Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

KANNADA NELA JALA ITHIHAASA BHASHE JEEVANAADI SAMSKRUTHI

kannada-nela-jala-2n9.gif

karnataka-ithihasa-prkashbt7.gif

kannada-bhashe-ulisuvudakke-tu5.gif

kda-siddalingaiah-bangalorecity_9.gif

December 2, 2007 Posted by ellakavi | KANNADA KARNATAKA | | No Comments

manada mayseju by arundathi

ಮನದ ಮೇಸೆಜು . . !

ಮಾನಸದಲ್ಲಿ ಪ್ರಕಟನೆಯಾದ ಮನದ ಮೇಸೆಜುಗಳ ಸಂಗ್ರಹ

ನೀ ಕಷ್ಟದಲ್ಲಿಗ
ದೇವರು ಸಹಾಯ
ಮಾಡಿದರೆ
ಅವನ ಶಕ್ತಿಯ ಬಗ್ಗೆ
ನಿನಗೆ ನಂಬಿಕೆ ಬರುತ್ತೆ.
ಅದೇ ಅವನು
ನಿನಗೆ ಸಹಾಯ ಮಾಡಲು
ಸ್ವಲ್ಪ ತಡಾ ಮಾಡಿದರೂ
ನಿನ್ನ ಶಕ್ತಿಯ ಬಗ್ಗೆ
ಅಂತಹ ದೇವರಿಗೇ
ನಂಬಿಕೆಯಿದೆ ಎಂದರ್ಥ !
ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ?
ಮಳೆ ನಿಂತರೂ
ಮರದ ಹನಿ ನಿಲ್ಲದು.
ಪ್ರೀತಿ ಮುಗಿದರೂ
ಹೃದಯದಲ್ಲಿ
ನಿನ್ನ ನೆನಪು
ಕಾಡುತ್ತಲೇ ಇರುವಿದು.
ಕವಿದ ಕತ್ತಲು
ಕಾಣದ ದಾರಿ
ಅವನಲ್ಲ
ನನ್ನ ನೆರಳು
ಕೂಡಾ
ನನ್ನೊಂದಿಗಿಲ್ಲ .
ನೀರಿನ ಮೇಲೆ
ಬರಯಲಾಗುವುದಿಲ್ಲ.
ಬರೆದರೂ
ಅದು ಉಳಿಯುವುದಿಲ್ಲ.
ನನ್ನದು
’ಕಲ್ಲು ಹೃದಯ’
ಎಂದು ಹೇಳುತ್ತಾರೆ ಎಲ್ಲ.
ವಿಚಿತ್ರವೆಂದರೆ,
ಕಲ್ಲಿನ ಮೇಲೆ ಬರೆದಿದ್ದು
ಎಂದಿಗೂ ಅಳಿಸಿ ಹೋಗುವುದಿಲ್ಲ .
ಹಡಗು
ದಡದಲ್ಲೇ ಇದ್ದರೆ
ನಿಜಕ್ಕೂ ಷ್ಕೇಮ.
ಆದರೆ
ಹಡಗನ್ನು ನಿರ್ಮಿಸಿದ್ದು
ಹಾಗೆ ದಡದಲ್ಲಿರಲು ಅಲ್ಲ .
ಇದೇ ಜೀವನ.
ತಪ್ಪು ತಿಳಿದುಕೊಂಡೆ
ಗೆಳೆಯಾ,
ನೀ ಕಲ್ಲು ಹೃದಯದವನೆಂದು.
ಗುತ್ತಾಯಿತೀಗ
ನೀ
ಹೃದಯವೇ ಇಲ್ಲದ
ಕಲ್ಲು ಬಂಡೆಯೆಂದು .
ನಿನ್ನ ಹೃದಯದಲ್ಲಿ
ಯಾರೋ ಇರಬಹುದು
ನಿನ್ನ ಕನಸಿನಲ್ಲಿ
ಯಾರೋ ಇರಬಹುದು
ನಿನ್ನ ಬದುಕಿನಲ್ಲಿ
ಯಾರೋ ಇರಬಹುದು
ಆದರೆ . .
ನಿನ್ನ ನೆನಪಿನಲ್ಲಿ
ಯಾರೂ ಇಲ್ಲದೇ ಇದ್ದಾಗ
ನಾನಿರುತ್ತೇನೆ .
ನೀ ಜೊತೆ ಇದ್ದಾಗ
ನಿನ್ನನ್ನೇ ಕೇಳುತ್ತಿದ್ದೆ
ಗೆಳತಿ ಪ್ರೀತಿ ಎಂದರೆ
ಏನೆಂದು . . .
ನೀ ನನ್ನನ್ನು
ಅಗಲಿದಾಗ
ನನಗನ್ನಿಸಿತು
ಅದು ನೀನೇಎಂದು.
  ನಿನ್ನ ಸ್ನೇಹಿತ
ತೊಂದರೆಯಲ್ಲಿದ್ದಾನಾ,
ಕರೆಯದಿದ್ದರೂ
ಅವನ ನೆರವಿಗೆ ಹೋಗು.
ಆದರೆ
ಅವನು ಸಂತಸದಲ್ಲಿದ್ದಾಗ
ಕರೆಯದೇ
ಹತ್ತಿರ ಹೋಗಬೇಡ.
ಮಾತುಗಳು
ಮರೆತುಹೋಗಿವೆ.
ಕವನಗ್ಳು ಕಳೆಗುಂದಿವೆ.
ಶಾಯರಿಗಳಲ್ಲಿ ಸತ್ವವಿಲ್ಲ.
ಗಝಲ್ ಗಳು ಗೂಡು ಸೇರಿವೆ.
ಈಗ ಉಳಿದಿರುವುದು
ಕೇವಲ ನನ್ನ-ನಿನ್ನ ಈ ಮೌನ ಸಂಭಾಷಣೆ.
ಒಂದೊಮ್ಮೆ ನಾನು ಸತ್ತರೆ,
ನನ್ನನ್ನು ಸುಡುವ
ಮೊದಲು ನನ್ನ
ಹೃದಯವನ್ನು
ಕ್ಶೇಮವಾಗಿ ಎತ್ತಿಡು.
ನಾಣು ನನ್ನ ಹೃದಯದ
ಬಗ್ಗೆ ಯೋಚಿಸುತ್ತಿಲ್ಲ
ಆ ಹೃದಯದೊಳಗಿರುವ
ನಿನ್ನ ಬಗ್ಗೆಯೇ
ಯೋಚಿಸುತ್ತಿದ್ದೇನೆ.
ನಗುವ ಗುಲಾಬಿಯ
ಹಿಂದೆ
ನೋವೆಂಬ ,ಮುಳ್ಳೀರುತ್ತೆ.
ಆದರೆ
ನಗಿಸುವವರ
ಮನದಲ್ಲಿ
ನಗಲಾದದಷ್ಟು ನೋವಿರುತ್ತೆ.
ಗೆಳೆತನದ ನಂತರ
ಪ್ರೀತಿ ಸಾಧ್ಯ.
ಆದರೆ
ಪ್ರೀತಿಯ ನಂತರ
ಗೇಳೆತನ ಸಾಧ್ಯವಿಲ್ಲ.
ಯಾಕೆಂದರೆ
ಔಷಧಿ
ಸಾವಿಗಿಂತ ಮೊದಲು
ಮಾತ್ರ ಕೆಲಸ ಮಾಡುತ್ತದೆ.
ಸಾವಿನ ನಂತರವಲ್ಲ!
ನಲ್ಲ
ಮರೆತುಬಿಡು ನನ್ನ
ಕಳೆದುಹೋದ
ದಿನಗಳನ್ನ.
ಮರೆಯುವೆನು ಚಿನ್ನ
ಜೊತೆಗೆ ನನ್ನ ಉಸಿರನ್ನ.
ನೆನಪಿನಲ್ಲಿ ನೆನಪಾಗಿ
ಉಳಿಯುವುದು
ನೆನೆದವರು ಮಾತ್ರ.
ಪ್ರೀತಿಯಲ್ಲಿ ಪ್ರೀತಿಯಾಗಿ
ಉಳಿಯುವುದು
ಪ್ರೀತಿಸಿದವರು ಮಾತ್ರ.
ಸ್ನೇಹದಲ್ಲಿ ಸ್ನೇಹವಾಗಿ
ಊಳಿಯುವುದು
ನೀನು ಮಾತ್ರ.
ಆ ದೇವರೇ
ಪ್ರೀತಿಯನ್ನು
ಸೃಷ್ಟಿಸಿದ್ದಾನೆಂದರೆ
ಅವನೂ ಅದನ್ನು
ಅನುಭವಿಸಿದಬೇಕು.
ಈ ಪ್ರೀತಿ
ಅವನನ್ನೇ
ಅಳಿಸಿದೆಯೆಂದ ಮೇಲೆ
ನಾವ್ಯಾವ ಲೆಕ್ಕ.
  ಪ್ರೇಮಿ ಚಂದಿರನಂತೆ
ಸ್ನೇಹ ಚುಕ್ಕಿಯಂತೆ
ಚಂದಿರನಿಲ್ಲದ ಆಕಾಶ
ಸುಂದರವಾಗಿ
ಕಾಣಬಹುದು.
ಆದರೆ
ಚಿಕ್ಕಿಗಳಿಲ್ಲದ ಆಕಾಶ
ಖಾಲಿ. . ಖಾಲಿ .

December 2, 2007 Posted by ellakavi | arundathi | | 1 Comment