Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಬಂಜೆ-ಹಾಡು…..

null

ನಾ ಯೇನ ಅರಮಾನಿ ಕೇಳಿದ್ನೇನು
ಅರಮನಿಯಾಗ್ ಕೂತು ಮಾರಾಣಿಯಂಗ್
ಮೆರಿಯೋ ದರ್ದು ನನಗಿಲ್ ನೋಡು..
ನಾ ಯೇನ ಸೋನ ಚಾಂದಿ ಬೇಡಿದ್ನೇನು
ಇವತ್ತಿದ್ ನಾಳಿ ಮಣ್ಣಾಗ್ ಮಣ್ಣಾಗಿ
ಹೋಗೊ ಗರ್ತಿ ಇದ್ದೀನ್ ನಾನು..
ನಾ ಕೇಳಿದ್ದೊಂದ…..ಬೇಡಿದ್ದೊಂದ ನಿನಗ
ಶಿವನಾ ನನ್ ಮಡ್ಲಾಗ ಒಂದು ಕಂದಮ್ಮನನ್ನ ಹಾಕೊ……

ಸುತ್ ಮುತ್ ಹತ್ತ್ ಹಳ್ಯಾಗ
ಹೇಳ್ಲಿಕ್ ಹತ್ಯಾರಂತ…ಮ್ಯಾಗಿನ್ ಮನಿ
ಸೀತಮ್ಮನ್ ಸೊಸಿ ಬಂಜೆ ಅಂತ…
ಮೊನ್ನಿ ಕೂಡ ಶಾರ್ದಕ್ಕನ ಮನಿಯಾಗ ಲಕ್ಷ್ಮಿ
ಪೂಜೆ ಇತ್ತು.. ಪುಣ್ಯಾತ್ ಗಿತ್ತಿ ನನ್ ಹಣಿ ಮ್ಯಾಗ
ಒಂದು ಬೊಟ್ಟು, ಕುಂಕುಮ ಇಡ್ಲಿಲ್ಲ..ನೋಡು
ನನ್ ಮಡ್ಲಾಗ ನಾಲ್ಕ್ ಅಕ್ಕಿ ಕಾಳ್ ಹಾಕ್ಲಿಲ್ ನೋಡು
ಅದ್ಕಾ ನಾನ್ ಕೇಳಿದ್ದು ಶಿವನಾ ನನ್ ಮಡ್ಲಾಗ ಒಂದು ಕಂದಮ್ಮನನ್ನ ಹಾಕೊ…..

ಊರ ಗರತೇರ ಮಡ್ಲಾಗ್ ನೋಡಲ್ಲಿ
ಬೆಳ್ಳಿ ಚಂದ್ರಾಮನಂಗ ಕಂದ ನಗುತಾನ
ನೀರ್ ತರೋಣಾಂತ ಹೊರಾಗ್ ಹೋದ್ರ..
**ಎನ್ ತಂಗೀ ನಿನ್ ಹೊಟ್ಟಿ ಸಣ್ಣಾಕೈತಿ
ಇನ್ನು ಉಂಡಿಲ್ಲೇನ** ಅನ್ಕೋತ ಮಂದಿ ನಗತಾರ
ಗಂಡಾ ಆದೋನು ಹೊಟ್ಟಿ ಮ್ಯಾಲ್ ಒದಿತಾನ…….
ಅತ್ತಿ ಅಂತು ಕಣ್ಣಾಗ ಕೊಲ್ತಾಳ ನೋಡು………..
ನಾ ಬೇಡೋದ್ ಒಂದಾ ನಿನಗಾ-ಶಿವನೇ ನನಗ ಕಂದಾ ಬೇಕೋ

ಅಳ್ಲಿಕ್ ಕಣ್ಣಾಗ ಒಂದು ಹನಿ ನೀರಿಲ್ಲಿಲ್ಲಿ
ಆದ್ರ ಹಾಲ್ನಂತ ಕಂದನ ಮ್ಯಾಗ
ಆಸೆ ಉಕ್ಕುತೈತಿ ನೊಡ.. ಒಡಲಾಗ ಜಲಪಾತ ಐತೇನ?
ಮಾರಿ ಮ್ಯಾಗ ನಗೆ ಮೂಡಿ ಯೇಸ್ ದಿವ್ಸ ಆಯ್ತೋ
ಆದ್ರ ಮನದಾಗ ಆಸೆ ಬಳ್ಳಿ ಹಬ್ಬುತೈತಿ….. ಆಸರೆ ಆಕ್ತಿಯೇನ?
ಬಂಜಿ ಬಾಳ್ ಸಾಕಾಗೈತಿ, ಗಂಡನ ಒದಿ ಸಾಕಾಗೈತಿ
ಮತ್ತೊಮ್ಮಿ ಜೀವ ಬೇಡ್ಲಿಕ್ ಹತ್ತೈತಿ..
ಶಿವನಾನ॒ನಗ ಕಂದ ಬೇಕೇ ಬೇಕಪ್ಪಾ ನನಗ

ಊರಿನ್ ಗರತೇರ ಮಾರಿಗ್ ಹೊಡಿಯೋದ್ ಬ್ಯಾಡೇನು!
ಅತ್ತೀಗ್ ನಾ ಉತ್ರಾ ಕೊಡೋದ್ ಬ್ಯಾಡೇನು!
ಊರಾಗ ನಾ ಮಾರಿ ಎತ್ತಿ ತಿರ್ಗಾಡೋದ್ ಬ್ಯಾಡ್ವೇನು!
ಮತ್ತ ಲಕ್ಶ್ಮಿ ಪೂಜ್ಯಾಗ ..ನನ್ ಹಣಿ ಮ್ಯಾಗ ಕುಂಕುಮಾ ಮೂಡೋದ್ ಬ್ಯಾಡ್ವೇನು!
ನನ್ ಮಡ್ಲಾಗ ನಾಲ್ಕ್ ಅಕ್ಕಿ ಕಾಳ್ ಬೀಳೋದ್ ಬ್ಯಾಡ್ವೇನು
ಶಿವನೇ ನಿನ್ ರಟ್ಟಿ ಹಿಡಿದ್ ಕೇಳ್ಲಿಕ್ ಹತ್ತೀನಿ ನನಗ ಒಂದು ಕಂದ ಬೇಕೋ

Advertisements

February 1, 2007 - Posted by | Uncategorized

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: