನು ರಮ್ಯ, ರಕ್ಷಿತರ ಕನ್ನಡ ಕೇಳೋ ಬದಲು ನೇಣು ಹಾಕಿಕೊಳ್ಳೋದು ವಾಸಿ!
to rd nxt, www.masaledose.wordpress.com

This message was sent to you by ಗಣೇಶ್ Ganesh ಕನ್ನಡ ಸಾಲಿ ಹುಡುಗ..!. To see ಗಣೇಶ್ Ganesh’s profile click:
http://www.orkut.com/Profile.aspx?uid=1226870975087203994

Advertisements

March 7, 2007 - Posted by | Blogroll, KANNADA

1 Comment »

  1. Karnataka- Namma bangalorinalli yestu jana kannadigariddare?
    Yeli yedelli kannadigare, navu namma karunadannu kattonna, illadiddare munde ondu dina namma makkalige Tamil, telugu, marati, punjabi ithara langauage annu kalisekodabekagbahdu, yekendare bangalorenalli kannadigarannu bere bhavane galindha nuduthidarre para basigaru. Pls. navu kannadigaru navu ellarannu appikoluteve ageye namage thodare adare avarannu navu biduvudilla. Karnataka dalli kannada mathadi nanna priya para basigare, illiya anna, niru, duddu yella beku nimage adare kannada andhare yeke bavane bereyaguthade. Dayavittu keli anya rajyadavare nivu karunadinnalli iruva varegu kannadigare, ilinda hoda mele manthra nivu nimma langauagege bele kodi. Nivu idannu marethu punha mudhala ritiyelliye kannadavannu kandare e aaru khoti kannidigaru nimma mele biddare nivu nuchhu noraoguthree…Idu sathasidda…. Kannada vannu preethisee adhu nimmannu pretheesutade..

    Jai Karnataka mathe
    Jai Hind,Jai Bharat

    Comment by Prashanth | March 10, 2007 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: