Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

muraliya kare-jyothi

ಮುರಲಿಯ ಕರೆ(ಮುರಲಿಯ ಕರೆಯನ್ನು ಮರೆಯಲಾರದೆ, ತೊರೆಯಲಾರದೆ ಕೊರೆದದ್ದು…
ಹೊಸ ವರುಷದ ಹೊಸ್ತಿಲಲ್ಲಿ ನಿಮ್ಮೆಲ್ಲರಿಗೂ “ಮುರಳೀಧರ ಶಂಖಪಾಣಿ”ಯು ಒಳಿತನ್ನುಂಟುಮಾಡಲೆಂದು ಹಾರೈಸುತ್ತಾ….)

ಏನು ಮೋಡಿಯೋ ಎಂಥಾ ಮಾಯೆಯೊ
ಮುರಲಿಯ ಕೊಳಲಿನ ಉಲಿಗೆ
ಬೃಂದಾವನದಲಿ ಬಂಧಿಗಳೆಲ್ಲರು
ಮೋಹನ ರಾಗದ ಕರೆಗೆ

ಯಮುನೆಯ ಮಳಲಲಿ ಹುಣ್ಣಿಮೆ ನೆಳಲಲಿ
ರಂಗನ ರಂಗಿನ ಕೋಡಿ
ಸರಿಸಲು ಬಾರದು ಮೋಹದ ಚಾದರ
ಹರಿಯೇ ಹೊದೆಸಿದ ನೋಡಿ

ಅರುಣನ ಕಿರಣವ ಕೆನ್ನೆಗೆ ತಂದಿತು
ಮುದ್ದಿನ ಮಾನಿನಿ ತಂಡ
ಮರೆತರು ಮನೆಯನು ತೆರೆದರು ಮನವನು
ನಲ್ಲ ಕೃಷ್ಣ ಬಲು ಮೊಂಡ

ತುಂಟನ ಕಾಟವ ಸಹಿಸೆವು ಎನ್ನುತ
ಸರಿವರು ಯಮುನಾ ತಟದಿ
ಮಾರನಯ್ಯನ ಮೋರೆಯ ನೋಡದೆ
ಇರುವುದು ಸಾಧ್ಯವೆ ಜಗದಿ?

ಮಥುರೆಗೆ ಹೊರಟಿತು ಗೋಪಿಯ ಜೀವ
ಬೃಂದಾವನ ಮರುಭೂಮಿ
ಕೊಳಲನು ತೊರೆದು ಶಂಖವನೆತ್ತಿದ
ಭುವನಾನಂದನು ಸ್ವಾಮಿ
(೧೫-ಮಾರ್ಚ್-೨೦೦೬)

December 29, 2007 Posted by | http://suptadeepti.blogspot.com/ | 2 Comments

   

Follow

Get every new post delivered to your Inbox.

Join 59 other followers