Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

ಮುಗ್ಧಯೋಗಿ


“ನೆಲಗುದ್ದಿ ಬೆವರಿಳಿಸಿ ತನ್ನ ಪಾಲಿನ ಗದ್ದೆ-
ಯುತ್ತು ಓರಣಮಾಡಿ, ಲಾಂಟಾನ ಪೊದೆಕಿತ್ತು,
ಉಪ್ಪೆಮೆಳೆ ಪಾಪಾಸು ಕಾರೆ ಕುಂಟಿಯ ಸವರಿ,
ತರಿದು ಈಚಲು, ಬೊಡ್ಡೆ ಸುಟ್ಟು, ನಾಟಿಯ ಮುಗಿಸಿ
ಮೋಡಗಳ ಜೋಡಿ ಮಾತಾಡಿ ಒಣಗು ನೆಲಕ್ಕೆ
ನಾನು ಹನಿಗಳ ಬೇಡಿ ದೈನಾಸ ಪಟ್ಟವರೇ…
ಗುಡಿಗೋಪುರದೆ ಮುಂದೆ ಕಣ್ಮುಚ್ಚಿ ನಿಲ್ಲದೆಯೆ
ಎಲ್ಲೊ ಅಳುತ್ತಿದೆ ಮಗು ಎಂದು ತಲ್ಲಣಿಸುತ್ತ
ನಟ್ಟಿರುಳಿನಲ್ಲಿ ಚೋಟುದ್ದ ಬ್ಯಾಟದಿ ಹಿಡಿದು
ಚಂದ್ರದಾಡೆಯ ಇರುಳ ಗಂಟುಮೋರೆಗೆ ವೃಥಾ
ಬೆಳಕ ದೊಣ್ಣೆಯ ತಿವಿದು ತಿವಿದು ಅಳಲಿನ ಸ್ವರಕ್ಕೆ
ಕಿವಿಯೊಡ್ಡಿ ಮುನ್ನಡೆವ ಮುಗ್ಧಯೋಗಿ…

ನಮ್ಮ ದಾರಿಗೆ ಇರಲಿ ನಿಮ್ಮ ಟಾರ್ಚಿನ ಬೆಳಕು
ಸರಿರಾತ್ರಿಗಿರುವಂತೆ ಚಂದ್ರಗಿಂಡಿಯ ತುಳುಕು !”

-ಎಚ್ ಎಸ್ ವೆಂಕಟೇಶ ಮೂರ್ತಿ

November 8, 2007 Posted by cspsowbhagya | EKAVI Group | | No Comments

ದಿಕ್ಕು ಕೆಡಿಸುವ ಮೂಡನಂಬಿಕೆಗಳು

          ಸದಾ ಕ್ರಿಯಾಶೀಲರಾಗಿರಲು ರೋಗ ನಿರೋಧಕ ಶಕ್ತಿಗಳಿಸಿಕೊಂಡು ದೈನಂದಿನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದರೆ, ಪೌಷ್ಟಿಕ ಆಹಾರದ ಅವಶ್ಯಕತೆ ಇದೆ. ಅದೇ ರೀತಿ ಮನಸ್ಸು ಲವಲವಿಕೆಯಿಂದಿರಲು ಒಳ್ಳೆಯ ಚಿಂತನೆ, ವಿಚಾರದ ಜತೆಗೆ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ವಿವೇಕವೂ ಇರಬೇಕು. ಮಾನವನ ಆಯಸ್ಸು ಸರಾಸರಿ 60 ವರ್ಷ ಎಂದಿಟ್ಟುಕೊಳ್ಳೋಣ. ಅಂದರೆ, 365 X 60 = 21900 ದಿನಗಳು. ಇದರಲ್ಲಿ ಅರ್ಧಭಾಗ ನಿದ್ದೆಗೆ, ವಿಶ್ರಾಂತಿಗೆ ಹೋಗುತ್ತದೆ. ಮಿಕ್ಕ ಸಮಯ ಬಾಲ್ಯ, ಯೌವ್ವನ, ಮುಪ್ಪು ಮತ್ತು ರೋಗ ರುಜಿನಗಳಲ್ಲೇ ಕಳೆದುಹೋಗುತ್ತದೆ. ಹಾಗಾದರೆ ಸುಖಕ್ಕೆ ಮೀಸಲಾದ ಕಾಲ ಎಷ್ಟು?

       ಥಾಮರ್ಸ್ ಹಾರ್ಡಿ ಹೇಳಿರುವಂತೆ ಜೀವನದಲ್ಲಿ ಸಾಸುವೆಯಷ್ಟೇ ಸುಖ, ಸಾಗರದಷ್ಟು ದುಃಖ. ಸುಖ ಸಂತೋಷಗಳು ಬೇಗನೆ ಕರಗಿ ದುಃಖಪೂರಿತ ಘಟನೆಗಳು ಮನುಷ್ಯ ಸಾಯುವವರೆಗೂ ಕಾಡುತ್ತವೆ. ‘ನಿಯತಿಕೃತ’ ನಿಯಮ ನಿಷ್ಟವಾಗಿ ಜರುಗುತ್ತಿರುವ ಈ ಪ್ರಪಂಚದ ಹಿಂದೆ ಯಾವುದೋ ಸೂತ್ರಧಾರನ ಶಕ್ತಿ ಇದೆ ಎಂದು ನಾವು ನಂಬುತ್ತೇವೆ. ಹಾಗಾದರೆ, ಈ ಜಗತ್ತಿನಲ್ಲಿ ದುಃಖವೇಕೆ ಹೆಚ್ಚಾಗಿದೆ? ಹೀಗೆ ಪ್ರಶ್ನಿಸಿಕೊಳ್ಳಿ. ಸೃಷ್ಟಿಕರ್ತನೇ ಆಧುನಿಕ ಮಾಂತ್ರಿಕರು ಮತ್ತು ರಾಕ್ಷಸರನ್ನೂ ಸೃಷ್ಟಿ ಮಾಡಿ ಮಾನವನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾನೇನೋ ಎಂಬ ತಳಮಳ ಉಂಟಾಗುತ್ತದೆ. ಉಳಿದ ನಮ್ಮ ಅಮೂಲ್ಯ ಸಮಯವನ್ನು ಮೂಡನಂಬಿಕೆ, ಗೊಡ್ಡು ಸಾಂಪ್ರದಾಯಗಳನ್ನು ಆಚರಿಸುವುದರಲ್ಲಿ, ಗಂಟೆಗಟ್ಟಲೆ ಪೂಜೆ ಮತ್ತು ವ್ರತಗಳನ್ನು ಮಾಡೆ, ಪುರಾಣಗಳನ್ನು ಕೇಳುವುದರಲ್ಲಿ ಸವೆಸುತ್ತೇವೆ. ಆದರೆ ಸರಳ ಆಚರಣೆಗಳು ಮನುಷ್ಯನನ್ನು ವಿಕಾಸಗೊಳಿಸಿ, ಜಟಿಲ ಆಚರಣೆಗಳು ಜಡತ್ವದತ್ತ ಕೊಂಡೊಯ್ಯುತ್ತವೆ.(All in the mind) ಎಂಬ್ ಲೇಖನದಲ್ಲಿ ವಿಲಿಯಂ ಸೆಲೆತಿನ್ ‘ದೇವರ ಪೂಜೆ ಮತ್ತು ಅಧ್ಯಾತ್ಮಿಕತೆಯಿಂದ, ನೈತಿಕತೆ ಬರುವುದಿಲ್ಲ ಎಂದು ಹೇಳಿರುವುದು ಸತ್ಯ.

           ಕಾರಂತರು ‘ಮನುಷ್ಯ ತಾನು ದೊಡ್ಡವನಾಗದೆ, ದೇವರನ್ನು ದೊಡ್ಡವನನ್ನಾಗಿ ಮಾಡಲಾರ’ ಎಂದು ಹೇಳಿರುವುದು ಅಷ್ಟೇ ಸಮಂಜಸ. ಒಂದು ವೇಳೆ ಆಧ್ಯಾತ್ಮಿಕ ಮತ್ತು ದೇವರ ಪೂಜೆಯಿಂದ ನೈತಿಕತೆಯ ಅಧಿಕೃತ ಹಂಚಿಕೆದಾರರಾಗಬೇಕಾಗಿತ್ತು. ಅಲ್ಲವೇ ?

             ಎಷ್ಟೋ ಜನ ವಾಸ್ತು ನಮ್ಬಿ ಇರುವ ಮನೆಯನ್ನು ಬೀಳಿಸಿ ವಾಸ್ತು ಪ್ರಕಾರ ಕಟ್ಟಿಸಿದರೂ ಏನೂ ಉಪಯೋಗವಾಗಿಲ್ಲ. ಇದರಿಂದ ಲಕ್ಷಾಂತರ ರೂ. ಕಳೆದುಕೊಂಡು ಮಾನಸಿಕ ಕ್ಷೋಭೆ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಮುಪ್ಪರಡುವ ಮುನ್ನವೇ ಮೆದುಳಿಗೆ ಮತ್ತು ದೇಹಕ್ಕೆ ಮುಪ್ಪು ಬರಲು ಕೊಬ್ಬಿನ ಆಹಾರ ಪದ್ದತಿ ಎಷ್ಟು ಕಾರಣವೋ ಅಷ್ಟೇ ಗೊಡ್ಡು ಸಂಪ್ರಾಯಗಳೂ ಕಾರಣವಾಗುತ್ತದೆ. ಅವುಗಳು ಉಪಯೋಗಿಸದೇ ಇದ್ದಲ್ಲಿ ಮನುಷ್ಯ ಚಿಂತೆ, ಕ್ರೋಧ, ಭಯದ  ಶಂಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಹಲವಾರು ತೊಂದರೆ ಮತ್ತು ರೋಗಗಳಿಗೆ ತುತ್ತಾಗುತ್ತಾನೆ.

 

 

November 8, 2007 Posted by cspsowbhagya | EKAVI Group, EKAVI KOLAR | | No Comments